ಸ್ಯಾನ್ ಫ್ರಾನ್ಸಿಸ್ಕೋ: ಮೊಣಕಾಲಿನ ಅಸ್ಥಿಸಂಧಿವಾತವನ್ನು ಆರಂಭಿಕ ಹಂತದಲ್ಲೇ ಪತ್ತೆ ಮಾಡುವುದರಿಂದ ರೋಗ ಅಭಿವೃದ್ಧಿ ತಡೆ ಜೊತೆಗೆ ಕೀಲಿನ ಆರೋಗ್ಯವನ್ನು ಕಾಪಾಡಬಹುದಾಗಿದೆ ಎಂದು ಸಂಶೋಧನೆ ತಿಳಿಸಿದೆ.
ಅಮೆರಿಕ ಮೂಲದ ಡ್ಯೂಕ್ ಯುನಿವರ್ಸಿಟಿ ಮೆಡಿಕಲ್ ಸೆಂಟರ್ ಈ ಸಂಶೋಧನೆಯನ್ನು ಯಶಸ್ವಿಯಾಗಿ ಮಾಡಿದೆ. ಇದರಲ್ಲಿ ಎಕ್ಸ್ ರೇ ಬದಲಾಗಿ ರಕ್ತದ ಬಯೋಮಾರ್ಕರ್‌ಗಳ ಮೂಲ ಅಸ್ಥಿಸಂಧಿವಾತದ ಚಿಹ್ನೆಗಳನ್ನು ಎಂಟು ವರ್ಷಗಳವರೆಗೆ ಪತ್ತೆಹಚ್ಚಿದ್ದಾರೆ.
ಅಧ್ಯಯನವನ್ನು ಜರ್ನಲ್ ಸೈನ್ಸ್ ಅಡ್ವಾನ್ಸ್ನಲ್ಲಿ ಪ್ರಕಟಿಸಲಾಗಿದೆ. ಅಸ್ಥಿಸಂಧಿವಾತದ ಪ್ರಮುಖ ಬಯೋಮಾರ್ಕ್ ಅನ್ನು ಪತ್ತೆ ಮಾಡುವ ರಕ್ತ ಪರೀಕ್ಷೆಯ ನಿಖರತೆಯನ್ನು ಸಂಶೋಧಕರು ಮೌಲ್ಯಮಾಪನಕ್ಕೆ ಒಳಪಡಿಸಿದ್ದಾರೆ. ಈ ಮೂಲಕ ಅವರು ರೋಗದ ಅಭಿವೃದ್ಧಿ ಮತ್ತು ಪ್ರಗತಿಯನ್ನು ಅಂದಾಜಿಸಿದ್ದಾರೆ.
ಸದ್ಯ ಇರುವ ಪತ್ತೆ ರೋಗ ಪತ್ತೆ ವಿಧಾನಕ್ಕಿಂತ ಈ ರಕ್ತದ ಪರೀಕ್ಷೆಗಳು ಮುಂಚಿತವಾಗಿ ರೋಗವನ್ನು ಪತ್ತೆ ಮಾಡುತ್ತದೆ ಎಂದು ಅಧ್ಯಯನದ ಹಿರಿಯ ಲೇಖಕ ಮತ್ತು ಡ್ಯೂಕ್ ಯೂನಿವರ್ಸಿಟಿಯ ಪ್ರೊಫೆಸರ್ ವರ್ಜಿನಿಯಾ ಬೆಯರ್ಸ್ ಕ್ರೌಸ್ ತಿಳಿಸಿದ್ದಾರೆ.
ಅಸ್ಥಿ ಸಂಧಿವಾತ ಎಂಬುದು ಸಂಧಿವಾತದ ಸಾಮಾನ್ಯ ಭಾಗವಾಗಿದೆ. ಅಮೆರಿಕದಲ್ಲಿ ಅಂದಾಜು 35 ಮಿಲಿಯನ್ಗಿಂತ ಹೆಚ್ಚು ಮಂದಿ ಇದರ ಪರಿಣಾಮಕ್ಕೆ ಒಳಗಾಗಿದ್ದಾರೆ.
ಪ್ರಸ್ತುತ ಸಂಧಿವಾತಕ್ಕೆ ಯಾವುದೇ ಪರಿಹಾರವಿಲ್ಲ. ಪರಿಣಾಮಕಾರಿ ಥೆರಪಿಯು ಇದನ್ನು ಆರಂಭಿಕದಲ್ಲಿ ಪತ್ತೆ ಮಾಡಿ, ತಡವಾಗುವುದಕ್ಕೆ ಮುಂಚೆಯೇ ಅದರ ಪರಿಹಾರ ನೀಡಬಹುದು. ಈ ಅಧ್ಯಯನಕ್ಕಾಗಿ ಯುಕೆಯಲ್ಲಿ ದೊಡ್ಡ ಮಟ್ಟದ ದತ್ತಾಂಶ ಮತ್ತು 200 ಬಿಳಿ ಮಹಿಳೆಯರ ಸೆರಂ ಅನ್ನು ಅಧ್ಯಯನಕ್ಕೆ ಒಳಪಡಿಸಲಾಗಿದೆ.
ಅಧ್ಯಯನದಲ್ಲಿ ಅರ್ಧದಷ್ಟು ಮಂದಿ ಮೊಣಕಾಲಿನ ಅಸ್ಥಿಸಂಧಿವಾತಕ್ಕೆ ಗುರಿಯಾಗಿದ್ದಾರೆ. ಇನ್ನುಳಿದ ಅರ್ಧ ಮಂದಿಯಲ್ಲಿ ಯಾವುದೇ ರೋಗ ಪತ್ತೆಯಾಗಿಲ್ಲ. ಈ ಎರಡು ಗುಂಪುಗಳನ್ನು ದೇಹ ದ್ರವ್ಯ ಸೂಚ್ಯಂಕ ಮತ್ತು ವಯಸ್ಸಿನ ಮೇಲೆ ಸರಿಹೊಂದಿಸಲಾಗಿದೆ.
ರಕ್ತ ಪರೀಕ್ಷೆಯಲ್ಲಿ ಕೆಲವು ಬಯೋಮಾರ್ಕರ್‌ಗಳನ್ನು ಗುರುತಿಸಿದರು. ಮೊಣಕಾಲಿನ ಅಸ್ಥಿಸಂಧಿವಾತದಿಂದ ಬಳಲುತ್ತಿರುವ ಮಹಿಳೆಯರನ್ನು ಯಶಸ್ವಿಯಾಗಿ ಗುರುತಿಸುವಲ್ಲಿ ಪರೀಕ್ಷೆ ಸಹಾಯವಾಯಿತು. ಈ ಬಯೋಮಾರ್ಕರ್‌ಗಳು ಅಸ್ಥಿಸಂಧಿವಾತದ ಆಣ್ವಿಕ ಸಂಕೇತಗಳನ್ನು ಎಂಟು ವರ್ಷಗಳವರೆಗೆ ಪತ್ತೆಹಚ್ಚಿದರು. ಅನೇಕ ಮಹಿಳೆಯರು ಎಕ್ಸ್-ರೇ ಪರೀಕ್ಷೆಗಳ ಮೂಲಕ ರೋಗವನ್ನು ಪತ್ತೆಹಚ್ಚಿದ್ದಾರೆ.
ಎಕ್ಸ್ರೇ ಪತ್ತೆ ಹಚ್ಚುವುದಕ್ಕೆ ಮುಂಚೆಗೆ ರಕ್ತದ ಬಯೋಮಾರ್ಕ್ಗಳು ಮೊಣಕಾಲಿನ ಅಸ್ಥಿ ಸಂಧಿವಾತ ಪತ್ತೆ ಮಾಡುತ್ತದೆ ಎಂಬುದಕ್ಕೆ ಇದು ಪೂರಕ ಸಾಕ್ಷಿಯನ್ನು ನೀಡಿದೆ ಎಂದು ಕೌರಸ್ ತಿಳಿಸಿದ್ದಾರೆ. (ಐಎಎನ್ಎಸ್)
ಇದನ್ನೂ ಓದಿ: 2050ರ ಹೊತ್ತಿಗೆ ಜಗತ್ತಿನ 100 ಕೋಟಿ ಜನರಿಗೆ ಅಸ್ಥಿಸಂಧಿವಾತ ಸಮಸ್ಯೆ!