ETV Bharat / entertainment

ಕ್ರೀಡಾಂಗಣದಲ್ಲಿ ಎಸ್​ಆರ್​ಕೆಯ 'ಕಲ್ ಹೋ ನಾ ಹೋ' ಟೈಟಲ್​ ಟ್ರ್ಯಾಕ್​​​ ನುಡಿಸಿದ ವಿದೇಶಿಗ: ವಿಡಿಯೋ - ಎಸ್​ಆರ್​ಕೆ ಫ್ಯಾನ್​ ವಿಡಿಯೋ

ರಾಜ್‌ಕೋಟ್‌ನಲ್ಲಿ ನಡೆದ ಭಾರತ-ಇಂಗ್ಲೆಂಡ್ ಕ್ರಿಕೆಟ್ ಪಂದ್ಯದ ವಿಡಿಯೋವೊಂದು ವೈರಲ್ ಆಗಿದ್ದು, ಶಾರುಖ್​ ಖಾನ್ ಅವರ ಜನಪ್ರಿಯತೆಯನ್ನು ಸಾಬೀತುಪಡಿಸಿದೆ.

Shah Rukh Khan
ಶಾರುಖ್​ ಖಾನ್​
author img

By ETV Bharat Karnataka Team

Published : Feb 25, 2024, 6:24 PM IST

ಭಾರತೀಯ ಚಿತ್ರರಂಗದ ಸೂಪರ್‌ ಸ್ಟಾರ್ ಶಾರುಖ್ ಖಾನ್ ಬಗ್ಗೆ ವಿಶೇಷ ಪರಿಚಯ ಬೇಕೆನಿಸದು. ಭಾರತದಲ್ಲಿ ಮಾತ್ರವಲ್ಲದೇ ಜಗತ್ತಿನಾದ್ಯಂತ ಅಪಾರ ಅಭಿಮಾನಿಗಳನ್ನು ಸಂಪಾದಿಸಿರೋ ನಟ. ಇತ್ತೀಚೆಗೆ ರಾಜ್‌ಕೋಟ್‌ನಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್ ಕ್ರಿಕೆಟ್ ಪಂದ್ಯದ ಸಂದರ್ಭದಲ್ಲಿ ವಿದೇಶಿಗನೋರ್ವ ಶಾರುಖ್​ ಅವರ ಸೂಪರ್​ ಹಿಟ್​ ಸಿನಿಮಾ 'ಕಲ್ ಹೋ ನಾ ಹೋ' ಟೈಟಲ್​ ಟ್ರ್ಯಾಕ್​ನ ಮ್ಯೂಸಿಕ್​​ ಅನ್ನು ನುಡಿಸಿದ್ದಾರೆ. ಈ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ.

ಬಾಲಿವುಡ್ ಮತ್ತು ಕ್ರಿಕೆಟ್‌ ವಿಶ್ವದಾದ್ಯಂತ ಬಹಳಾನೇ ಪ್ರಾಮುಖ್ಯತೆ ಹೊಂದಿದೆ. ಕ್ರಿಕೆಟ್​ ಕ್ರೇಜ್​​ ಜಗತ್ತಿನಾದ್ಯಂತ ವಿಸ್ತರಿಸಿರೋದು ಹೊಸ ವಿಚಾರವೇನಲ್ಲ. ಮತ್ತೊಂದೆಡೆ ಬಾಲಿವುಡ್​ ಕ್ರೇಜ್​ ಕೂಡ ಕಡಿಮೆಯೇನಿಲ್ಲ. ಇದರ ಹೆಚ್ಚಿನ ಕ್ರೆಡಿಟ್ಸ್ ಶಾರುಖ್​ ಖಾನ್​ ಅವರಿಗೇನೆ ಸಲ್ಲುತ್ತದೆ ಅಂತಾರೆ ಅಭಿಮಾನಿಗಳು. ಇತ್ತೀಚೆಗೆ ರಾಜ್‌ಕೋಟ್‌ನಲ್ಲಿ ನಡೆದ ಭಾರತ - ಇಂಗ್ಲೆಂಡ್ ಟೆಸ್ಟ್ ಪಂದ್ಯದ ಸಂದರ್ಭದಲ್ಲಿ, ಶಾರುಖ್​ ಖಾನ್ ಅವರ ಅಭಿಮಾನಿಯೊಬ್ಬರು (ವಿದೇಶಿಗ) ಕಲ್ ಹೋ ನಾ ಹೋ ಚಿತ್ರದ ಟೈಟಲ್​ ಟ್ರ್ಯಾಕ್​​ ನುಡಿಸೋ ಮೂಲಕ ಎಸ್​ಆರ್​ಕೆ ಮೇಲಿನ ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿದರು. ಈ ವಿಡಿಯೋ ಆನ್​ಲೈನ್​ನಲ್ಲಿ ಕಾಡ್ಗಿಚ್ಚಿನ ವೇಗದಲ್ಲಿ ವೈರಲ್​ ಆಗಿದೆ. ಇದು ಶಾರುಖ್ ಖಾನ್ ಅವರ ಜನಪ್ರಿಯತೆಯನ್ನು ಸಾಬೀತುಪಡಿಸಿದೆ.

ಈ ವೈರಲ್ ವಿಡಿಯೋದಲ್ಲಿ, ಹಲವು ವಿದೇಶಿ ಪ್ರೇಕ್ಷಕರು ಈ ಮ್ಯೂಸಿಕ್​​ ಅನ್ನು ಆನಂದಿಸಿದ್ದಾರೆ. ಕೆಲವರು ಹಾಡನ್ನು ಹಾಡಿದ್ದಾರೆ. ಸಿನಿಮಾ, ಕಲಾವಿದರಿಗೆ ಗಡಿ, ಅಡೆತಡೆಗಳಿಲ್ಲ. ಎಲ್ಲೆಗಳನ್ನು ಮೀರಿ ಸಿನಿಪ್ರಿಯರನ್ನು ತಲುಪುತ್ತದೆ ಎಂಬ ವಿಚಾರವನ್ನು ಈ ವಿಡಿಯೋ ಸಾಬೀತುಪಡಿಸಿದೆ. ಪ್ರತಿಭಾವಂತ ಅಭಿಮಾನಿಯ ಪರ್ಫಾಮೆನ್ಸ್​ಗೆ ಫ್ಯಾನ್ಸ್ ಮೆಚ್ಚುಗೆ ಸೂಚಿಸಿದ್ದಾರೆ. ಕ್ರೀಡಾಂಗಣದಲ್ಲಿದ್ದವರು ಆತನಿಗೆ ಬೆಂಬಲ ಸೂಚಿಸಿ, ಅಭಿನಂದನೆ ತಿಳಿಸಿದ್ದಾರೆ.

ಇದನ್ನೂ ಓದಿ: 100 ಕೋಟಿ ಆಫರ್​ ಕೂಡ ಒಪ್ಪಿರಲಿಲ್ವಂತೆ ನಟಿ; ಆ ಸಿನಿಮಾಗೆ ಒಲ್ಲೆ ಎಂದಿದ್ದೇಕೆ ನಯನತಾರಾ?

ಕಿರುತೆರೆಯಿಂದ ವೃತ್ತಿಜೀವನ ಆರಂಭಿಸಿದ ಶಾರುಖ್​ ಅವರ ಸಿನಿಪಯಣ, ಜನಪ್ರಿಯತೆ, ಪ್ರತಿಭೆ, ಅಭಿಮಾನಿಗಳ ಮೇಲೆ ಬೀರಿದ ಪ್ರಭಾವ ವರ್ಣನಾತೀತ. ಇತ್ತೀಚಿನ ಸಂದರ್ಶನವೊಂದರಲ್ಲಿ ಶಾರುಖ್​​ ಅವರ ಸ್ನೇಹಿತ, ನಟ ವಿವೇಕ್ ವಾಸ್ವಾನಿ ಅವರು ಖಾನ್ ಅವರ ಆರಂಭಿಕ ದಿನಗಳನ್ನು ನೆನಪಿಸಿಕೊಂಡರು. ಎಸ್​ಆರ್​ಕೆ ಅವರ ತಾಯಿ, ಮಗ ಸೂಪರ್ ಸ್ಟಾರ್ ಆಗಬೇಕೆಂಬ ಕನಸು ಕಂಡಿದ್ದರು. ಆ ಕನಸನ್ನು ನನಸಾಗಿಸುವ ನಟನ ಸಂಕಲ್ಪ, ವೃತ್ತಿಜೀವನವನ್ನು ಯಶಸ್ವಿಯಾಗಿ ಮುಂದುವರಿಸಲು ಕಾರಣವಾಯಿತು ಎಂದು ತಿಳಿಸಿದ್ದರು.

ಇದನ್ನೂ ಓದಿ: 'ಪುಷ್ಪ 2' ಚಿತ್ರದ ಅತಿಥಿ ಪಾತ್ರದಲ್ಲಿ ಅಲ್ಲು ಅರ್ಜುನ್​​ ಪುತ್ರ

ಶಾರುಖ್ ಖಾನ್ ಅವರ ಸಿನಿಮಾ ವಿಚಾರ ಗಮನಿಸೋದಾದರೆ, 2023ರಲ್ಲಿ ಮೂರು ಬ್ಲಾಕ್‌ಬಸ್ಟರ್ ಹಿಟ್​ ಸಿನಿಮಾಗಳನ್ನು ನೀಡಿದ್ದಾರೆ. ಪಠಾಣ್​, ಜವಾನ್ ಮತ್ತು ಡಂಕಿ ಸಿನಿಮಾಗಳು ಬಾಕ್ಸ್ ಆಫೀಸ್​​ನಲ್ಲಿ ಧೂಳೆಬ್ಬಿಸಿದ್ದು ಮಾತ್ರವಲ್ಲದೇ ಹೊಸ ದಾಖಲೆಗಳನ್ನೂ ನಿರ್ಮಿಸಿವೆ. ಮುಂದೆ ಯಶ್​ ರಾಜ್​ ಫಿಲ್ಮ್ಸ್​​ನ ಸ್ಪೈ ಯೂನಿವರ್ಸ್‌ನ ಎಂಟನೇ ಸಿನಿಮಾ ಪಠಾನ್ 2ನಲ್ಲಿ ನಟಿಸಲು ಸಜ್ಜಾಗಿದ್ದಾರೆ. ಟೈಗರ್ ವರ್ಸಸ್ ಪಠಾಣ್​ನಲ್ಲಿ ಸಲ್ಮಾನ್ ಖಾನ್ ಜೊತೆ ರೋಚಕ ಸಿನಿಮೀಯ ಅನುಭನ ನೀಡಲು ಸಿದ್ಧತೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಇದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.