ETV Bharat / health

ಕೋವಿಡ್ ಜಗತ್ತಿಗೆ ತಿಳಿಯುವ 2 ವಾರ ಮೊದಲೇ ಚೀನಾ ಸಂಶೋಧಕರಿಗೆ ಗೊತ್ತಾಗಿತ್ತು: ವರದಿ - ಚೀನಾ ಸಂಶೋಧಕ

ಕೋವಿಡ್ -19 ವೈರಸ್ ಕುರಿತು ಚೀನಾದ ಅಧಿಕಾರಿಗಳು ವುಹಾನ್​ನಲ್ಲಿ ರೋಗ ಹರಡುವಿಕೆಯನ್ನು "ಅಪರಿಚಿತ ವೈರಲ್ ನ್ಯುಮೋನಿಯಾ" ಎಂದು ಸಾರ್ವಜನಿಕವಾಗಿ ವಿವರಿಸುತ್ತಿದ್ದರು ಎಂದು ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ.

Covid
ಕೋವಿಡ್
author img

By ETV Bharat Karnataka Team

Published : Jan 19, 2024, 11:09 PM IST

ನ್ಯೂಯಾರ್ಕ್ (ಅಮೆರಿಕ): ಕೋವಿಡ್ -19 ವೈರಸ್ ತನ್ನ ದೇಶದಲ್ಲಿ ಹರಡುತ್ತಿದೆ ಎಂಬುದನ್ನು ಚೀನಾ ವಿಶ್ವಕ್ಕೆ ತಿಳಿಸುವ ಎರಡು ವಾರಗಳ ಮುಂಚೆಯೇ, ಅದರ ವಿಜ್ಞಾನಿಗಳು SARS-CoV-2 ವೈರಸ್ ಅನ್ನು ಪತ್ತೆ ಮಾಡಿದ್ದರು ಎಂದು ಮಾಧ್ಯಮ ವರದಿಗಳು ತಿಳಿಸಿವೆ.

ಅಮೆರಿಕ ಡಿಪಾರ್ಟ್ಮೆಂಟ್ ಆಫ್ ಹೆಲ್ತ್ ಅಂಡ್ ಹ್ಯೂಮನ್ ಸರ್ವೀಸಸ್ (ಎಚ್ಎಚ್ಎಸ್)ನ ಫೆಡರಲ್ ದಾಖಲೆಗಳನ್ನು ಆಧರಿಸಿದ ಮತ್ತು ಯುಎಸ್ ಕಾಂಗ್ರೆಸ್ ಸಮಿತಿಯೊಂದಿಗೆ ಹಂಚಿಕೊಂಡ ಈ ವರದಿಗಳು ವೈರಸ್ ಬಗ್ಗೆ ಚೀನಾದ ಪಾರದರ್ಶಕತೆಯ ಬಗ್ಗೆ ಅನುಮಾನ ಮೂಡಿಸಿವೆ. ವೈರಸ್ ಬಗ್ಗೆ ಚೀನಾಕ್ಕೆ ಯಾವಾಗಿನಿಂದ ಎಷ್ಟು ತಿಳಿದಿದೆ ಮತ್ತು ವೈರಸ್ ವಿರುದ್ಧ ಹೋರಾಡಲು ಪರೀಕ್ಷೆಗಳು ಮತ್ತು ಚಿಕಿತ್ಸೆ ಅಭಿವೃದ್ಧಿಪಡಿಸಲು ಕಳೆದುಹೋದ ಸಮಯ ಎಷ್ಟು ಎಂಬ ಪ್ರಶ್ನೆಗಳನ್ನು ಹುಟ್ಟು ಹಾಕಿದೆ.

ಬೀಜಿಂಗ್ ನಲ್ಲಿರುವ ಚೀನಾದ ಸಂಶೋಧಕರು 2019 ರ ಡಿಸೆಂಬರ್ ನಲ್ಲಿ ಯುಎಸ್ ಸರ್ಕಾರದ ಒಡೆತನದ ಡೇಟಾಬೇಸ್ ಗೆ ವೈರಸ್ ನ ರಚನೆಯ ಅಪೂರ್ಣ ಅನುಕ್ರಮವನ್ನು ಅಪ್ಲೋಡ್ ಮಾಡಿದ್ದಾರೆ ಎಂದು ಅಮೆರಿಕ ಕಾಂಗ್ರೆಸ್ ತನಿಖಾಧಿಕಾರಿಗಳು ಹೇಳಿದ್ದಾರೆ. ಈ ಅವಧಿಯಲ್ಲಿ ಚೀನಾದ ಅಧಿಕಾರಿಗಳು ವುಹಾನ್ ನಲ್ಲಿ ರೋಗ ಹರಡುವಿಕೆಯನ್ನು "ಅಪರಿಚಿತ ವೈರಲ್ ನ್ಯುಮೋನಿಯಾ" ಎಂದು ಸಾರ್ವಜನಿಕವಾಗಿ ವಿವರಿಸುತ್ತಿದ್ದರು ಎಂದು ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ.

ಡಿಸೆಂಬರ್ 28, 2019 ರಂದು, ಬೀಜಿಂಗ್ ನ ಚೈನೀಸ್ ಅಕಾಡೆಮಿ ಆಫ್ ಮೆಡಿಕಲ್ ಸೈನ್ಸಸ್ ನ ಇನ್ಸ್ಟಿಟ್ಯೂಟ್ ಆಫ್ ಪ್ಯಾಥೋಜೆನ್ ಬಯಾಲಜಿಯ ವೈರಾಲಜಿಸ್ಟ್ ಲಿಲಿ ರೆನ್ ಅವರು ಸಾರ್ಸ್-ಕೋವ್-2 ವೈರಸ್ ನ ಆನುವಂಶಿಕ ಅನುಕ್ರಮವನ್ನು ಜೆನ್ ಬ್ಯಾಂಕ್ ಗೆ ಸಲ್ಲಿದ್ದರು. ಜೆನ್ ಬ್ಯಾಂಕ್ ಇದು ಯುಎಸ್ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ (ಎನ್ಐಎಚ್) ಮೇಲ್ವಿಚಾರಣೆ ಮಾಡುವ ಆನುವಂಶಿಕ ಅನುಕ್ರಮಗಳ ಸಾರ್ವಜನಿಕವಾಗಿ ಲಭ್ಯವಿರುವ ಡೇಟಾಬೇಸ್ ಆಗಿದೆ.

ಮೂರು ದಿನಗಳ ನಂತರ ಜೆನ್ ಬ್ಯಾಂಕ್ಗೆ ಸಲ್ಲಿಸಲಾದ ಮಾಹಿತಿ ಅಪೂರ್ಣವಾಗಿದೆ ಮತ್ತು ಸಂಪೂರ್ಣ ಮಾಹಿತಿ ಸಲ್ಲಿಸುವಂತೆ ರೆನ್ ಅವರಿಗೆ ಇಮೇಲ್ ಕಳುಹಿಸಲಾಗಿತ್ತು ಎಂದು ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ. ಜೆನ್ ಬ್ಯಾಂಕ್ ಕೇಳಿದ ಮಾಹಿತಿಗಳನ್ನು ರೆನ್ ಸಲ್ಲಿಸದ ಕಾರಣ, ಅವರ ಜನವರಿ 16, 2020 ರ ವರದಿಯನ್ನು ಜೆನ್ ಬ್ಯಾಂಕ್ನ ಸಂಸ್ಕರಣಾ ಸರದಿಯಿಂದ ಅಳಿಸಲಾಯಿತು. ಚೀನಾದ ಸಂಶೋಧಕರ ಮತ್ತೊಂದು ತಂಡವು ಸಾರ್ಸ್-ಕೋವ್-2 ರ ಬಹುತೇಕ ಒಂದೇ ರೀತಿಯ ಆನುವಂಶಿಕ ಅನುಕ್ರಮವನ್ನು ಜೆನ್ ಬ್ಯಾಂಕ್​​ಗೆ ಸಲ್ಲಿಸಿತ್ತು ಮತ್ತು ಜನವರಿ 12, 2020 ರಂದು ಪ್ರಕಟಿಸಲಾಯಿತು ಎಂದು ಎಚ್ಎಚ್ಎಸ್ ನ ಹಿರಿಯ ಅಧಿಕಾರಿ ಮೆಲಾನಿ ಅನ್ನೆ ಎಗೊರಿನ್ ಹೌಸ್ ಎನರ್ಜಿ ಮತ್ತು ಕಾಮರ್ಸ್ ಕಮಿಟಿ ನಾಯಕರಿಗೆ ಕಳುಹಿಸಿದ ಪತ್ರದಲ್ಲಿ ಬಹಿರಂಗವಾಗಿದೆ ಮತ್ತು ಅದನ್ನು ಬುಧವಾರ ಸಾರ್ವಜನಿಕಗೊಳಿಸಲಾಗಿದೆ.

ದಾಖಲೆಗಳನ್ನು ಪರಿಶೀಲಿಸಿದ ಸಾರ್ವಜನಿಕ ಆರೋಗ್ಯ ತಜ್ಞರ ಪ್ರಕಾರ, ಜಾಗತಿಕ ಆರೋಗ್ಯ ತುರ್ತುಸ್ಥಿತಿಯ ಆರಂಭದಲ್ಲಿ ವೈರಸ್ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಇದು ತಪ್ಪಿಹೋದ ಅವಕಾಶವಾಗಿದೆ ಎಂದು ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.