ETV Bharat / health

ಹದಿಹರೆಯದವರಲ್ಲಿ ಹೆಚ್ಚುತ್ತಿರುವ ಸ್ವಯಂ ಘಾಸಿ ಪ್ರಕರಣಗಳು: ಕಾರಣ ಏನು, ಪತ್ತೆ ಮಾಡುವುದು ಹೇಗೆ? - why teenagers do self injure

author img

By ETV Bharat Karnataka Team

Published : May 7, 2024, 5:50 PM IST

ಹದಿಹರೆಯದವರಲ್ಲಿ ವಿಭಿನ್ನ ಭಾವನೆಗಳು ಸ್ವಯಂ ಘಾಸಿಗೆ ಪ್ರಮುಖ ಕಾರಣವಾಗುತ್ತವೆ. ಇದಕ್ಕೆ ಸೂಕ್ತ ಸಲಹೆ, ಚಿಕಿತ್ಸೆ ಅಗತ್ಯವಾಗಿದೆ.

teenagers-are-most-likely-to-self-injure-what-are-the-reasons
teenagers-are-most-likely-to-self-injure-what-are-the-reasons (ಸಾಂದರ್ಭಿಕ ಚಿತ್ರ)

ಹೈದರಾಬಾದ್​: ಇತರರಿಗೆ ಹೋಲಿಕೆ ಮಾಡಿದಾಗ ಮಕ್ಕಳು ಮತ್ತು ಹದಿಹರೆಯದವರಲ್ಲಿ ಸ್ವಯಂ ಘಾಸಿ ಪ್ರಕರಣಗಳು ಹೆಚ್ಚುತ್ತಿವೆ.

ಬೇರೆಯವರಿಂದ ತಿರಸ್ಕಾರ, ಸ್ನೇಹಿತರ ಜೊತೆಗಿನ ವಾದ, ದೌರ್ಜನ್ಯ, ಆನ್​ಲೈನ್​ ಅಥವಾ ನಿಜ ಜೀವನದ ಅಪಹಾಸ್ಯ, ಓದಿನಲ್ಲಿ ಉತ್ತಮವಾಗಿರದೇ ಇರುವುದು, ಮನೆಯಲ್ಲಿನ ಇತರೆ ಸಮಸ್ಯೆಗಳು ಅನೇಕ ವಿಷಯಗಳಿಂದ ಹದಿಹರೆಯದವರಲ್ಲಿ ವಿಭಿನ್ನ ಭಾವನೆಗಳು ಸೃಷ್ಟಿಯಾಗುತ್ತವೆ. ಕೆಲವರು ಇವುಗಳನ್ನು ನಿಯಂತ್ರಿಸಿದರೆ, ಮತ್ತೆ ಕೆಲವರು ಇದರಿಂದ ತಮ್ಮನ್ನೂ ಘಾಸಿಗೊಳಿಸಿಕೊಳ್ಳುತ್ತಾರೆ. ಅಧ್ಯಯನದ ಪ್ರಕಾರ, ಐವರಲ್ಲಿ ಒಬ್ಬರು ಈ ರೀತಿ ಸ್ವಯಂ ಘಾಸಿಗೆ ಮುಂದಾಗುತ್ತಾರೆ. ಈ ಬಗ್ಗೆ ಸುತ್ತಮುತ್ತಲಿನವರು ಎಚ್ಚರಿಕೆವಹಿಸುವುದು ಅವಶ್ಯ. ಈ ರೀತಿ ಸಮಸ್ಯೆಗೆ ಕಾರಣ ಏನು? ಇದನ್ನು ಪತ್ತೆ ಹಚ್ಚುವುದು ಹೇಗೆ ಎಂಬ ಮಾಹಿತಿ ಇಲ್ಲಿದೆ.

ಹದಿಹರೆಯದವರು ಸ್ವಯಂ ಘಾಸಿಗೆ ಅನೇಕ ರೀತಿ ಮಾರ್ಗವನ್ನು ಕಂಡುಕೊಳ್ಳುತ್ತಾರೆ. ಇದರಲ್ಲಿ ಕಲೆಗಳು ಸಾಮಾನ್ಯವಾಗಿರುತ್ತವೆ. ಚೂಪಾದ ವಸ್ತುಗಳ ಮೂಲಕ ಕತ್ತರಿಸುವುದು, ಉಜ್ಜುವುದು, ಕೆರೆಯುವುದು, ಕಚ್ಚುವುದು, ಸುಡುವುದು, ತಮ್ಮನ್ನೇ ಹೊಡೆದುಕೊಳ್ಳುವುದು ಪ್ರಮುಖವಾಗಿದೆ. ಆದಾಗ್ಯೂ ಈ ಕಲೆಗಳನ್ನು ಸುಲಭವಾಗಿ ಪತ್ತೆ ಮಾಡುವುದು ಸಾಧ್ಯವಿಲ್ಲ. ಇವುಗಳನ್ನು ಮರೆಮಾಚಲು ಅನೇಕರು ಬುದ್ಧಿವಂತಿಕೆಯನ್ನು ಉಪಯೋಗಿಸುತ್ತಾರೆ. ಈ ರೀತಿ ಸ್ವಯಂ ಘಾಸಿಯನ್ನು ಪತ್ತೆ ಮಾಡಿ ಅದಕ್ಕೆ ಸೂಕ್ತ ಚಿಕಿತ್ಸೆ, ಥೆರಪಿಯ ಸಹಾಯ ನೀಡುವುದು ಅವಶ್ಯವಾಗಿರುತ್ತದೆ. ಇಂತಹ ಕಲೆ ಪತ್ತೆ ಮಾಡುವುದು ಹೇಗೆ?

  • ಹೊರಗೆ ಕಾಣುವಂತೆ ಅವರು ಕೆಲವು ಪ್ರದೇಶದಲ್ಲಿ ಗಾಯಕ್ಕೆ ಒಳಗಾಗುತ್ತಾರೆ. ಉದಾಹರಣೆಗೆ, ತೊಡೆ ಅಥವಾ ಹೊಟ್ಟೆಯಂತಹ ಭಾಗದಲ್ಲಿ ಕಾಣಬಹುದು.
  • ಈ ರೀತಿ ಕಲೆ ಕಾಣದಂತೆ ಅವರು ಸದಾ ಉದ್ದ ತೋಳಿನ ದಿರಿಸು ಧರಿಸುವುದು. ಮುಂಗೈ ಮುಚ್ಚುವುದು.
  • ಅಪಘಾತ ಪ್ರಕರಣದಲ್ಲಿ ಅಧಿಕ ಬ್ಯಾಂಡೇಜ್​ ಬಳಕೆ ಮಾಡಬಹುದು
  • ಖಿನ್ನತೆ, ಆತಂಕದಂತಹ ಸಮಸ್ಯೆಗಳಲ್ಲಿ ಜನರ ಮನಸ್ಥಿತಿ ಬದಲಾವಣೆ ಆಗುತ್ತಿರುತ್ತದೆ. ಇಂತಹ ಪರಿಸ್ಥಿತಿಯಲ್ಲೂ ಜನರು ಈ ರೀತಿ ಸ್ವಯಂ ಗಾಯಕ್ಕೆ ಒಳಗಾಗಬಹುದು.
  • ಸದಾ ಏಕಾಂಗಿಯಾಗಿರುವುದು. ಕುಟುಂಬ ಅಥವಾ ಸ್ನೇಹಿತರ ಜೊತೆಗೆ ಹೆಚ್ಚಿನ ಸಮಯ ಕಳೆಯದೇ ಕೆಲವು ಸಾಧ್ಯವಾದಷ್ಟು ಮಟ್ಟಿಗೆ ಏಕಾಂಗಿಯಾಗಿರುತ್ತದೆ. ಇದು ಖಿನ್ನತೆಯ ಲಕ್ಷಣವಾಗಿದ್ದು, ಈ ಸಮಯದಲ್ಲೂ ಕೂಡ ಸ್ವಯಂ ಹಾನಿಯಂತಹ ಸೂಚನೆಗಳು ಕಂಡುಬರುತ್ತವೆ.

ಸೂಚನೆ: ಮಕ್ಕಳು ಈ ಹಿಂದೆ ತೋರಿರದ ವರ್ತನೆಗಳಿಗೆ ವಿಭಿನ್ನವಾಗಿ ನಡೆದುಕೊಂಡಾಗ ಅದನ್ನು ಊಹಿಸುವುದು ಉತ್ತಮ. ಅವರೊಟ್ಟಿಗೆ ಮಾತನಾಡುವ ಮತ್ತು ಭರವಸೆ ನಿಡುವ ಮೂಲಕ ಅವರ ಸಮಸ್ಯೆಗಳಿಂದ ಹೊರ ಬರುವಂತೆ ಅಥವಾ ಮನೋವೈದ್ಯರ ಸಹಾಯದಿಂದ ಅವರ ಸಮಸ್ಯೆಗೆ ಪರಿಹಾರವನ್ನು ಹುಡುಕಬಹುದಾಗಿದೆ.

ಅಧ್ಯಯನದ ಮಾಹಿತಿ: ಇಲ್ಲಿ ನೀಡಿರಯವ ಮಾಹಿತಿಗಳು ಸಂಶೋಧನೆ, ಆಧ್ಯಯನಗಳನ್ನು ಆಧರಿಸಿ ನೀಡಲಾಗಿದೆ. ಆದರೆ, ಇವುಗಳನ್ನು ಅನುಸರಿಸುವ ಮೊದಲು ವೈದ್ಯರ ಸಲಹೆಯನ್ನು ಪಡೆದು ಮುನ್ನಡೆಯುವುದು ಉತ್ತಮ.

ಇದನ್ನೂ ಓದಿ: ಸರಿಯಾದ ನಿದ್ರೆ ಆರೋಗ್ಯಕ್ಕೆ ಒಳ್ಳೆಯದು, ಇಲ್ಲದಿದ್ದರೇ ಕಣ್ಣಿನ ಸಮಸ್ಯೆ ಕಟ್ಟಿಟ್ಟ ಬುತ್ತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.