ETV Bharat / health

ನೀವು ಗ್ಯಾಸ್ಟ್ರಿಕ್ ಸಮಸ್ಯೆಗೆ ಒಳಗಾಗಿದ್ದೀರಾ? ಹಾಗಾದ್ರೆ ಈ ವಿಶೇಷ ಆಹಾರ ಕ್ರಮಗಳನ್ನು ಅನುಸರಿಸಿ ನೋಡಿ - Gastric problem - GASTRIC PROBLEM

Gastric problem: ನೀವು ಗ್ಯಾಸ್ಟ್ರಿಕ್ ತೊಂದರೆಗೊಳಗಾಗಿದ್ದೀರಾ? ಹಾಗಾದ್ರೆ ನೀವು ಈ ವಿಶೇಷ ಆಹಾರ ಪದ್ಧತಿ, ಸಲಹೆಗಳನ್ನು ಅಳವಡಿಸಿಕೊಂಡು ಗ್ಯಾಸ್ಟ್ರಿಕ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತದೆ ಎಂದು ವೈದ್ಯರು, ಆಹಾರತಜ್ಞರು ಸಲಹೆಗಳನ್ನು ನೀಡಿದ್ದಾರೆ. ಆಹಾರ ಕ್ರಮದಲ್ಲಿ ಯಾವು ಕ್ರಮಗಳನ್ನು ಅನುಸರಿಸಬೇಕು ಎಂಬುದನ್ನು ತಿಳಿಯೋಣ ಬನ್ನಿ...

suffering from gastric problem  Gastric problem  change these eating habits  Gastric problem solution
ನೀವು ಗ್ಯಾಸ್ಟ್ರಿಕ್ ಸಮಸ್ಯೆಯಿಂದ ತೊಂದರೆಗೊಳಗಾಗಿದ್ದೀರಾ? ಹಾಗಾದ್ರೆ ವಿಶೇಷ ಆಹಾರ ಕ್ರಮಗಳನ್ನು ಅನುಸರಿಸಿ ನೋಡಿ (ETV Bharat)
author img

By ETV Bharat Health Team

Published : Aug 19, 2024, 4:01 PM IST

ನಿಮಗೆ ಗ್ಯಾಸ್ಟ್ರಿಕ್ ಸಮಸ್ಯೆ ಕಾಡುತ್ತಿದೆಯೇ? ಹಾಗಾದ್ರೆ, ನಿಮ್ಮ ಆಹಾರ ಪದ್ಧತಿ ಅಥವಾ ಆಹಾರ ಕ್ರಮಗಳನ್ನು ಬದಲಾಯಿಸಲು ವೈದ್ಯರು ಮಹತ್ವದ ಸಲಹೆಗಳನ್ನು ನೀಡಿದ್ದಾರೆ. ಅಮೆರಿಕದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಡಯಾಬಿಟಿಸ್ ಅಂಡ್ ಡೈಜೆಸ್ಟಿವ್ ಮತ್ತು ಕಿಡ್ನಿ ಡಿಸೀಸ್​ನಲ್ಲಿ ಪ್ರಕಟವಾದ ಲೇಖನದ ಪ್ರಕಾರ, ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಬಳಲುತ್ತಿರುವವರು ವಿಶೇಷ ಆಹಾರವನ್ನು ಅನುಸರಿಸಬೇಕಾಗುತ್ತದೆ. ಆರೋಗ್ಯಕರ ಆಹಾರ ಪದ್ಧತಿಯ ಮೂಲಕ ಗ್ಯಾಸ್ಟ್ರಿಕ್ ತೊಂದರೆಯಿಂದ ಪಾರಾಗಲು ವೈದ್ಯರು, ಆಹಾರ ತಜ್ಞರು ಕೆಲವು ಸಲಹೆಗಳನ್ನು ನೀಡಿದ್ದಾರೆ.

ನಿಮ್ಮ ಆಹಾರ ಪದ್ಧತಿ ಬದಲಾಯಿಸಿ: ಗ್ಯಾಸ್ಟ್ರಿಕ್ ರೋಗಲಕ್ಷಣಗಳನ್ನು ಕಡಿಮೆ ಮಾಡಲು ನಿಮ್ಮ ಆಹಾರ ಪದ್ಧತಿಯನ್ನು ಬದಲಾಯಿಸಲು ನಿಮಗಾಗಿ ವೈದ್ಯರು, ಆಹಾರತಜ್ಞರು ನೀಡಿರುವ ಸಲಹೆಗಳು ಇಲ್ಲಿವೆ.

  • ಬೇಗ ಬೇಗ ತಿನ್ನುವ ಬದಲು ನಿಧಾನವಾಗಿ ಊಟ ಮಾಡಿ. ಸಾಧ್ಯವಾದರೆ ಒಂದೆಡೆ ಕುಳಿತುಕೊಂಡು ಊಟ ಮಾಡಿ.
  • ನೀವು ಚೂಯಿಂಗ್ ಗಮ್, ಹಾರ್ಡ್ ಕ್ಯಾಂಡಿ, ಸೋಡಾ ಮಿಶ್ರಿತ ಪಾನೀಯಗಳನ್ನು ತಪ್ಪಿಸಬೇಕು ಅಥವಾ ಮಿತಿಗೊಳಿಸಿ.
  • ಹೆಚ್ಚು ಆಹಾರ ಸೇವಿಸುವ ಬದಲು, ಮಿತವಾದ ಆಹಾರ ಸೇವನೆ ಮಾಡಿ.
  • ತಿನ್ನುವಾಗ ಅಥವಾ ಕುಡಿಯುವಾಗ ಮಾತನಾಡುವುದನ್ನು ತಪ್ಪಿಸಿ.

ಹೀಗಿರಲಿ ನಿಮ್ಮ ಆಹಾರ ಕ್ರಮಗಳು: ಕೆಲವು ಜನರಲ್ಲಿ ಹೊಟ್ಟೆ ಮತ್ತು ಸಣ್ಣ ಕರುಳು ಸಂಪೂರ್ಣವಾಗಿ ಜೀರ್ಣವಾಗದ ಕೆಲವು ಕಾರ್ಬೋಹೈಡ್ರೇಟ್‌ಗಳನ್ನು ಸೇವಿಸಿದಾಗ ಗ್ಯಾಸ್ಟ್ರಿಕ್​ನ ಲಕ್ಷಣಗಳು ಹೆಚ್ಚಾಗುತ್ತವೆ. ಈ ಕಾರ್ಬೋಹೈಡ್ರೇಟ್‌ಗಳು ದೊಡ್ಡ ಕರುಳನ್ನು ತಲುಪಿದಾಗ, ಬ್ಯಾಕ್ಟೀರಿಯಾಗಳು ಅವುಗಳನ್ನು ಒಡೆಯುತ್ತವೆ ಮತ್ತು ಈ ಪ್ರಕ್ರಿಯೆಯಲ್ಲಿ ಅನಿಲವು ರೂಪುಗೊಳ್ಳುತ್ತದೆ.

  • ಕಾರ್ಬೋಹೈಡ್ರೇಟ್-ಭರಿತ ಆಹಾರಗಳು ಮತ್ತು ಪಾನೀಯಗಳು ಅತಿಯಾದ ಅನಿಲವನ್ನು ಉಂಟುಮಾಡುತ್ತವೆ. ಅದರಲ್ಲಿ ಸೇಬು, ಪೇರಲ, ಪೀಚ್ ಹಣ್ಣು ಸೇರಿದಂತೆ ಕೆಲವು ಹಣ್ಣುಗಳು ಸೇರಿವೆ.
  • ಹೂಕೋಸು, ಎಲೆಕೋಸು, ಕೊಲಾರ್ಡ್ ಗ್ರೀನ್ಸ್ ಮತ್ತು ಇತರ ಕ್ರೂಸಿಫೆರಸ್ ತರಕಾರಿಗಳು ಮತ್ತು ಅವರೆಕಾಳು, ಬೀನ್ಸ್ ಮತ್ತು ಮಸೂರಗಳನ್ನು ಒಳಗೊಂಡಿರುವ ದ್ವಿದಳ ಧಾನ್ಯಗಳು ಸೇರಿವೆ.
  • ಹಾಲು, ಮೊಸರು ಮತ್ತು ಐಸ್ ಕ್ರೀಮ್​ನಂತಹ ಡೈರಿ ಉತ್ಪನ್ನಗಳು.
  • ಹಣ್ಣಿನ ರಸಗಳು, ತಂಪು ಪಾನೀಯಗಳು, ಎನರ್ಜಿ ಪಾನೀಯಗಳಂತಹ ಹೆಚ್ಚಿನ ಫ್ರಕ್ಟೋಸ್ ಕಾರ್ನ್ ಸಿರಪ್ ಹೊಂದಿರುವ ಪಾನೀಯಗಳು.
  • ಸಿಹಿ ತಿನಿಸುಗಳು, ಸೋರ್ಬಿಟೋಲ್, ಮನ್ನಿಟಾಲ್, ಕ್ಸಿಲಿಟಾಲ್, ಎರಿಥ್ರಿಟಾಲ್ ಮತ್ತು ಮಾಲ್ಟಿಟಾಲ್‌ನಂತಹ ಸಿಹಿಕಾರಕಗಳನ್ನು ಒಳಗೊಂಡಿರುವ ಇತರ ಉತ್ಪನ್ನಗಳು.
  • ಕೆಲವು ಜನರು ಹೆಚ್ಚು ಫೈಬರ್ ಅನ್ನು ಸೇವಿಸಿದಾಗ ಹೆಚ್ಚಿನ ಗ್ಯಾಸ್ಟ್ರಿಕ್​ ಲಕ್ಷಣಗಳು ಕಂಡುಬರುತ್ತವೆ. ಆದ್ದರಿಂದ ಕೆಲವರು ಹೆಚ್ಚಿನ ಕೊಬ್ಬಿನ ಆಹಾರವನ್ನು ಸೇವಿಸಿದಾಗ ಹೆಚ್ಚಿನ ಗ್ಯಾಸ್ಟ್ರಿಕ್​ ರೋಗಲಕ್ಷಣಗಳು ಕಾಣಿಸಬಹುದು. ಇದು ಹೊಟ್ಟೆ ಉಬ್ಬುವಿಕೆಯನ್ನು ಹೆಚ್ಚಿಸುತ್ತದೆ.

ನಿಮ್ಮ ಗ್ಯಾಸ್ಟ್ರಿಕ್ ರೋಗಲಕ್ಷಣಗಳನ್ನು ಪರಿಹರಿಸಲು ಮತ್ತು ಆರೋಗ್ಯಕರ ಆಹಾರ ಪದ್ಧತಿಗಳನ್ನು ಅನುಸರಿಸಲು ವೈದ್ಯರು, ಆಹಾರ ತಜ್ಞರೊಂದಿಗೆ ಮಾತನಾಡಬೇಕಾಗುತ್ತದೆ. ಗ್ಯಾಸ್ಟ್ರಿಕ್ ಸ್ಥಿತಿಯು ತುಂಬಾ ಗಂಭೀರವಾಗಿದ್ದರೆ ವೈದ್ಯರನ್ನು ಸಂಪರ್ಕಿಸಿ. ಆರೋಗ್ಯ ಸ್ಥಿತಿಗಳಿಗೆ ಚಿಕಿತ್ಸೆ ನೀಡಲು ವಿಶೇಷವಾದ ಆಹಾರ ಕ್ರಮವನ್ನು ಅನುಸರಿಸಿ. ನಿಮ್ಮ ಗ್ಯಾಸ್ಟ್ರಿಕ್ ರೋಗಲಕ್ಷಣಗಳನ್ನು ಹಿನ್ನೆಲೆ ಆರೋಗ್ಯ ಸ್ಥಿತಿಯನ್ನು ಗಮನಿಸಿ, ವೈದ್ಯರು ನಿಮಗೆ ವಿಶೇಷ ಆಹಾರವನ್ನು ಶಿಫಾರಸು ಮಾಡಬಹುದು. ಆರೋಗ್ಯ ವೃತ್ತಿಪರರು ಶಿಫಾರಸು ಆಹಾರದ ಕ್ರಮಗಳು ಇಲ್ಲಿದೆ.

ಗ್ಯಾಸ್ಟ್ರಿಕ್ ಸಮಸ್ಯೆ ಪರಿಹಾರಕ್ಕೆ ವೈದ್ಯರೊಂದಿಗೆ ಚರ್ಚಿಸಿ:

  • ಆಹಾರ ತಜ್ಞರು ಉದರದ ಕಾಯಿಲೆಗೆ (ಅತಿಸಾರ, ಹೊಟ್ಟೆ ಉಬ್ಬುವಿಕೆ, ಗ್ಯಾಸ್ಟ್ರಿಕ್) ಚಿಕಿತ್ಸೆ ನೀಡಲು ಗ್ಲುಟನ್-ಫ್ರೀ ಆಹಾರವನ್ನು ಅನುಸರಿಸಬೇಕಾಗುತ್ತದೆ.
  • ಲ್ಯಾಕ್ಟೋಸ್ ಅಸಹಿಷ್ಣುತೆಯ ಲಕ್ಷಣಗಳನ್ನು ನಿರ್ವಹಿಸಲು ನಿಮ್ಮ ಆಹಾರದಲ್ಲಿ ಲ್ಯಾಕ್ಟೋಸ್ ಪ್ರಮಾಣವನ್ನು ಕಡಿಮೆ ಮಾಡಿ.
  • ನಿಮ್ಮ ಆಹಾರದಲ್ಲಿ ಫ್ರಕ್ಟೋಸ್ ಪ್ರಮಾಣ ಕಡಿಮೆ ಮಾಡುವುದು, ವಿಶೇಷವಾಗಿ ಹೆಚ್ಚಿನ ಫ್ರಕ್ಟೋಸ್ ಕಾರ್ನ್ ಸಿರಪ್ ಬಳಕೆ ಕಡಿಮೆ ಮಾಡಿದರೆ ಒಳ್ಳೆಯದು.
  • ನಿಮ್ಮ ಗ್ಯಾಸ್ಟ್ರಿಕ್ ಸಮಸ್ಯೆಗೆ ಚಿಕಿತ್ಸೆ ನೀಡಲು ಸಹಾಯ ಮಾಡುವ ಆರೋಗ್ಯಕರ ಆಹಾರ ಯೋಜನೆಯ ಬಗ್ಗೆ ನಿಮ್ಮ ವೈದ್ಯರು ಅಥವಾ ಆಹಾರ ತಜ್ಞರೊಂದಿಗೆ ಮಾಡುವುದು ತುಂಬಾ ಅನುಕೂಲವಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ ಈ ವೆಬ್​ಸೈಟ್​ಗೆ ಸಂಪರ್ಕಿಸಿ:

https://www.niddk.nih.gov/health-information/digestive-diseases/gas-digestive-tract/eating-diet-nutrition

ಓದುಗರಿಗೆ ಸೂಚನೆ: ಈ ಸ್ಟೋರಿಯಲ್ಲಿ ನಿಮಗೆ ನೀಡಿರುವ ಎಲ್ಲಾ ಆರೋಗ್ಯ ಮಾಹಿತಿ ಹಾಗೂ ಸಲಹೆಗಳು ನಿಮ್ಮ ತಿಳುವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ, ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ನಾವು ಈ ಮಾಹಿತಿಯನ್ನು ಒದಗಿಸುತ್ತಿದ್ದೇವೆ. ಆದರೆ, ಇವುಗಳನ್ನು ಅನುಸರಿಸುವ ಮೊದಲು ನಿಮ್ಮ ವೈಯಕ್ತಿಕ ವೈದ್ಯರ ಸಲಹೆಯನ್ನು ಪಡೆದುಕೊಳ್ಳುವುದು ಉತ್ತಮ.

ಇದನ್ನೂ ಓದಿ: ವಾಕಿಂಗ್​ನಿಂದ ಹಲವು ಪ್ರಯೋಜನ: ಉತ್ತಮ ಆರೋಗ್ಯಕ್ಕಾಗಿ ಪ್ರತಿದಿನ ಎಷ್ಟು ಸ್ಟೇಪ್ಸ್​ ನಡೆಯಬೇಕು ಗೊತ್ತಾ? - Walking Tips

ETV Bharat Logo

Copyright © 2025 Ushodaya Enterprises Pvt. Ltd., All Rights Reserved.