ETV Bharat / entertainment

ಫೇಸ್‌ಬುಕ್‌, ಇನ್‌ಸ್ಟಾಗ್ರಾಂ ಖಾತೆ ಹ್ಯಾಕ್, ವಂಚನೆ ಯತ್ನ; ದೂರು ನೀಡಿದ ಕಿರುತೆರೆ ನಟ - Actor Skanda Ashok - ACTOR SKANDA ASHOK

ನಟ ಸ್ಕಂದ ಅಶೋಕ್ ಅವರ ಫೇಸ್‌ಬುಕ್‌ ಹಾಗೂ ಇನ್‌ಸ್ಟಾಗ್ರಾಂ ಖಾತೆಗಳನ್ನು ಹ್ಯಾಕ್ ಮಾಡಿ ವಂಚನೆಗೆ ಯತ್ನಿಸಲಾಗಿದೆ.

skanda ashok
ಫೇಸ್‌ಬುಕ್‌, ಇನ್‌ಸ್ಟಾಗ್ರಾಂ ಖಾತೆ ಹ್ಯಾಕ್, ವಂಚನೆ ಯತ್ನ; ದೂರು ನೀಡಿದ ಕಿರುತೆರೆ ನಟ
author img

By ETV Bharat Karnataka Team

Published : Apr 12, 2024, 10:32 AM IST

Updated : Apr 12, 2024, 11:20 AM IST

ನಟ ಸ್ಕಂದ ಅಶೋಕ್

ಬೆಂಗಳೂರು: ಕಿರುತೆರೆ ನಟ ಸ್ಕಂದ ಅಶೋಕ್ ಅವರ ಫೇಸ್‌ಬುಕ್‌ ಹಾಗೂ ಇನ್‌ಸ್ಟಾಗ್ರಾಂ ಖಾತೆಗಳನ್ನು ಹ್ಯಾಕ್ ಮಾಡಿರುವ ಕಿಡಿಗೇಡಿಗಳು, ಹಣಕಾಸಿನ ವಂಚನೆಗೆ ಪ್ರಯತ್ನಿಸುತ್ತಿರುವ ಘಟನೆ ಬೆಳಕಿಗೆ ಬಂದಿದೆ. ಫೇಸ್‍ಬುಕ್ ಹಾಗೂ ಇನ್‌ಸ್ಟಾಗ್ರಾಂ ಎರಡೂ ಖಾತೆಗಳನ್ನು ಹ್ಯಾಕ್ ಮಾಡಲಾಗಿದ್ದು, ತಮ್ಮ ಬೆಂಬಲಿಗರಿಗೆ ಹಣ ಹೂಡಿಕೆ ಮಾಡಿದರೆ ಅಧಿಕ ಲಾಭದ ಆಸೆಯನ್ನು ಒಡ್ಡಲಾಗುತ್ತಿದೆ ಎಂದು 'ರಾಧಾರಮಣ' ಧಾರಾವಾಹಿ ಖ್ಯಾತಿಯ ನಟ ಸ್ಕಂದ ಅಶೋಕ್ ಮೈಕೋ ಲೇಔಟ್ ಪೊಲೀಸ್​ ಠಾಣೆಗೆ ದೂರು ನೀಡಿದ್ದಾರೆ.

ಹಣ ಹೂಡಿಕೆ ಮಾಡಿ ಲಾಭ ಪಡೆದುಕೊಳ್ಳಿ ಎಂದು ಸ್ಕಂದ ಅವರ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಪೋಸ್ಟ್ ಪ್ರಕಟಿಸುತ್ತಿರುವ ಆರೋಪಿಗಳು, 'ತಮಗೆ ಒಂದೇ ತಿಂಗಳಲ್ಲಿ 4.90 ಸಾವಿರ ರೂ. ಲಾಭ ಬಂದಿದೆ' ಎಂಬ ತರಹದ ಪ್ರಚೋದನಾತ್ಮಕ ಸಂದೇಶಗಳನ್ನು ಪ್ರಕಟಿಸುತ್ತಿದ್ದಾರೆ. ನೈಜ ಎಂದು ನಂಬಿರುವ ಕೆಲ ಬೆಂಬಲಿಗರು ಹಣ ಹೂಡಿಕೆ ಮಾಡಿ ಮಚನೆಗೊಳಗಾಗಿದ್ದು, ಬಳಿಕ ಈ ವಿಚಾರವನ್ನು ನಟನ ಗಮನಕ್ಕೆ ತಂದಿದ್ದಾರೆ. ಕೂಡಲೇ ಮೈಕೋ ಲೇಔಟ್ ಠಾಣೆಗೆ ಸ್ಕಂದ ಅಶೋಕ್ ದೂರು ನೀಡಿದ್ದು, ಆರೋಪಿಗಳನ್ನು ಪತ್ತೆ ಹಚ್ಚುವಂತೆ ಹಾಗೂ ತಮ್ಮ ಸಾಮಾಜಿಕ ಜಾಲತಾಣ ಖಾತೆಗಳನ್ನ ರಿಟ್ರೀವ್ ಮಾಡಿಕೊಡುವಂತೆ ಮನವಿ ಮಾಡಿದ್ದಾರೆ. ಅಲ್ಲದೇ, ಯಾವುದೇ ಬೆಂಬಲಿಗರು ಹಣ ಹೂಡಿಕೆ ಮಾಡದಂತೆ ಅವರು ಮನವಿ ಮಾಡಿದ್ದಾರೆ.

ಸದ್ಯ ದೂರಿನ ಅನ್ವಯ ಮೈಕೋ ಲೇಔಟ್ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳು ಬೇರೆ ಬೇರೆ ಲೊಕೇಷನ್​ಗಳಲ್ಲಿ ಲಾಗಿನ್ ಆಗುತ್ತಿರುವುದರಿಂದ ಸದ್ಯ ಎರಡೂ ಖಾತೆಗಳನ್ನು ಬ್ಲಾಕ್‌ ಮಾಡಿಸಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರು: ಯುಪಿಐ ಸ್ಕ್ಯಾನರ್ ಅಪ್ ಡೇಟ್ ಸೋಗಿನಲ್ಲಿ ಹೋಟೆಲ್​​ ಮಾಲೀಕರಿಗೆ 48 ಸಾವಿರ ರೂ. ವಂಚನೆ - fraud to hotel owner

Last Updated : Apr 12, 2024, 11:20 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.