ETV Bharat / health

ಮಕ್ಕಳಲ್ಲಿ ಮಧುಮೇಹ, ಬೊಜ್ಜಿನ ಸಮಸ್ಯೆ ಪತ್ತೆಗೆ ರಕ್ತ ಪರೀಕ್ಷೆ ಅಭಿವೃದ್ಧಿಪಡಿಸಿದ ಸಂಶೋಧಕರು! - New Type Of Blood Test - NEW TYPE OF BLOOD TEST

New Type Of Blood Test: ಲಂಡನ್‌ನ ಸಂಶೋಧಕರು ಮಕ್ಕಳಿಗೆ ಭವಿಷ್ಯದ ಆರೋಗ್ಯ ಸಮಸ್ಯೆಗಳನ್ನು ಪತ್ತೆ ಮಾಡಲು ರಕ್ತ ಪರೀಕ್ಷೆ ವ್ಯವಸ್ಥೆ ಅಭಿವೃದ್ಧಿಪಡಿಸಿದ್ದಾರೆ. ಈ ಪರೀಕ್ಷೆಗಳ ಮೂಲಕ ಮಧುಮೇಹ ಮತ್ತು ಬೊಜ್ಜಿನ ಸಮಸ್ಯೆಗಳ ಅಪಾಯವನ್ನು ಮೊದಲೇ ಪತ್ತೆ ಹಚ್ಚಲು ಸಾಧ್ಯ ಎಂದು ಸಂಶೋಧಕರು ಹೇಳುತ್ತಾರೆ. ಈ ಕುರಿತು ಸಂಪೂರ್ಣವಾಗಿ ತಿಳಿದುಕೊಳ್ಳೋಣ ಬನ್ನಿ.

DIABETES IN CHILDREN  LIPID TESTS  CHILDREN HEALTH SCREENING TESTS  NEW BLOOD TEST FOR CHILDREN
ಸಾಂದರ್ಭಿಕ ಚಿತ್ರ (ETV Bharat)
author img

By ETV Bharat Health Team

Published : Sep 21, 2024, 7:44 PM IST

Updated : Sep 21, 2024, 8:16 PM IST

New Type Of Blood Test: ಭವಿಷ್ಯದಲ್ಲಿ ಮಕ್ಕಳಲ್ಲಿ ಮಧುಮೇಹದ ಸಾಧ್ಯತೆಯನ್ನು ಗುರುತಿಸಲು ಬ್ರಿಟಿಷ್ ವಿಜ್ಞಾನಿಗಳು ಹೊಸ ರಕ್ತ ಪರೀಕ್ಷೆಯನ್ನು ಅಭಿವೃದ್ಧಿಪಡಿಸಿದ್ದಾರೆ. ಈ ಪರೀಕ್ಷೆಯು ಈಗ ಸ್ಥೂಲಕಾಯಕ್ಕೆ ಸಂಬಂಧಿಸಿದ ಕಾಯಿಲೆಗಳಾದ ಹೃದ್ರೋಗ ಮತ್ತು ಯಕೃತ್ತಿನ ಕಾಯಿಲೆಗಳಿಗೆ ಆರಂಭಿಕ ಎಚ್ಚರಿಕೆಗಳನ್ನು ನೀಡುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ.

ಮಕ್ಕಳ ರಕ್ತದ ಪ್ಲಾಸ್ಮಾವನ್ನು ಪರೀಕ್ಷಿಸಲು ಈಗಾಗಲೇ ಹಲವಾರು ಪರೀಕ್ಷೆಗಳು ಲಭ್ಯವಿವೆ. ಈ ಪರೀಕ್ಷೆಯ ಸಹಾಯದಿಂದ ಮಕ್ಕಳಲ್ಲಿ ಮಧುಮೇಹದ ಆರಂಭಿಕ ಚಿಹ್ನೆಗಳನ್ನು ಕಂಡು ಹಿಡಿಯಬಹುದು ಎಂದು ತಜ್ಞರು ಹೇಳುತ್ತಾರೆ. ವಿಜ್ಞಾನಿಗಳು, ದಶಕಗಳಿಂದ ದೇಹದಲ್ಲಿ ಕೊಬ್ಬಿನಾಮ್ಲಗಳಾಗಿ ಲಿಪಿಡ್​ಗಳ ಬಗ್ಗೆ ಸಂಶೋಧನೆ ನಡೆಸಿದ್ದಾರೆ. ಇವುಗಳಿಂದ ಒಳ್ಳೆಯ ಮತ್ತು ಕೆಟ್ಟ ಕೊಲೆಸ್ಟ್ರಾಲ್ ಎಂದು ವರ್ಗೀಕರಿಸಲಾಗಿದೆ. ಲಿಪಿಡ್‌ಗಳನ್ನು ಆಳವಾಗಿ ಗಮನಿಸಿದ ವಿಜ್ಞಾನಿಗಳು ಅವುಗಳ ರಚನೆಗಳು ಹೆಚ್ಚು ಸಂಕೀರ್ಣವಾಗಿವೆ ಎಂದು ಕಂಡು ಹಿಡಿದಿದ್ದಾರೆ.

ಮಾಸ್ ಸ್ಪೆಕ್ಟ್ರೋಮೆಟ್ರಿಯಿಂದ ವಿಶ್ಲೇಷಿಸಿದಾಗ ಸಂಶೋಧಕರು ದೇಹದಲ್ಲಿ ಸಾವಿರಾರು ಲಿಪಿಡ್‌ಗಳನ್ನು ಗುರುತಿಸಿದ್ದಾರೆ. ಪ್ರತಿಯೊಂದಕ್ಕೂ ವಿಭಿನ್ನ ಪಾತ್ರವಿದೆ ಎಂದು ತೀರ್ಮಾನಿಸಲಾಯಿತು. ಅವುಗಳನ್ನು ವಿಸ್ತೃತವಾಗಿ ವಿಶ್ಲೇಷಿಸುವ ಮೂಲಕ ಸ್ಥೂಲಕಾಯಕ್ಕೆ ಸಂಬಂಧಿಸಿದ ಕಾಯಿಲೆಗಳ ಮುನ್ನೆಚ್ಚರಿಕೆಯ ಲಕ್ಷಣಗಳನ್ನು ಪತ್ತೆ ಹಚ್ಚಬಹುದು ಎಂದು ವಿಜ್ಞಾನಿಗಳು ವಿವರಿಸಿದ್ದಾರೆ.

"ಈ ಸಂಶೋಧನೆಯು ಭವಿಷ್ಯದಲ್ಲಿ ವ್ಯಕ್ತಿಯ ರೋಗದ ಅಪಾಯ ಊಹಿಸಲು ಉಪಯುಕ್ತವಾಗಿದೆ. ದೇಹದಲ್ಲಿ ಲಿಪಿಡ್ ಅಣುಗಳು ಹೇಗೆ ಬದಲಾಗುತ್ತವೆ ಎಂಬುದನ್ನು ಅಧ್ಯಯನ ಮಾಡುವ ಮೂಲಕ, ಮಧುಮೇಹ ಮತ್ತು ಸ್ಥೂಲಕಾಯತೆ ಪತ್ತೆಹಚ್ಚಬಹುದು ಮತ್ತು ತಡೆಗಟ್ಟಬಹುದು" ಎಂದು ಡಾ. ಕ್ರಿಸ್ಟಿನಾ ಲೆಗಿಡೋ- ಕ್ವಿಗ್ಲೆ ಹೇಳಿದ್ದಾರೆ.

1,300 ಮಕ್ಕಳ ಮೇಲೆ ಸಂಶೋಧನೆ: ಈ ಸಂಶೋಧನೆಯ ಭಾಗವಾಗಿ, ವಿಜ್ಞಾನಿಗಳು ಬೊಜ್ಜು ಹೊಂದಿರುವ ಸುಮಾರು 1,300 ಮಕ್ಕಳನ್ನು ಪರಿಗಣನೆಗೆ ತೆಗೆದುಕೊಂಡಿದ್ದರು. ಅವರ ರಕ್ತದ ಲಿಪಿಡ್‌ಗಳನ್ನು ನಿಕಟವಾಗಿ ವಿಶ್ಲೇಷಿಸಲಾಗಿದೆ. ಅವರಲ್ಲಿ 200 ಮಂದಿಯನ್ನು ಒಂದು ವರ್ಷದವರೆಗೆ 'ಹೋಲ್ಬೆಕ್ ಮಾಡೆಲ್' ಎಂಬ ಜೀವನ ಶೈಲಿಯಲ್ಲಿ ಇರಿಸಲಾಯಿತು. ಸ್ಥೂಲಕಾಯತೆಗೆ ಚಿಕಿತ್ಸೆ ನೀಡಲು ಡೆನ್ಮಾರ್ಕ್‌ನಲ್ಲಿ ಇದನ್ನು ವ್ಯಾಪಕವಾಗಿ ಸೂಚಿಸಲಾಗುತ್ತದೆ.

ನಂತರ, ಈ ಮಕ್ಕಳನ್ನು ಪರೀಕ್ಷಿಸಿದಾಗ, ಮಧುಮೇಹ ಮತ್ತು ಇನ್ಸುಲಿನ್ ಪ್ರತಿರೋಧದ ಅಪಾಯದ ಜೊತೆಗೆ ಅಧಿಕ ರಕ್ತದೊತ್ತಡಕ್ಕೆ ಸಂಬಂಧಿಸಿದ ಲಿಪಿಡ್​ಗಳ ಸಂಖ್ಯೆಯು ಕಡಿಮೆಯಾಗಿದೆ ಎಂದು ಅವರು ಕಂಡುಕೊಂಡರು. ಅವರ ದೇಹದ ಎತ್ತರ ತೂಕ ಅನುಪಾತ ಸೂಚ್ಯಂಕದಲ್ಲಿ (BMI) ಸ್ವಲ್ಪ ಸುಧಾರಣೆಯ ಹೊರತಾಗಿಯೂ ಈ ಫಲಿತಾಂಶವು ಲಭಿಸಿದೆ ಎಂದು ಸಂಶೋಧಕರು ಹೇಳಿದ್ದಾರೆ.

ಓದುಗರಿಗೆ ಮುಖ್ಯ ಸೂಚನೆ: ಇಲ್ಲಿ ನಿಮಗೆ ನೀಡಿರುವ ಎಲ್ಲ ಆರೋಗ್ಯ ಮಾಹಿತಿ ಮತ್ತು ಸಲಹೆಗಳು ನಿಮ್ಮ ತಿಳುವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ನಾವು ಈ ಮಾಹಿತಿಯನ್ನು ನಿಮಗೆ ನೀಡಿದ್ದೇವೆ. ಆದರೆ, ಇವುಗಳನ್ನು ಅನುಸರಿಸುವ ಮೊದಲು ಪರಿಣತರ ಸಲಹೆಯನ್ನು ತೆಗೆದುಕೊಳ್ಳುವುದು ಉತ್ತಮ.

ಇದನ್ನೂ ಓದಿ:

Last Updated : Sep 21, 2024, 8:16 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.