ETV Bharat / health

ಅನಿಯಂತ್ರಿತ ಅಧಿಕ ರಕ್ತದೊತ್ತಡದಿಂದ ಸದ್ದಿಲ್ಲದೇ ಮೂತ್ರಪಿಂಡದ ಹಾನಿ

World kidney day; ಯುವಜನತೆ ಕೂಡ ಅಧಿಕ ರಕ್ತದೊತ್ತಡ ನಿಯಂತ್ರಣಕ್ಕೆ ಮುಂದಾಗಬೇಕು. ಕಿಡ್ನಿ ಹಾನಿ ತಡೆಗೆ ನಿಯಂತ್ರಣ, ಆರಂಭಿಕ ಪತ್ತೆ ಮತ್ತು ಚಿಕಿತ್ಸೆಗೆ ಮುಂದಾಗಬೇಕು ಎಂದು ತಜ್ಞರು ಕರೆ ನೀಡಿದ್ದಾರೆ.

high blood pressure threatening kidney health

author img

By ETV Bharat Karnataka Team

Published : Mar 14, 2024, 1:00 PM IST

ನವದೆಹಲಿ: ದೇಶದಲ್ಲಿ ಹೆಚ್ಚುತ್ತಿರುವ ಅಧಿಕ ರಕ್ತದೊತ್ತಡ ಪ್ರಕರಣಗಳು ಕಿಡ್ನಿ ಆರೋಗ್ಯಕ್ಕೆ ಬೆದರಿಕೆಯ ಎಚ್ಚರಿಕೆ ಗಂಟೆ ಆಗಿದೆ ಎಂದು ಆರೋಗ್ಯ ತಜ್ಞರು ತಿಳಿಸಿದ್ದಾರೆ.

ವಿಶ್ವ ಕಿಡ್ನಿ ದಿನವನ್ನು ಮಾರ್ಚ್​ 14 ರಂದು ಆಚರಿಸುವ ಮೂಲಕ ಮೂತ್ರಪಿಂಡಗಳಿಗೆ ಉಂಟಾಗುವ ವಿವಿಧ ಅಪಾಯಗಳ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನ ನಡೆಸಲಾಗುತ್ತಿದೆ. ಭಾರತದ ಶೇ 10ರಷ್ಟು ಜನರು ದೀರ್ಘಾವಧಿ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಭಾರತದಲ್ಲಿ ಸಾವಿಗೆ ಕಾರಣವಾಗುತ್ತಿರುವ ಎಂಟನೇ ಪ್ರಮುಖ ಕಾರಣವಾಗಿದೆ ಎಂದು ವರದಿ ತಿಳಿಸಿದೆ.

ಆರೋಗ್ಯ ತಜ್ಞರ ಪ್ರಕಾರ, ಅಧಿಕ ರಕ್ತದೊತ್ತಡವು ದೇಶದ 315 ಮಿಲಿಯನ್​ ಜನರ ಮೇಲೆ ಪರಿಣಾಮ ಬೀರುತ್ತಿದ್ದು, ಇದು ಕಿಡ್ನಿ ರೋಗದ ಉಲ್ಬಣತೆಗೆ ಕಾರಣವಾಗುವ ಅಂಶವಾಗಿದೆ.

ಅಧಿಕ ರಕ್ತದೊತ್ತಡವನ್ನು ನಿಶಬ್ಧ ಹಂತಕ ಎಂದೇ ಕರೆಯಲಾಗುತ್ತದೆ. ಕಾರಣ ಇದು ಹಲವು ರೋಗಗಳು ಸದ್ದಿಲದಂತೆ ಪ್ರಗತಿ ಹೊಂದಲು ಪ್ರಮುಖ ಅಂಶವಾಗಿದೆ. ಹೃದಯ ಮತ್ತು ಮೆದುಳಿನ ಅಪಾಯವನ್ನು ಹೆಚ್ಚಿಸುವುದರ ಜೊತೆಗೆ ಇದು ಕಿಡ್ನಿಯ ರಕ್ತನಾಳಗಳಿಗೆ ಹಾನಿ ಮಾಡುತ್ತದೆ. ಇದರಿಂದ ಮೂತ್ರಪಿಂಡ ಕಾರ್ಯನಿರ್ವಹಣೆ ಸಾಮರ್ಥ್ಯ ಕುಗ್ಗಿ ದೀರ್ಘಕಾಲದ ಮೂತ್ರಪಿಂಡ ಕಾಯಿಲೆಗೆ ಕಾರಣವಾಗುತ್ತದೆ. ದೀರ್ಘಕಾಲ ಮೂತ್ರಪಿಂಡ ಕಾಯಿಲೆ ಅಂತಿಮವಾಗಿ ಕೊನೆಯ ಹಂತದ ಮೂತ್ರಪಿಂಡ ಹಾನಿಗೆ ಕಾರಣವಾಗುತ್ತದೆ. ಕಡೆಗೆ ಅದು ಕಾರ್ಯಾಚರಣೆ ನಡೆಸುವುದನ್ನು ನಿಲ್ಲಿಸುತ್ತದೆ.

ಈ ಕುರಿತು ಮಾತನಾಡಿರುವ ಜೋಧ್​ಪುರ್​​ ಏಮ್ಸ್​ನ ಪ್ರೊ. ಪಂಕಜ್​ ಭರಧ್ವಾಜ್, ​ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವ ಅನೇಕ ರೋಗಿಗಳನ್ನು ನಾನು ಕಾಣುತ್ತಿದ್ದೇವೆ. ಅವರ ಔಷಧಿ ನಿರ್ವಹಣೆ ಮತ್ತು ಅಭ್ಯಾಸ ಬದಲಾಯಿಸುವುದು ಪ್ರಮುಖವಾಗಿದೆ. ಅಧಿಕ ರಕ್ತದೊತ್ತಡವು ಕಿಡ್ನಿ ಹಾನಿಗೆ ಕಾರಣವಾಗುತ್ತದೆ ಎಂಬುದರ ಕುರಿತು ನಾವು ಮಾತನಾಡುವುದಿಲ್ಲ ಎಂದರು.

ರಕ್ತದೊತ್ತಡಕ್ಕೆ ದೀರ್ಘಾವಧಿ ಕಾಲ ಒಡ್ಡಿಕೊಳ್ಳುವುದರಿಂದ ಹೆಚ್ಚಿನ ಹಾನಿ ಆಗಲಿದೆ. ಹಾಗಾಗಿ, ಯುವಜನತೆ ಕೂಡ ಅಧಿಕ ರಕ್ತದೊತ್ತಡ ನಿಯಂತ್ರಣಕ್ಕೆ ಮುಂದಾಗಬೇಕು. ಕಿಡ್ನಿ ಹಾನಿ ತಡೆಗೆ ನಿಯಂತ್ರಣ, ಆರಂಭಿಕ ಪತ್ತೆ ಮತ್ತು ಚಿಕಿತ್ಸೆಗೆ ಮುಂದಾಗಬೇಕು ಎಂದು ಸಲಹೆ ನೀಡಿದರು.

ಇದೇ ವೇಳೆ ದೀರ್ಘಾವಧಿ ಕಿಡ್ನಿ ರೋಗ (ಸಿಕೆಡಿ) ಮತ್ತು ರಕ್ತದೊತ್ತಡದ ನಡುವಿನ ಸಂಬಂಧವನ್ನು ಕೂಡ ವೈದ್ಯರು ವಿವರಿಸಿದ್ದಾರೆ. ಅಧಿಕ ರಕ್ತದೊತ್ತಡ ಮತ್ತು ಸಿಕೆಡಿ ಎರಡೂ ಒಂದೇ ರೀತಿಯ ಅಪಾಯ ಅಂಶವನ್ನು ಹೊಂದಿದೆ. ವಯಸ್ಸು, ಸ್ಥೂಲಕಾಯತೆ ಮತ್ತು ಮಧುಮೇಹ ಅಥವಾ ಹೃದಯ ರಕ್ತನಾಳದ ಕಾಯಿಲೆಯಂತಹ ಲಕ್ಷಣಗಳನ್ನು ಹಂಚಿಕೊಳ್ಳುವುದರಿಂದ ಯಾವ ರೋಗ ಎಂಬುದನ್ನು ಮುಂಚಿತವಾಗಿ ಪತ್ತೆ ಮಾಡುವುದು ಕಷ್ಟವಾಗುತ್ತದೆ.

ಕೆಲವು ಅನುವಂಶಿಕ ಅಂಶಗಳನ್ನು ಇದರಲ್ಲಿ ನಿರ್ಲಕ್ಷಿಸಲು ಸಾಧ್ಯವಿಲ್ಲ. ಅಧಿಕ ರಕ್ತದೊತ್ತಡ ಸೇರಿದಂತೆ ಸಿಕೆಡಿ ಅಭಿವೃದ್ಧಿಗೆ ಕಾರಣವಾದ ಅಂಶಗಳು ಎಂದರೆ, ಮಧುಮೇಹ, ಧೂಮಪಾನ ಮತ್ತು ತಂಬಾಕಿನ ಅಭ್ಯಾಸ, ನಿರ್ಜಲೀಕರಣ, ದೈಹಿಕ ಚಟುವಟಿಕೆಯ ಕೊರತೆ, ಅಧಿಕ ಒತ್ತಡ ಮತ್ತು ಕಳಪೆ ಆಹಾರದ ಅಭ್ಯಾಸಗಳಾಗಿದೆ ಎಂದು ಶಾಲಿಮರ್​​ ಭಾಗ್​ನ ಫೋರ್ಟಿಸ್​​ ಆಸ್ಪತ್ರೆಯ ಯುರೋಲಾಜಿ ವಿಭಾಗದ ನಿರ್ದೇಶಕ ವಿಕಾಸ್​ ಜೈನ್​ ತಿಳಿಸಿದ್ದಾರೆ.

ಕಿಡ್ನಿ ಹಾನಿ ಕುರಿತಾದ ಆರಂಭಿಕ ಲಕ್ಷಣಗಳಾದ, ಹಸಿವೆ ನಷ್ಟ, ತಲೆ ಸುತ್ತುವಿಕೆ ಮತ್ತು ವಾಂತಿ, ಕಾಲು ಅಥವಾ ಮುಖದ ಊತಗಳನ್ನು ಪತ್ತೆ ಮಾಡುವುದರಿಂದ ಚಿಕಿತ್ಸೆಗೆ ನೆರವಾಗಲಿದೆ ಎಂದು ವೈದ್ಯರು ತಿಳಿಸಿದ್ದಾರೆ. ​(ಐಎಎನ್​ಎಸ್​)

ಇದನ್ನೂ ಓದಿ: ಕಿಡ್ನಿ ದಾನ ಮಾಡಿ ಮಗಳ ಜೀವ ಉಳಿಸಿದ ತಾಯಿ; ಪುತ್ರಿಗೆ ಮರುಜನ್ಮ ನೀಡಿದ ಅಮ್ಮ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.