ನವದೆಹಲಿ: ಭಾರತದಲ್ಲಿ ಕ್ಯಾನ್ಸರ್ ಪ್ರಕರಣಗಳ ಹೊರೆ ಹೆಚ್ಚುತ್ತಿದ್ದು, 9 ರಲ್ಲಿ ಒಬ್ಬರು ಈ ಮಾರಣಾಂತಿಕ ರೋಗದ ಅಪಾಯದಲ್ಲಿದ್ದಾರೆ. ಈ ಕ್ಯಾನ್ಸರ್ ಪ್ರಕರಣಗಳನ್ನು ಆರಂಭಿಕ ಹಂತದಲ್ಲೇ ಪತ್ತೆ ಮಾಡುವ ಮೂಲಕ ತಡೆಗಟ್ಟಬಹುದಾಗಿದೆ ಎಂದು ಆರೋಗ್ಯ ತಜ್ಞರು ತಿಳಿಸಿದ್ದಾರೆ. ಭಾರತದ ಮೇಲಿನ ಕ್ಯಾನ್ಸರ್ ಹೊರೆ ಕುರಿತು ಅಪೋಲೋ ಆಸ್ಪತ್ರೆಯ ಹೆಲ್ತ್ ಆಫ್ ನೇಷನ್ ವರದಿಯಲ್ಲಿ ಮಾಹಿತಿ ನೀಡಲಾಗಿದೆ.
ಭಾರತ ವಿಶ್ವದ ಕ್ಯಾನ್ಸರ್ ರಾಜಧಾನಿಯಾಗುವ ಅಪಾಯದ ಕುರಿತು ಎಚ್ಚರಿಕೆ ನೀಡಿತ್ತು. ವಾರ್ಷಿಕ ಕ್ಯಾನ್ಸರ್ ಪ್ರಕರಣಗಳು ಏರಿಕೆ ಕಾಣುತ್ತಿದ್ದು, 2020ರಲ್ಲಿ ದೇಶದಲ್ಲಿ 1.4 ಮಿಲಿಯನ್ ಪ್ರಕರಣಗಳು ಕಂಡು ಬಂದಿದ್ದು, ಇದು 2025ರ ಹೊತ್ತಿಗೆ 1.57 ಮಿಲಿಯನ್ ಆಗಲಿದೆ ಎಂದು ತಿಳಿಸಿತ್ತು.
ಸರ್ಕಾರ ತುರ್ತು ಮತ್ತು ಸಮಗ್ರ ಕ್ರಮಗಳ ಮೂಲಕ ಹೆಚ್ಚುತ್ತಿರುವ ಈ ಕ್ಯಾನ್ಸರ್ ಪ್ರಕರಣಗಳ ಪರಿಣಾಮಕಾರಿ ತಡೆಗಟ್ಟುವಿಕೆ ಮತ್ತು ಚಿಕಿತ್ಸಾ ಕ್ರಮಗಳ ಅಗತ್ಯವನ್ನು ಒತ್ತಿ ಹೇಳಬೇಕಿದೆ
ಕ್ಯಾನ್ಸರ್ ತಡೆಗಟ್ಟುವಿಕೆ: ಭಾರತದಲ್ಲಿ ತಂಬಾಕು ಕ್ಯಾನ್ಸರ್ ಹೆಚ್ಚುತ್ತಿದೆ. ಆದರೆ ಈ ಕ್ಯಾನ್ಸರ್ ಅನ್ನು ತಡೆಗಟ್ಟಬಹುದಾಗಿದೆ. ಸುಮಾರು 267 ಮಿಲಿಯನ್ ವಯಸ್ಕರರು ತಂಬಾಕು ಬಳಕೆ ಮಾಡುತ್ತಾರೆ. ಇದು ಬಾಯಿ, ಶ್ವಾಸಕೋಶ ಮತ್ತು ಇತರ ಕ್ಯಾನ್ಸರ್ಗೆ ಕಾರಣವಾಗುತ್ತದೆ. ಅನಾರೋಗ್ಯಕರ ಆಹಾರ ಅಭ್ಯಾಸ ಮತ್ತು ಜಡ ಜೀವನಶೈಲಿಯು ಕೊಲೆಕ್ಟರಲ್, ಸ್ತನ ಮತ್ತು ಪ್ಯಾನ್ಕ್ರಿಯಸ್ಟಿಕ್ ಕ್ಯಾನ್ಸರ್ಗೆ ಕಾರಣವಾಗಬಹುದು ಎಂದು ಆರ್ಜಿಸಿಐಆರ್ಸಿಯ ವೈದ್ಯೆ ಅಗರ್ವಾಲ್ ತಿಳಿಸಿದ್ದಾರೆ.
ಜೀವಿತಾವಧಿ ಹೆಚ್ಚಳ ಮತ್ತು ವಯಸ್ಸಾದ ಜನಸಂಖ್ಯೆ ಕೂಡ ಕ್ಯಾನ್ಸರ್ ದರ ಹೆಚ್ಚಳಕ್ಕೆ ತಮ್ಮದೇ ಆದ ಕೊಡುಗೆ ನೀಡುತ್ತಿದ್ದಾರೆ. ವಯಸ್ಸಾದವರಲ್ಲಿ ಅನೇಕ ರೀತಿಯ ಕ್ಯಾನ್ಸರ್ಗಳು ಕಂಡು ಬರುತ್ತಿವೆ. ಎಚ್ಪಿವಿ ಮತ್ತು ಹೆಪಟೈಟಿಸ್ ಬಿ ಮತ್ತು ಸಿ ವೈರಸ್ಗಳು ಕೂಡ ಗರ್ಭಕಂಠ ಮತ್ತು ಯಕೃತ್ ಕ್ಯಾನ್ಸರ್ಗೆ ಕಾರಣವಾಗಬಹುದು.
ಎಚ್ಪಿವಿ ಮತ್ತು ಹೆಪಟೈಟಿಸ್ ಬಿ ಲಸಿಕೆಗಳ ಮೂಲಕ ಈ ಕ್ಯಾನ್ಸರ್ ಸಂಬಂಧಿತ ಸೋಂಕುಗಳನ್ನು ತಡೆಯಬಹುದು. ಕ್ಯಾನ್ಸರ್ ಚಿಕಿತ್ಸಾ ತಂತ್ರಜ್ಞಾನ ಮತ್ತು ಚಿಕಿತ್ಸಾ ಆರೈಕೆಗಳು ಕೂಡ ರೋಗಿಗಳ ಆರೋಗ್ಯ ಸುಧಾರಣೆಯಲ್ಲಿ ಮುಖ್ಯವಾಗಿದೆ.
ಸಂಘಟಿತ ಪ್ರಯತ್ನ: ಕೇಂದ್ರ ಸರ್ಕಾರ ಕೂಡ ಬಜೆಟ್ನಲ್ಲಿ ಅಗತ್ಯ ಕ್ಯಾನ್ಸರ್ ಔಷಧಗಳ ಮೇಲಿನ ಸೀಮಾ ಸುಂಕವನ್ನು ಇಳಿಸಿದೆ. ಇದು ಹೊಸ ಚಿಕಿತ್ಸೆಗಳು ಮತ್ತಷ್ಟು ಅಗ್ಗ ಮತ್ತು ಲಭ್ಯವಾಗುವಂತೆ ಮಾಡುವಲ್ಲಿ ಸಹಾಯಕವಾಗಿದೆ. ಆದಾಗ್ಯೂ, ಆರೋಗ್ಯ ಯೋಜನೆ ಮತ್ತು ಮೂಲಸೌಕರ್ಯ ಸುಧಾರಣೆ ಮತ್ತಷ್ಟು ವಿಸ್ತರಿಸಬೇಕಿದೆ ಎಂದು ಪುಣ್ಯಶ್ಲೋಕ್ ಅಹಿಲ್ಯಾಬಾಯಿ ಹೊಲ್ಕರ್ನ ಹೆಡ್ ಅಂಡ್ ನೆಕ್ ಕ್ಯಾನ್ಸರ್ ಇನ್ಸಿಟಿಟ್ಯೂಟ್ ಆಫ್ ಇಂಡಿಯಾದ ನಿರ್ದೇಶಕ ಡಾ ಪ್ರಥಮೇಶ್ ಪೈ ತಿಳಿಸಿದ್ದಾರೆ.
ಈ ಬಿಕ್ಕಟ್ಟು ನಿವಾರಿಸುವಲ್ಲಿ ಸಾರ್ವಜನಿಕ ಅರಿವು, ಸಂಘಟಿತ ಪತ್ತೆ ಕಾರ್ಯ ಮತ್ತು ಕ್ಯಾನ್ಸರ್ ಸಂಶೋಧನೆಗೆ ನಿಧಿ ಹೆಚ್ಚಳಗಳಿಗೆ ಒತ್ತು ನೀಡಬೇಕಿದೆ. ಆರಂಭಿಕ ಹಂತದಲ್ಲಿ ಪತ್ತೆ ಮತ್ತು ತಡೆಗಟ್ಟುವಿಕೆ ನಿರ್ಣಾಯಕವಾಗಿದೆ. ಇದನ್ನು ಗಮನದಲ್ಲಿರಿಸಿಕೊಂಡು ನಾವು ಕ್ಯಾನ್ಸರ್ ಹೊರೆ ಕಡಿಮೆ ಮಾಡಬೇಕಿದ್ದು, ರೋಗಿಗಳ ಸುಧಾರಣೆ ನಡೆಸಬೇಕಿದೆ ಎಂದಿದ್ದಾರೆ. (ಐಎಎನ್ಎಸ್)
ಇದನ್ನೂ ಓದಿ: ಮೂರು ಪ್ರಮುಖ ಕ್ಯಾನ್ಸರ್ ಔಷಧಗಳ ಮೇಲಿನ ಕಸ್ಟಮ್ಸ್ ಸುಂಕ ತೆಗೆದುಹಾಕಿದ ಕೇಂದ್ರ ಸರ್ಕಾರ