ETV Bharat / health

ನಿಂತುಕೊಂಡೇ ಊಟ ಮಾಡೋದು ರೂಢಿನಾ? ಆ ಅಪಾಯಕಾರಿ ಅಭ್ಯಾಸ ಬದಲಿಸಿಕೊಳ್ಳಿ - ಕರುಳಿನ ಕ್ಯಾನ್ಸರ್​

ಗಡಿಬಿಡಿಯಲ್ಲಿ ಸರಿಯಾಗಿ ಕುಳಿತುಕೊಳ್ಳದೆ, ನಿಂತೇ ಊಟ ಮುಗಿಸಿ ತೆರಳುತ್ತಿದ್ದೀರಾ? ಇದರಿಂದ ಯಾವ ಆರೋಗ್ಯ ಅಪಾಯವನ್ನು ನೀವು ಆಹ್ವಾನಿಸುತ್ತಿದ್ದೀರಾ ಗೊತ್ತಾ? ಈ ಬಗ್ಗೆ ಲಖನೌದ ಕಲ್ಯಾಣ್​ ಸಿಂಗ್​ ಸೂಪರ್ ಸ್ಪೆಷಾಲಿಟಿ ಕ್ಯಾನ್ಸರ್​ ಇನ್​ಸ್ಟಿಟ್ಯೂಟ್​ನ ರೇಡಿಯೋಥೆರಪಿ ವಿಭಾಗದ ವೈದ್ಯರು ಹೇಳಿರುವ ಮಾಹಿತಿ ಇಲ್ಲಿದೆ.

cancer
ಕ್ಯಾನ್ಸರ್​
author img

By ETV Bharat Karnataka Team

Published : Jan 19, 2024, 11:06 PM IST

ನಮ್ಮ ದಿನನಿತ್ಯದ ಗಡಿಬಿಡಿಯ ಜೀವನಶೈಲಿಯಲ್ಲಿ ಸಮಾಧಾನ, ನೆಮ್ಮದಿಯಿಂದ ಆಹಾರವನ್ನು ಆಸ್ವಾಧಿಸಿ, ನಿಧಾನವಾಗಿ ತಿನ್ನಲೂ ಸಮಯವಿಲ್ಲ. ಲಗುಬಗೆಯಿಂದ ಎದ್ದು ಕಚೇರಿಗೆ ತೆರಳುವ ಅವಸರದಲ್ಲಿ ಸಿಕ್ಕ ಒಂದೆರಡು ನಿಮಿಷಗಳಲ್ಲೇ ನಿಂತುಕೊಂಡೇ ಅರ್ಧಂಬರ್ಧ ತಿಂಡಿಯನ್ನು ಗಬಗಬನೆ ತಿಂದು ಹೊರಡುತ್ತೇವೆ. ಇನ್ನೊಂದು ಸಮಯಾವಕಾಶವಿದ್ದರೂ, ಕ್ಯಾಂಟೀನ್​ ಡಾಬಾಗಳಲ್ಲಿ ಸ್ನೇಹಿತರ ಜೊತೆ ಊಟ ಮಾಡುತ್ತಿದ್ದೇವೆ. ಎಷ್ಟೆಂದರೆ ಅಲ್ಲಿ ಕುರ್ಚಿಗಳಿದ್ದರೂ ಅದನ್ನೇ ನಾವು ರೂಢಿಸಿಕೊಂಡಿರುತ್ತೇವೆ. ಅಲ್ಲಿಯೂ ಹೆಚ್ಚಿನವರು ನಿಂತುಕೊಂಡೇ ಮಧ್ಯಾಹ್ನ ಅಥವಾ ರಾತ್ರಿಯ ಊಟ ಮುಗಿಸಿರುತ್ತಾರೆ. ಆದರೆ ಇನ್ನು ಮುಂದೆ ಸರಿಯಾಗಿ ಕುಳಿತುಕೊಳ್ಳದೆ ನಿಂತಲ್ಲೇ ತುತ್ತು ಬಾಯಿಗೆ ಹಾಕಿಕೊಳ್ಳುವ ಮೊದಲು ಒಂದು ಕ್ಷಣ ಯೋಚಿಸಿ. ಯಾಕೆಂದರೆ ನಿಂತುಕೊಂಡು ಊಟು ಮಾಡುವುದರಿಂದ ಸಣ್ಣಪುಟ್ಟದಲ್ಲ ಅಪಾಯಕಾರಿ ಕ್ಯಾನ್ಸರ್​ ಬರುವ ಅಪಾಯ ಹೆಚ್ಚಿದೆಯಂತೆ. ನಿಂತುಕೊಂಡು ತಿನ್ನುವುದನ್ನು ರೂಢಿಸಿಕೊಂಡರೆ ಹೊಟ್ಟೆ ಮತ್ತು ಕರುಳಿನ ಕ್ಯಾನ್ಸರ್​ ಬರುವ ಅಪಾಯ ಹೆಚ್ಚಾಗುತ್ತದೆ ಎನ್ನುವ ಮಾಹಿತಿಯನ್ನು ತಜ್ಞರು ಬಹಿರಂಗ ಪಡಿಸಿದ್ದಾರೆ.

ಲಖನೌದ ಕಲ್ಯಾಣ್​ ಸಿಂಗ್​ ಸೂಪರ್ ಸ್ಪೆಷಾಲಿಟಿ ಕ್ಯಾನ್ಸರ್​ ಇನ್​ಸ್ಟಿಟ್ಯೂಟ್​ನ ರೇಡಿಯೋಥೆರಪಿ ವಿಭಾಗದ ಎರಡನೇ ಸಂಸ್ಥಾಪನಾ ದಿನದ ಕಾರ್ಯಕ್ರಮದಲ್ಲಿ, ತಜ್ಞರು ಕೆಲವು ಆಹಾರ ಪದ್ಧತಿಗಳಿಂದ ಅನ್ನನಾಳಕ್ಕೆ ಸಂಬಂಧಿಸಿದ ಕಾಯಿಲೆಗಳು ಬೆಳೆಯಬಹುದು ಎಂದು ಒತ್ತಿ ಹೇಳಿದ್ದಾರೆ.

ಪಿಜಿಐ ಚಂಡೀಗಢದ ವಿಭಾಗ ಮುಖ್ಯಸ್ಥ ಡಾ. ರಾಕೇಶ್​ ಕಪೂರ್​ ಈ ಬಗ್ಗೆ ಮಾತನಾಡಿ, "ನಿಂತುಕೊಂಡು ಆಹಾರವನ್ನು ತಿನ್ನುವುದು ಹಾಗೂ ಯಾವುದೇ ಪಾನೀಯಗಳನ್ನು ಕುಡಿಯುವುದರಿಂದ ಅನ್ನನಾಳದ ಸ್ನಾಯುಗಳು ಸರಿಯಾಗಿ ಕಾರ್ಯನಿರ್ವಹಿಸಲು ಸಮಸ್ಯೆಯಾಗಬಹುದು. ಇದು ಆ್ಯಸಿಡ್​ ರಿಫ್ಲಕ್ಸ್​ನಂತಹ ವಿವಿಧ ತೊಂದರೆಗಳಿಗೆ ಕಾರಣವಾಗಬಹುದು" ಎಂದು ತಿಳಿಸಿದರು.

"ಈ ಸರಿಯಾಗಿ ಕಾರ್ಯ ನಿರ್ವಹಿಸದೇ ಇರುವುದು ಅನ್ನನಾಳದ ಕ್ಯಾನ್ಸರ್​ ಅಪಾಯವನ್ನು ಹೆಚ್ಚಿಸುತ್ತದೆ. ಅದಲ್ಲದೇ ನಿಂತಿರುವ ಭಂಗಿಯಲ್ಲಿ ತಿನ್ನುವುದು ಸಾಮಾನ್ಯ ಜೀರ್ಣಕ್ರಿಯೆ ಪ್ರಕ್ರಿಯೆಯನ್ನೂ ಅಡ್ಡಿಪಡಿಸುತ್ತದೆ. ಜೊತೆಗೆ ನಿಂತು ತಿನ್ನುವ ಸಮಯ ಕರುಳಿನಿಂದ ಹೆಚ್ಚಿನ ಪ್ರಯತ್ನದ ಅಗತ್ಯವಿರುತ್ತದೆ. ಇದು ಕೊಲೊರೆಕ್ಟಲ್​ ಕ್ಯಾನ್ಸರ್​ ಅಪಾಯವನ್ನು ಹೆಚ್ಚಿಸುತ್ತದೆ." ಎಂದರು.

ಇದೇ ವೇಳೆ ಕೆಜಿಎಂಯು ಉಪಕುಲಪತಿ ಡಾ. ಸೋನಿಯಾ ನಿತ್ಯಾನಂದ್​ ಅವರು, ವಿದೇಶದಲ್ಲಿ ಹೊಸ ತಂತ್ರಜ್ಞಾನ ಪ್ರಯೋಗದ ಬಗ್ಗೆ ಮಾಹಿತಿ ಹಂಚಿಕೊಂಡರು. ಈ ಹೊಸ ತಂತ್ರಜ್ಞಾನದ ಪ್ರಯೋಗ ಹೆಚ್ಚಿನ ಪ್ರಮಾಣದ ವಿಕಿರಣವನ್ನು ಬಳಸಿ ಸಣ್ಣ ಗೆಡ್ಡೆಗಳನ್ನು ತೆಗೆದುಹಾಕುವಲ್ಲಿ ಭರವಸೆ ಮೂಡಿಸಿದೆ ಎಂದು ತಿಳಿಸಿದರು.

ಕ್ಯಾನ್ಸರ್​ ಇನ್​ಸ್ಟಿಟ್ಯೂಟ್​ನ ರೇಡಿಯೋಥೆರಪಿ ವಿಭಾಗದ ಮುಖ್ಯಸ್ಥ ಡಾ. ಶರದ್​ ಸಿಂಗ್​, "ತಡವಾಗಿ ಮದುವೆಯಾಗುವುದು ಹಾಗೂ ಧೂಮಪಾನದಿಂದ ಕ್ಯಾನ್ಸರ್​ ಪ್ರಮಾಣ ಹೆಚ್ಚಾಗುತ್ತಿದೆ. ಮಹಿಳೆಯರು ವೃತ್ತಿಜೀವನವನ್ನು ಮುಂದುವರಿಸುವ ಉದ್ದೇಶದಿಂದ ಮದುವೆಯನ್ನು ಮುಂದೂಡುತ್ತಿದ್ದಾರೆ. ಇದು ಸ್ತನ ಕ್ಯಾನ್ಸರ್​ನ ಹೆಚ್ಚಿನ ಪ್ರಕರಣಗಳಿಗೆ ಕಾರಣವಾಗುತ್ತದೆ. ತಡವಾಗಿ ಮಕ್ಕಳಾಗುವುದು ಹಾಗೂ ಸ್ತನ್ಯಪಾನ ಕಡಿಮೆಯಾಗಲು ಕಾರಣವಾಗಿದೆ" ಎಂದು ತಿಳಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.