ಹೈದರಾಬಾದ್: ದೇಹದಲ್ಲಿನ ಅಶುದ್ದತೆ ದೊಡೆದು ಹಾಕುವುದರಿಂದ ಹೊಸ ಚೈತನ್ಯ ಸಿಗುತ್ತದೆ, ಅದಕ್ಕೆ ಏನು ಮಾಡಬೇಕು ಎಂದು ಯೋಚಿಸುತ್ತಿದ್ದರೆ, ಅದುವೇ ಕೊತ್ತಂಬರಿ. ಅಚ್ಚರಿಯಾದರೂ ಹೌದು, ಇದು ದೇಹದಲ್ಲಿ ಉರಿಯೂತ, ಕೈಗಳಲ್ಲಿನ ಸೆಳೆತ, ಹೊಟ್ಟೆಯ ಉಬ್ಬರ ಮತ್ತು ಆಮ್ಲತೆಯನ್ನು ತೊಡೆದು ಹಾಕುತ್ತದೆ.
ಪ್ರತಿನಿತ್ಯ ಅಡುಗೆಗೆ ಕೊತ್ತಂಬರಿಯನ್ನು ಬಳಕೆ ಮಾಡುವುದರಿಂದ ಹಲವು ಆರೋಗ್ಯ ಪ್ರಯೋಜನಗಳಿವೆ. ಸಾಮಾನ್ಯವಾಗಿ ಅಡುಗೆಗೆ ಕೊತ್ತಂಬರಿ ಬೀಜದ ಪುಡಿಗಳನ್ನು ಹೆಚ್ಚಾಗಿ ಬಳಕೆಯ ಮಾಡುತ್ತೇವೆ. ಇದು ಕೇವಲ ಅಡುಗೆ ರುಚಿಯನ್ನು ಮಾತ್ರ ನೀಡುವುದಿಲ್ಲ, ಇದರಲ್ಲಿನ ಆರೋಗ್ಯದ ಗುಣಗಳು, ಆರೋಗ್ಯಕ್ಕೆ ಅನಿರೀಕ್ಷಿತ ಪ್ರಯೋಜನಗಳನ್ನು ನೀಡುತ್ತದೆ.
ಸರಿಯಾದ ಪ್ರಮಾಣದಲ್ಲಿ ಕೊತ್ತಂಬರಿ ಬಳಕೆ ಮಾಡುವುದರಿಂದ ಆರೋಗ್ಯಕ್ಕೆ ಪ್ರಯೋಜನವಾಗಲಿದೆ. ಆದರೆ, ಈ ಕೊತ್ತಂಬರಿಯನ್ನು ದೈನಂದಿನ ಆರೋಗ್ಯ ಪ್ರಯೋಜನಕ್ಕಾಗಿ ಬಳಕೆ ಮಾಡುವ ವಿಧಾನ ಹೇಗೆ ಎಂಬುದು ತಿಳಿಯುವುದು ಅಗತ್ಯವಾಗಿದೆ. ಒಂದು ಬೌಲ್ನಲ್ಲಿ ನೀರು ತುಂಬಿ ಅದಕ್ಕೆ ಎರಡು ಸ್ಪೂನ್ ಕೊತ್ತಂಬರಿ ಬೀಜವನ್ನು ನೆನೆಹಾಕಿ, ರಾತ್ರಿ ಪೂರ್ತಿ ಬಿಡಿ. ಬೆಳಗ್ಗೆ ಎದ್ದಾಕ್ಷಣ ಐದು ನಿಮಿಷ ಈ ನೀರನ್ನು ಕುದಿಸಿ. ಬಳಿಕ ಟೀ ರೀತಿಯಲ್ಲಿ ಶೋಧಿಸಿ.
ಇದರಿಂದ ಆಗುವ ಆರೋಗ್ಯ ಪ್ರಯೋಜನಗಳೇನೇನು:
- ಪ್ರತಿನಿತ್ಯ ಕೊತ್ತಂಬರಿ ಬೀಜದ ರಸವನ್ನು ಸೇವಿಸುವುದರಿಂದ ದೇಹದಲ್ಲಿ ಸಂಗ್ರಹವಾಗಿರುವ ಕೊಲೆಸ್ಟ್ರಾಲ್ ನಿವಾರಣೆ ಮಾಡಬಹುದು.
- ನರದಲ್ಲಿ ಇರುವ ಬ್ಲಾಕೇಜ್ ಅನ್ನು ತೆಗೆದು ಹಾಕಿ, ಹೃದಯದ ಆರೋಗ್ಯ ಸುಧಾರಣೆ ಮಾಡಬಹುದು.
- ಅಧಿಕ ರಕ್ತದೊತ್ತಡ ಸಮಸ್ಯೆ ನಿಯಂತ್ರಣವಾಗುತ್ತದೆ.
- ಕ್ಯಾಲ್ಸಿಯಂ, ಮೆಗ್ನಿಶಿಯಂ, ಕಬ್ಬಿಣ ಮತ್ತು ಪೊಟಾಶಿಯಂನಂತಹ ಪೌಷ್ಠಿಕಾಂಶವನ್ನು ಇದು ಹೊಂದಿದೆ.
- ಇದು ದೇಹಕ್ಕೆ ಸಾಕಷ್ಟು ಪ್ರಮಾಣದ ಕ್ಯಾಲ್ಸಿಯಂ ಅನ್ನು ನೀಡುತ್ತದೆ.
- ದೇಹ ಮೂಳೆಗಳನ್ನು ಬಲವಾಗಿಸುತ್ತದೆ.
- ಸಂಧಿವಾತ ಮತ್ತು ಮಂಡಿ ನೋವನ್ನು ಕಡಿಮೆ ಮಾಡುತ್ತದೆ.
- ರಕ್ತದೊತ್ತಡವನ್ನು ತೆಗೆದು ಹಾಕುತ್ತದೆ. ತ್ವಚೆ ಸಮಸ್ಯೆ ನಿವಾರಣೆ ಮಾಡಿ, ಆರೋಗ್ಯ ಸುಧಾರಣೆ ಮಾಡುತ್ತದೆ.
- ಕೊತ್ತಂಬರಿ ಬೀಜದ ರಸ ಕುಡಿಯುವುದರಿಂದ ಜೀರ್ಣಕ್ರಿಯೆ ಸಮಸ್ಯೆ ನಿವಾರಣೆಯಾಗುತ್ತದೆ.
- ದೇಹದ ಪ್ರತಿರಕ್ಷಣೆಗೆಯನ್ನು ಹೆಚ್ಚಿಸುತ್ತದೆ.
- ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ.
- ಕಣ್ಣಿನ ಆರೋಗ್ಯ ಸುಧಾರಣೆ ಮಾಡುತ್ತದೆ.
ತೂಕ ಇಳಿಕೆಗೆ ಇನ್ನಿಲ್ಲದ ಕಸರತ್ತು ನಡೆಸುವವರು ಕೂಡ ನಿತ್ಯ ಕೊತ್ತಂಬರಿ ರಸವನ್ನು ಸೇವಿಸುವುದರಿಂದ ಉತ್ತಮ ಫಲಿತಾಂಶ ಪಡೆಯಬಹುದು. ಆಯುರ್ವೇದ ತಜ್ಞರು ಹೇಳುವಂತೆ ಪ್ರತಿನಿತ್ಯ ಕೊತ್ತಂಬರಿ ಎಲೆಗಳನ್ನು ಸೇವಿಸುವುದರಿಂದ ಅನೇಕ ಆರೋಗ್ಯ ಸಮಸ್ಯೆ ದೂರ ಮಾಡಬಹುದಾಗಿದೆ.
ಕೊತ್ತಂಬರಿ ಸೊಪ್ಪಿನಿಂದಲೂ ಇದೆ ಪ್ರಯೋಜನ: ಅಡುಗೆ ಅಲಂಕಾರಕ್ಕೆ ಬಳಕೆ ಮಾಡುವ ಕೊತ್ತಂಬರಿ ಸೊಪ್ಪು ಕೂಡ ಹಲವು ಆರೋಗ್ಯಕರ ಪ್ರಯೋಜನವನ್ನು ಹೊಂದಿದೆ. ಇದರಲ್ಲಿ ವಿಟಮಿನ್ ಎ ಮತ್ತು ಸಿ ಸಮೃದ್ಧವಾಗಿದ್ದು, ಇದು ಕ್ಯಾನ್ಸರ್ ಕೋಶವನ್ನು ನಾಶ ಮಾಡುತ್ತದೆ, ಇದರಲ್ಲಿ ಖನಿಜಾಂಶ ಹೆಚ್ಚಿದೆ. ಅದರಲ್ಲೂ ಕಬ್ಬಿಣಾಂಶ ಹೆಚ್ಚಿದ್ದು, ರಕ್ತಹೀನತೆ ತಡೆಯಲು ಸಹಾಯ ಮಾಡುತ್ತದೆ. ಅಜೀರ್ಣ, ಗ್ಯಾಸ್, ದೇಹದಲ್ಲಿನ ಬಿಸಿತಾಪ ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ನಿಮ್ಮ ಗಮನದಲ್ಲಿರಲಿ: ಈ ಲೇಖನದಲ್ಲಿ ನಿಮಗೆ ಒದಗಿಸಲಾದ ಆರೋಗ್ಯ ಮಾಹಿತಿ, ವೈದ್ಯಕೀಯ ಸಲಹೆಗಳು ನಿಮ್ಮ ತಿಳಿವಳಿಕೆಗಾಗಿ ಮಾತ್ರವೇ ನೀಡಲಾಗಿದೆ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ನಾವು ಈ ಮಾಹಿತಿಯನ್ನು ಒದಗಿಸಿದ್ದೇವೆ. ಆದರೆ ಇವುಗಳನ್ನು ಅನುಸರಿಸುವ ಮೊದಲು ಪರಿಣತ ವೈದ್ಯರ ಸಲಹೆಯನ್ನು ತೆಗೆದುಕೊಳ್ಳುವುದು ಉತ್ತಮ.
ಇದನ್ನೂ ಓದಿ: ಕಡಿಮೆ ಉಪ್ಪು ತಿನ್ನಿ ಹಾಳಾದ ಕಿಡ್ನಿ ಮೊದಲಿನಂತೆ ಮಾಡಿಕೊಳ್ಳಿ: ವೈದ್ಯರ ಸಂಶೋಧನೆಯಲ್ಲಿ ಬಹಿರಂಗ