ಇಂದಿನ ಪೀಳಿಗೆಯ ಜನರಲ್ಲಿ ಅಧಿಕ ಕೊಲೆಸ್ಟ್ರಾಲ್‌ನಿಂದ ಬಳಲುತ್ತಿರುವವರ ಸಂಖ್ಯೆ ದಿನ ದಿನಕ್ಕೂ ಹೆಚ್ಚಳವಾಗುತ್ತಿದೆ. ಇದಕ್ಕೆ ಹಲವು ಕಾರಣಗಳಿವೆ. ಆದರೆ, ದೇಹದಲ್ಲಿ ಒಳ್ಳೆಯ ಕೊಲೆಸ್ಟ್ರಾಲ್ (HDL) ಮತ್ತು ಕೆಟ್ಟ ಕೊಲೆಸ್ಟ್ರಾಲ್ (LDL) ಎಂಬ ಎರಡು ವಿಧದ ಕೊಬ್ಬುಗಳಿವೆ. ಇವುಗಳಲ್ಲಿ ಕೆಟ್ಟ ಕೊಲೆಸ್ಟ್ರಾಲ್ ತುಂಬಾ ಅಪಾಯಕಾರಿ. ಇದು ಹೃದಯ ರಕ್ತನಾಳಗಳಲ್ಲಿ ಹೆಪ್ಪುಗಟ್ಟುವಿಕೆಗೆ ಕಾರಣವಾಗಬಹುದು ಮತ್ತು ಹೃದಯಾಘಾತ ಮತ್ತು ಇತರ ಮಾರಣಾಂತಿಕ ಸಮಸ್ಯೆಗಳಿಗೂ ಕಾರಣವಾಗಬಹುದು. ಅದಕ್ಕಾಗಿಯೇ ಅನೇಕ ಜನರು ದೇಹದಲ್ಲಿ ಸಂಗ್ರಹವಾದ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ತೀವ್ರವಾದ ವ್ಯಾಯಾಮಗಳನ್ನು ಮಾಡುತ್ತಾರೆ. ಅದರಲ್ಲೂ ಇಂತಹವರು ಬೆಳಗ್ಗೆ ಈ ಪಾನೀಯವನ್ನು ಕುಡಿದರೆ ಕೊಬ್ಬು ಸುಲಭವಾಗಿ ಕರಗುತ್ತದೆ ಎನ್ನುತ್ತಾರೆ ತಜ್ಞರು.
ಬೆಳಗ್ಗೆ ಶುಂಠಿ ನೀರನ್ನು ಕುಡಿಯುವುದರಿಂದ ದೇಹದಲ್ಲಿನ ಕೊಲೆಸ್ಟ್ರಾಲ್ ಅನ್ನು ಸುಲಭವಾಗಿ ಕರಗಿಸಿ ದೇಹದಲ್ಲಿನ ಕೆಟ್ಟ ಕೊಬ್ಬನ್ನು ತೆಗೆದು ಹಾಕಬಹುದು. ಶುಂಠಿಯಲ್ಲಿರುವ ಪೋಷಕಾಂಶಗಳು ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ ಮತ್ತು ಉತ್ತಮ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಅಂತಾರೆ ತಜ್ಞರು. ಹೀಗೆ ಕುಡಿಯುವುದರಿಂದ ಹೃದ್ರೋಗ ಮತ್ತು ಇತರ ಕೊಲೆಸ್ಟ್ರಾಲ್ ಸಂಬಂಧಿತ ಆರೋಗ್ಯ ಸಮಸ್ಯೆಗಳನ್ನು ಕಡಿಮೆ ಮಾಡಬಹುದು.
ಜರ್ನಲ್ ಆಫ್ ಫಂಕ್ಷನಲ್ ಫುಡ್ಸ್‌ನಲ್ಲಿ ಪ್ರಕಟವಾದ 2018ರ ಅಧ್ಯಯನವು 8 ವಾರಗಳವರೆಗೆ ದಿನಕ್ಕೆ ಒಂದು ಲೋಟ ಶುಂಠಿ ನೀರನ್ನು ಸೇವಿಸುವ ಜನರಲ್ಲಿ LDL (ಕೆಟ್ಟ) ಕೊಲೆಸ್ಟ್ರಾಲ್ ಮಟ್ಟವು ಶೇ 6ರಷ್ಟು ರಷ್ಟು ಕಡಿಮೆಯಾಗಿದೆ ಎಂಬುದನ್ನು ಕಂಡು ಹಿಡಿದಿದೆ. ಶುಂಠಿ ನೀರು HDL ಕೊಲೆಸ್ಟ್ರಾಲ್, PAI-1 ಮಟ್ಟವನ್ನು ಹೆಚ್ಚಿಸಲು ಮತ್ತು ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಕಂಡು ಬಂದಿದೆ. ಇರಾನ್‌ನ ಶಿರಾಜ್ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ.ಮೊಹಮ್ಮದ್ ನಾಸರ್ ಈ ಸಂಶೋಧನೆಯಲ್ಲಿ ಭಾಗವಹಿಸಿದ್ದರು.
ವಾಕರಿಕೆ ಕಡಿಮೆ ಮಾಡುತ್ತೆ: ಶುಂಠಿ ನೀರನ್ನು ಕುಡಿಯುವುದರಿಂದ ಕೊಲೆಸ್ಟ್ರಾಲ್ ಕರಗಿಸುವುದರ ಜೊತೆಗೆ ಅನೇಕ ಪ್ರಯೋಜನಗಳಿವೆ. ಅನೇಕ ಜನರು ಬೆಳಗಿನ ಬೇನೆಯಿಂದ ಬಳಲುತ್ತಿದ್ದಾರೆ. ಅಂತಹವರು ಬೆಳಗ್ಗೆ ಎದ್ದು ಒಂದು ಕಪ್ ಬೆಚ್ಚಗಿನ ಶುಂಠಿ ನೀರನ್ನು ಕುಡಿದರೆ, ಆರೋಗ್ಯ ಸಮಸ್ಯೆ ಮಂಗಮಾಯವಾಗುತ್ತದೆ. ಅಷ್ಟೇ ಅಲ್ಲ, ಇದು ಚಲನೆಯ ಕಾಯಿಲೆ ಅಥವಾ ಕೀಮೋ-ಸಂಬಂಧಿತ ಅಡ್ಡ ಪರಿಣಾಮಗಳನ್ನು ಹೊಂದಿರುವವರು ಬೇಗ ಗುಣಮುಖರಾಗಲು ಸಹಾಯ ಮಾಡುತ್ತದೆ ಎಂಬುದು ಆರೋಗ್ಯ ತಜ್ಞರ ಅಭಿಮತ. ಪುರಾತನ ಕಾಲದಿಂದಲೂ ಮಸಾಲೆಗಳಲ್ಲಿ ಒಂದಾಗಿರುವ ಶುಂಠಿಯು ವಾಕರಿಕೆ ಮುಂತಾದ ಲಕ್ಷಣಗಳನ್ನು ಕಡಿಮೆ ಮಾಡುವಲ್ಲಿ ಬಹಳ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಎಂದು ನಂಬಲಾಗಿದೆ.
ಕೀಲು ನೋವುಗಳಿಗೂ ಪರಿಹಾರ: ನಿತ್ಯವೂ ಒಂದು ಕಪ್ ಶುಂಠಿ ನೀರನ್ನು ಕುಡಿಯುವುದರಿಂದ ನೀವು ಕೀಲು ನೋವು ಮತ್ತು ಸ್ನಾಯು ನೋವುಗಳನ್ನು ಸುಲಭವಾಗಿ ಕಡಿಮೆ ಮಾಡಬಹುದು. ಇದು ಕೀಲು ನೋವು, ಸ್ನಾಯು ನೋವು ಮತ್ತು ಸಂಧಿವಾತದಂತಹ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಸಹಾಯ ಮಾಡುತ್ತದೆ.
ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತದೆ: NIH ಪ್ರಕಾರ, ನಿತ್ಯ ಮುಂಜಾನೆ ಒಂದು ಲೋಟ ಶುಂಠಿ ನೀರನ್ನು ಕುಡಿಯುವುದರಿಂದ ಜೀರ್ಣಾಂಗ ವ್ಯವಸ್ಥೆ ಸುಧಾರಿಸುತ್ತದೆ. ಅಂತೆಯೇ, ಇದು ಎದೆಯುರಿ, ವಾಕರಿಕೆ ಮತ್ತು ಅಜೀರ್ಣವನ್ನು ನಿವಾರಿಸುತ್ತದೆ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ. ಇದು ಮಧುಮೇಹದ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.
ಆರೋಗ್ಯಕರ ತ್ವಚೆ: ಪ್ರತಿದಿನ ಶುಂಠಿ ನೀರನ್ನು ಕುಡಿಯುವುದರಿಂದ ಚರ್ಮದ ಆರೋಗ್ಯ ಸುಧಾರಿಸುತ್ತದೆ ಎಂದು ತಜ್ಞರು ಹೇಳುತ್ತಾರೆ. ಶುಂಠಿಯಲ್ಲಿರುವ ಉರಿಯೂತ ನಿವಾರಕ ಮತ್ತು ಉತ್ಕರ್ಷಣ ನಿರೋಧಕಗಳು ಸುಕ್ಕುಗಳು, ಮೊಡವೆ ಮತ್ತು ಇತರ ಚರ್ಮದ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಸಹಾಯ ಮಾಡುತ್ತದೆ.
ಶುಂಠಿ ನೀರನ್ನು ತಯಾರಿಸುವುದು ಹೇಗೆ:
- ಒಂದು ಶುಂಠಿ ತುಂಡನ್ನು ಸ್ವಚ್ಛವಾಗಿ ತೊಳೆದು ಹಸಿಯಾಗಿ ಅಗಿಯಬೇಕು.
- ಈಗ ಒಂದು ಪಾತ್ರೆಯನ್ನು ಒಲೆಯ ಮೇಲೆ ಇಟ್ಟು ಅದರಲ್ಲಿ ಕಾಲು ಲೀಟರ್ ನೀರನ್ನು ಹಾಕಿ ಕುದಿಸಿ.
- ಕೊಚ್ಚಿದ ಶುಂಠಿಯನ್ನು ಕುದಿಯುವ ನೀರಿಗೆ ಸೇರಿಸಿ ಮತ್ತು 5 ನಿಮಿಷಗಳ ಕಾಲ ಕಡಿಮೆ ಉರಿಯಲ್ಲಿ ಕಾಯಿಸಿ.
- ಅದರ ನಂತರ, ಸ್ಟೌವ್ ಆಫ್ ಮಾಡಿ ಮತ್ತು ನೀರನ್ನು ಫಿಲ್ಟರ್ ಮಾಡಿ, ಅದು ಬೆಚ್ಚಗಿರುವಾಗ, ನೀವು ನೀರಿಗೆ ಸ್ವಲ್ಪ ನಿಂಬೆ ರಸ ಮತ್ತು ಜೇನುತುಪ್ಪವನ್ನು ಸೇರಿಸಿ ಕುಡಿಯಬಹುದು.
- ಇದನ್ನು ಪ್ರತಿದಿನ ಬೆಳಗ್ಗೆ ಕುಡಿದರೆ ಒಳ್ಳೆಯ ಫಲಿತಾಂಶ ಸಿಗುತ್ತದೆ.
ನಿಮ್ಮ ಗಮನಕ್ಕೆ: ಇಲ್ಲಿ ನಿಮಗೆ ನೀಡಿರುವ ಎಲ್ಲ ಆರೋಗ್ಯ ಮಾಹಿತಿ ಮತ್ತು ಸಲಹೆಗಳು ನಿಮ್ಮ ತಿಳಿವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ನಾವು ಈ ಮಾಹಿತಿಯನ್ನು ಒದಗಿಸುತ್ತಿದ್ದೇವೆ. ಆದರೆ, ಇವುಗಳನ್ನು ಅನುಸರಿಸುವ ಮೊದಲು ಪರಿಣತರ ಸಲಹೆಯನ್ನು ತೆಗೆದುಕೊಳ್ಳುವುದು ಉತ್ತಮ.