ETV Bharat / entertainment

ಜಾನ್ವಿ ಜೊತೆ ಥಾಯ್ಲೆಂಡ್‌​ ಶೂಟಿಂಗ್​ ಕಂಪ್ಲೀಟ್​; ಪತ್ನಿ-ಮಕ್ಕಳೊಂದಿಗೆ ವಾಪಸ್​ ಆದ ಜೂ. ಎನ್​ಟಿಆರ್​ - JR NTR RETURNS TO HYDERABAD

author img

By ETV Bharat Karnataka Team

Published : Jun 24, 2024, 3:54 PM IST

ಇತ್ತೀಚೆಗಷ್ಟೇ ಯಂಗ್ ಟೈಗರ್ ಎನ್​ಟಿಆರ್ 'ದೇವರ' ಚಿತ್ರದ ಶೂಟಿಂಗ್​ಗಾಗಿ ವಿದೇಶಕ್ಕೆ ತೆರಳಿದ್ದು ಗೊತ್ತೇ ಇದೆ. ಈಗ ವಿದೇಶದ ಪ್ರವಾಸ ಮುಗಿಸಿರುವ ಅವರು​ ಹೈದರಾಬಾದ್​ಗೆ ವಾಪಸಾಗಿದ್ದಾರೆ. ಇದಕ್ಕೆ ಸಂಬಂಧಿಸಿದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

JR NTR BACK FROM THAILAND  DEVARA SONG SHOOT IN THAILAND  Shooting Devara Song
ಜ್ವಾನ್ವಿ ಜೊತೆ ಥಾಯ್ಲೆಂಡ್‌​ ಶೂಟಿಂಗ್​ ಕಂಪ್ಲೀಟ್ (Social Media)

ಹೈದರಾಬಾದ್​: ಜನತಾ ಗ್ಯಾರೇಜ್‌ನ ಕಾಂಬಿನೇಷನ್ ರಿಪೀಟ್ ಆಗುತ್ತಿದೆ.. ಯಂಗ್ ಟೈಗರ್ ಎನ್‌ಟಿಆರ್ ಮತ್ತು ಕೊರಟಾಲ ಶಿವ ಅದ್ಧೂರಿ ಆ್ಯಕ್ಷನ್ ಎಂಟರ್‌ಟೈನರ್ 'ದೇವರ' ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಎರಡು ಭಾಗಗಳಲ್ಲಿ ಈ ಚಿತ್ರ ತಯಾರಾಗುತ್ತಿದೆ. ದೇವರ ಭಾಗ 1 ಸೆಪ್ಟೆಂಬರ್ 27 ರಂದು ಬಿಡುಗಡೆಯಾಗಲಿದೆ. ಚಿತ್ರೀಕರಣ ಈಗಾಗಲೇ ಅಂತಿಮ ಹಂತ ತಲುಪಿದೆ. ರೊಮ್ಯಾಂಟಿಕ್ ಹಾಡಿನ ಚಿತ್ರೀಕರಣಕ್ಕಾಗಿ ಇತ್ತೀಚೆಗೆ ದೇವರ ಚಿತ್ರತಂಡ ಥಾಯ್ಲೆಂಡ್‌ಗೆ ತೆರಳಿತ್ತು. ಎನ್​ಟಿಆರ್ ಕುಟುಂಬ ಸಮೇತ ತೆರಳಿದ್ದರು. ಅಲ್ಲಿ ಚಿತ್ರತಂಡ ನಟರಾದ ಎನ್​ಟಿ ಆರ್ ಮತ್ತು ಜಾನ್ವಿ ಕಪೂರ್ ಅವರ ಕಾಂಬಿನೇಷನ್​ ಹಾಡನ್ನು ಚಿತ್ರೀಕರಿಸಿದರು. ಆದರೆ.. ಈಗ ಎನ್​ಟಿಆರ್​ ತಮ್ಮ ಕುಟುಂಬ ಸಮೇತ ಹೈದರಾಬಾದ್​ಗೆ ವಾಪಸ್​ ಆಗಿದ್ದಾರೆ.

ಹೈದರಾಬಾದ್ ಏರ್​ಪೋರ್ಟ್​ನಲ್ಲಿ ಕಾಣಿಸಿಕೊಂಡ ಎನ್ಟಿಆರ್ ಹೆಚ್ಚು ಸ್ಟೈಲಿಶ್ ಆಗಿ ಕಂಡುಬಂದರು. ವಿಮಾನ ನಿಲ್ದಾಣದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಮುಂದೆ ಎನ್​ಟಿಆರ್, ದೇವರ ಶೂಟಿಂಗ್​ನಲ್ಲಿ ಭಾಗವಹಿಸುತ್ತಾರಾ? ಅಥವಾ ವಾರ್ 2 ಚಿತ್ರೀಕರಣಕ್ಕೆ ಸೇರುತ್ತಾರಾ? ಎಂಬ ವಿಚಾರದಲ್ಲಿ ಸ್ಪಷ್ಟತೆ ಬರಬೇಕಿದೆ. ಎನ್​ಟಿಆರ್ ಈಗಾಗಲೇ ವಾರ್​ 2 ಗೆ ಸಂಬಂಧಿಸಿದ ಕೆಲವು ವೇಳಾಪಟ್ಟಿಗಳನ್ನು ಪೂರ್ಣಗೊಳಿಸಿದ್ದಾರೆ. ಆದರೆ.. ದೇವರ ಶೂಟಿಂಗ್ ಒಂದಷ್ಟು ಬ್ಯಾಲೆನ್ಸ್ ಇದೆ.. ಈಗ ಅದನ್ನು ಮುಗಿಸುವ ತವಕದಲ್ಲಿದ್ದಾರೆ.

ಲೇಟೆಸ್ಟ್ ಅಪ್ ಡೇಟ್ ಪ್ರಕಾರ.. ದೇವರ ಚಿತ್ರದ ಶೂಟಿಂಗ್ ಇನ್ನೂ ಕಂಪ್ಲೀಟ್ ಆಗಿಲ್ಲವಂತೆ. ಎನ್​ಟಿಆರ್ ಕೂಡ ದೇವರ ಚಿತ್ರದ ಶೂಟಿಂಗ್​ನಲ್ಲಿ ಬ್ಯುಸಿಯಾಗಲಿದ್ದಾರೆ. ಸ್ವಲ್ಪ ಗ್ಯಾಪ್ ನಂತರ ಹೊಸ ವೇಳಾಪಟ್ಟಿ ಬರಲಿದೆ. ಇದರಲ್ಲಿ ಕ್ಲೈಮ್ಯಾಕ್ಸ್‌ಗೆ ಸಂಬಂಧಿಸಿದ ಮಹತ್ವದ ಸಾಹಸ ದೃಶ್ಯಗಳನ್ನು ಚಿತ್ರೀಕರಿಸಲಾಗುವುದು. ಆದ್ರೆ ದೇವರ ಚಿತ್ರೀಕರಣ ಯಾವಾಗ ಮುಗಿಯುತ್ತದೆ ಎಂಬುದನ್ನು ಕಾದು ನೋಡಬೇಕು.

ಎನ್‌ಟಿಆರ್‌ನ ದೇವರ ಚಿತ್ರದ ಜೊತೆಗೆ "ವಾರ್​ 2" ಚಿತ್ರದಲ್ಲಿ ಬಾಲಿವುಡ್‌ನ ಸ್ಟಾರ್ ಹೀರೋ ಹೃತಿಕ್ ರೋಷನ್ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಅಯಾನ್ ಮುಖರ್ಜಿ ವಾರ್​ 2 ಚಿತ್ರವನ್ನು ವೈಆರ್‌ಎಫ್ ಸ್ಪೈ ಯೂನಿವರ್ಸ್‌ನ ಭಾಗವಾಗಿದೆ. ಈ ಸಿನಿಮಾದಲ್ಲಿ ಎನ್​​ಟಿಆರ್ ನೆಗೆಟಿವ್ ಶೇಡ್ ಇರುವ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎಂದು ವರದಿಯಾಗಿದೆ. ಈ ಸಿನಿಮಾದಲ್ಲಿ ತಮ್ಮ ಪಾತ್ರಕ್ಕಾಗಿ ಅಂತಾರಾಷ್ಟ್ರೀಯ ಫಿಟ್ನೆಸ್ ತಜ್ಞರೊಂದಿಗೆ ಎರಡು ವಾರಗಳ ತರಬೇತಿಯಲ್ಲಿ ಎನ್​ಟಿಆರ್ ಭಾಗವಹಿಸಿದ್ದರು ಎಂಬ ಮಾಹಿತಿಯೂ ಇದೆ.

ಈ ಮಧ್ಯೆ ಇತ್ತೀಚಿನ ಸಂದರ್ಶನವೊಂದರಲ್ಲಿ ಫೈಟ್ ಮಾಸ್ಟರ್ ಅನಲ್ ಅರಸು ಈ ಚಿತ್ರದ ಬಗ್ಗೆ ಆಸಕ್ತಿದಾಯಕ ವಿಷಯಗಳನ್ನು ಬಹಿರಂಗಪಡಿಸಿದ್ದರು. ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ ಎನ್‌ಟಿಆರ್ ಮತ್ತು ಹೃತಿಕ್ ರೋಷನ್ ನಡುವೆ ಅದ್ಧೂರಿ ಫೈಟ್ ಸೀಕ್ವೆನ್ಸ್ ಇರಲಿದೆ ಎಂದ ಅನಲ್ ಅರಸು, ಈ ಫೈಟ್ ಸೀಕ್ವೆನ್ಸ್ ಸಿನಿಮಾದ ಹೈಲೈಟ್ ಆಗಲಿದೆ ಎಂದಿದ್ದಾರೆ.

ಓದಿ: 13ನೇ ವಯಸ್ಸಿನಲ್ಲೇ ಮೊದಲ ಚಿತ್ರ; 1 ರೂಪಾಯಿಂದ ವೃತ್ತಿಜೀವನ ಆರಂಭಿಸಿ ಮಿಂಚಿ ಮರೆಯಾದ ಈ ನಟಿ ಯಾರು? - Actress Started Career With Rs 1

ETV Bharat Logo

Copyright © 2024 Ushodaya Enterprises Pvt. Ltd., All Rights Reserved.