ETV Bharat / health

ಊಟದ ರುಚಿ ಹೆಚ್ಚಿಸುವ ಉಪ್ಪಿನಕಾಯಿ ಸೇವನೆಯಿಂದ ಆರೋಗ್ಯಕ್ಕೆ ಈ 6 ಪ್ರಯೋಜನಗಳುಂಟು! - pickle health benefit

author img

By ETV Bharat Karnataka Team

Published : May 14, 2024, 4:41 PM IST

ಉಪ್ಪಿನಕಾಯಿಯ ವಾಸನೆ ಮತ್ತು ಬಣ್ಣವೇ ಅನೇಕರಲ್ಲಿ ಬಾಯಲ್ಲಿ ನೀರೂರುವಂತೆ ಮಾಡುವುದರಲ್ಲಿ ಸುಳ್ಳಲ್ಲ. ಇಂತಹ ಉಪ್ಪಿನಕಾಯಿಗಳು ಪೋಷಕಾಂಶದ ಆಗರಗಳೂ ಹೌದು

health-benefits-of-pickles-6-health-benefits-of-pickles-you-probably-didnt-know-
health-benefits-of-pickles-6-health-benefits-of-pickles-you-probably-didnt-know- (Etv bharat)

ಹೈದರಾಬಾದ್​: ಉಪ್ಪಿನಕಾಯಿ ಇಲ್ಲದ ಭಾರತೀಯರ ಅಡುಗೆ ಮನೆಗಳನ್ನು ಕಾಣುವುದು ಅತಿ ವಿರಳ. ಊಟದ ಜೊತೆಗಿರಲಿ ಅಥವಾ ಸಾಂಬಾರು ಇಲ್ಲದೇ ಉಪ್ಪಿನಕಾಯಿ ಜೊತೆ ಊಟ ಮಾಡಿ ಮುಗಿಸುವುದನ್ನು ಕಾಣಬಹುದು. ಅಡುಗೆಯ ಊಟದ ರುಚಿಯನ್ನು ಹೆಚ್ಚಿಸುವುದು ಉಪ್ಪಿನಕಾಯಿ. ಇದೆ ಕಾರಣಕ್ಕೆ ಪ್ರತಿಯೊಬ್ಬರು ಉಪ್ಪಿನಕಾಯಿಯನ್ನು ಮೆಚ್ಚುತ್ತಾರೆ. ಉಪ್ಪಿನಕಾಯಿಯ ವಾಸನೆ ಮತ್ತು ಬಣ್ಣವೇ ಅನೇಕರಲ್ಲಿ ಬಾಯಲ್ಲಿ ನೀರೂರುವಂತೆ ಮಾಡುವುದರಲ್ಲಿ ಸುಳ್ಳಲ್ಲ. ಇಂತಹ ಉಪ್ಪಿನಕಾಯಿ ಪೋಷಕಾಂಶದ ಆಗರಗಳು ಕೂಡಾ ಹೌದು.

ಪ್ರೊಬಯಾಟಿಕ್ಸ್​: ಇದು ಜೀರ್ಣಕ್ರಿಯೆ ಸಮಸ್ಯೆಯನ್ನು ತಡೆಯುತ್ತದೆ. ಜೊತೆಗೆ ಈ ಹುದುಗಿಸಿದ ಆಹಾರಗಳು ಪ್ರೋಬಯಾಟಿಕ್‌ಗಳಿಗೆ ಸೂಪರ್‌ ಫುಡ್‌ಗಳಾಗಿವೆ. ಇದು ಕರುಳಿನ ಮೈಕ್ರೋಬಯೊಮ್​ ಆರೋಗ್ಯವನ್ನು ಸುಧಾರಿಸುತ್ತದೆ ಮತ್ತು ಕರುಳಿನ ಬ್ಯಾಕ್ಟೀರಿಯಾ ಆರೋಗ್ಯ ಬೆಳವಣಿಗೆ ಉತ್ತೇಜಿಸುತ್ತದೆ. ವಿವಿಧ ತರಕಾರಿಗಳನ್ನು ಉಪ್ಪಿನಕಾಯಿಯಲ್ಲಿ ಬಳಕೆ ಮಾಡುವುದರಿಂದ ಅದು ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ

ಆಂಟಿ ಆಕ್ಸಿಡೆಂಟ್ಸ್​: ಇದರಲ್ಲಿ ಹೆಚ್ಚಾಗಿ ಕಚ್ಛಾ ವಸ್ತುಗಳನ್ನು ಆಂಟಿಆಕ್ಸಿಡೆಂಟ್ಸ್​ ಸಮೃದ್ಧವಾಗಿರುತ್ತದೆ. ಅವು ದೇಹವನ್ನು ಸ್ವತಂತ್ರ ರಾಡಿಕಲ್​ಗಳಿಂದ ರಕ್ಷಿಸುವ ಅಗತ್ಯವಾದ ಸೂಕ್ಷ್ಮ ಪೋಷಕಾಂಶಗಳನ್ನು ಹೊಂದಿರುತ್ತವೆ. ಇವು ವಯಸ್ಸಾಗುವಿಕೆ ಪ್ರಕ್ರಿಯೆಯನ್ನು ಹಿಮ್ಮೆಟ್ಟಿಸುತ್ತದೆ. ಅವಕಾಡೋ, ಟೊಮೊಟೊ ಉಪ್ಪಿನಕಾಯಿಗಳು ಹೆಚ್ಚು ಸಮೃದ್ಧವಾಗಿದ್ದು, ಇದರಲ್ಲಿನ ಆಂಟಿ ಆಕ್ಸಿಡೆಂಟ್ಸ್​​ ಆರೋಗ್ಯವನ್ನು ಸಂರಕ್ಷಿಸುತ್ತದೆ.

ವಿಟಮಿನ್ಸ್​​ ಮತ್ತು ಮಿನರಲ್ಸ್​ ಮೂಲಗಳು: ತರಕಾರಿಗಳು, ಕೊತ್ತಂಬರಿ, ಮೆಂತ್ಯೆ, ಸಾಸಿವೆ, ಕರಿಬೇವುಗಳು ಸಮೃದ್ದವಾದ ವಿಟಮಿನ್​ಗಳಾದ ಸಿ, ಎ, ಕೆಗಳನ್ನು ಹೊಂದಿವೆ. ಜೊತೆಗೆ ಇದರಲ್ಲಿ ಕಬ್ಬಿಣ, ಕ್ಯಾಲ್ಸಿಯಂ, ಪೊಟಾಶಿಯಂ ಅಂಶಗಳು ಕೂಡಾ ಲಭ್ಯ ಇರುವುದರಿಂದ ಆರೋಗ್ಯವನ್ನು ಸುಂದರವಾಗಿಸುವಲ್ಲಿ ಸಹಕಾರಿಯಾಗಿವೆ.

ಯಕೃತ್ತು​ ರಕ್ಷಣೆ: ಭಾರತೀಯ ಸಂಪ್ರದಾಯಿಕ ಉಪ್ಪಿನಕಾಯಿ ಎಂದರೆ ನೆಲ್ಲಿನಕಾಯಿ ಮತ್ತು ಮಾವಿನಕಾಯಿ. ಇವು ಹೆಪಟೊಪ್ರೊಟಕ್ಟಿವ್​ ಅಂಶವನ್ನು ಹೊಂದಿದ್ದು, ಯಕೃತ್ತುವನ್ನು ರಕ್ಷಿಸುತ್ತದೆ. ನಿಯಮಿತವಾಗಿ ಇವುಗಳನ್ನು ಸೇವನೆ ಮಾಡುವುದರಿಂದ ಯಕೃತ್ತು​ ಆರೋಗ್ಯ ಉತ್ತಮವಾಗಿರುತ್ತದೆ.

ರೋಗ ನಿರೋಧಕ ಶಕ್ತಿ: ಉಪ್ಪಿನ ಕಾಯಿ ಬಳಕೆಗೆ ಉಪಯೋಗಿಸುವ ಮಸಾಲೆಗಳು ಆರೋಗ್ಯಯುತ ಪೋಷಕಾಂಶಗಳಾಗಿವೆ. ಇದರಲ್ಲಿ ಹೆಚ್ಚಿನ ಮಟ್ಟದಲ್ಲಿ ಅರಿಶಿಣ ಬಳಕೆ ಮಾಡಲಾಗುವುದು. ಇದು ಊರಿಯುತ ವಿರೋಧಿ ಅಂಶ ಹೊಂದಿದೆ. ಇದು ದೇಹವನ್ನು ಅನೇಕ ಬ್ಯಾಕ್ಟೀರಿಯಾ ವಿರುದ್ಧ ಹೋರಾಡಲು ರಕ್ಷಿಸುತ್ತದೆ. ಇದು ಬೆಳವಣಿಗೆ ಹಾರ್ಮೋನ್​ ಆದ ಮಿದುಳಿನ ಆಧಾರ ನ್ಯೂರೋಟ್ರೊಫಿಕಲ್​ ಅಂಶದ ಮಟ್ಟವನ್ನು ಹೆಚ್ಚಿಸುತ್ತದೆ. ಇದು ಆಲ್ಝೈಮರ್​​ ಮತ್ತು ಖಿನ್ನತೆಯಂತಹ ಅಸ್ವಸ್ಥತೆ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.

ಗರ್ಭಿಣಿಯರಿಗೆ ಏನು ಪ್ರಯೋಜನ: ಗರ್ಭಾವಸ್ಥೆಯಲ್ಲಿ ಅನೇಕ ಬಾರಿ ತಲೆಸುತ್ತು, ವಾಂತಿಯಂತಹ ಲಕ್ಷಣಗಳು ಮೊದಲ ಮೂರು ತಿಂಗಳುಗಳ ಅವಧಿಯಲ್ಲಿ ಕಾಡುತ್ತದೆ. ಈ ಸಂದರ್ಭದಲ್ಲಿ ಹುಳಿ ತಿನ್ನಬೇಕು ಎಂಬ ಆಸೆಗೆ ಈ ಉಪ್ಪಿನಕಾಯಿ ಪರಿಹಾರವಾಗಿದೆ. ಜೊತೆಗೆ ಇದು ಬೆಳಗಿನ ಹೊತ್ತು ಗರ್ಭಿಣಿಯರಲ್ಲಿ ಕಾಡುವ ಅಸ್ವಸ್ಥತೆ ದೂರ ಮಾಡುತ್ತದೆ.

ಇದನ್ನೂ ಓದಿ: ನಿಮಗೆ ಶುಗರ್​ ಇದೆಯೇ?: ಇಂದಿನಿಂದಲೇ ಇಂಥ ಆಹಾರ ಸೇವನೆ ನಿಲ್ಲಿಸಿ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.