ETV Bharat / health

ದಿನವೊಂದಕ್ಕೆ ಎಷ್ಟು ನೀರು ಕುಡಿಯಬೇಕು?; ಎಷ್ಟು ಕುಡಿದರೆ ಸರಿ, ವೈಜ್ಞಾನಿಕ ಸಂಶೋಧನೆಗಳು ಹೇಳುವುದೇನು? - HOW MUCH OF WATER TO DRINK PER DAY - HOW MUCH OF WATER TO DRINK PER DAY

ನಾವು ಆರೋಗ್ಯವಾಗಿರಬೇಕು, ಬದುಕಬೇಕು, ಜೀವಿಸಬೇಕು ಎಂದರೆ ನೀರು ಬೇಕೇಬೇಕು. ಗಾಳಿ ಎಷ್ಟು ಮುಖ್ಯವೋ ನೀರು ಅಷ್ಟೇ ಮುಖ್ಯ. ಇನ್ನು ಆರೋಗ್ಯಯುತವಾಗಿ ಇರಲು, ಬದುಕಲು ದಿನಕ್ಕೆ ಎಷ್ಟು ನೀರು ತೆಗೆದುಕೊಳ್ಳಬೇಕು ಎಂಬ ವಿಷಯದಲ್ಲಿ ಒಂದೊಂದು ವಾದಗಳಿವೆ. ಒಬ್ಬೊಬ್ಬರು ಒಂದೊಂದು ಅಂಕಿ- ಅಂಶವನ್ನು ಹೇಳುತ್ತಾರೆ. ಆದಾಗ್ಯೂ ಇತ್ತೀಚೆಗೆ ಈ ವಿಷಯದ ಕುರಿತ ನಡೆದ ಸಂಶೋಧನೆ ಕೆಲ ಆಸಕ್ತಿಕರ ವಿಷಯಗಳನ್ನ ಪ್ರಕಟ ಮಾಡಿದೆ.

how-many-liters-water-should-you-drink-per-day-as-per-experts-check-full-details-here
ದಿನವೊಂದಕ್ಕೆ ಎಷ್ಟು ನೀರು ಕುಡಿಯಬೇಕು?; ಎಷ್ಟು ಕುಡಿದರೆ ಸರಿ, ವೈಜ್ಞಾನಿಕ ಸಂಶೋಧನೆಗಳು ಹೇಳುವುದೇನು? (ETV Bharat)
author img

By ETV Bharat Karnataka Team

Published : May 11, 2024, 3:46 PM IST

ಹೈದರಾಬಾದ್: ದೇಹಕ್ಕೆ ನೀರು ಅಗತ್ಯ ಎಂಬುದನ್ನು ನಾವೇನು ಬಿಡಿಸಿ ಹೇಳಬೇಕ್ಕಿಲ್ಲ. ಅದೆಲ್ಲ ಸಕಲ ಜೀವಿಗಳಿಗೂ ಗೊತ್ತು. ಗಾಳಿ, ನೀರು ಮತ್ತು ಬೆಳಕು ಜೀವ ಸಂಕುಲಕ್ಕೆ ಅತ್ಯಗತ್ಯ. ಆದರೆ ಜೀವಕ್ಕೆ ಅಗತ್ಯವಾದ ನೀರಿನ ಬಗ್ಗೆ ಬಹಳಷ್ಟು ಆಸಕ್ತಿಕರ ವಿಷಯಗಳು ಗೊತ್ತಿಲ್ಲ. ತುಂಬಾ ಜನರಿಗೆ ಎಷ್ಟು ಲೀಟರ್ ನೀರು ಕುಡಿಯಬೇಕು ಎಂಬ ನಿಖರವಾದ ಮಾಹಿತಿ ಇಲ್ಲ. ಕೆಲವರು ಹೆಚ್ಚು, ಇನ್ನು ಕೆಲವರು ಕಡಿಮೆ ಕುಡಿಯುತ್ತಾರೆ. ಆದರೆ, ಹಾಗೆ ಕುಡಿಯುವುದು ಆರೋಗ್ಯಕ್ಕೆ ತುಂಬಾ ಅಪಾಯಕಾರಿ ಅಂತಾರೆ ತಜ್ಞರು. ಹಾಗಾದರೆ ಒಬ್ಬ ವ್ಯಕ್ತಿ ಆರೋಗ್ಯವಾಗಿರಲು ದಿನಕ್ಕೆ ಎಷ್ಟು ಲೀಟರ್ ನೀರು ಕುಡಿಯಬೇಕು? ನೀರು ಕಡಿಮೆ ಕುಡಿದರೆ ಏನಾಗುತ್ತದೆ? ಹೆಚ್ಚು ಕುಡಿದರೆ ಏನಾಗುತ್ತದೆ? ಇವೆಲ್ಲವುಗಳಿಗೆ ತಜ್ಞರ ಮಾತಿನಲ್ಲೇ ಉತ್ತರ ಕಂಡುಕೊಳ್ಳೋಣ.

ಒಬ್ಬ ಸಾಮಾನ್ಯ ವ್ಯಕ್ತಿ ದೀರ್ಘಕಾಲ ಆರೋಗ್ಯವಾಗಿರಲು, ದಿನವೊಂದಕ್ಕೆ 7 ರಿಂದ 10 ಗ್ಲಾಸ್ ನೀರು ಕುಡಿಯಬೇಕು ಎಂಬುದನ್ನು ಅಮೆರಿಕದ ಸಂಶೋಧಕರು ಕಂಡು ಹಿಡಿದಿದ್ದಾರೆ. ಅಂದರೆ 2-3 ಲೀಟರ್ ನೀರು. ಆದಾಗ್ಯೂ, ಬಿಸಿಲಿನಲ್ಲಿ ಕೆಲಸ ಮಾಡುವವರು, ಬಿಸಿಯಾದ ಸ್ಥಳಗಳಲ್ಲಿ ಮತ್ತು ಹೆಚ್ಚಿನ ದೈಹಿಕ ಚಟುವಟಿಕೆ ಮಾಡುವವರು ಸ್ವಲ್ಪ ಮಟ್ಟಿಗೆ ಈ ಪ್ರಮಾಣವನ್ನು ಹೆಚ್ಚಿಸಬಹುದು. ಮೇಲಾಗಿ, ನಿತ್ಯ ತೆಗೆದುಕೊಳ್ಳುವ ನೀರಿನ ಪ್ರಮಾಣ ಕಡಿಮೆಯೂ ಇರಬಾರದು, ಹೆಚ್ಚೂ ಇರಬಾರದು ಎಂಬ ಅಂಶ ಬಹಿರಂಗವಾಗಿದೆ. ಏಕೆಂದರೆ ಹೆಚ್ಚು ಅಥವಾ ಕಡಿಮೆ ನೀರು ಕುಡಿಯುವುದರಿಂದ ಆರೋಗ್ಯ ಸಮಸ್ಯೆಗಳು ಎದುರಾಗುವ ಸಾಧ್ಯತೆಗಳಿವೆ.

ಅಮೆರಿಕದ "ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್" ನ ಸಂಶೋಧಕರು ನಿತ್ಯ ಸಾಕಷ್ಟು ನೀರು ಕುಡಿಯುವುದರಿಂದ ದೀರ್ಘಾಯುಷ್ಯ ಪಡೆಯಬಹುದು ಎಂಬ ಅಂಶದ ಬಗ್ಗೆಯೂ ಸಂಶೋಧನೆ ನಡೆಸಿದ್ದಾರೆ. ಸುಮಾರು 30 ವರ್ಷಗಳ ಕಾಲ ನಡೆಸಿದ ಈ ಸಂಶೋಧನೆಯಲ್ಲಿ 11,255 ಜನರು ಭಾಗವಹಿಸಿದ್ದರು ಎಂಬುದು ಗಮನಾರ್ಹ. ಈ ವೇಳೆ 30-45 ವರ್ಷದವರ ಆರೋಗ್ಯದ ವಿವರಗಳನ್ನು ತೆಗೆದುಕೊಳ್ಳಲಾಗಿದೆ. ಆ ಬಳಿಕ '70-90 ವರ್ಷ' ವಯಸ್ಸಿಗೆ ಬಂದಾಗಿನ ಡೇಟಾಗಳನ್ನು ಸಂಶೋಧನೆಗೆ ತೆಗೆದುಕೊಳ್ಳಲಾಗಿದೆ. ಹೀಗೆ ಸಂಗ್ರಹಿಸಿದ ಎಲ್ಲ ವಿವರಗಳು "ಇ ಬಯೋಮೆಡಿಸಿನ್" ಮೆಡಿಕಲ್ ಜರ್ನಲ್​​ನಲ್ಲಿ ಪ್ರಕಟವಾಗಿತ್ತು. ಆ ವರದಿಯಲ್ಲಿ ಬೆಳಕಿಗೆ ಬಂದಿರುವ ವಿವರಗಳ ಜತೆಗೆ ಆರೋಗ್ಯಕರ ಬದುಕಿಗೆ ಕುಡಿಯುವ ನೀರಿನ ಅಗತ್ಯತೆಗೆ ಸಂಬಂಧಿಸಿದ ನಾನಾ ಅಂಶಗಳನ್ನು ‘ಕಿಮ್ಸ್ ವೈದ್ಯಕೀಯ ಶಿಕ್ಷಣ ಮತ್ತು ಶೈಕ್ಷಣಿಕ’ ಡೈರೆಕ್ಟರ್​ ಡಾ.ಮಣಿಮಾಲ ರಾವ್ ವಿವರಿಸಿದ್ದಾರೆ.

ಏನಿದು ವಾಟರ್​ ವೇಟ್​​​​ ಸಮಸ್ಯೆ: ಅದನ್ನು ಕಡಿಮೆ ಮಾಡುವುದು ಹೇಗೆ?: ಬಾಯಾರಿಕೆಯಾದ ತಕ್ಷಣ ಕುಡಿಯಿರಿ : ಹೆಚ್ಚು ನೀರು ಕುಡಿಯುತ್ತೀರಾ, ಆದರೂ ಅದು ದೇಹದಲ್ಲಿ ಸಂಗ್ರಹವಾಗುವುದಿಲ್ಲ. ಅದು ಹೊರಗೆ ಹೋಗುತ್ತಲೇ ಇದೆಯಾ, ಹಾಗಾದರೆ ನಿಮ್ಮ ಕಿಡ್ನಿ ನೀರನ್ನು ಹೆಚ್ಚಾಗಿ ಪಿಲ್ಟರ್​ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಅರ್ಥ. . ಈ ಸಮಸ್ಯೆ ಇಲ್ಲದೆ ಬಾಯಾರಿಕೆಯಾದಾಗಲೆಲ್ಲ ಶುದ್ಧ ನೀರು ಕುಡಿಯುವ ಅಭ್ಯಾಸ ರೂಢಿಸಿಕೊಳ್ಳುವುದು ಒಳ್ಳೆಯದು ಎನ್ನುತ್ತಾರೆ ಡಾ.ಮಣಿಮಾಲ ರಾವ್. ಬಾಯಾರಿಕೆಯಾದ ನಂತರ ಆಗಾಗ ನೀರು ಕುಡಿಯಬೇಕು. ಕನಿಷ್ಠ 15 ನಿಮಿಷಕ್ಕೊಮೆ ನೀರು ಗುಟುಕುರಿಸುವುದು ಉತ್ತಮ.

ಹಾಗೆಯೇ.. ನಿತ್ಯ ನೀರನ್ನು ಒಂದೇ ಬಾರಿ ಕುಡಿಯುವುದು ಒಳ್ಳೆಯದಲ್ಲ. ಏಕೆಂದರೆ ಒಮ್ಮೆ ನೀರು ಕುಡಿದರೆ ದೇಹದಲ್ಲಿ ಹೆಚ್ಚು ನೀರಿದೆ ಎಂದು ಭಾವಿಸಿ ಅದನ್ನು ಹೊರಹಾಕುತ್ತದೆ ಎಂದು ಹೇಳಲಾಗುತ್ತದೆ. ನೀವು ತುಂಬಾ ಕಡಿಮೆ ಕುಡಿದರೆ ಮರೆ ಮಾಚುತ್ತದೆ. ಹಾಗಾಗಿ ಇವೆರಡೂ ಅಭ್ಯಾಸಗಳು ಒಳ್ಳೆಯದಲ್ಲ. ವಯಸ್ಸು ಹೆಚ್ಚಿದರೂ ಹೆಚ್ಚು ಹೆಚ್ಚು ನೀರನ್ನೇನೂ ಕುಡಿಯಬೇಕಿಲ್ಲ ಎನ್ನುತ್ತಾರೆ ಮಣಿಮಾಲಾ ರಾವ್​. ಉದಾಹರಣೆಗೆ, 65-70 ವರ್ಷಕ್ಕಿಂತ ಮೇಲ್ಪಟ್ಟವರು ಹೆಚ್ಚು ನೀರು ಕುಡಿದರೆ, ಅವರ ಮೂತ್ರಪಿಂಡದ ಮೇಲೆ ಆರಂಭಿಕ ಪ್ರತಿಕೂಲ ಪರಿಣಾಮಗಳನ್ನುಂಟು ಮಾಡುವ ಸಾಧ್ಯತೆಯಿದೆ ಅಂತಾರೆ ಅವರು.

ನೀರು ಕಡಿಮೆ ಕುಡಿದರೆ ಏನಾಗುತ್ತದೆ?: ಕಡಿಮೆ ನೀರು ಕುಡಿದರೆ ನಿರ್ಜಲೀಕರಣವಾಗುವ ಸಂಭವವಿದೆ ಎನ್ನುತ್ತಾರೆ ಡಾ.ಮಣಿಮಾಲ ರಾವ್. ಅಲ್ಲದೇ ಇದು ಮೂತ್ರಪಿಂಡದ ಕಾರ್ಯವನ್ನು ನಿಧಾನಗೊಳ್ಳುವಂತೆ ಮಾಡುತ್ತದೆ. ರಕ್ತದೊತ್ತಡ ಕಡಿಮೆಯಾಗುತ್ತದೆ ಮತ್ತು ಸ್ನಾಯುಗಳಲ್ಲಿ ನೋವುಂಟು ಮಾಡುತ್ತವೆ ಎನ್ನುತ್ತಾರೆ ಅವರು. ಅಂತೆಯೇ, ತಲೆನೋವು, ಮಲಬದ್ಧತೆ, ಒಣ ಚರ್ಮ ಮತ್ತು ಬಾಯಿ, ಆಲಸ್ಯದಂತಹ ಸಮಸ್ಯೆಗಳು ಉದ್ಭವಿಸುತ್ತವೆ. ಅದರಲ್ಲೂ ಮೂತ್ರ ಹಳದಿ - ಹಸಿರು ಬಣ್ಣಕ್ಕೆ ತಿರುಗಿದ್ದರೆ ನೀರಿನ ಅಂಶ ಕಡಿಮೆಯಾಗಿದೆ ಎಂದು ತಿಳಿಯಬೇಕು. ಅಂತಹ ಸಮಯದಲ್ಲಿ ತಕ್ಷಣವೇ ಸಾಕಷ್ಟು ನೀರು ಕುಡಿಯಬೇಕು.

ಹೆಚ್ಚು ನೀರು ಕುಡಿದರೆ ಏನಾಗುತ್ತದೆ?: ಹೆಚ್ಚು ನೀರು ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಅದರಲ್ಲೂ.. ದೇಹದಲ್ಲಿ ಹೆಚ್ಚು ನೀರು ಸಂಗ್ರಹವಾಗುವುದರಿಂದ ಎಲ್ಲ ಅಂಗಾಂಗಗಳ ಜೀವಕೋಶಗಳಲ್ಲಿ ನೀರಿನ ಶೇಕಡಾವಾರು ಪ್ರಮಾಣ ಹೆಚ್ಚುತ್ತದೆ ಎಂದು ಹೇಳಲಾಗುತ್ತದೆ. ಪರಿಣಾಮವಾಗಿ, ಜೀವಕೋಶದ ಹೊರಗೆ ಇರಬೇಕಾದ ಸೋಡಿಯಂ ಜೀವಕೋಶದೊಳಗೆ ಸಿಗುತ್ತದೆ ಎಂದು ಸೂಚಿಸಲಾಗುತ್ತದೆ. ತಲೆತಿರುಗುವಿಕೆ, ತಲೆನೋವು, ಗೊಂದಲ, ರಕ್ತದೊತ್ತಡ ಹೆಚ್ಚಳ ಮತ್ತು ಅನಿಯಮಿತ ಹೃದಯದ ಲಯ ಮುಂತಾದ ಸಮಸ್ಯೆಗಳು ಉದ್ಭವಿಸುತ್ತವೆ ಎಂದು ಹೇಳಲಾಗುತ್ತದೆ. ಇದಲ್ಲದೇ, ಮೂತ್ರಪಿಂಡದ ಮೇಲೆ ಹೊರೆ ಹೆಚ್ಚಿಸುವ ಮತ್ತು ಮೂತ್ರಪಿಂಡ ವೈಫಲ್ಯಕ್ಕೆ ಕಾರಣವಾಗುವ ಸಾಧ್ಯತೆಯಿದೆ ಎಂದು ಎಚ್ಚರಿಸಲಾಗಿದೆ.

ನಿಮ್ಮ ಗಮನಕ್ಕೆ: ಇಲ್ಲಿ ನಿಮಗೆ ನೀಡಿರುವ ಎಲ್ಲ ಆರೋಗ್ಯ ಮಾಹಿತಿ ಮತ್ತು ಸಲಹೆಗಳು ನಿಮ್ಮ ತಿಳಿವಳಿಕೆಗಾಗಿ ಮಾತ್ರವೇ ನೀಡಲಾಗಿದೆ. ಇವು ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ನೀಡಲಾದ ಮಾಹಿತಿಗಳಾಗಿವೆ. ಆದರೆ, ಇವುಗಳನ್ನು ಅನುಸರಿಸುವ ಮೊದಲು ನಿಮ್ಮ ಕುಟುಂಬದ ವೈದ್ಯರ ಸಲಹೆಯನ್ನು ತೆಗೆದುಕೊಳ್ಳುವುದು ಉತ್ತಮ.

ಇದನ್ನು ಓದಿ: ಸರಳ ಬಾಯಿ ಮುಕ್ಕಳಿಸುವಿಕೆ ಮೂಲಕ ಆರಂಭಿಕ ಹಂತದ ಗ್ಯಾಸ್ಟ್ರಿಕ್​ ಕ್ಯಾನ್ಸರ್​ ಪತ್ತೆ ಮಾಡಬಹುದು.. ನಿಮಗಿದು ಗೊತ್ತಾ? - risks of gastric cancer

ETV Bharat Logo

Copyright © 2025 Ushodaya Enterprises Pvt. Ltd., All Rights Reserved.