ಚೆನ್ನೈ(ತಮಿಳುನಾಡು): ಗರ್ಭಿಣಿಯರಲ್ಲಿನ ಭ್ರೂಣದ ನಿಖರ ವಯಸ್ಸಿನ ಪತ್ತೆಗೆ ಕೃತಕ ಬುದ್ಧಿಮತ್ತೆ (ಎಐ) ಮಾದರಿಯೊಂದನ್ನು ಮೊದಲ ಬಾರಿಗೆ ಐಐಟಿ ಮದ್ರಾಸ್ ಸಂಶೋಧಕರು ಅಭಿವೃದ್ಧಿ ಪಡಿಸಿದ್ದಾರೆ. ಇದರ ಸಹಾಯದಿಂದ ಗರ್ಭಾವಸ್ಥೆಯಲ್ಲಿನ ಎರಡು ಮತ್ತು ಮೂರನೇ ತ್ರೈಮಾಸಿಕದಲ್ಲಿ ಭ್ರೂಣದ ವಯಸ್ಸು ಪತ್ತೆ ಮಾಡಬಹುದು.
ಭ್ರೂಣದ ನಿಖರ ವಯಸ್ಸು ಗರ್ಭಧಾರಣೆಯ ವಯಸ್ಸಾಗಿದ್ದು, ಇದು ಗರ್ಭಿಣಿಯರಿಗೆ ಸರಿಯಾದ ಆರೈಕೆ ನೀಡಲು ಸಹಾಯ ಮಾಡುವ ಜೊತೆಗೆ ಹೆರಿಗೆ ಸಮಯವನ್ನು ನಿಖರವಾಗಿ ತಿಳಿಸಲು ಸಹಾಯ ಮಾಡುತ್ತದೆ. ಪ್ರಸ್ತುತ ಗರ್ಭಾಧಾರಣೆಯ ವಯಸ್ಸನ್ನು ಪಾಶ್ಚಿಮಾತ್ಯ ಜನಸಂಖ್ಯೆಯ ಮಾದರಿ ಅಭಿವೃದ್ಧಿ ಬಳಕೆ ಮಾಡಿ ನಿರ್ಣಯಿಸಲಾಗುತ್ತಿದೆ. ಇದರಿಂದ ತಪ್ಪಾಗುವ ಸಾಧ್ಯತೆ ಹೆಚ್ಚಿದೆ. ಗರ್ಭಿಣಿ - ಜಿಎ 2 ಎಂಬ ಹೊಸ ಮಾದರಿ ಭಾರತದ ಜನಸಂಖ್ಯೆ ದತ್ತಾಂಶ ಆಧರಿಸಿ ನಿರೂಪಿಸಲಾಗಿದೆ. ಇದರಿಂದ ಭ್ರೂಣದ ವಯಸ್ಸನ್ನು ನಿಖರವಾಗಿ ಅಂದಾಜಿಸಲಿದೆ. ಇದರಿಂದ ತಪ್ಪನ್ನು ಮೂರು ಪಟ್ಟು ಕಡಿಮೆ ಮಾಡಬಹುದಾಗಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.
ಭಾರತದ ಜನಸಂಖ್ಯಾ ದತ್ತಾಂಶವನ್ನು ಬಳಕೆ ಮಾಡಿ ಮೊದಲ ತ್ರೈಮಾಸಿಕದ ಗರ್ಭಾಧಾರಣೆ ವಯಸ್ಸಿನ ಅಂದಾಜು ಮಾದರಿಯನ್ನು ಅಭಿವೃದ್ಧಿಪಡಿಸಿ ಮತ್ತು ಮೌಲ್ಯೀಕರಿಸಲಾಗಿದೆ. ಈ ಅಧ್ಯಯನವನ್ನು ಲ್ಯಾನ್ಸೆಟ್ ರಿಜಿನಲ್ ಹೆಲ್ತ್ ಸೌತ್ಈಸ್ಟ್ ಏಷ್ಯಾದಲ್ಲಿ ಪ್ರಕಟಿಸಲಾಗಿದೆ. ಗರ್ಭ್ - ಇಣಿ ಇದು ಮದ್ರಾಸ್ ಐಐಟಿಯ ಜೈವಿಕ ತಂತ್ರಜ್ಞಾನ ವಿಭಾಗದ (ಡಿಬಿಟಿ) ಪ್ರಮುಖ ಯೋಜನೆಯಾಗಿದೆ. ಈ ಮಾದರಿಯನ್ನು ದೇಶಾದ್ಯಂತ ಮೌಲ್ಯೀಕರಿಸಲು ಬಳಕೆ ಮಾಡಲಾಗುವುದು ಎಂದು ಕೇಂದ್ರ ಸರ್ಕಾರದ ಡಿಬಿಡಿಯ ಕಾರ್ಯದರ್ಶಿ ಡಾ ರಾಜೇಶ್ ಗೋಖಲೆ ತಿಳಿಸಿದ್ದಾರೆ.
ಭಾರತದ ಸಾರ್ವಜನಿಕ ಆರೋಗ್ಯ ವೃದ್ಧಿಯ ಗುರಿಯೊಂದಿಗೆ ಸ್ಥಳೀಯ ಮಟ್ಟದಲ್ಲಿ ಆರೋಗ್ಯ ಸಮಸ್ಯೆ ಪರಿಹಾರಕ್ಕೆ ಐಐಟಿ ಮದ್ರಾಸ್ ಕೊಡುಗೆ ನೀಡಿದೆ. ಈ ವರ್ಷಾಂತ್ಯದಲ್ಲಿ ಪ್ರಸವ ಕುರಿತು ಅಂದಾಜಿಗೆ ಅಡ್ವಾನ್ಸ್ ಡೇಟಾ ಸೈನ್ಸ್ ಮತ್ತು ಎಐ/ಎಂಎಲ್ ತಂತ್ರಜ್ಞಾನಾದರಿತ ಸಾಧನಗಳನ್ನು ಬಳಕೆ ಮಾಡುತ್ತೇವೆ. ಇದರ ಮೊದಲ ಹಂತವಾಗಿ ನಿಖರ ಜಿಎ ಮಾದರಿ ಅಭಿವೃದ್ಧಿ ಪಡಿಸಲಾಗಿದ್ದು, ಇದು ಪಾಶ್ಚಿಮಾತ್ಯ ಜನಸಂಖ್ಯಾ ಬಳಕೆ ಮಾದರಿಗಳಿಗಿಂತ ಉತ್ತಮವಾಗಿ ಕಾರ್ಯನಿರ್ವಹಿಸಿದೆ ಎಂದು ಐಐಟಿ ಮದ್ರಾಸ್ನ ಸೆಂಟರ್ ಇಂಟೆಗ್ರೇಟಿವ್ ಬಯೋಲಾಜಿ ಅಂಡ್ ಸಿಸ್ಟಂ ಮೆಡಿಸಿನ್ನ ಕೋ ಆರ್ಡಿನೇಟರ್ ಡಾ ಹಿಮಾಂಶು ಸಿನ್ಹಾ ತಿಳಿಸಿದ್ದಾರೆ.
ಗರ್ಭಿಣಿ-ಜಿಎ 2 ಮೂರು ಮಾದರಿಗಳನ್ನು ಭ್ರೂಣದ ಅಲ್ಟ್ರಾಸೌಂಡ್ ಪ್ಯಾರಾಮೀಟರ್ ಅನ್ನು ಮಾಪನ ಮಾಡುತ್ತದೆ. ಹರಿಯಾಣದ ಗುರುಗ್ರಾಮ್ ಸಿವಿಲ್ ಆಸ್ಪತ್ರೆಯಲ್ಲಿ ದಾಖಲಾದ ಗರ್ಭ್-ಇಣಿ ಸಮಗ್ರ ದತ್ತಾಂಶವನ್ನು ಬಳಸಿಕೊಂಡು ಅಭಿವೃದ್ಧಿಪಡಿಸಲಾಗಿದೆ. ಇದನ್ನು ದಕ್ಷಿಣ ಭಾರತದಲ್ಲಿ ಸ್ವತಂತ್ರ ಸಮೂಹದಲ್ಲಿ ಮೌಲ್ಯೀಕರಿಸಲಾಗಿದೆ.
ಇದನ್ನೂ ಓದಿ: ಗ್ಲಾಕೋಮಾ & ರೆಟಿನಾ ರೋಗಪತ್ತೆ: ತಜ್ಞರನ್ನೂ ಮೀರಿಸಿದ GPT-4