ನವದೆಹಲಿ: ಅನಾರೋಗ್ಯಕರ ಜೀವನಶೈಲಿ ಮತ್ತು ಒತ್ತಡದಿಂದಾಗಿ ಇಂದು ಜನರ ಆರೋಗ್ಯ ಸಮಸ್ಯೆ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ, ಇಂತಹ ಪರಿಸ್ಥಿತಿಗಳಲ್ಲಿ ಆರೋಗ್ಯಯುತ ಜೀವಶೈಲಿ ಮತ್ತು ದೈಹಿಕ ಚಟುವಟಿಕೆ ರೂಢಿಸಿಕೊಳ್ಳುವುದು ಅಗತ್ಯವಾಗಿದೆ. ಕಳೆದ ಕೆಲವರು ವರ್ಷಗಳಿಂದ ಜನರಲ್ಲಿ ಆರೋಗ್ಯದ ಕುರಿತು ಹೆಚ್ಚು ಮುತವರ್ಜಿ ವಹಿಸುತ್ತಾರೆ. ಇದೇ ಕಾರಣದಿಂದ ದೈನಂದಿನ ಆರೋಗ್ಯ ಚಟುವಟಿಕೆ ಮೂಲಕ ದೇಹ ಮತ್ತು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಮುಂದಾಗಿದ್ದಾರೆ.
ಫಿಟ್ನೆಸ್ನ ಪ್ರಯೋಜನಗಳು: ದೈನಂದಿನ ವ್ಯಾಯಾಮಗಳು ದೇಹದ ಎಲ್ಲಾ ಭಾಗಗಳನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ. ಜೊತೆಗೆ ಇದು ರಕ್ತದ ಪರಿಚಲನೆಯನ್ನು ಸುಧಾರಣೆ ಮಾಡುತ್ತದೆ. ಇದರ ಹೊರತಾಗಿ, ಹಸಿವೆ ನಿಯಂತ್ರಣ, ಮನಸ್ಥಿತಿ ಹೆಚ್ಚಳ, ನಿದ್ರೆ ಸುಧಾರಣೆಗೆ ಸಹಾಯ ಮಾಡುತ್ತದೆ.
ಇಷ್ಟೆಲ್ಲಾ ಆರೋಗ್ಯ ಪ್ರಯೋಜನ ನೀಡುವ ವರ್ಕೌಟ್ಗಳನ್ನು ರೂಢಿಸಿಕೊಳ್ಳುವುದಕ್ಕೆ ನಮ್ಮ ದೇಹದ ವಯಸ್ಸು ಕೂಡ ಮುಖ್ಯವಾಗುತ್ತದೆ. ನಮ್ಮ ದೈಹಿಕ ಚಟುವಟಿಕೆಗಳ ಮೂಲಕವೇ ವಯಸ್ಸನ್ನು ಪತ್ತೆ ಮಾಡಬಹುದು. ಅದು ಕೇವಲ 30 ಸೆಕೆಂಡ್ನಲ್ಲಿ. ಅದು ಹೇಗೆ ಎಂದರೆ, ಇಲ್ಲಿದೆ ಮಾಹಿತಿ
ಈ ಸಂಬಂಧ ರಾಂಚಿಯ ರಿಮ್ಸ್ ನರ ಮತ್ತು ಬೆನ್ನುಮೂಳೆ ಸರ್ಜನ್ ಡಾ ವಿಕಾಸ್, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಡಾ ವಿಕಾಸ್ ವ್ಯಕ್ತಿಯೊಬ್ಬನ ವಯಸ್ಸನ್ನು ಆತನ ಫಿಟ್ನೆಸ್ ಮೂಲಕ ಹೇಗೆ ಸುಲಭವಾಗಿ ಪತ್ತೆ ಮಾಡಬಹುದು ಎಂಬುದನ್ನು ಸರಳ ವ್ಯಾಯಾಮದ ಮೂಲಕ ತಿಳಿಸಿದ್ದಾರೆ.
चलिए आपकी फिटनेस चेक करते हैं और फिटनेस के अनुसार आपकी उम्र कितनी है पता करते हैं I
— Dr Vikaas (@drvikas1111) May 12, 2024
अगर आप फिट है तो आपकी उम्र कम आएगी I
जैसा वीडियो में दिखाया गया है ,हाथ को क्रॉस कीजिए ,एक पैर पर खड़े हो जाए और आंखों को बंद कर लीजिए ,अगर आप इस अवस्था में
5 सेकंड तक खड़े रहते हैं तो आपकी… pic.twitter.com/v38NEo1E1t
ಅದರಲ್ಲಿ ಎರಡು ಕೈ ಮೇಲೆತ್ತಿ, ಬಲಗಾಲನ್ನು ಎತ್ತಿ ಎಷ್ಟು ಸೆಕೆಂಡ್ಗಳ ಕಾಲ ನಿಂತಿರುತ್ತೀರ ಎಂಬುದರ ಮೇಲೆ ವಯಸ್ಸನ್ನು ಪತ್ತೆ ಮಾಡಬಹುದು ಎಂದಿದ್ದಾರೆ.
ಏನಿದು ಫಾರ್ಮುಲಾ?: ಪೋಸ್ಟ್ನಲ್ಲಿ ತಿಳಿಸಿರುವಂತೆ ಎರಡು ಕೈ ಹಾಗೇ ಒಂದು ಕಾಲನ್ನು ವಯಸ್ಸಿಗೆ ಅನುಗುಣವಾದ ಶಕ್ತಿ ಮೂಲಕ ಎತ್ತಬಹುದಾಗಿದೆ. ಈ ರೀತಿಯಾಗಿ 5 ಸೆಕೆಂಡ್ಗಳ ನಿಂತಿದ್ದರೆ, ನಿಮ್ಮ ವಯಸ್ಸು 65ರ ಮೇಲ್ಪಟ್ಟಾಗಿರುತ್ತದೆ. 10 ಸೆಕೆಂಡ್ ಕಾಲ ನಿಂತರೆ ನಿಮ್ಮ ವಯಸ್ಸು 55 ವರ್ಷ, 15 ಸೆಕೆಂಡ್ ನಿಂತರೆ 45 ವರ್ಷ, 20 ಸೆಕೆಂಡ್ ನಿಂತರೆ 35 ವರ್ಷ ಮೇಲ್ಪಟ್ಟರಾಗಿರುತ್ತೀರ. 25 ಸೆಕೆಂಡ್ ನಿಂತರ ನಿಮ್ಮ ವಯಸ್ಸು 30ರ ಮೇಲಿರುತ್ತದೆ. 30 ಸೆಕೆಂಡ್ಗಳ ಕಾಲ ನಿಂತರೆ ನಿಮ್ಮ ವಯಸ್ಸು 30 ವರ್ಷಕ್ಕಿಂತ ಕಡಿಮೆಯಾಗಿದೆ.
ಇದನ್ನೂ ಓದಿ: ಖಾಲಿ ಹೊಟ್ಟೆಯಲ್ಲಿ ವರ್ಕೌಟ್ ಮಾಡುವುದರಿಂದ ಲಾಭನಾ - ನಷ್ಟನಾ?: ಇಲ್ಲಿದೆ ನಿಮ್ಮಲ್ಲ ಗೊಂದಲಕ್ಕೆ ಉತ್ತರ