ETV Bharat / health

ನಿಮ್ಮ ಲಿವರ್​ ಆರೋಗ್ಯವಾಗಿದೆಯೇ? ಸಂದೇಹವಿದ್ದಲ್ಲಿ ಈ ಸುದ್ದಿಯನ್ನೊಮ್ಮೆ ಓದಿ.. - What is the Liver Diseases Symptoms

ದೇಹದಲ್ಲಿ ಮೆದುಳು, ಹೃದಯಗಳಷ್ಟೇ ಲಿವರ್​ನ ಆರೋಗ್ಯವೂ ಬಹಳ ಮುಖ್ಯ. ನಿಮಗೆ ಗೊತ್ತಿಲ್ಲದೇ ನಿಮ್ಮ ಲಿವರ್​ ಅನೇಕ ಸಮಸ್ಯೆಗಳಿಂದ ಕ್ಷೀಣಿಸುತ್ತಿರಬಹುದು. ಆದರೆ ಟೆನ್ಶನ್​​ ಬೇಡ, ನಾವಿಲ್ಲಿ ಲಿವರ್​ ಸಮಸ್ಯೆಗಳ ಲಕ್ಷಣಗಳನ್ನು ತಿಳಿಸಿದ್ದೇವೆ. ನಿಮಗೂ ಈ ಲಕ್ಷಣಗಳು ಕಂಡು ಬಂದರೆ ವೈದ್ಯರನ್ನು ಭೇಟಿಯಾಗಿ.

ಯಕೃತ್ತಿನ ರೋಗಗಳ ಲಕ್ಷಣ
ಯಕೃತ್ತಿನ ರೋಗಗಳ ಲಕ್ಷಣ (ETV Bharat)
author img

By ETV Bharat Karnataka Team

Published : Jun 28, 2024, 10:33 AM IST

Liver Diseases Symptoms: ಯಕೃತ್ತು(ಲಿವರ್​) ನಮ್ಮ ದೇಹದಲ್ಲಿ ಬಹಳ ಮುಖ್ಯವಾದ ಅಂಗ. ದೇಹದಿಂದ ವಿಷವನ್ನು ಹೊರಹಾಕುವಲ್ಲಿ ಮತ್ತು ಜೀರ್ಣಕ್ರಿಯೆಯನ್ನು ಸುಗಮಗೊಳಿಸುವಲ್ಲಿ ಲಿವರ್​ ಪ್ರಮುಖ ಪಾತ್ರವಹಿಸುತ್ತದೆ. ಹಾಗಾಗಿ ಯಕೃತ್​ನ ಕಾಳಜಿ ಸಾಕಷ್ಟು ಅಗತ್ಯ. ನಿಮ್ಮ ದೇಹದಲ್ಲಿ ಈ ಕೆಲ ರೋಗಲಕ್ಷಣಗಳು ಕಾಣಿಸಿಕೊಂಡರೆ ಯಕೃತ್ತು ಅಪಾಯದಲ್ಲಿದೆ ಎಂದರ್ಥ. ಆ ಲಕ್ಷಣಗಳ ಮಾಹಿತಿ ಇಲ್ಲಿದೆ.

ತಜ್ಞರು ಹೇಳುವಂತೆ ಯಕೃತ್ತು ಆರೋಗ್ಯಕರವಾಗಿಲ್ಲದಿದ್ದರೆ ನಿಮಗೆ ಜೀರ್ಣಕಾರಿ ಸಮಸ್ಯೆಗಳು ಮೊದಲು ಕಾಣಿಸಿಕೊಳ್ಳುತ್ತದೆ. ನಿರಂತರವಾಗಿ ಮಲಬದ್ಧತೆ, ಸೇವಿಸಿದ ಆಹಾರ ಜೀರ್ಣವಾಗದೇ ಇರುವುದು, ಇಂತಹ ಲಕ್ಷಣಗಳಿದ್ದರೇ ಇಂದೇ ಒಮ್ಮೆ ಬಾರಿ ನಿಮ್ಮ ಲಿವರ್​ ಟೆಸ್ಟ್​ ಮಾಡಿಸಿಕೊಳ್ಳಿ. ಅಪಾಯ ಬೆಟ್ಟದಷ್ಟು ದೊಡ್ಡದಾಗುವ ಮೊದಲೇ ಎಚ್ಚೆತ್ತುಕೊಂಡರೇ ನಮ್ಮ ಪ್ರಾಣಕ್ಕೆ ಒಳಿತು. ಇದೊಂದಲ್ಲದೇ ಇನ್ನೂ ಕೆಲವು ಲಕ್ಷಣಗಳಿವೆ. ಅವುಗಳ ಬಗ್ಗೆ ನೋಡೋಣ ಬನ್ನಿ.

ವಿಪರೀತ ಆಯಾಸ: ಜೀರ್ಣಕಾರಿಯಲ್ಲದೇ ಯಕೃತ್ತಿನ ಹಾನಿಯ ಇನ್ನೊಂದು ಲಕ್ಷಣವೆಂದರೆ ವಿಪರೀತ ಆಯಾಸ. ಯಾವುದೇ ಸಣ್ಣ ಕೆಲಸ ಮಾಡಿದರೂ ತೀವ್ರ ದಣಿವು ಕಂಡು ಬರುವುದು.

ಹಸಿವಿನ ಕೊರತೆ: ಮತ್ತೊಂದು ಲಕ್ಷಣವೆಂದರೆ ಹಸಿವಿನ ಕೊರತೆ. ಹಸಿವಾಗದಿರಲು ಅನೇಕ ಕಾರಣವಿರಬಹುದು. ಆದರೆ ಹಲವಾರು ದಿನಗಳವರೆಗೆ ಹಸಿವಿಲ್ಲದಿದ್ದರೆ ಅದು ಯಕೃತ್ತಿನ ಹಾನಿಯ ಸೂಚನೆ ಎಂದು ತಜ್ಞರು ತಿಳಿಸಿದ್ದಾರೆ.

ಕಾಮಾಲೆ(ಜಾಂಡೀಸ್​): ಜಾಂಡೀಸ್​ ಕೂಡ ಯಕೃತ್ತಿನ ಕಾಯಿಲೆಯ ಲಕ್ಷಣವನ್ನು ತೋರಿಸುತ್ತದೆ. ಎಲ್ಲವೂ ನಿಮಗೆ ಹಳದಿ ಬಣ್ಣದಿಂದ ಕಾಣುವುದು. ಜತೆಗೆ ನಿಮ್ಮ ಚರ್ಮದ ಬಣ್ಣದಲ್ಲಿ ಬದಲಾವಣೆಗಳಿದ್ದರೆ ಗಮನಿಸಿಕೊಳ್ಳಿ. ಅಂದರೆ.. ಜಾಂಡೀಸ್ ಕೂಡ ಲಿವರ್ ಸಮಸ್ಯೆಯನ್ನು ಸೂಚಿಸುತ್ತದೆ. ಹಾಗಾಗಿ ಇದೇ ರೀತಿಯ ಲಕ್ಷಣಗಳು ಕಂಡು ಬಂದರೆ ತಕ್ಷಣ ಎಚ್ಚೆತ್ತುಕೊಳ್ಳುವುದು ಉತ್ತಮ ಎನ್ನುತ್ತಾರೆ ತಜ್ಞರು.

ವಾಕರಿಕೆ: ಒಂದು ದಿನದಲ್ಲೇ ಆಗಾಗ್ಗೆ ವಾಕರಿಕೆ ಮತ್ತು ವಾಂತಿಯಂತಹ ಲಕ್ಷಣಗಳು ಕಂಡುಬಂದರೆ ನಿರ್ಲಕ್ಷಿಸಿಸಬೇಡಿ. ಆ ಲಕ್ಷಣಗಳು ಕೂಡ ಯಕೃತ್ತಿನ ಸಮಸ್ಯೆಯನ್ನು ಸೂಚಿಸುತ್ತವೆ. ಕೆಲವರಿಗೆ ತಿಂದ ತಕ್ಷಣ ವಾಕರಿಕೆ ಅಥವಾ ವಾಂತಿಯಾಗುವುದು. ಇದು ಲಿವರ್ ಸಮಸ್ಯೆಯ ಲಕ್ಷಣವೇ.

ಮೂತ್ರದ ಬಣ್ಣದಲ್ಲಿ ಬದಲಾವಣೆ: ನಿಮ್ಮ ಯಕೃತ್ತು ಆರೋಗ್ಯವಾಗಿದೆಯೇ ಎನ್ನುವುದಕ್ಕೆ ಇನ್ನೊಂದು ವಿಧಾನವೆಂದರೆ ನಿಮ್ಮ ಮೂತ್ರದ ಬಣ್ಣ. ಮೂತ್ರ ಸಾಮಾನ್ಯ ಬಣ್ಣದ ಬದಲು ಹಳದಿ ಅಥವಾ ಇನ್ಯಾವುದೇ ಬಣ್ಣದಲ್ಲಿ ಬಂದರೆ ಪರೀಕ್ಷೆ ಮಾಡಿಸುವುದು ಉತ್ತಮ.

ಮಲಬದ್ಧತೆ: ಯಕೃತ್ತಿನ ಸಮಸ್ಯೆಯನ್ನು ಸೂಚಿಸುವ ಪ್ರಮುಖ ಲಕ್ಷಣ ಮಲಬದ್ಧತೆ. ಏಕೆಂದರೆ ಪಿತ್ತಜನಕಾಂಗದಲ್ಲಿ ಯಾವುದೇ ಸಮಸ್ಯೆ ಉಂಟಾದರೆ ಅದು ನಮ್ಮ ಜೀರ್ಣಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ. ಮತ್ತು ಮಲಬದ್ಧತೆಗೆ ಕಾರಣವಾಗುತ್ತದೆ. 2017 ರಲ್ಲಿ ಅಲಿಮೆಂಟರಿ ಫಾರ್ಮಾಕಾಲಜಿ ಹಾಗೂ ಥೆರಪ್ಯೂಟಿಕ್ಸ್ ಜರ್ನಲ್‌ನಲ್ಲಿ ಪ್ರಕಟವಾದ ವರದಿಯು ನಾನ್​ ಆಲ್ಕೋಹಾಲ್​ ಕೊಬ್ಬಿನ ಪಿತ್ತಜನಕಾಂಗದ ಕಾಯಿಲೆ (NAFLD) ಹೊಂದಿರುವ ಜನರು ಮಲಬದ್ಧತೆಯನ್ನು ಹೊಂದಿರುತ್ತಾರೆ ಎಂದು ಕಂಡು ಹಿಡಿದಿದೆ. ಈ ಸಂಶೋಧನೆಯಲ್ಲಿ, ಚೀನಾದ ಯಾಂಗ್‌ಝೌ ವಿಶ್ವವಿದ್ಯಾಲಯದ ಪ್ರಮುಖ ಗ್ಯಾಸ್ಟ್ರೋಎಂಟರಾಲಜಿಸ್ಟ್​ ಡಾ. ಯುನ್​-ಜಿಯಾನ್​​ ಜಾಂಗ್​ ಭಾಗವಹಿಸಿದ್ದರು. ಲಿವರ್​​ ಸಮಸ್ಯೆ ಇರುವವರಲ್ಲಿ ಜೀರ್ಣಕ್ರಿಯೆ ಸಮಸ್ಯೆ, ಮಲಬದ್ಧತೆ ಮುಂತಾದ ಸಮಸ್ಯೆಗಳು ಕಂಡುಬರುತ್ತವೆ ಎಂದು ತಿಳಿಸಿದ್ದಾರೆ.

ಇನ್ನು ಚರ್ಮದ ಸಮಸ್ಯೆಗಳು: ನಿಮ್ಮ ಚರ್ಮದ ಮೇಲೆ ತುರಿಕೆ ದದ್ದುಗಳಂತಹ ಸಮಸ್ಯೆಗಳಿಂದ ತೊಂದರೆಗೊಳಗಾಗುತ್ತಿದ್ದರೆ ಅದು ಲಿವರ್ ಸಮಸ್ಯೆಯ ಸಂಕೇತ. ವಿಶೇಷವಾಗಿ ಚರ್ಮದ ಮೇಲೆ ಕೆಂಪು ಕಲೆಗಳು ಉಂಟಾಗುತ್ತವೆ ಎಂದು ತಜ್ಞರು ವರದಿಯಲ್ಲಿ ಬಿಚ್ಚಿಟ್ಟಿದ್ದಾರೆ. ಈ ಲಕ್ಷಣಗಳಲ್ಲದೇ, ಲಿವರ್​ನಲ್ಲಿ ಸಮಸ್ಯೆ ಉಂಟಾದಾಗ ಹೊಟ್ಟೆ ನೋವು, ಪದೇ ಪದೇ ಜ್ವರ, ಏಕಾಗ್ರತೆಯ ಕೊರತೆ, ಭೇದಿ, ಬಾಯಿ ದುರ್ವಾಸನೆ ಮುಂತಾದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ ಎಂದು ತಜ್ಞರು ತಿಳಿಸಿದ್ದಾರೆ.

ಓದುಗರಿಗೆ ಸೂಚನೆ: ಇಲ್ಲಿ ಒದಗಿಸಲಾದ ಎಲ್ಲ ಆರೋಗ್ಯ ಮಾಹಿತಿ ಮತ್ತು ಸಲಹೆಗಳು ನಿಮ್ಮ ತಿಳಿವಳಿಕೆಗಾಗಿ ಮಾತ್ರವೇ ನೀಡಲಾಗಿದೆ. ಮತ್ತು ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ, ಆರೋಗ್ಯ ವೃತ್ತಿಪರ ಸಲಹೆಯ ಆಧಾರದ ಮೇಲೆ ನಾವು ಈ ಮಾಹಿತಿಯನ್ನು ಒದಗಿಸುತ್ತಿದ್ದೇವೆ. ಆದರೆ, ಇವುಗಳನ್ನು ಅನುಸರಿಸುವ ಮೊದಲು ನಿಮ್ಮ ಸ್ಥಳೀಯ ಅಥವಾ ವೈಯಕ್ತಿಕ ವೈದ್ಯರ ಸಲಹೆಯನ್ನು ತೆಗೆದುಕೊಳ್ಳುವುದು ಉತ್ತಮ.

ಇದನ್ನೂ ಓದಿ: ಕೆಲವು ಮಕ್ಕಳಿಗೆ ಹಾಲು ಅಂದ್ರೆ ಆಗಲ್ಲ, ಒತ್ತಾಯವಾಗಿ ಕುಡಿಸಿದ್ರೆ ವಾಂತಿ ಆಗುವುದೇಕೆ ಗೊತ್ತೇ? - Why Milk Causes Allergy

ETV Bharat Logo

Copyright © 2024 Ushodaya Enterprises Pvt. Ltd., All Rights Reserved.