ETV Bharat / entertainment

ಚಿತ್ರರಂಗಕ್ಕೆ ಹೆಣ್ಣುಮಕ್ಕಳನ್ನು ಕಳಿಸೋಕೆ ಯೋಚಿಸುವಂತ ಪರಿಸ್ಥಿತಿಯಿದೆ: ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ - Film Chamber Meeting

ನಟಿಯರ ಸುರಕ್ಷತೆ ಸಲುವಾಗಿ ಸಮಿತಿ ಒಂದು ರಚನೆ ಆಗಬೇಕೆಂಬುದರ ಬಗ್ಗೆ ಇಂದು ಫಿಲ್ಮ್ ಚೇಂಬರ್​ನಲ್ಲಿ ಮಹತ್ವದ ಸಭೆ ನಡೆದಿದೆ. ಮೀಟಿಂಗ್​ ಬಳಿಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಮಾಧ್ಯಮಗಳೆದುರು ಹೇಳಿಕೆ ನೀಡಿದರು.

Women Commission Chairperson Nagalakshmi
ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ (ETV Bharat)
author img

By ETV Bharat Entertainment Team

Published : Sep 16, 2024, 4:04 PM IST

ಬೆಂಗಳೂರು: ''ಕನ್ನಡ ಚಿತ್ರರಂಗದಲ್ಲಿ ಈವರೆಗೆ ಸಮಿತಿ ರಚನೆಯಾಗಿಲ್ಲ. ಆದ್ರೆ ಮಹಿಳೆಯರನ್ನು ಕಾಪಾಡೋ ದೃಷ್ಟಿಯಲ್ಲಿ ಕಮಿಟಿ ರಚನೆ ಬಗ್ಗೆ ಯೋಚಿಸಲಿದ್ದೇವೆ'' ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ತಿಳಿಸಿದರು.

ಇತ್ತೀಚೆಗೆ 'ಫಿಲ್ಮ್ ಇಂಡಸ್ಟ್ರಿ ಫಾರ್ ರೈಟ್ಸ್ ಅಂಡ್ ಇಕ್ವಾಲಿಟಿ' (ಫೈರ್) ನಿಯೋಗ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ನಟಿಯರ ಸುರಕ್ಷತೆ ಬಗ್ಗೆ ಅರಿಯಲು ಕಮಿಟಿಯೊಂದರ ರಚನೆಗೆ ಮನವಿ ಪತ್ರ ಸಲ್ಲಿಸಿತ್ತು. ಇಂದು ಫಿಲ್ಮ್ ಚೇಂಬರ್​ನಲ್ಲಿ ಇದಕ್ಕೆ ಸಂಬಂಧಿಸಿದಂತೆ ಮಹತ್ವದ ಸಭೆ ನಡೆದಿದೆ. ಮೀಟಿಂಗ್​ ಬಳಿಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಮಾಧ್ಯಮಗಳಿಗೆ ಹೇಳಿಕೆ ನೀಡಿದರು.

ಚಿತ್ರರಂಗ ಪ್ರವೇಶಿಸಲು ಪೋಷಕರ ಮುಂದಾಳತ್ವ ಬೇಕು. ಆಯೋಗವೂ ಅದನ್ನೇ ಯೋಚಿಸುತ್ತಿದೆ. ಒಂದು ಕಮಿಟಿ ಆಗಬೇಕೆಂಬ ಮನವಿ ಇದೆ. ಇಂದಿನ ಸಭೆಗೆ ಅತ್ಯಂತ ಕಡಿಮೆ ಸಂಖ್ಯೆಯಲ್ಲಿ ನಟಿಯರು ಬಂದಿದ್ದರು. ಶೂಟಿಂಗ್ ಹಾಗೂ ಇತರೆ ಕೆಲಸಗಳಿಂದಾಗಿ ಅವರು ಬಂದಿಲ್ಲ ಅನಿಸುತ್ತದೆ. ಕಮಿಟಿಯಲ್ಲಿ ಯಾರೆಲ್ಲಾ ಇರಬೇಕೆಂಬುದರ ಬಗ್ಗೆ ಕಾನೂನು ಇದೆ. ಎಲ್ಲರನ್ನೂ ಮುಂದಿನ ಸಭೆಗೆ ಕರೆಯಬೇಕು. ಸಿನಿಮಾದಲ್ಲಿ ನಟಿಸುವ ಹೆಣ್ಣುಮಕ್ಕಳಿಗೆ ಯಾವ ಸೌಲಭ್ಯ ಕೊಡಬೇಕೆಂಬುದರ ಬಗ್ಗೆಯೂ ಚರ್ಚೆ ಆಗಬೇಕಿದೆ ಎಂದರು.

ನಾನು ನನಗಾಗಿರೋ ಲೈಂಗಿಕ ಕಿರುಕುಳವನ್ನು ಹೇಳೋಕೆ ಆಗಲ್ಲ. ಹೇಳಿದ್ರೆ ಅವಳು ಹಂಗೆ, ಇವಳು ಹಿಂಗೆ ಅಂತಾ ಮಾತನಾಡುತ್ತಾರೆ. ವಾಣಿಜ್ಯ ಮಂಡಳಿ ಸಿನಿಮಾದವರಿಗೆ ತಾಯಿ ಸಂಸ್ಥೆ. ಈ ಕೆಲಸ ಆಗಲಿ, ಕಮಿಟಿ ರಚನೆಯಾಗಲಿ ಎಂದು ತಿಳಿಸಿದರು.

ದೌರ್ಜನ್ಯ ಅಂತಾ ಬಂದಾಗ ಲೈಂಗಿಕವಾಗಿಯೂ ಇರಬಹುದು, ವರ್ಬಲ್ ಆಗಿಯೂ ಇರಬಹುದು. ಕನ್ನಡ ಚಿತ್ರರಂಗದಲ್ಲಿ ಇಂಥದ್ದೊಂದು ಕಮಿಟಿ ಆಗಿಲ್ಲ. ಈ ಬಗ್ಗೆ ಗೆಜೆಟ್ ನೋಟಿಫಿಕೇಷನ್ ಇದೆ. ಸಿನಿಮಾರಂಗಕ್ಕೆ ಹೆಣ್ಣು ಮಕ್ಕಳನ್ನು ಈಸಿಯಾಗಿ ಕಳಿಸುವಂತಹ ವಾತಾವರಣ ಇರಬೇಕು. ಆದ್ರೆ ಚಿತ್ರರಂಗಕ್ಕೆ ಹೆಣ್ಣು ಮಕ್ಕಳನ್ನು, ಕುಟುಂಬಸ್ಥರನ್ನು ಕಳಿಸೋಕೆ ಹಿಂದೆ ಮುಂದೆ ನೋಡ್ತಾರೆ. ಆಯೋಗ ಈ ಬಗ್ಗೆ ಯೋಚಿಸಿದೆ. ಮೀಟಿಂಗ್​​ಗೆ ಕಡಿಮೆ ನಟಿಯರು ಬಂದಿದ್ದರು. ನನಗೆ ಹುಷಾರಿಲ್ಲ, ಅದರೂ ಬಂದಿದ್ದೇನೆ. ಹೆಣ್ಣು ಮಕ್ಕಳಿಗೆ ತೊಂದ್ರೆ ಆದ್ರೆ ಮಾತೃ ಸಂಸ್ಥೆಗೆ ಬನ್ನಿ. ಕಮಿಟಿ ರಚನೆ ಮಾಡೋಣ ಅಂತಾ ಹೇಳಿದ್ದೇನೆ. ಮುಂದಿನ ಸಭೆಯಲ್ಲಿ ಹೆಚ್ಚು ಮಹಿಳೆಯರು ಬಂದ್ರೆ ಸೂಕ್ತ ಎಂದು ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ತಿಳಿಸಿದರು.

ಇದನ್ನೂ ಓದಿ: ಕನ್ನಡ ಚಿತ್ರರಂಗಕ್ಕೆ ಸಮಿತಿ ಬೇಕೋ, ಬೇಡವೋ? ಚರ್ಚೆಗೆ ಫಿಲ್ಮ್ ಚೇಂಬರ್​ನಲ್ಲಿ ಮಹತ್ವದ ಸಭೆ - Committee in Sandalwood

ಆಯೋಗದಿಂದ ಸರ್ವೇ ಮಾಡುತ್ತೇವೆ. ಅಲ್ಲಿ ಬಂದ ಸಮಸ್ಯೆಗಳನ್ನು ಚರ್ಚೆ ಮಾಡಿ ಬಗೆಹರಿಸುವಂಥ ಕೆಲಸಗಳು ಆಗಲಿವೆ. ವಾಣಿಜ್ಯ ಮಂಡಳಿ ಸಮಯಾವಕಾಶ ಕೇಳಿದೆ, ಕೊಡೋಣ. ಹೇಮಾ ಕಮಿಟಿ ರೀತಿಯ ಸಮಿತಿ ಬದಲು ಪಾಶ್ ಕಮಿಟಿ ರಚನೆ ಮಾಡುವಂತೆ ಚರ್ಚೆ ಆಗಿದೆ. ಕನ್ನಡ ಚಿತ್ರರಂಗಕ್ಕೆ ಪಾಶ್ ಕಮಿಟಿ ಮಾಡಿ ಅಂತಾ ಹೇಳಿದ್ದೀನಿ. ಸರ್ಕಾರದ ಗೆಜೆಟ್​ನಲ್ಲಿ ಈ ಕಮಿಟಿ ಇರುತ್ತದೆ. ದೂರು ಬಂದ್ರೆ, ಅದಕ್ಕೆ ತಕ್ಕ ಶಿಕ್ಷೆ ಇರುತ್ತದೆ. 15 ದಿನಗಳೊಳಗೆ ತಿಳಿಸುತ್ತೇವೆಂದು ಫಿಲ್ಮ್ ಚೇಂಬರ್ ತಿಳಿಸಿದೆ ಎಂದರು.

ಇದನ್ನೂ ಓದಿ: ದೇವಸ್ಥಾನದಲ್ಲಿ ಹಸೆಮಣೆಯೇರಿದ ನಟಿ ಅದಿತಿ ರಾವ್ ಹೈದರಿ - ನಟ ಸಿದ್ಧಾರ್ಥ್: ಮದುವೆಯ ಸುಂದರ ಫೋಟೋಗಳಿಲ್ಲಿವೆ - Siddharth Aditi Rao Hydari Marriage

ಎಲ್ಲಾ ಕ್ಷೇತ್ರಗಳಲ್ಲಿ ಮಹಿಳೆಯರ ರಕ್ಷಣೆಗಾಗಿ ಆಂತರಿಕ ಸಮಿತಿ ರಚಿಸಬೇಕೆಂಬ ಸರ್ಕಾರದ ಸೂಚನೆ ಇದೆ. ಅದರಂತೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಸಮಿತಿ ರಚನೆ ಆಗಬೇಕು ಎಂದು ಮಹಿಳಾ ಆಯೋಗದ ಸೂಚನೆ ಇದೆ. ಆದರಂತೆ ಮುಂದಿನ 15 ದಿನಗಳ ಒಳಗೆ ಕಮಿಟಿ ರಚಿಸಬೇಕೋ ಅಥವಾ ಬೇಡವೋ ಎಂದು ಯೋಚನೆ ಮಾಡಿ ಎಂದು ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಅವರು ಫಿಲ್ಮ್ ಚೇಂಬರ್​​ಗೆ ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.