ETV Bharat / health

ಕ್ಷಯರೋಗ ವಿರುದ್ಧದ ಹೋರಾಟಕ್ಕೆ 'ಟಿಬಿ ಮುಕ್ತ ಪಂಚಾಯತ್​' ಉಪಕ್ರಮ ಸಾಥ್‌ ನೀಡುವುದೇ? - TB Mukt Panchayat Initiative - TB MUKT PANCHAYAT INITIATIVE

ತಳಮಟ್ಟದಿಂದ ಕ್ಷಯರೋಗ ನಿರ್ಮೂಲನೆಗಾಗಿ 'ಟಿಬಿ ಮುಕ್ತ ಪಂಚಾಯತ್'​ ಅಭಿಯಾನ ನಡೆಸಲಾಗುತ್ತಿದೆ.

TB Mukt Panchayat Initiative has to help India curb the spread TB

author img

By ETV Bharat Karnataka Team

Published : Mar 25, 2024, 12:48 PM IST

ನವದೆಹಲಿ: ಭಾರತದ ಮೇಲಿರುವ ಕ್ಷಯ ರೋಗ (ಟಿಬಿ) ಹೊರೆಯನ್ನು ಸಮರ್ಥವಾಗಿ ನಿರ್ಮೂಲನೆ ಮಾಡುವಲ್ಲಿ 'ಟಿಬಿ ಮುಕ್ತ ಪಂಚಾಯತ್'​​ ಕಾರ್ಯಕ್ರಮಗಳು ಸಹಾಯಕವಾಗಲಿವೆ. ಇದರ ಮೂಲಕ ಸ್ಥಳೀಯ ಸಮುದಾಯದಲ್ಲಿ ಮಾರಣಾಂತಿಕ ರೋಗದ ಬಗ್ಗೆ ವಿಶಾಲ ದೃಷ್ಟಿಕೋನದಿಂದ ಜಾಗೃತಿ ಮೂಡಿಸಬಹುದು. ಆದಾಗ್ಯೂ ಅದರ ಕೊರತೆಗಳನ್ನು ನಿಭಾಯಿಸಬೇಕಿದೆ ಎಂದು ತಜ್ಞರು ತಿಳಿಸಿದ್ದಾರೆ.

ಜಗತ್ತಿನ ಟಿಬಿ ಪ್ರಕರಣಗಳಲ್ಲಿ ಶೇ.27ರಷ್ಟು ಭಾರತದಲ್ಲಿದೆ. 2030ಕ್ಕೆ ಜಗತ್ತನ್ನು ಟಿಬಿ ಮುಕ್ತಗೊಳಿಸಲು ಕಳೆದ ವರ್ಷ ವಿಶ್ವ ಸಂಸ್ಥೆ 'ಟಿಬಿ ಮುಕ್ತ ಸುಸ್ಥಿರ ಅಭಿವೃದ್ಧಿ ಗುರಿ'ಗಳನ್ನು ರೂಪಿಸಲಾಗಿದೆ. ಭಾರತ ಕೂಡಾ 2025ರ ಹೊತ್ತಿಗೆ ಟಿಬಿ ಮುಕ್ತ ದೇಶದ ಗುರಿ ಹೊಂದಿದೆ.

ಟಿಬಿ ಪಂಚಾಯತ್​​ ಅಭಿಯಾನ ಎಂಬುದು ಸಮುದಾಯ ಕಾರ್ಯಕ್ರಮವಾಗಿದೆ. ಈ ಮುಖೇನ ರಾಷ್ಟ್ರೀಯ ಟಿಬಿ ಮುಕ್ತ ಕಾರ್ಯಕ್ರಮವನ್ನು ಗ್ರಾಮದ ಮಟ್ಟಕ್ಕೂ ಕೊಂಡೊಯ್ಯಲಾಗುತ್ತದೆ. ಸ್ಥಳೀಯ ಸ್ವಯಂ ಆಡಳಿತ ವ್ಯವಸ್ಥೆಗಳಾದ ಪಂಚಾಯತ್​​ ರಾಜ್​ ವ್ಯವಸ್ಥೆಗಳ ಮೂಲಕ ಅರಿವು ಮೂಡಿಸಲಾಗುತ್ತಿದೆ ಎಂದು ಪುಣೆಯ ಭಾರತಿ ವಿದ್ಯಾಪೀಠ ಮೆಡಿಕಲ್​ ಕಾಲೇಜ್​​ನ ಕಮ್ಯೂನಿಟಿ ಮೆಡಿಸಿನ್​ ವಿಭಾಗದ ಡಾ.ಸ್ವಾತಿ ಕೃಷ್ಣನ್​ ನ್ಜಜರೆಕ್ಕಟ್ಟುವಳಪ್ಪಿಲ್ ತಿಳಿಸಿದರು.

'ಟಿಬಿ ಮುಕ್ತ ಪಂಚಾಯತ್'​​ ರಾಷ್ಟ್ರೀಯ ಅಭಿಯಾನ ಸ್ಥಳೀಯ ಸಮುದಾಯದಲ್ಲಿ ಟಿಬಿ ನಿಯಂತ್ರಣಕ್ಕೆ ಒತ್ತು ನೀಡುತ್ತದೆ ಎಂದು ಅಶೋಕ ಯುನಿವರ್ಸಿಟಿಯ ಜೀವಶಾಸ್ತ್ರ ಮತ್ತು ಭೌತಶಾಸ್ತ್ರ ಸಂಶೋಧಕ ಗೌತಮ್​ ಮೆನನ್​ ಹೇಳಿದ್ದಾರೆ.

ಡಾ.ಸ್ವಾತಿ ಮತ್ತು ಅವರ ತಂಡವು ಈ ಕುರಿತು ಅಧ್ಯಯನ ನಡೆಸಿದ್ದು, ಇದು ಲ್ಯಾನ್ಸೆಟ್​​ ಪ್ರಾದೇಶಿಕ ಆರೋಗ್ಯ ಆಗ್ನೇಯ ಏಷ್ಯಾದಲ್ಲಿ ಪ್ರಕಟವಾಗಿದೆ. ಈ ಅಧ್ಯಯನದಲ್ಲಿ ಕಾರ್ಯಕ್ರಮಗಳು ವಿಭಾಗ ಮತ್ತು ರಾಜಕೀಯ ಇಚ್ಛಾಶಕ್ತಿಯಲ್ಲಿ ಉನ್ನತ ಮಟ್ಟದ ನಡುವಿನ ಬಹು ವಲಯದ ಸಹಕಾರವನ್ನು ಉತ್ತೇಜಿಸುತ್ತದೆ. ಸ್ಥಳೀಯ ಸ್ವಯಂಆಡಳಿತ ಯೋಜನೆಗಳು ಟಿಬಿ ಚಟುವಟಿಕೆಗಳನ್ನು ಬಲಪಡಿಸುತ್ತವೆ. ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್​​ಗಢದಲ್ಲಿ ಟಿಬಿ ತಡೆ ಔಷಧಿಗಳ ಸಂಯೋಜನೆಯ ಲಭ್ಯತೆಯ ಕೊರತೆ ಉಂಟಾಗಿದೆ. (ಐಎಎನ್​ಎಸ್​​)

ಇದನ್ನೂ ಓದಿ: ಕ್ಷಯ ರೋಗ ನಿರ್ಮೂಲನೆಗೆ ಪಣ; ಅಂತಿಮ ಹಂತ ತಲುಪಿದ 11 ಟಿಬಿ ಲಸಿಕೆ ಅಭಿವೃದ್ಧಿ ಕಾರ್ಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.