ನವದೆಹಲಿ: ಅನೇಕ ಮಂದಿ ರಾತ್ರಿ ಸಮಯದಲ್ಲಿ ಉತ್ತಮ ನಿದ್ರೆ ಹೊಂದುವುದಿಲ್ಲ ಎಂದು ಆ ನಿದ್ರೆಯನ್ನು ಬೆಳಗಿನ ಹೊತ್ತು ಮಾಡಿ ಸರಿದೂಗಿಸುತ್ತಾರೆ. ಆದರೆ ಈ ರೀತಿ ಮಾಡುವುದು ತಪ್ಪು. ಇದರಿಂದ ಅಪಾಯ ಎಂದಿದ್ದಾರೆ ಹೈದರಾಬಾದ್ ಮೂಲದ ವೈದ್ಯ ಸುಧೀರ್ ಕುಮಾರ್.
ಈ ಸಂಬಂಧ ಎಕ್ಸ್.ಕಾಂನಲ್ಲಿ ಮಾಹಿತಿ ಹಂಚಿಕೊಂಡಿರುವ ಇಂಧ್ರಪ್ರಸ್ಥ ಅಪೋಲೋ ಆಸ್ಪತ್ರೆಯ ವೈದ್ಯ, ಬೆಳಗಿನ ಹೊತ್ತು ನಿದ್ದೆ ನಿಮ್ಮ ದೇಹದ ಗಡಿಯಾರಕ್ಕೆ ಹೊಂದಿಕೆಯಾಗುವುದಿಲ್ಲ. ಅಲ್ಲದೇ ಇದು ಡೆಮನ್ಶಿಯಾ ಮತ್ತು ಇತರೆ ಮನೋವೈಜ್ಞಾನಿಕ ಸಮಸ್ಯೆ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಎಚ್ಚರಿಸಿದ್ದಾರೆ.
ಬೆಳಗಿನ ಹೊತ್ತು ಹಗುರ ನಿದ್ದೆ ಮಾಡಿದೆ ಎಂಬ ಸಮಾಧಾನ ಇದ್ದರೂ ಇದು ಸರ್ಕಾಡಿಯನ್ ಗಡಿಯಾರದೊಂದಿಗೆ ಹೊಂದಿಕೆ ಆಗುವುದಿಲ್ಲ. ಇದರಿಂದ ಮತ್ತೆ ನಿದ್ರೆಯ ಹೊಮೊಸ್ಟಾಟಿಕ್ ಕಾರ್ಯಾಚರಣೆ ಪೂರೈಸುವಲ್ಲಿ ವಿಫಲವಾಗುತ್ತದೆ. ಈ ಅಂಶ ಅನೇಕ ನೈಟ್ ಶಿಫ್ಟ್ ಉದ್ಯೋಗಿಗಳ ಅಧ್ಯಯನದಲ್ಲೂ ಸಾಬೀತಾಗಿದೆ. ಈ ಗುಂಪಿನ ಜನರಲ್ಲಿ ಒತ್ತಡ, ಸ್ಥೂಲಕಾಯ, ಅರಿವಿನ ಕೊರತೆ ಮತ್ತು ನರ ಸಂಬಂಧಿತ ರೋಗದ ಅಪಾಯವನ್ನು ಕಾಣಬಹುದು ಎಂದಿದ್ದಾರೆ.
ಮೆದುಳಿನ ಪ್ರೋಟಿನ್ ತ್ಯಾಜ್ಯ ಉತ್ಪಾದನೆಯನ್ನು ಶುಚಿಗೊಳಿಸುವ ಗ್ಲೆಂಫೋಟಿಕ್ ವ್ಯವಸ್ಥೆಯು ನಿದ್ರೆ ಸಮಯದಲ್ಲಿ ಹೆಚ್ಚು ಕ್ರಿಯಾಶೀಲವಾಗಿರುತ್ತದೆ. ಈ ಹಿನ್ನೆಲೆ ನಿದ್ರೆ ನಷ್ಟ ಉಂಟಾದಾಗ, ಈ ಗ್ಲೆಂಫೋಟಿಕ್ ವ್ಯವಸ್ಥೆ ವೈಫಲ್ಯ ಎದುರಿಸುವ ಜೊತೆಗೆ ಡೆಮನ್ಶಿಯಾ ಅಪಾಯವನ್ನು ಹೆಚ್ಚಿಸುತ್ತದೆ ಎಂದು ವೈದ್ಯರು ವಿವರಿಸಿದ್ದಾರೆ.
ಡೆಮನ್ಶಿಯಾ ಬೆಳವಣಿಗೆ ಸಾಮಾನ್ಯ ಮಾರ್ಗ ಎಂದರೆ ಗ್ಲೆಂಫೋಟಿಕ್ ವೈಫಲ್ಯವಾಗಿದೆ, ಗ್ಲೆಂಫೋಟಿಕ್ ವ್ಯವಸ್ಥೆಯ ವೈಫಲ್ಯ ಅಥವಾ ಕುಗ್ಗುವಿಕೆಯಿಂದ ಮೆದುಳಿನ ಅನೇಕ ಭಾಗದಲ್ಲಿ ಅಸಮಾನ್ಯ ಪ್ರೋಟಿನ್ಗಳು ಸಂಗ್ರಹವಾಗುತ್ತವೆ. ಇದು ಅಲ್ಝೈಮರ್ನಂತಹ ಅನೇಕ ನರಗಳ ಅಭಿವೃದ್ಧಿ ಸಮಸ್ಯೆಗೆ ಕಾರಣವಾಗುತ್ತದೆ.
ಕಳಪೆ ನಿದ್ರೆ ಗುಣಮಟ್ಟದ ಹೊರತಾಗಿ, ವಯಸ್ಸು, ಜಡತ್ವದ ಜೀವನಶೈಲಿ, ಹೃದಯರಕ್ತನಾಳಸ ಸಮಸ್ಯೆ, ಸ್ಥೂಲಕಾಯ, ಸ್ಲೀಪ್ ಅಪ್ನಿಯಾ, ಸಿಕ್ರಾಡಿಯನ್ ಅಸಮತೋಲನ, ಖಿನ್ನತೆಯು ಈ ಗ್ಲೈಂಫೋಟಿಕ್ ವ್ಯವಸ್ಥೆಯ ವೈಫಲ್ಯದಿಂದ ಉಂಟಾಗುತ್ತದೆ.
ಉತ್ತಮ ನಿದ್ರೆ ಮಾಡುವವರ ಜೀವಿತಾವಧಿ ದೀರ್ಘಕಾಲವಾಗಿದ್ದು, ತೂಕ ನಿರ್ವಹಣೆ ಮಾಡಿ, ಮಾನೋವೈಜ್ಞಾನಿಕ ಸಮಸ್ಯೆ ಕಡಿಮೆ ಮಾಡುತ್ತದೆ. ಅಲ್ಲದೇ ನೆನಪಿನ ಶಕ್ತಿ ದೀರ್ಘವಾಗಿರುವಂತೆ ನೋಡಿಕೊಳ್ಳುತ್ತದೆ. ರಾತ್ರಿಯಲ್ಲಿ ಉತ್ತಮ ನಿದ್ರೆ ಅಭ್ಯಾಸವು ಅರಿವಿನ ಕಾರ್ಯ ಉತ್ತಮಗೊಳಿಸಲು ಸಹಾಯ ಮಾಡುತ್ತದೆ. ಜೊತೆಗೆ ಡೆಮನ್ಶಿಯಾ ಮತ್ತು ಮನೋವೈದ್ಯಕೀಯ ಅಸ್ವಸ್ಥತೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ. (ಐಎಎನ್ಎಸ್)
ಇದನ್ನೂ ಓದಿ: ಮಹಿಳೆಯರಿಗೆ ಬೇಕು ಪುರುಷರಿಗಿಂತ ಹೆಚ್ಚು ನಿದ್ರೆ; ಕಾರಣ ಇಷ್ಟೆ