ಲಂಡನ್: ತಿಂಗಳಲ್ಲಿ ಒಂದು ಬಾರಿ ಎನರ್ಜಿ ಡ್ರಿಂಕ್ ಕುಡಿಯುವುದು ಕಳಪೆ ನಿದ್ದೆ ಗುಣಮಟ್ಟ ಮತ್ತು ನಿದ್ರಾಹೀನತೆಗೆ ಕಾರಣವಾಗುತ್ತದೆ ಎಂದು ಅಧ್ಯಯನ ತಿಳಿಸಿದೆ. ಕಾಲೇಜು ವಿದ್ಯಾರ್ಥಿಗಳು ಮತ್ತು ಸಾಮಾನ್ಯವಾಗಿ ಯುವ ಜನರಲ್ಲಿ ಎನರ್ಜಿ ಡ್ರಿಂಕ್ಗಳು ಹೆಚ್ಚು ಪ್ರಖ್ಯಾತಿಯಾಗಿದ್ದು, ಇದರ ಸೇವನೆಗೆ ಅವರು ಮಹತ್ವ ನೀಡುತ್ತಾರೆ. ಆದರೆ ಇದನ್ನು ಪದೇ ಪದೆ ಸೇವಿಸುವುದರಿಂದ ರಾತ್ರಿ ನಿದ್ದೆಯಲ್ಲಿ ಸಮಸ್ಯೆಗೆ ಕಾರಣವಾಗುತ್ತದೆ ಎಂದು ಸಂಶೋಧನೆ ತಿಳಿಸಿದೆ.
ಈ ಅಧ್ಯಯನವನ್ನು ಬಿಎಂಜೆ ಓಪನ್ ಜರ್ನಲ್ನಲ್ಲಿ ಪ್ರಕಟಿಸಲಾಗಿದೆ. ಅಪರೂಪಕ್ಕೆ ಒಮ್ಮೆ ಎಂಬಂತೆ ತಿಂಗಳಲ್ಲಿ ಒಂದರಿಂದ ಮೂರು ಬಾರಿ ಈ ಎನರ್ಜಿ ಡ್ರಿಂಕ್ ಸೇವಿಸುವುದರಿಂದಲೂ ಕೂಡ ಅದು ನಿದ್ರೆಯ ಮೇಲೆ ಪರಿಣಾಮ ಬೀರಿ, ಅಪಾಯ ಹೆಚ್ಚಿಸಲಿದೆ ಎಂದು ಫಲಿತಾಂಶ ತಿಳಿಸಿದೆ.
ಶಕ್ತಿ ಪಾನೀಯದಲ್ಲಿರುವ ಅಂಶಗಳು: ಎನರ್ಜಿ ಡ್ರಿಂಕ್ಗಳಲ್ಲಿ ಪ್ರತಿ ಲೀಟರ್ನಲ್ಲಿ ಸರಾಸರಿ 150 ಎಂಜಿ ಕೆಫಿನ್ ಅಂಶ ಹೊಂದಿರುತ್ತದೆ. ಜೊತೆಗೆ ಸಕ್ಕರೆ, ವಿಟಮಿನ್ಸ್, ಮಿನರಲ್ಸ್ ಮತ್ತು ಅಮಿನೋ ಆಮ್ಲಗಳನ್ನು ಹಲವು ಸ್ತರದ ಗುಣಮಟ್ಟದಲ್ಲಿರುತ್ತದೆ ಎಂದು ನಾರ್ವೆಯಲ್ಲಿನ ಒಸ್ಲೊ ಮತ್ತು ಬೆರ್ಜೆನ್ ಯುನಿವರ್ಸಿಟಿ ಸಂಶೋಧಕರು ತಿಳಿಸಿದ್ದಾರೆ.
ಕೆಲವು ಸಂಶೋಧನೆಗಳು ಈ ಪಾನೀಯಗಳು ನಿದ್ರೆಯ ಗುಣಮಟ್ಟವನ್ನು ಕಡಿಮೆ ಮಾಡುತ್ತವೆ ಎಂಬದರ ಕುರಿತು ಪುರಾವೆಯನ್ನು ತೋರಿಸಿದೆ. ಇದು ನಿದ್ರೆಯಲ್ಲಿ ಹೆಚ್ಚು ಅಥವಾ ಕಡಿಮೆ ಮಟ್ಟದಲ್ಲಿ ಪರಿಣಾಮ ಬೀರುತ್ತದೆಯೇ ಅಥವಾ ಇದರ ಪರಿಣಾಮದಲ್ಲಿ ಯಾವುದೇ ನಿರ್ದಿಷ್ಟ ಲಿಂಗದ ವ್ಯತ್ಯಾಸ ಇದೆಯಾ ಎಂಬ ಕುರಿತು ಸ್ಪಷ್ಟವಾಗಿ ತಿಳಿದಿಲ್ಲ.
ಇದನ್ನು ಅನ್ವೇಷಣೆ ಮಾಡುವ ಸಲುವಾಗಿ 18 ರಿಂದ 35 ವರ್ಷದ ವಯೋಮಾನದ ನಾರ್ವೆಯ 53,266 ಮಂದಿಯನ್ನು ಅಧ್ಯಯನಕ್ಕೆ ಒಳಪಡಿಸಲಾಗಿದೆ. ಅಧ್ಯಯನದಲ್ಲಿ ಭಾಗಿದಾರರನ್ನು ದಿನ, ವಾರ, ತಿಂಗಳಲ್ಲಿ ಎಷ್ಟು ಬಾರಿ ಎನರ್ಜಿ ಡ್ರಿಂಕ್ ಸೇವಿಸುತ್ತೀರಾ ಎಂದು ಪ್ರಶ್ನೆ ಕೇಳಲಾಗಿದೆ. ಇದೇ ವೇಳೆ ಅವರು ನಿದ್ರೆಯ ಮಾದರಿ ಕುರಿತು ಕೂಡ ವಿವರವಾದ ಮಾಹಿತಿ ಪಡೆಯಲಾಗಿದೆ. ಅವರ ನಿದ್ರೆಗೆ ಜಾರುವ ಸಮಯ, ಬೆಳಗ್ಗೆ ಏಳುವ ಸಮಯ, ನಿದ್ರೆ ಮಧ್ಯದಲ್ಲಿ ಎಚ್ಚರಗೊಳ್ಳುವಿಕೆ. ನಿದ್ರೆಯ ಸಾಮರ್ಥ್ಯ, ರಾತ್ರಿ ಒಟ್ಟಾರೆ ನಿದ್ರೆ ಗುಣಮಟ್ಟ ಮತ್ತು ಹಾಸಿಗೆ ಮೇಲೆ ಸಮಯ ಕಳೆಯುವುದನ್ನು ಲೆಕ್ಕ ಹಾಕಲಾಗಿದೆ.
ಹೀಗಿದೆ ಅಧ್ಯಯನದ ಫಲಿತಾಂಶ: ಹಾಸಿಗೆ ಮೇಲೆ ಮಲಗಿದಾಕ್ಷಣ ನಿದ್ರೆಗೆ ಜಾರುವಲ್ಲಿ ತೊಡಕನ್ನು ಅನುಭವಿಸುವುದು ಮತ್ತು ಕನಿಷ್ಠ ಮೂರು ದಿನಗಳ ಕಾಲ ಪದೇ ಪದೇ ಎಚ್ಚರವಾಗುವುದನ್ನು ನಿದ್ರಾಹೀನತೆ ಎಂದು ಕರೆಯಲಾಗಿದೆ. ಇದರಿಂದ ಬೆಳಗಿನ ಹೊತ್ತಿನ ನಿದ್ರೆ ಸಮಸ್ಯೆ ಮತ್ತು ಆಯಾಸವನ್ನು ಅನುಭವಿಸುತ್ತಾರೆ.
ಅಧ್ಯಯನದಲ್ಲಿ ಶೇ 5.5 ರಷ್ಟು ಮಹಿಳೆಯರು ವಾರದಲ್ಲಿ 4-6 ಬಾರಿ ಈ ಎನರ್ಜಿ ಡ್ರಿಂಕ್ ಸೇವಿಸುವುದಾಗಿ ತಿಳಿಸಿದ್ದಾರೆ. ಇನ್ನು 3ರಷ್ಟು ಮಂದಿ ಪ್ರತಿನಿತ್ಯ ಸೇವಿಸುವುದಾಗಿ ಒಪ್ಪಿಕೊಂಡಿದ್ದಾರೆ. ಪುರುಷರಿಗೆ ಹೋಲಿಕೆ ಮಾಡಿದಾಗ ಅವರು ಕ್ರಮವಾಗಿ 8ರಷ್ಟು ಮತ್ತು ಶೇ 5ರಷ್ಟು ಸೇವಿಸುವುದಾಗಿ ಹೇಳಿದ್ದಾರೆ.
ಈ ಎನರ್ಜಿ ಡ್ರಿಂಕ್ ಸೇವನೆ ಮಾಡುವ ಯುವಕ-ಯುವತಿಯರು ಸಾಮಾನ್ಯವಾಗಿ ನಿದ್ರೆಗೆ ಜಾರುವುದಕ್ಕಿಂತ ಅರ್ಧಗಂಟೆ ತಡವಾಗಿ ಮಲಗುವುದಾಗಿ, ಇಲ್ಲ ಮಲಗಿದ ಅರ್ಧಗಂಟೆ ಬಳಿಕ ಎಚ್ಚರವಾಗುವುದಾಗಿ ತಿಳಿಸಿದ್ದಾರೆ. ಈ ಸೇವನೆ ಹೆಚ್ಚಿಸಿದಾಗ ಅವರ ಎಚ್ಚರಗೊಳ್ಳುವ ಅವಧಿ, ತಡವಾಗಿ ನಿದ್ರೆಗೆ ಜಾರುವುದು, ಕಳಪೆ ನಿದ್ರೆಯ ಸಾಮರ್ಥ್ಯ ಹೊಂದಿರುವುದನ್ನು ತೋರಿಸಿದೆ ಎಂದು ಸಂಶೋಧಕರು ಹೇಳಿದ್ದಾರೆ. (ಐಎಎನ್ಎಸ್)
ಇದನ್ನೂ ಓದಿ: ಭೌತಿಕ ಬಳಕೆದಾರರಲ್ಲಿ ಬೇಸರ, ಒತ್ತಡಕ್ಕೆ ಕಾರಣವಾಗುವ ಸೋಷಿಯಲ್ ಮೀಡಿಯಾ