ETV Bharat / health

ಡೆಂಗ್ಯೂನ ದ್ವೀತಿಯ ಸೋಂಕಿಗಿಂತ ಪ್ರಾಥಮಿಕ ಸೋಂಕು ಅಪಾಯಕಾರಿ: ಅಧ್ಯಯನ

ಎರಡನೇ ಬಾರಿ ಬರುವ ಡೆಂಗ್ಯೂ ಸೋಂಕು ಹೆಚ್ಚು ಅಪಾಯಕಾರಿ ಎಂಬ ನಂಬಿಕೆ ಇತ್ತು. ಆದರೆ, ಡೆಂಗ್ಯೂವಿನ ಪ್ರಾಥಮಿಕ ಸೋಂಕು ಹೆಚ್ಚು ಅಪಾಯಕಾರಿ ಎಂದು ಅಧ್ಯಯನವೊಂದು ಇದೀಗ ತಿಳಿಸಿದೆ.

Dengue
Dengue
author img

By ETV Bharat Karnataka Team

Published : Mar 9, 2024, 12:05 PM IST

ನವದೆಹಲಿ: ಮೊದಲ ಬಾರಿಯ ಡೆಂಗ್ಯೂ ಎರಡನೇ ಬಾರಿಯ ಸೋಂಕಿಗಿಂತ ಮಾರಣಾಂತಿಕವಾಗಬಹುದಾಗಿದೆ ಎಂದು ಅಧ್ಯಯನವೊಂದು ತಿಳಿಸಿದೆ. ಈ ಮೂಲಕ ಮೊದಲ ಬಾರಿಗಿಂತ ಎರಡನೇ ಬಾರಿ ಡೆಂಗ್ಯೂ ಸೋಂಕು ಮಾರಾಣಾಂತಿಕ ಎಂಬ ನಂಬಿಕೆಗೆ ಈ ಅಧ್ಯಯನ ಸವಾಲು ಹಾಕಿದೆ.

ಜರ್ನಲ್​ ನೇಚರ್​ ಮೆಡಿಸಿನ್​​ನಲ್ಲಿ ಪ್ರಕಟವಾದ ಅಧ್ಯಯನ ಅನುಸಾರ, ಭಾರತದ ಮಕ್ಕಳಲ್ಲಿ ಡೆಂಗ್ಯೂ ಪ್ರಕರಣಗಳ ತೀವ್ರತೆ ಹೆಚ್ಚಿದೆ. ಇವರಲ್ಲಿ ಎರಡನೇ ಬಾರಿಗಿಂತ ಮೊದಲ ಬಾರಿ ತುತ್ತಾದವರಲ್ಲಿ ಗಂಭೀರತೆ ಹೆಚ್ಚಿದೆ. ಈ ಹಿನ್ನೆಲೆ ವಿಜ್ಞಾನಿಗಳು ಮಕ್ಕಳ ಮೇಲೆ ಡೆಂಗ್ಯೂವಿನ ತೀವ್ರ ಪರಿಣಾಮಗಳ ಕುರಿತು ಅಧ್ಯಯನ ನಡೆಸಿದ್ದು, ಮೊದಲ ಬಾರಿ ಸೋಂಕಿಗೆ ತುತ್ತಾದವರಲ್ಲಿ ಭಾರೀ ಪರಿಣಾಮ ಕಾಣಬಹುದಾಗಿದೆ.

ಭಾರತದಲ್ಲಿ ಕಳೆದೆರಡು ದಶಕಗಳಿಂದ ಡೆಂಗ್ಯೂ ಗಣನೀಯ ಪ್ರಮಾಣದಲ್ಲಿ ಹೆಚ್ಚಳ ಕಂಡು ಬಂದಿದೆ. ಈ ಲೆಕ್ಕದಲ್ಲಿ ಭಾರತವೂ ಜಗತ್ತಿನಲ್ಲಿಯೇ ಡೆಂಗ್ಯೂ ಪ್ರಕರಣದಲ್ಲಿ ಮೊದಲಿದೆ.

ಡೆಂಗ್ಯೂ ರೋಗಿಗಳಲ್ಲಿ ಎರಡು ವರ್ಗವಿದೆ. ಮೊದಲ ಬಾರಿಗೆ ಸೋಂಕಿಗೆ ಒಳಗಾದವರು ಮತ್ತು ಎರಡನೇ ಬಾರಿ ಸೋಂಕಿಗೆ ಒಳಗಾದವರು. ನಂಬಿಕೆ ಪ್ರಕಾರ ಎರಡನೇ ಬಾರಿ ಸೋಂಕಿಗೆ ಒಳಗಾದವರು ಗಮನಾರ್ಹ ಅಪಾಯಕ್ಕೆ ಗುರಿಯಾಗುತ್ತಾರೆ ಎಂಬುದು. ಈ ಹಿನ್ನೆಲೆ ಈ ಗುಂಪಿನ ಮೇಲೆ ಹೆಚ್ಚಿನ ಗಮನ ಹರಿಸಿ, ಲಸಿಕೆ ಅಭಿವೃದ್ಧಿ ಮತ್ತು ಚಿಕಿತ್ಸೆಗಳ ಸಂಶೋಧನೆ ನಡೆದಿದೆ.

ನವದೆಹಲಿ ಮೂಲದ ಐಸಿಜಿಇಬಿ ಒಳಗೊಂಡ ಅಂತಾರಾಷ್ಟ್ರೀಯ ತಂಡದ ಅಧ್ಯಯನದಲ್ಲಿ ಕಂಡು ಬಂದಂತೆ ಪ್ರಾಥಮಿಕ ಬದಲಾಗಿ ದ್ವಿತೀಯ ಸೋಂಕು ರೋಗಿಯ ಜೀವಕ್ಕೆ ಆಪತ್ತು ತರುತ್ತದೆ ಎಂದು ತಿಳಿದು ಬಂದಿದೆ.

ಅಧ್ಯಯನದ ಫಲಿತಾಂಶವೂ ತಿಳಿಸುವಂತೆ, ಸೋಂಕಿತ ಸೊಳ್ಳೆಗಳ ಕಡಿತದಿಂದ ಹರಡುವ ಡೆಂಗ್ಯೂ ವೈರಸ್​ನಿಂದ ಉಂಟಾಗುವ ಸೋಂಕಿನ ವಿರುದ್ಧ ಹೋರಾಡುವ ತಂತ್ರಗಳ ತಿಳುವಳಿಕೆಯನ್ನು ಮರು ಮೌಲ್ಯಮಾಪನ ಮಾಡುವ ಅಗತ್ಯವನ್ನು ಸಂಶೋಧನೆಯು ಒತ್ತಿಹೇಳುತ್ತದೆ. ಡೆಂಗ್ಯೂ ವೈರಸ್​​ ಸೋಂಕು ಭಾರತದಲ್ಲಿ ಅಗಾಧ ಪ್ರಮಾಣದಲ್ಲಿ ಸಾರ್ವಜನಿಕ ಆರೋಗ್ಯ ಆತಂಕ ಒಡ್ಡುತ್ತದೆ. ಅನೇಕ ರೋಗಿಗಳಿಗೆ ಇದು ಮಾರಾಣಾಂತಿಕವಾಗಬಹುದು ಎಂದು ಐಸಿಜಿಇಬಿಯ ಅನ್ಮೋಲ್​ ಚಂದೇಲೆ ತಿಳಿಸಿದ್ದಾರೆ.

ಈ ಸಂಶೋಧನೆಯು ಸಾರ್ವಜನಿಕ ಆರೋಗ್ಯ ಮತ್ತು ಡೆಂಗ್ಯೂ ನಿಯಂತ್ರಣಕ್ಕಾಗಿ ಪರಿಣಾಮಕಾರಿ ಮತ್ತು ಸುರಕ್ಷಿತ ಲಸಿಕೆ ತಂತ್ರಗಳನ್ನು ಅಭಿವೃದ್ಧಿಪಡಿಸಿ, ಪರಿಣಾಮಕಾರಿ ಅನುಷ್ಠಾನಕ್ಕೆ ಒತ್ತಾಯಿಸುತ್ತದೆ. ಈ ಅಧ್ಯಯನವೂ ಕೇವಲ ಭಾರತದಲ್ಲಿ ಮಾತ್ರವಲ್ಲ, ಜಾಗತಿಕ ಮಟ್ಟದಲ್ಲೂ ಸಹಾಯಕಾರಿಯಾಗಲಿದೆ. ಡೆಂಗ್ಯೂ ವಿಶ್ವದಾದ್ಯಂತ ಹರಡುವಿಕೆ ಹೊಂದಿದೆ.

ಇದನ್ನೂ ಓದಿ: 2023ರಲ್ಲಿ ಭಾರತ ಸೇರಿದಂತೆ 20 ದೇಶಗಳಲ್ಲಿ ಡೆಂಗ್ಯೂ ಸಾವಿನ ಸಂಖ್ಯೆಯಲ್ಲಿ ಭಾರಿ ಏರಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.