ETV Bharat / health

ಎಚ್ಚರಿಕೆ: ಈರುಳ್ಳಿ ಹೆಚ್ಚು ಸೇವಿಸಿದರೆ ಏನಾಗುತ್ತೆ ಗೊತ್ತಾ? - SIDE EFFECTS OF ONION - SIDE EFFECTS OF ONION

SIDE EFFECTS OF ONION: ಈರುಳ್ಳಿಯು ಯಾವುದೇ ಖಾದ್ಯಕ್ಕೆ ಒಳ್ಳೆಯ ರುಚಿ ನೀಡುವುದು ಮಾತ್ರವಲ್ಲದೆ, ಆರೋಗ್ಯಕ್ಕೂ ಇದು ಒಳ್ಳೆಯದೆ. ಈ ಬಗ್ಗೆ ಎಲ್ಲರಿಗೂ ಗೊತ್ತಿರುವ ವಿಚಾರವೇ. ಆದರೆ, ಅತಿಯಾದ ಈರುಳ್ಳಿ ಸೇವನೆಯಿಂದ ಅಡ್ಡ ಪರಿಣಾಮ ಎದುರಿಸಬಹುದು ಎನ್ನುತ್ತಾರೆ ಆರೋಗ್ಯ ತಜ್ಞರು. ಆ ಅಡ್ಡ ಪರಿಣಾಮಗಳು ಏನು ಅನ್ನೋದರ ಮಾಹಿತಿ ಇಲ್ಲಿದೆ..

Side effects of eating onions excessive consumption check full details here in Kannada

author img

By ETV Bharat Karnataka Team

Published : Apr 1, 2024, 5:30 PM IST

Updated : Apr 1, 2024, 6:15 PM IST

ಪೊಟ್ಯಾಸಿಯಂ, ಕಬ್ಬಿಣ, ಸೋಡಿಯಂ, ರಂಜಕ, ಕ್ಯಾಲ್ಸಿಯಂ, ಫೋಲೇಟ್, ವಿಟಮಿನ್ ಸಿ ಮತ್ತು ವಿಟಮಿನ್ ಬಿ6 ನಂತಹ ಖನಿಜಗಳಿಂದ ಕೂಡಿರುವ ಈರುಳ್ಳಿಯನ್ನು ಸೇವಿಸುವುದರಿಂದ ದೇಹಕ್ಕೆ ಅನೇಕ ಪ್ರಯೋಜನಗಳಿವೆ. ರೋಗನಿರೋಧಕ ಶಕ್ತಿ ವೃದ್ಧಿಯಿಂದ ಹಿಡಿದು ಮೂಳೆಗಳು ಮತ್ತು ಹಲ್ಲುಗಳು ಬಲಗೊಳ್ಳುವಿಕೆಗೆ, ತಲೆನೋವು, ಅಧಿಕ ರಕ್ತದೊತ್ತಡದಂತಹ ಅನೇಕ ಕಾಯಿಲೆಗಳಿಗೆ ಈರುಳ್ಳಿ ಒಳ್ಳೆಯ ಔಷಧಿ ಎಂದು ಹೇಳಬಹುದು.

ಆಹಾರದಲ್ಲಿ ಈರುಳ್ಳಿ ಬಳಸಿದರೆ ಅದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸಮತೋಲನದಲ್ಲಿ ಇಡಲು ಕೂಡ ಸಹಕಾರಿ ಆಗುತ್ತದೆ. ಈರುಳ್ಳಿಯು ಇನ್ಸುಲಿನ್ ಸೂಕ್ಷ್ಮತೆಯನ್ನು ಸುಧಾರಣೆ ಮಾಡುವುದು ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುವುದಲ್ಲದೆ ಕ್ಯಾನ್ಸರ್ ಅನ್ನು ತಡೆಯುತ್ತದೆ. ಗಾಯ, ದದ್ದು, ಉರಿಯೂತ, ಜ್ವರ, ಅಲರ್ಜಿ ಕೂಡ ಕಡಿಮೆಯಾಗುತ್ತವೆ. ಜೀರ್ಣಕ್ರಿಯೆ ಜೊತೆಗೆ ದೃಷ್ಟಿ ಕೂಡ ಸುಧಾರಿಸುತ್ತದೆ. ಇದು ಒತ್ತಡವನ್ನು ಕಡಿಮೆ ಮಾಡಲು ಸಹ ಸಹಾಯ ಮಾಡುತ್ತದೆ. ಮೆದುಳಿನ ಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ. ಕರುಳನ್ನು ಆರೋಗ್ಯವಾಗಿಡುತ್ತದೆ. ಅಲ್ಲದೆ, ಕೂದಲಿನ ಆರೋಗ್ಯಕ್ಕೆ ತುಂಬಾ ಸಹಕಾರಿ. ಆದರೆ, ಇದೆಲ್ಲವು ಈರುಳ್ಳಿಯನ್ನು ಮಿತವಾಗಿ ಬಳಸಿದರೆ ಮಾತ್ರ!

'ಅತಿಯಾದರೆ ಅಮೃತ ಕೂಡ ವಿಷ ಎಂಬ ಮಾತಿನಂತೆ' ಈರುಳ್ಳಿಯನ್ನು ಅತಿಯಾಗಿ ತಿನ್ನುವುದರಿಂದ ಕೆಲವು ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಅನ್ನೋದು ತಜ್ಞರ ನಿಲುವು. ಅತಿಯಾದ ಈರುಳ್ಳಿ ಸೇವನೆಯಿಂದ ಈ ಕೆಳಗಿನ ಕೆಲವು ಅಡ್ಡ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ.

  • ಈರುಳ್ಳಿಯಲ್ಲಿ ಅಧಿಕ ಕಾರ್ಬೋಹೈಡ್ರೇಟ್ ಇದ್ದು ಹೆಚ್ಚು ಸೇವನೆ ಮಾಡುವುದರಿಂದ ಜೀರ್ಣಾಂಗ ವ್ಯವಸ್ಥೆಯಲ್ಲಿ ಸಮಸ್ಯೆ ಉಂಟಾಗಬಹುದು. ಹೊಟ್ಟೆ ನೋವು, ಸುಸ್ತು ಹಾಗೂ ಪದೇ ಪದೇ ಬೇದಿಗೆ ಕಾರಣವಾಗಬಹುದು ಎನ್ನುತ್ತಾರೆ ತಜ್ಞರು.
  • ಕೆಲವರಲ್ಲಿ ಹೆಚ್ಚು ಈರುಳ್ಳಿ ತಿನ್ನುವುದರಿಂದ ಎದೆ ಉರಿ ಉಂಟಾಗುತ್ತದೆ. ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಡಯಾಬಿಟಿಸ್ ಅಂಡ್ ಡೈಜೆಸ್ಟಿವ್ ಮತ್ತು ಕಿಡ್ನಿ ಡಿಸೀಸ್ ಪ್ರಕಾರ, ಈ ಎದೆ ಉರಿ ಗ್ಯಾಸ್ಟ್ರೋಸೊಫೇಜಿಲ್ ರಿಫ್ಲಕ್ಸ್ ಡಿಸೀಸ್ (ಜಿಇಆರ್‌ಡಿ) ಯ ಲಕ್ಷಣವಾಗಿದೆ.
  • 2017 ರಲ್ಲಿ "ಜರ್ನಲ್ ಆಫ್ ದಿ ಅಮೆರಿಕನ್ ಕಾಲೇಜ್ ಆಫ್ ಕಾರ್ಡಿಯಾಲಜಿ" ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ಎದೆಯುರಿ ಹೊಂದಿರುವ 100 ಜನರನ್ನು ಪರೀಕ್ಷಿಸಿದಾಗ, ಹೆಚ್ಚು ಈರುಳ್ಳಿ ತಿಂದವರಲ್ಲಿ ಹೆಚ್ಚು ತೀವ್ರವಾದ ಎದೆಯುರಿ ಲಕ್ಷಣಗಳು ಕಂಡುಬಂದವು.
  • "ಯೂನಿವರ್ಸಿಟಿ ಆಫ್ ಟೆಕ್ಸಾಸ್ ಸೌತ್ ವೆಸ್ಟರ್ನ್ ಮೆಡಿಕಲ್ ಸೆಂಟರ್" ಈ ಸಂಶೋಧನೆಯಲ್ಲಿ ಭಾಗವಹಿಸಿದ ನರಶಸ್ತ್ರಚಿಕಿತ್ಸಕ ಡಾ. ಜೇಮ್ಸ್ ಎ. ಕ್ಯಾಲ್ಹೌನ್, ಈರುಳ್ಳಿಯಲ್ಲಿರುವ ಕೆಲವು ಸಂಯುಕ್ತಗಳು ಹೆಚ್ಚು ಈರುಳ್ಳಿ ತಿನ್ನುವ ಮೂಲಕ ಹೃದಯದ ಉರಿಯೂತವನ್ನು ಉಂಟುಮಾಡಬಹುದು ಅಥವಾ ಹದಗೆಡಿಸಬಹುದು ಎಂದು ಹೇಳಿದ್ದಾರೆ.
  • ಹೆಚ್ಚು ಈರುಳ್ಳಿ ಸೇವಿಸುವುದರಿಂದ ಕೆಲವರಲ್ಲಿ ಅಲರ್ಜಿಯ ಪ್ರತಿಕ್ರಿಯೆಗಳು ಉಂಟಾಗಬಹುದು ಎಂದು ತಜ್ಞರು ಸೂಚಿಸುತ್ತಾರೆ. ಇದು ತುರಿಕೆ ಅಂತಹ ರೋಗಲಕ್ಷಣಗಳಿಂದ ಹಿಡಿದು ಉಸಿರಾಟದ ತೊಂದರೆ ಅಥವಾ ಅನಾಫಿಲ್ಯಾಕ್ಸಿಸ್‌ನಂತಹ ತೀವ್ರ ಪ್ರತಿಕ್ರಿಯೆಗಳವರೆಗೆ ಇರುತ್ತದೆ.
  • ತಜ್ಞರು ಹೇಳುವಂತೆ ಕಚ್ಚಾ ಈರುಳ್ಳಿ ಕೆಲವೊಮ್ಮೆ ಕಾಂಟ್ಯಾಕ್ಟ್ ಡರ್ಮಟೈಟಿಸ್‌ನಂತಹ ಚರ್ಮದ ಸಮಸ್ಯೆಗಳಿಗೆ ಕಾರಣವಾಗಬಹುದು. ಪರಿಣಾಮವಾಗಿ, ಚರ್ಮದ ಮೇಲೆ ಕೆಂಪು, ತುರಿಕೆ ಅಥವಾ ಗುಳ್ಳೆಗಳು ಉಂಟಾಗಬಹುದು.

ಓದುಗರಿಗೆ ಸೂಚನೆ: ಇಲ್ಲಿ ಒದಗಿಸಲಾದ ಎಲ್ಲಾ ಆರೋಗ್ಯ ಮಾಹಿತಿ ವೈದ್ಯಕೀಯ ಸಲಹೆಗಳಿಂದ ಪಡೆದಿದ್ದಾಗಿದೆ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಗಳನ್ನು ಆಧರಿಸಿ ಈ ಮಾಹಿತಿಯನ್ನು ಒದಗಿಸಲಾಗಿದೆ. ಹೀಗಿದ್ದರೂ ಇವುಗಳನ್ನು ಪಾಲಿಸುವ ಮುನ್ನ ನಿಮ್ಮ ವೈಯಕ್ತಿಕ ವೈದ್ಯರ ಸಲಹೆಯನ್ನು ತೆಗೆದುಕೊಳ್ಳುವುದು ಉತ್ತಮ.

ಇದನ್ನೂ ಓದಿ: ಅತಿಯಾದ ಸಕ್ಕರೆ ಸೇವನೆಯಿಂದ ಏನೆಲ್ಲಾ ಆರೋಗ್ಯ ಸಮಸ್ಯೆಗಳಿವೆ ಗೊತ್ತಾ? ತಪ್ಪದೇ ತಿಳಿದುಕೊಳ್ಳಿ - Sugar Side Effects

Last Updated : Apr 1, 2024, 6:15 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.