ETV Bharat / health

ಹೊಟ್ಟೆಯಲ್ಲಿ ಉರಿಯೂತ, ಗ್ಯಾಸ್ಟ್ರಿಕ್ ತೊಂದರೆಯೇ? ಒಂದು ಚಿಕ್ಕ ಬೆಲ್ಲದ ತುಂಡಿನಿಂದ ಪರಿಹಾರ; ಹೇಗೆ ಗೊತ್ತೇ? - HEALTH BENEFITS OF JAGGERY

ಹೊಟ್ಟೆಯಲ್ಲಿ ಉರಿಯೂತ ಹಾಗೂ ಗ್ಯಾಸ್ಟ್ರಿಕ್ ತೊಂದರೆ ಕಂಡುಬಂದರೆ, ಬೆಲ್ಲದ ಚಿಕ್ಕದೊಂದು ತುಣುಕು ಸೇವಿಸಿದರೆ ಸಾಕು ಪರಿಹಾರ ಲಭಿಸುತ್ತದೆ. ಬೆಲ್ಲದಿಂದ ಅನೇಕ ಪ್ರಯೋಜನಗಳಿವೆ ಎನ್ನುತ್ತಾರೆ ತಜ್ಞರು.

HEALTH BENEFITS OF JAGGERY  JAGGERY HEALTH BENEFITS  HOW IS JAGGERY GOOD FOR HEALTH  JAGGERY FOR DIGESTION
ಸಾಂದರ್ಭಿಕ ಚಿತ್ರ (ETV Bharat)
author img

By ETV Bharat Health Team

Published : Dec 10, 2024, 3:22 PM IST

Health Benefits Of Jaggery: ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಹಿಡಿದು ಬೆನ್ನು ನೋವಿನವರೆಗೆ ಹಲವು ಪ್ರಕಾರದ ಆರೋಗ್ಯ ಸಮಸ್ಯೆಗಳು ಜನರನ್ನು ಕಾಡುತ್ತಿರುತ್ತವೆ. ಇದಕ್ಕೆ ಚಿಕ್ಕದೊಂದು ಬೆಲ್ಲದ ತುಂಡು ಪರಿಹಾರವಾಗಬಲ್ಲದು. ಆದರೆ ಇದನ್ನು ನಿಯಮಿತವಾಗಿ ಸೇವಿಸಬೇಕು ಎಂದು ತಜ್ಞ ವೈದ್ಯರು ಸಲಹೆ ನೀಡುತ್ತಾರೆ.

ಬೆಲ್ಲದಲ್ಲಿ ಕ್ಯಾಲ್ಸಿಯಂ, ಮೆಗ್ನೀಸಿಯಂ, ಪೊಟ್ಯಾಸಿಯಂ, ರಂಜಕ, ಸೋಡಿಯಂ, ಕಬ್ಬಿಣ, ಮ್ಯಾಂಗನೀಸ್, ಸತು, ತಾಮ್ರ ಸೇರಿದಂತೆ ಹಲವು ಖನಿಜಗಳಿವೆ. ವಿಟಮಿನ್ ಎ, ಬಿ1, ಬಿ2, ಬಿ5, ಬಿ6, ಸಿ ವಿವಿಧ ವಿಟಮಿನ್​ಗಳು ಹೇರಳವಾಗಿವೆ. ಬೆಲ್ಲದಲ್ಲಿರುವ ಕ್ಯಾಲ್ಸಿಯಂ ಮೂಳೆಗಳನ್ನು ಬಲವಾಗಿಡಲು ಸಹಾಯಕ.

ಕಬ್ಬಿಣವು ರಕ್ತಹೀನತೆಯ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ ಎಂದು ತಜ್ಞರು ತಿಳಿಸುತ್ತಾರೆ. 'ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್'ನ ತಜ್ಞರ ತಂಡವೂ ಕೂಡ ಇದೇ ಮಾಹಿತಿಯನ್ನು ಬಹಿರಂಗಪಡಿಸಿದೆ. (ವರದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.)

ಪಿರಿಯಡ್ಸ್ ಸಮಯದಲ್ಲಿ: ಕೆಲವು ಹುಡುಗಿಯರು ಪಿರಿಯಡ್ಸ್ ಸಮಯದಲ್ಲಿ ಹೊಟ್ಟೆ ನೋವು, ಬೆನ್ನು ನೋವು ಸೇರಿದಂತೆ ಹಲವು ದೈಹಿಕ ಸಮಸ್ಯೆಗಳಿಂದ ಬಳಲುತ್ತಾರೆ. ಈ ಸಮಯದಲ್ಲಿ ಬೆಳ್ಳುಳ್ಳಿಯ ನಾಲ್ಕು ಎಸಳು, ಲವಂಗ, ಒಂದೆರಡು ಹಾಗಲಕಾಯಿ ಬಳ್ಳಿಯ ಎಲೆಗಳು, ಒಂದು ಚಿಕ್ಕ ತುಂಡು ಬೆಲ್ಲ... ಈ ಮೂರನ್ನೂ ಒಟ್ಟಿಗೆ ಮಿಕ್ಸಿಯಲ್ಲಿ ಹಾಕಿ ರುಬ್ಬಿಕೊಳ್ಳಬೇಕು. ಮಿಶ್ರಣವನ್ನು ಒಂದು ವಾರದವರೆಗೆ ದಿನಕ್ಕೆರಡು ಬಾರಿ ಸೇವಿಸುವುದರಿಂದ ಉತ್ತಮ ಫಲಿತಾಂಶ ದೊರೆಯುತ್ತದೆ.

ಆಯುರ್ವೇದ ಔಷಧ: ನೆಗಡಿ, ಒಣ ಕೆಮ್ಮು ಹಾಗೂ ಅಸ್ತಮಾ ಇತ್ಯಾದಿಗಳ ಚಿಕಿತ್ಸೆಗಾಗಿ ಶುಂಠಿಯನ್ನು ಆಯುರ್ವೇದ ಔಷಧಿಗಳಲ್ಲಿ ಬಳಸಲಾಗುತ್ತದೆ. ಆದರೆ, ಈ ತೊಂದರೆಯಿಂದ ಬಳಲುತ್ತಿರುವವರು ಪ್ರತಿದಿನ ಒಂದು ಚಿಕ್ಕ ಬೆಲ್ಲದ ತುಂಡನ್ನು ನಿಧಾನವಾಗಿ ತಿನ್ನುವುದರಿಂದ ಉತ್ತಮ ಪ್ರಯೋಜನಗಳನ್ನು ಪಡೆಯಲು ಸಾಧ್ಯವಿದೆ.

ಒಣ ಕೆಮ್ಮಿಗೊಂದು ಉಪಾಯ: ಆಗಾಗ್ಗೆ ಕಾಡುವಂತಹ ಒಣ ಕೆಮ್ಮಿಗೆ ಒಂದು ಲೋಟ ಬೆಲ್ಲದ ಪಾನೀಯದಲ್ಲಿ ಸ್ವಲ್ಪ ತುಳಸಿ ಎಲೆಗಳನ್ನು ಸೇರಿಸಿ ಮಿಶ್ರಣ ಮಾಡಿ. ಇದನ್ನು ಪಾತ್ರೆಯಲ್ಲಿ ಚೆನ್ನಾಗಿ ಕುದಿಸಿ ಮತ್ತು ತಣ್ಣಗಾಗಲು ಬಿಡಿ. ನಂತರ ಈ ನೀರನ್ನು ದಿನಕ್ಕೆ ಎರಡು ಅಥವಾ ಮೂರು ಬಾರಿ ಕುಡಿಯುವುದರಿಂದ ಸಮಸ್ಯೆ ಕಡಿಮೆಯಾಗುತ್ತದೆ.

ಮತ್ತಷ್ಟು ಆರೋಗ್ಯ ಲಾಭಗಳು:

  • ಹೊಟ್ಟೆಯಲ್ಲಿ ಉರಿಯೂತ, ಗ್ಯಾಸ್ಟ್ರಿಕ್ ಹಾಗೂ ಅಜೀರ್ಣ ಸಮಸ್ಯೆಗಳಿಗೆ ಬೆಲ್ಲ ಉತ್ತಮ ಔಷಧಿ. ಪ್ರತಿದಿನ ಒಂದು ತುಂಡು ಬೆಲ್ಲ ತಿನ್ನುವುದರಿಂದ ಈ ಸಮಸ್ಯೆ ಕಡಿಮೆಯಾಗುತ್ತದೆ ಎಂದು ತಜ್ಞರು ಸಲಹೆ ನೀಡುತ್ತಾರೆ.
  • ಬೆಲ್ಲದಲ್ಲಿರುವ ಮೆಗ್ನೀಸಿಯಂ ಖನಿಜವು ರಕ್ತನಾಳಗಳು ಹಾಗೂ ನರಮಂಡಲವನ್ನು ಬಲಪಡಿಸಲು ಪೂರಕವಾಗಿದೆ.
  • ಮೈಗ್ರೇನ್‌ಪೀಡಿತರು ಬೆಲ್ಲ ಹಾಗೂ ತುಪ್ಪವನ್ನು ಒಟ್ಟಿಗೆ ಸೇವಿಸಿದರೆ ತಲೆನೋವಿನಿಂದ ಮುಕ್ತಿ ಪಡೆದುಕೊಳ್ಳಬಹುದು.
  • ದೇಹದಲ್ಲಿ ಎಲ್ಲಿಯಾದರೂ ತುಂಬಾ ನೋವು ಕಾಣಿಸಿಕೊಂಡರೆ ತುಪ್ಪದಲ್ಲಿ ನೆನೆಸಿದ ಬೆಲ್ಲವನ್ನು ಸ್ವಲ್ಪ ಹೊತ್ತು ಬಿಟ್ಟು ಸೇವಿಸಿದರೆ ಪರಿಹಾರ ಸಿಗುತ್ತದೆ.
  • ಕೀಲು ನೋವಿನಿಂದ ಬಳಲುತ್ತಿರುವವರಿಗೆ ಬೆಲ್ಲ ಪರಿಣಾಮಕಾರಿಯಾಗಿ ಚೆನ್ನಾಗಿ ಕೆಲಸ ಮಾಡುತ್ತದೆ. ಈ ನಿಟ್ಟಿನಲ್ಲಿ ಶುಂಠಿ ಮತ್ತು ಬೆಲ್ಲವನ್ನು ಸಮಪ್ರಮಾಣದಲ್ಲಿ ಸೇರಿಸಿ ಪ್ರತಿದಿನ ಸೇವಿಸಿದರೆ ನೋವಿನಿಂದ ಪರಿಹಾರ ಕಂಡುಕೊಳ್ಳಬಹುದು.
  • ಕೆಲವರಿಗೆ ಪದೇ ಪದೇ ಬಿಕ್ಕಳಿಕೆ ಬರುತ್ತದೆ. ಈ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಬೆಲ್ಲ ಉತ್ತಮವಾಗಿ ಕೆಲಸ ಮಾಡುತ್ತದೆ. ಇದಕ್ಕೆ ಶುಂಠಿಯನ್ನು ಒಣಗಿಸಿ ಪುಡಿ ಮಾಡಬೇಕು. ಅದರಲ್ಲಿ ಸ್ವಲ್ಪ ಬೆಲ್ಲವನ್ನು ಬೆರೆಸಿ ಹಾಗೂ ಬೆಚ್ಚಗಿನ ನೀರಿನಲ್ಲಿ ಈ ಮಿಶ್ರಣವನ್ನು ಕುಡಿಯಿರಿ. ಇದರಿಂದ ಬಿಕ್ಕಳಿಕೆ ಕೂಡಲೇ ಕಡಿಮೆಯಾಗುತ್ತದೆ.

ಹೆಚ್ಚಿ ಮಾಹಿತಿಗಾಗಿ ಈ ವೆಬ್​ಸೈಟ್ ವೀಕ್ಷಿಸಿ: https://pmc.ncbi.nlm.nih.gov/articles/PMC8314846/#CR36

ಇವುಗಳನ್ನೂ ಓದಿ:

ಮನೆಯಲ್ಲಿ ವ್ಯರ್ಥವಾಗುವ ಅನ್ನದ ಗಂಜಿಯಲ್ಲಿದೆ ಮ್ಯಾಜಿಕ್​; ತಲೆಗೂದಲನ್ನು ಚೆನ್ನಾಗಿ ಬೆಳೆಸಲು ಇಲ್ಲಿದೆ ಟಿಪ್ಸ್​

ಬೆಳಗ್ಗೆ ಜೇನುತುಪ್ಪ- ನಿಂಬೆ ರಸ ಬೆರೆಸಿದ ನೀರು ಕುಡಿಯುತ್ತೀರಾ?: ನಿಮಗೆ ಲಭಿಸುತ್ತೆ ಆರೋಗ್ಯದ ಹಲವು ಲಾಭಗಳು!

ಇಮ್ಯೂನಿಟಿ ಬೂಸ್ಟರ್​ನಂತೆ ಕೆಲಸ ಮಾಡುತ್ತೆ ಮೋಸಂಬಿ: ಈ ಹಣ್ಣು ಸೇವಿಸಿದರೆ ನಿರುತ್ಸಾಹ, ಸುಸ್ತು ದೂರ!

ಈ ಸಸ್ಯದಲ್ಲಿ ಅಡಗಿದೆ ಆರೋಗ್ಯದ ಹಲವು ಲಾಭಗಳು: ಶುಗರ್​ & ದೇಹದ ತೂಕ ನಿಯಂತ್ರಣಕ್ಕೆ ಸಹಾಯ ಮಾಡುತ್ತೆ!

ಈ ಚಿಕ್ಕ ಕಾಳು ಕೊಲೆಸ್ಟ್ರಾಲ್​​​ ಬೆಣ್ಣೆಯಂತೆ ಕರಗಿಸುತ್ತೆ: ಹಲವು ರೋಗಗಳಿಗೆ ಇದು ಔಷಧಿ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.