ETV Bharat / health

ಶುಗರ್, ಅಧಿಕ ತೂಕದಿಂದ ಬಳಲುತ್ತಿದ್ದೀರಾ? ರಾಗಿಯನ್ನು ಈ ರೀತಿ ಸೇವಿಸುವುದು ಒಳ್ಳೆಯದು ಅಂತಿದೆ ಸಂಶೋಧನೆ - HEALTH BENEFITS OF FINGER MILLET

Health Benefits of Finger Millet: ರಾಗಿ ದೇಹದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ದೈನಂದಿನ ಆಹಾರದಲ್ಲಿ ರಾಗಿ ಭಾಗವಾಗಿರಿಸಿಕೊಳ್ಳಲು ಆರೋಗ್ಯ ತಜ್ಞರು ಮಹತ್ವದ ಸಲಹೆ ನೀಡಿದ್ದಾರೆ.

HEALTH BENEFITS OF FINGER MILLET  FINGER MILLETS HEALTH BENEFITS  Ragi HEALTH BENEFITS
ಸಾಂದರ್ಭಿಕ ಚಿತ್ರ (ETV Bharat)
author img

By ETV Bharat Health Team

Published : Dec 15, 2024, 6:01 AM IST

Health Benefits of Finger Millet: ಬದಲಾಗುತ್ತಿರುವ ಜೀವನಶೈಲಿ ಹಾಗೂ ಆಹಾರ ಪದ್ಧತಿಯಿಂದ ಅನೇಕ ಜನರು ಚಿಕ್ಕ ವಯಸ್ಸಿನಲ್ಲಿ ಮಧುಮೇಹ, ಸ್ಥೂಲಕಾಯದ ಜೊತೆಗೆ ಹಲವು ಆರೋಗ್ಯ ಸಮಸ್ಯೆಗಳನ್ನು ಬಳಲುತ್ತಿದ್ದಾರೆ. ಈ ಆರೋಗ್ಯದ ಸಮಸ್ಯೆಗಳನ್ನು ಕಡಿಮೆ ಮಾಡಲು ನಿರಂತರವಾಗಿ ಪ್ರಯತ್ನಗಳು ನಡೆಯುತ್ತಿವೆ. ಇವುಗಳನ್ನು ಹೋಗಲಾಡಿಸಲು ಸರಿಯಾದ ಆಹಾರ ನಿಯಮ ಪಾಲಿಸಬೇಕು. ಈ ನಿಟ್ಟಿನಲ್ಲಿ ರಾಗಿಯನ್ನು ನಿತ್ಯದ ಆಹಾರ ಭಾಗವಾಗಿಸಲು ತಜ್ಞರು ಸಲಹೆ ನೀಡುತ್ತಾರೆ. ರಾಗಿಯಿಂದ ಮಾಡಿರುವ ವಿವಿಧ ಆಹಾರಗಳನ್ನು ಸೇವಿಸುವುದರಿಂದ ಹಲವಾರು ಆರೋಗ್ಯ ಪ್ರಯೋಜನಗಳು ದೊರೆಯುತ್ತವೆ.

ಎಲುಬುಗಳಿಗೆ ಬಲ: ರಾಗಿಯಲ್ಲಿ ಕ್ಯಾಲ್ಸಿಯಂ ಹೇರಳವಾಗಿದ್ದು, ಮೂಳೆಗಳ ಬಲಕ್ಕೆ ನೆರವಾಗುತ್ತದೆ. ಇದು ಹಲ್ಲಿನ ಸಮಸ್ಯೆಗಳನ್ನು ನಿವಾರಿಸುತ್ತದೆ. ಜೊತೆಗೆ ಹಲ್ಲುಗಳನ್ನು ಬಲಪಡಿಸುತ್ತದೆ. ಅದಕ್ಕಾಗಿಯೇ ಬೆಳೆಯುತ್ತಿರುವ ಮಕ್ಕಳಿಗೆ ನಿಯಮಿತವಾಗಿ ರಾಗಿ ನೀಡಬೇಕು. ಅಲ್ಲದೆ ವಯಸ್ಸಾದವರು ರಾಗಿ ಸೇವನೆಯಿಂದ ಆಸ್ಟಿಯೊಪೊರೋಸಿಸ್ ನಂತಹ ಸಮಸ್ಯೆಗಳಿಂದ ದೂರವಿರಬಹುದು ಎಂದು ತಜ್ಞರು ವಿವರಿಸುತ್ತಾರೆ.

ತೂಕ ನಿಯಂತ್ರಣ: ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಈ ಸಮಸ್ಯೆಯಿಂದ ಬಳಲುತ್ತಿರುವವರು ರಾಗಿಯನ್ನು ಆಹಾರದ ಭಾಗವಾಗಿ ಮಾಡಿಕೊಂಡರೆ ತೂಕ ನಿಯಂತ್ರಣದಲ್ಲಿಟ್ಟುಕೊಳ್ಳಬಹುದು. ರಾಗಿಯಲ್ಲಿ ನಾರಿನಂಶ ಹೆಚ್ಚಾಗಿರುತ್ತದೆ. ಕಡಿಮೆ ಕೊಬ್ಬಿನಂಶವಿದೆ. ನಿಯಮಿತವಾಗಿ ನೀವು ಸ್ವಲ್ಪ ಪ್ರಮಾಣದಲ್ಲಿ ಸೇವಿಸಿದರೆ ದೇಹಕ್ಕೆ ಬೇಕಾದ ಪೋಷಕಾಂಶಗಳೂ ಸಿಗುತ್ತವೆ ಎನ್ನುತ್ತಾರೆ ತಜ್ಞರು.

ಗ್ಲೂಕೋಸ್ ನಿಯಂತ್ರಣಕ್ಕೆ ಬರುತ್ತೆ: ಅಕ್ಕಿ, ಗೋಧಿಗೆ ಹೋಲಿಸಿದರೆ, ರಾಗಿಯಲ್ಲಿ 'ಗ್ಲೈಸೆಮಿಕ್ ಇಂಡೆಕ್ಸ್' ತುಂಬಾ ಕಡಿಮೆಯಾಗಿದೆ. ಇದರಿಂದಾಗಿ ರಕ್ತದಲ್ಲಿನ ಗ್ಲೂಕೋಸ್ ಮಟ್ಟವು ನಿಯಂತ್ರಣದಲ್ಲಿ ಇರುತ್ತದೆ. ರಾಗಿ ಸೇವನೆಯಿಂದ ಮಧುಮೇಹ ಕಡಿಮೆಯಾಗುತ್ತದೆ ಎಂದು ರಾಷ್ಟ್ರೀಯ ಆರೋಗ್ಯ ಸಂಸ್ಥೆಯ ಸದಸ್ಯರ ತಂಡವೂ ಇದನ್ನೇ ಸ್ಪಷ್ಟಪಡಿಸಿದೆ.

ಗರ್ಭಿಣಿ ಹಾಗೂ ಹಾಲುಣಿಸುವ ತಾಯಂದಿರಿಗೆ: ರಾಗಿಯಲ್ಲಿ ಕ್ಯಾಲ್ಸಿಯಂ, ಫೋಲಿಕ್ ಆ್ಯಸಿಡ್​ ಸಮೃದ್ಧವಾಗಿದೆ. ಗರ್ಭಿಣಿಯರಿಗೆ ಇದು ತುಂಬಾ ಉಪಯುಕ್ತವಾಗಿದೆ. ಇದರಲ್ಲಿರುವ ಖನಿಜಾಂಶಗಳು ಕ್ಯಾಲ್ಸಿಯಂ, ಕಬ್ಬಿಣ ಮತ್ತು ಅಮೈನೋ ಆಮ್ಲಗಳು ಹಾಲುಣಿಸುವ ತಾಯಂದಿರಲ್ಲಿ ಹಾಲಿನ ಉತ್ಪಾದನೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಸೌಂದರ್ಯಕ್ಕೆ ಪೂರಕ: ರಾಗಿ ಆರೋಗ್ಯಕ್ಕೆ ಮಾತ್ರವಲ್ಲ.. ಸೌಂದರ್ಯಕ್ಕೂ ಇಮ್ಮಡಿಯಾಗಿದೆ. ರಾಗಿಯಲ್ಲಿ ಉತ್ಕರ್ಷಣ ನಿರೋಧಕಗಳು ಮತ್ತು ಫೀನಾಲಿಕ್ ಆ್ಯಸಿಡ್​ ಸಮೃದ್ಧವಾಗಿ ಇರುತ್ತದೆ. ಇವು ತ್ವಚೆಯನ್ನು ವಯಸ್ಸಾಗದಂತೆ ಕಾಪಾಡುತ್ತದೆ ಹಾಗೂ ಇವುಗಳಲ್ಲಿರುವ ಅಮೈನೋ ಆಮ್ಲಗಳು ತ್ವಚೆಯಲ್ಲಿ ಕಾಲಜನ್ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಚರ್ಮ ಸುಕ್ಕುಗಟ್ಟುವುದನ್ನು ತಡೆಯುತ್ತದೆ ಎಂದು ತಿಳಿಸುತ್ತಾರೆ ತಜ್ಞರು.

ರಾಗಿ ಸೇವಿಸುವುದು ಹೇಗೆ? ಹೆಚ್ಚಿನ ಜನರು ರಾಗಿಯಿಂದ ಹಿಟ್ಟನ್ನು ರೆಡಿ ಮಾಡಿಸಬೇಕು. ಅದರಿಂದ ವಿವಿಧ ಬಗೆಯ ಖಾದ್ಯ ಸಿದ್ಧಪಡಿಸಬಹುದು. ಇದರಲ್ಲಿರುವ ಇಡ್ಲಿ, ದೋಸೆ, ಲಡ್ಡು, ಕೇಕ್, ಹಲ್ವಾ, ಪೂರಿ, ಪರೋಟ, ರೋಟಿ ಹೀಗೆ ವಿವಿಧ ಅಡುಗೆಗಳನ್ನು ರೆಡಿ ಮಾಡಬಹುದು.

ಹೆಚ್ಚಿನ ಮಾಹಿತಿಗಾಗಿ ಈ ವೆಬ್​ಸೈಟ್​ನ್ನು ವೀಕ್ಷಿಸಬಹುದು: https://pmc.ncbi.nlm.nih.gov/articles/PMC4033754/

ಇವುಗಳನ್ನೂ ಓದಿ:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.