ಹೈದರಾಬಾದ್: ಜೀವನದಲ್ಲಿ ಸಮಯ ನಿರ್ವಹಣೆ ಎಂಬುದು ಅತ್ಯಗತ್ಯವಾಗಿದೆ. ಅದರಲ್ಲೂ ಇಂದಿನ ತಂತ್ರಜ್ಞಾನ ಕಾಲದಲ್ಲಿ ಬದಲಾಗುತ್ತಿರುವ ಸಂಸ್ಕೃತಿಯಲ್ಲಿ ವೃತ್ತಿ ಜೀವನ ಮತ್ತು ವೈಯಕ್ತಿಕ ಜೀವನ ಸಮತೋಲನ ನಡೆಸುವುದು ಸವಾಲಾಗಿದೆ. ಇದರಿಂದ ಅಮೂಲ್ಯ ಸಮಯವನ್ನು ಪರಿಣಾಮಕಾರಿಯಾಗಿ ನಿರ್ವಹಣೆ ಮಾಡುವುದು ಅವಶ್ಯವಾಗಿದೆ. ಇದಕ್ಕಾಗಿ ದಿನದ 24 ಗಂಟೆಗಳನ್ನು 8 ಗಂಟೆಗಳಂತೆ ಮೂರು ವಿಭಾಗ ಮಾಡಬೇಕು. ನೀವು ಕೆಲಸ ಮಾಡಲು 8 ಗಂಟೆ ಕಳೆದರೆ, ಇನ್ನು 8 ಗಂಟೆಗಳ ಕಾಲ ನಿಮ್ಮ ಹವ್ಯಾಸ, ಕುಟುಂಬ ಸದಸ್ಯರು ಮತ್ತು ಸ್ನೇಹಿತರಿಗೆ ಮೀಸಲಾಗಿರಬೇಕಿದೆ. ಇನ್ನುಳಿದ 8 ಗಂಟೆಗಳು ಉತ್ತಮ ಗುಣಮಟ್ಟದ ನಿದ್ರೆಗೆ ಅವಶ್ಯಕವಾಗಿದೆ. ಈ ಮೂಲಕ ನಿಮ್ಮ ಗುರಿಯನ್ನು ಸುಲಭವಾಗಿ ಸಾಧಿಸಬಹುದಾಗಿದ್ದು, ಮಾನಸಿಕ ಮತ್ತು ದೈಹಿಕ ಆರೋಗ್ಯ ಕಾಪಾಡಿಕೊಳ್ಳಬಹುದಾಗಿದೆ.
ಏನಿದರ ಪ್ರಯೋಜನ?
8-8-8 ನಿಯಮ ಎಲ್ಲರಿಗೂ ಸರಿ ಹೊಂದದೆ ಇರಬಹುದು. ಆದರೆ, ಅಗತ್ಯಗಳ ಆಧಾರದ ಮೇಲೆ ಇವುಗಳನ್ನು ಸಣ್ಣ ಭಾಗವಾಗಿ ವಿಂಗಡಿಸಬಹುದು. ಉತ್ತಮ ಯೋಜನೆ ಮತ್ತು ಶಿಸ್ತುಬದ್ಧ ಅಭ್ಯಾಸದ ಮೂಲಕ ಉತ್ತಮ ಫಲಿತಾಂಶಗಳನ್ನು ಪಡೆಯಲಾಗುವುದು. ಇದು ಜೀವನಶೈಲಿಯನ್ನು ಆರೋಗ್ಯಕರ ಮತ್ತು ತೃಪ್ತಿಕರವಾಗಿಸಲು ಉತ್ತಮ ಸಾಧನವಾಗಿದೆ. ದೈನಂದಿನ ಕೆಲಸಗಳನ್ನು ಈ ರೀತಿ ಮೂರು ಭಾಗಗಳಾಗಿ ವಿಭಜಿಸುವುದರಿಂದ ಕೆಲಸದ ಮೇಲೆ ಗಮನ ಹರಿಸಲು ಸಾಧ್ಯವಾಗುತ್ತದೆ. ನಿತ್ಯ ಜೀವನದಲ್ಲಿ ಈ ನಿಯಮ ರೂಢಿಸಿಕೊಂಡಲ್ಲಿ ಅಗತ್ಯ ಕೆಲಸಗಳು ಕೂಡ ಸಕಾಲಕ್ಕೆ ಸಾಧಿಸಿ, ಉತ್ತಮ ಫಲಿತಾಂಶ ಪಡೆಯಬಹುದು.
ನಿರ್ದಿಷ್ಟ ಸಮಯವನ್ನು ಕುಟುಂಬ ಅಥವಾ ಹವ್ಯಾಸಗಳಿಗೆ ಮೀಸಲಾಗಿಸಬಹುದಾಗಿದೆ. ಇದರಿಂದ ಕಲ್ಪನಾ ಸಾಮರ್ಥ್ಯ ಮತ್ತು ಆಲೋಚನೆಗಳು ಬೆಳೆಯಲು ಸಹಾಯವಾಗುತ್ತದೆ. ಸಮಯವನ್ನು ಈ ರೀತಿ ವಿಂಗಡಿಸುವ ಮೂಲಕ ವಿಶ್ರಾಂತಿ ಪಡೆಯಲು ಕೂಡ ಸಮಯ ಸಿಗಲಿದೆ. ಇದರಿಂದ ಸಾಕಷ್ಟು ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಸುಧಾರಿಸುತ್ತದೆ. ಒತ್ತಡ, ಆತಂಕ ಮತ್ತು ಖಿನ್ನತೆ ಕಡಿಮೆಯಾಗುತ್ತದೆ ಎಮದು ಅಧ್ಯಯನ ತಿಳಿಸಿದೆ.
ಅಡೆತಡೆ ಇದೆ: ಈ ನಿಯಮವನ್ನು ಜಾರಿಗೆ ತರುವುದು ಸುಲಭವಲ್ಲ. ಪ್ರತಿನಿತ್ಯ 8 ಗಂಟೆಗಳನ್ನು ವಿಂಗಡಿಸಿ, ಅಳವಡಿಸಲು ಅನೇಕ ಅಡೆತಡೆ ಸವಾಲುಗಳನ್ನು ಎದುರಿಸಬಹುದು. ಹವಾಮಾನದಲ್ಲಿನ ಬದಲಾವಣೆಗಳು ಮತ್ತು ಶಬ್ದಗಳು ಕೂಡ ಕೆಲವೊಮ್ಮೆ ನಿದ್ರೆಯ ಗುಣಮಟ್ಟವನ್ನು ತೊಂದರೆಗೊಳಿಸಬಹುದು. ಇಂತಹ ಒತ್ತಡಗಳು ಸಹೋದ್ಯೋಗಿಗಳು, ಕುಟುಂಬ ಸದಸ್ಯರು ಮತ್ತು ಕಚೇರಿಯ ಮೇಲಾಧಿಕಾರಿಗಳ ಸಮತೋಲನವನ್ನು ಕಾಪಾಡಿಕೊಳ್ಳಲು ಕಷ್ಟವಾಗುತ್ತದೆ. ಸರಿಯಾದ ಯೋಜನೆಯನ್ನು ರೂಪಿಸಿದರೆ ಇದರಿಂದ ಯಶಸ್ಸು ಪಡೆಯಬಹುದು.
ಇದನ್ನೂ ಓದಿ: ರೆಸ್ಟೋರೆಂಟ್ ಸ್ಟೈಲ್ನಲ್ಲಿ, ಹತ್ತೇ ನಿಮಿಷದಲ್ಲಿ ಹೆಲ್ದೀ ಓಟ್ಸ್ ದೋಸೆ; ತಿನ್ನಿ, ತೂಕ ಇಳಿಸಿ - oats dosa