ಹೈದರಾಬಾದ್: ಅನೇಕ ಜನರು ಚಿಕನ್ ಅನ್ನು ಅದ್ಭುತವಾಗಿ ಕರ್ರಿ ಮಾಡಬಹದು. ಅದ್ಭುತ ರುಚಿಯನ್ನು ತರಬಹುದು. ಆದರೆ, ಚಿಕನ್ಗೆ ಸಂಬಂಧಿಸಿದ ಬೇರೆ ವಿಷಯಗಳು ಅವರಿಗೆ ಗೊತ್ತಿರಲಿಕ್ಕಿಲ್ಲ. ಅಂತಹ ಒಂದು ವಿಷಯವೆಂದರೆ ಚಿಕನ್ ಕ್ಲೀನಿಂಗ್. ಹೆಚ್ಚಿನ ಜನರು ಅಡುಗೆ ಮಾಡುವ ಮೊದಲು ಚಿಕನ್ ಅನ್ನು ತೊಳೆಯುತ್ತಾರೆ. ಆದರೆ ಹೀಗೆ ತೊಳೆಯುವುದು ಆರೋಗ್ಯಕ್ಕೆ ಒಳ್ಳೆಯದಲ್ಲ ಎನ್ನುತ್ತಾರೆ ತಜ್ಞರು. ಅಲ್ಲದೆ "ದಿ ಕಾನ್ವರ್ಸೇಶನ್" ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ಅಡುಗೆ ಮಾಡುವ ಮೊದಲು ಚಿಕನ್ ಅನ್ನು ಸ್ವಚ್ಛಗೊಳಿಸಬಾರದಂತೆ.
ಚಿಕನ್ ಅನ್ನು ಏಕೆ ಸ್ವಚ್ಛಗೊಳಿಸಬಾರದು?: ಚಿಕನ್ನಲ್ಲಿ ಹಾನಿಕಾರಕ ಸೂಕ್ಷ್ಮಜೀವಿಗಳಿವೆ ಎಂಬುದು ನಿಜ. ಆದರೆ ಅಡುಗೆ ಮಾಡುವ ಮುನ್ನ ಕೋಳಿ ತುಂಡುಗಳನ್ನು ತೊಳೆದರೆ ಆ ಬ್ಯಾಕ್ಟೀರಿಯಾ ಹೋಗುವುದಿಲ್ಲ ಎನ್ನುತ್ತಾರೆ ಸಂಶೋಧಕರು. ಕೋಳಿ ಸಾಮಾನ್ಯವಾಗಿ ಸಾಲ್ಮೊನೆಲ್ಲಾ ಮತ್ತು ಕ್ಯಾಂಪಿಲೋಬ್ಯಾಕ್ಟರ್ ನಂತಹ ಬ್ಯಾಕ್ಟೀರಿಯಾಗಳನ್ನು ಹೊಂದಿರುತ್ತದೆ. ಇವು ಗಂಭೀರ ಕಾಯಿಲೆಗಳಿಗೆ ಕಾರಣವಾಗಬಹುದು. ಸೋಂಕುಗಳು, ಜ್ವರ, ವಾಂತಿ ಮತ್ತು ಅತಿಸಾರವು ತೊಡಕುಗಳನ್ನು ಉಂಟುಮಾಡಬಹುದು. ಮಕ್ಕಳು, ವೃದ್ಧರು ಮತ್ತು ಗರ್ಭಿಣಿಯರ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ದುರ್ಬಲಗೊಂಡ ರೋಗನಿರೋಧಕ ಶಕ್ತಿ ಹೊಂದಿರುವ ಜನರು ಅನಾರೋಗ್ಯಕ್ಕೆ ಒಳಗಾಗುತ್ತಾರೆ ಎನ್ನತ್ತದೆ ವರದಿ.
ಕೆಲವೊಮ್ಮೆ ಸಾಲ್ಮೊನೆಲ್ಲಾ ಮತ್ತು ಕ್ಯಾಂಪಿಲೋಬ್ಯಾಕ್ಟರ್‌ನಿಂದ ಉಂಟಾಗುವ ಗಂಭೀರ ಸೋಂಕುಗಳಿಗೆ ಆಸ್ಪತ್ರೆಗೆ ದಾಖಲಾಗುವ ಅಗತ್ಯವಿರುತ್ತದೆ. ಕೆಲವು ಪ್ರಕರಣಗಳಲ್ಲಿ ಸಾವು ಸಂಭವಿಸಿದರೂ ಆಶ್ಚರ್ಯವಿಲ್ಲ ಎನ್ನುತ್ತದೆ ವರದಿ. ಇಂತಹ ಬ್ಯಾಕ್ಟೀರಿಯಾಗಳಿರುವ ಕೋಳಿಯನ್ನು ಅಡುಗೆ ಮನೆಯಿಂದ ಹೊರತೆಗೆದು ಕೈಗಳಿಂದ ಸ್ವಚ್ಛಗೊಳಿಸಿದರೆ ಈ ಬ್ಯಾಕ್ಟೀರಿಯಾ ಎಲ್ಲೆಂದರಲ್ಲಿ ಅಂಟಿಕೊಳ್ಳುತ್ತದೆ. ನಾವು ಕೋಳಿಯನ್ನು ಹಿಡಿದರೆ, ಅದೇ ಕೈಯಿಂದ ಇತರ ವಸ್ತುಗಳನ್ನು ಮುಟ್ಟಬಹುದು. ಅದರೊಂದಿಗೆ.. ಇವೆಲ್ಲಕ್ಕೂ ಬ್ಯಾಕ್ಟೀರಿಯಾ ಅಂಟಿಕೊಳ್ಳುತ್ತದೆ. ಅಲ್ಲದೆ ಅಡುಗೆ ಕೋಣೆ ಪೂರ್ತಿ ಹರಡುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಬ್ಯಾಕ್ಟೀರಿಯಾಗಳು ಕಣ್ಣು, ಮೂಗು ಮತ್ತು ಬಾಯಿಯ ಮೂಲಕ ದೇಹವನ್ನು ಪ್ರವೇಶಿಸುವ ಸಾಧ್ಯತೆಯಿದೆ ಎಂದು ಸಂಶೋಧಕರು ಎಚ್ಚರಿಸಿದ್ದಾರೆ. ಹಾಗಾಗಿ.. ಚಿಕನ್ ಅನ್ನು ತೊಳೆಯದೆ ಬೇಯಿಸಲು ಸೂಚಿಸಲಾಗುತ್ತದೆ.
ಇಲ್ಲಿ ಹಲವರಿಗೆ ಬರುವ ಸಂದೇಹವೇನೆಂದರೆ.. ತೊಳೆಯದೇ ಬೇಯಿಸಿದರೆ ಅದರಲ್ಲಿರುವ ಬ್ಯಾಕ್ಟೀರಿಯಾಗಳ ಸ್ಥಿತಿ ಏನು? ಇದನ್ನು ತಿಂದರೆ ನೇರವಾಗಿ ದೇಹಕ್ಕೆ ಸೇರುತ್ತದೆ ಎಂದು ಭಾವಿಸುತ್ತಾರೆ. ಆದರೆ, ಈ ವಿಚಾರದಲ್ಲಿ ಆತಂಕ ಪಡುವ ಅಗತ್ಯವಿಲ್ಲ ಅಂತಾರೆ ತಜ್ಞರು. ನಾವು ಅಡುಗೆ ಮಾಡುವ ಶಾಖವು ತುಂಬಾ ಹೆಚ್ಚಾಗಿದೆ. ಹಾಗಾಗಿ.. ಅಂತಹ ಶಾಖದಲ್ಲಿ ಯಾವುದೇ ಬ್ಯಾಕ್ಟೀರಿಯಾಗಳು ಬದುಕಲು ಸಾಧ್ಯವಿಲ್ಲ. ಆದ್ದರಿಂದ ಚಿಕನ್ ಅನ್ನು ಯಾವುದೇ ಒತ್ತಡವಿಲ್ಲದೆ ನೇರವಾಗಿ ಬೇಯಿಸಬಹುದು ಎಂದು ಸಲಹೆ ನೀಡಲಾಗುತ್ತದೆ. ಚಿಕನ್ ಅಡುಗೆ ಮಾಡುವಾಗ ಮೂಗು ಮತ್ತು ಮುಖದ ಮೇಲೆ ಕೈ ಹಾಕಬೇಡಿ ಎನ್ನುತ್ತಾರೆ. ಅಡುಗೆ ಮುಗಿದ ನಂತರ ಕೈ ಮತ್ತು ಬಟ್ಟಲುಗಳನ್ನು ಸಾಬೂನಿನಿಂದ ಸ್ವಚ್ಛಗೊಳಿಸಲು ಸೂಚಿಸಲಾಗುತ್ತದೆ.
ಓದಿ: ಎಚ್ಚರ! ಕೆಮ್ಮಿನಂತಹ ಸಾಮಾನ್ಯ ಲಕ್ಷಣ ಇಲ್ಲದೆಯೂ ಕಾಣಿಸಿಕೊಳ್ಳುತ್ತಿದೆ ಕ್ಷಯರೋಗ