ETV Bharat / health

ಗರ್ಭನಿರೋಧಕ ಮಾತ್ರೆಗಳು ಎಷ್ಟು ಅಪಾಯಕಾರಿ?: ಸಂಶೋಧನೆಯಲ್ಲಿ ಬಯಲಾಯ್ತು ಶಾಕಿಂಗ್ ಸತ್ಯ.. ಬಳಸುವ ಮುನ್ನ ಯೋಚಿಸಿ! - Contraceptive Pills Side Effects

Contraceptive Pills Side Effects: ಗರ್ಭನಿರೋಧಕ ಮಾತ್ರೆಗಳನ್ನು ಸೇವಿಸುವುದರಿಂದ ಏನೆಲ್ಲ ಅಪಾಯಗಳಿವೆ ಮತ್ತು ಅಡ್ಡಪರಿಣಾಮಗಳಿವೆ ಹಾಗೂ ಇದರ ಬಗ್ಗೆ ಸಂಶೋಧನೆ ಏನು ಹೇಳುತ್ತದೆ ಎಂಬ ಮಾಹಿತಿ ಇಲ್ಲಿದೆ.

ಗರ್ಭನಿರೋಧಕ ಮಾತ್ರೆಗಳ ಅಡ್ಡಪರಿಣಾಮ
ಗರ್ಭನಿರೋಧಕ ಮಾತ್ರೆಗಳ ಅಡ್ಡಪರಿಣಾಮ (ETV Bharat)
author img

By ETV Bharat Karnataka Team

Published : Jun 20, 2024, 11:22 AM IST

Does Contraceptive Pills Increase Blood Pressure: ಮದುವೆಯಾದ ತಕ್ಷಣ ಕೆಲವರಿಗೆ ಮಕ್ಕಳು ಬೇಡ ಎನಿಸುತ್ತದೆ. ಅಂತಹವರು ಆಕಸ್ಮಿಕ ಗರ್ಭಪಾತವನ್ನು ತಪ್ಪಿಸಲು ಗರ್ಭನಿರೋಧಕ ಮಾತ್ರೆಗಳನ್ನು ಬಳಸುತ್ತಾರೆ. ಇನ್ನೂ ಕೆಲವರು ಮೊದಲ ಮತ್ತು ಎರಡನೇ ಗರ್ಭಧಾರಣೆ ನಡುವೆ ಅಂತರ ಹೊಂದಲು ಗರ್ಭನಿರೋಧಕ ಮಾತ್ರೆಗಳನ್ನು ಬಳಸುತ್ತಾರೆ. ಇತ್ತೀಚಿನ ದಿನಗಳಲ್ಲಿ ಈ ಮಾತ್ರೆಗಳ ಬಳಕೆ ಹೆಚ್ಚಾಗಿದೆ. ಆದರೆ, ಕೆಲವರಲ್ಲಿ ಇವುಗಳ ಬಳಕೆಯಿಂದ ಅನೇಕ ಅಡ್ಡ ಪರಿಣಾಮಗಳು ಉಂಟಾಗಬಹುದು ಎಂದು ತಜ್ಞರು ಸೂಚಿಸುತ್ತಾರೆ.

ಸಾಮಾನ್ಯವಾಗಿ, ತಜ್ಞರು ಎರಡು ರೀತಿಯ ಗರ್ಭನಿರೋಧಕ ಮಾತ್ರೆಗಳಿವೆ ಎಂದು ಹೇಳುತ್ತಾರೆ. ಅವುಗಳಲ್ಲಿ ಒಂದು ಈಸ್ಟ್ರೊಜೆನ್ ಮತ್ತು ಪ್ರೊಜೆಸ್ಟರಾನ್ ಎಂಬ ಎರಡು ವಿಧಗಳಿವೆ. ಇವುಗಳಲ್ಲಿ ನೀವು ಯಾವುದನ್ನು ಆಯ್ಕೆ ಮಾಡಿಕೊಳ್ಳುತ್ತೀರಿ ಎನ್ನುವುದರ ಮೇಲೆ ಅಡ್ಡ ಪರಿಣಾಮಗಳು ಅವಲಂಬಿತವಾಗುತ್ತವೆ ಎನ್ನುತ್ತಾರೆ ತಜ್ಞರು. ಈಸ್ಟ್ರೋಜನ್ ಮಾತ್ರೆಗಳ ಬಳಕೆಯಿಂದ ಕೆಲವರಲ್ಲಿ ಬಿಪಿ ಹೆಚ್ಚಾಗಬಹುದು. ಆದ್ದರಿಂದ, ಮೊದಲೇ ಬಿಪಿಯಿಂದ ಬಳಲುತ್ತಿರುವವರು ಅಥವಾ ಇಲ್ಲದಿದ್ದರೂ ಈಸ್ಟ್ರೊಜೆನ್ ಮತ್ತು ಪ್ರೊಜೆಸ್ಟರಾನ್​ ಕಾಂಬಿನೇಷನ್​ನ ಮಾತ್ರೆಗಳಿಂದ ದೂರವಿರಲು ವೈದ್ಯರು ತಿಳಿಸುತ್ತಾರೆ.

ಬದಲಾಗಿ, ಪ್ರೊಜೆಸ್ಟರಾನ್ ಮಾತ್ರೆಗಳನ್ನು ಬಳಸುವುದು ಸ್ವಲ್ಪಮಟ್ಟಿಗೆ ಉತ್ತಮವಾಗಿದೆ ಎಂದು ಸೂಚಿಸಲಾಗುತ್ತದೆ. ಹಾಗಂತ ಇವು ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳಲಾಗಲ್ಲ! ಇವುಗಳನ್ನು ಬಳಸುವ ಮುನ್ನ ವೈದ್ಯರನ್ನು ಸಂಪರ್ಕಿಸಿ ನಂತರ ನಿರ್ಧಾರ ತೆಗೆದುಕೊಳ್ಳುವುದು ಉತ್ತಮ ಎಂದು ಹೇಳಲಾಗುತ್ತದೆ. ಆದಾಗ್ಯೂ, ಗರ್ಭನಿರೋಧಕ ಮಾತ್ರೆಗಳನ್ನು ಬಳಸುವಾಗ ಹಲವಾರು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಬಹಳ ಮುಖ್ಯ ಎಂಬುದು ನೆನಪಿನಲ್ಲಿಡಬೇಕು.

2020 ರಲ್ಲಿ ವೈದ್ಯಕೀಯ ಜರ್ನಲ್ 'ದಿ ಲ್ಯಾನ್ಸೆಟ್' ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಈಸ್ಟ್ರೊಜೆನ್ ಹೊಂದಿರುವ ಗರ್ಭನಿರೋಧಕ ಮಾತ್ರೆಗಳನ್ನು ಬಳಸುವ ಮಹಿಳೆಯರಲ್ಲಿ ಸಿಸ್ಟೊಲಿಕ್ ರಕ್ತದೊತ್ತಡವು 2 mmHg ಮತ್ತು ಡಯಾಸ್ಟೊಲಿಕ್ ರಕ್ತದೊತ್ತಡ 1 mmHg ನಷ್ಟು ಹೆಚ್ಚಾಗಿದೆ. ಯುರೋಪಿಯನ್ ಸೆಂಟರ್ ಫಾರ್ ಡಿಸೀಸ್ ಪ್ರಿವೆನ್ಷನ್ ಅಂಡ್ ಕಂಟ್ರೋಲ್ (ECDC)ನ ಹಿರಿಯ ವಿಜ್ಞಾನಿ ಡಾ. ಗೆರ್ಟ್ ಡ್ಯುರೆನ್‌ಬರ್ಗ್ ಸಂಶೋಧನೆಯಲ್ಲಿ ಭಾಗವಹಿಸಿದ್ದರು. ಈಸ್ಟ್ರೊಜೆನ್ ಹೊಂದಿರುವ ಜನನ ನಿಯಂತ್ರಣ ಮಾತ್ರೆಗಳನ್ನು ಬಳಸುವ ಮಹಿಳೆಯರು ಅಧಿಕ ರಕ್ತದೊತ್ತಡವನ್ನು ಹೊಂದಿರುತ್ತಾರೆ ಎಂದು ಸಂಶೋಧನೆಯಲ್ಲಿ ಕಂಡು ಬಂದಿದೆ.

ವಿಶೇಷ ಸೂಚನೆ: ಇಲ್ಲಿ ನಿಮಗೆ ನೀಡಲಾದ ಎಲ್ಲ ಆರೋಗ್ಯ ಮಾಹಿತಿ ಮತ್ತು ಸೂಚನೆಗಳು ನಿಮ್ಮ ಮಾಹಿತಿಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ನಾವು ಈ ಮಾಹಿತಿಯನ್ನು ಒದಗಿಸುತ್ತಿದ್ದೇವೆ. ಆದರೆ, ಇವುಗಳನ್ನು ಅನುಸರಿಸುವ ಮೊದಲು ವೈದ್ಯರ ಸಲಹೆಯನ್ನು ತೆಗೆದುಕೊಳ್ಳುವುದು ಉತ್ತಮ.

ಇದನ್ನೂ ಓದಿ: ಗರ್ಭಿಣಿಯರ ಆರೋಗ್ಯ ಕಾಪಾಡುವಲ್ಲಿ ವಾಕಿಂಗ್​ ಎಂಬುದು ಭಾರಿ ವರದಾನ: ಸ್ತ್ರೀ ರೋಗ ತಜ್ಞರು ಹೇಳುವುದೇನು? - PREGNANT WOMEN WALKING

ETV Bharat Logo

Copyright © 2024 Ushodaya Enterprises Pvt. Ltd., All Rights Reserved.