ಹೈದರಾಬಾದ್: ಇತ್ತೀಚಿನ ದಿನಗಳಲ್ಲಿ ಜೀವನಶೈಲಿ ಆಧಾರಿತ ಸಮಸ್ಯೆಗಳು, ಕಾಯಿಲೆಗಳು ಸಾಮಾನ್ಯ ಎನ್ನುವಂತಾಗಿದೆ. ಈ ನಡುವೆ ದೈಹಿಕ ಚಟುವಟಿಕೆಗಳಿಂದಲೂ ಅಂತರ ಕಾಯ್ದುಕೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಇನ್ಮುಂದೆ ಹತ್ತಿರದ ಪ್ರಯಾಣಕ್ಕೆ ಕಾರು, ಬೈಕ್, ಬಸ್ ಬದಲಾಗಿ ನಿತ್ಯ ಸೈಕಲ್ನಲ್ಲಿ ಪ್ರಯಾಣಿಸುವುದರಿಂದ ಪರಿಸರಕ್ಕೆ ಮಾತ್ರವಲ್ಲ ಆರೋಗ್ಯಕ್ಕೂ ಲಾಭವಿದೆ.
ಹೃದಯದ ಫಿಟ್ನೆಸ್ ಕಾಪಾಡಲು ಸಹಾಯ: ಹೃದಯದ ಆರೋಗ್ಯ ಕಾಪಾಡುವಲ್ಲಿ ಸೈಕಲ್ ಸವಾರಿ ಭಾರಿ ಪ್ರಯೋಜನವನ್ನ ನೀಡಲಿದೆ. ಸೈಕ್ಲಿಂಗ್ ಮಾಡುವುದರಿಂದ ಆಮ್ಲಜನಕದವನ್ನು ದೇಹ ಚೆನ್ನಾಗಿ ತೆಗೆದುಕೊಂಡು ಸ್ನಾಯು ಮತ್ತು ಅಂಗಾಂಗಗಳಿಗೆ ವಿತರಿಸುತ್ತದೆ. ಇದು ಹೃದಯದ ಫಿಟ್‌ನೆಸ್ ಅನ್ನು ಸದೃಢವಾಗಿರುವಂತೆ ಮಾಡುತ್ತದೆ.
ಕೀಲು ನೋವು ಕಡಿಮೆ: ನಿಯಮಿತ ಸೈಕಲ್ ಅಭ್ಯಾಸ ಮಾಡುವುದರಿಂದ ಮಧ್ಯಮ ವಯಸ್ಸಿನಲ್ಲಿ ಮತ್ತು ಹಿರಿಯರಲ್ಲಿ ಕಾಡುವ ಅಸ್ಥಿಸಂಧಿವಾತ, ಕೀಲು ನೋವಿನ ಸಮಸ್ಯೆ ಕಡಿಮೆ ಮಾಡಬಹುದು. ಇದು ಕೀಲಿನ ಬಿಗಿತವನ್ನು ಸುಧಾರಣೆ ಮಾಡಲಿದೆ. ಹಾಗೇ ಕೀಲಿನಲ್ಲಿ ಅನಾನುಕೂಲತೆ ಕಾರ್ಯಾಚರಣೆ ನಿರ್ಬಂಧಿಸುವಂತೆ ಮಾಡುತ್ತದೆ.
ಸರಾಗತೆಗೆ ಉತ್ತಮ ಆಯ್ಕೆ:ಸೈಕಲ್ ತುಳಿಯುವ ಅಭ್ಯಾಸದಿಂದ ವಯಸ್ಸಾದಂತೆ ಸ್ನಾಯು ಮತ್ತು ಮೂಳೆ ದುರ್ಬಲತೆ ದರ ಕಡಿಮೆ ಮಾಡಬಹುದು. ನೇರವಾಗಿ ನಿಲ್ಲಲು ಸಹಾಯ ಮಾಡಬಹುದು, ಕಡಿಮೆ ಅಸ್ವಸ್ಥತೆ ಮತ್ತು ನೋವನ್ನು ಅನುಭವಿಸಬಹುದು, ಗಾಯದ ಅಪಾಯವನ್ನು ಕಡಿಮೆ ಮಾಡಬಹುದು.
ಮಾನಸಿಕ ನೆಮ್ಮದಿ: ಸೈಕಲ್ ಅಭ್ಯಾಸ ದೇಹ ಮತ್ತು ಮನಸನ್ನು ವಿಶ್ರಾಂತಿಗೊಳಿಸುತ್ತದೆ. ಇದು ಕೆಲಸ ಅಥವಾ ಇತರ ಪರಿಸ್ಥಿತಿಗಳ ಒತ್ತಡವನ್ನು ಕಡಿಮೆ ಮಾಡುತ್ತದೆ. ಜೊತೆಗೆ ಆತಂಕದ ಮಟ್ಟವನ್ನು ಕಡಿಮೆ ಮಾಡಿ, ಮಾನಸಿಕ ಆರೋಗ್ಯ ವೃದ್ಧಿಸಲು ಸಹಾಯ ಮಾಡುತ್ತದೆ. ಸೈಕಲ್ ಸವಾರಿಯನ್ನು ಹೆಚ್ಚು ಮಾಡುವವರಲ್ಲಿ ಮಾನಸಿಕ ಆರೋಗ್ಯದ ಅಪಾಯ ಕಡಿಮೆ ಮಟ್ಟದಲ್ಲಿರುವುದು ಕಂಡು ಬಂದಿದೆ.
ತೂಕ ಇಳಿಕೆ: ಸೈಕಲ್ ತುಳಿಯುವಂತಹ ಕಾರ್ಡಿಯೋ ವ್ಯಾಯಾಮಗಳು ದೇಹದ ಕೊಬ್ಬು ಕಡಿಮೆ ಮಾಡಿ, ತೂಕದ ಇಳಿಕೆಗೆ ಸಹಾಯಕವಾಗಿದೆ. ನಿಯಮಿತವಾಗಿ ಒಂದಿಷ್ಟ ಸಮಯದ ಸೈಕಲ್ ಚಾಲನೆಯಿಂದ ಹಲವು ಪ್ರಯೋಜನ ಸಿಗಲಿದೆ. ಇದು ಗಂಟೆಗಳಲ್ಲಿ ಹಲವು ಕ್ಯಾಲೋರಿಗಳನ್ನು ಕರಗುವಂತೆ ಮಾಡುತ್ತದೆ. ತೂಕ ಇಳಿಕೆ ಮಾಡುವವರಿಗೆ ಸೈಕಲ್ ಅಭ್ಯಾಸ ಉತ್ತಮ ಆಯ್ಕೆಯಾಗಲಿದೆ. (ಎಎನ್ಐ)
ಇದನ್ನೂ ಓದಿ: ದೈಹಿಕ ಚಟುವಟಿಕೆಯಿಂದ ದೂರವಿದ್ದಾರೆ ಭಾರತದ ಅರ್ಧಕ್ಕಿಂತ ಹೆಚ್ಚಿನ ಮಂದಿ; ದೇಶಕ್ಕೆ ಕಳವಳದ ವಿಚಾರ!