ETV Bharat / entertainment

'ಪ್ರೀತಿ, ನಗುವಿನ ಕ್ಷಣ': ಪ್ರಕೃತಿ ಮಡಿಲಲ್ಲಿ ಜೂ.ಎನ್​ಟಿಆರ್​, ನೀಲ್​​ ಕುಟುಂಬದ ಜೊತೆ ರಿಷಬ್​ ಶೆಟ್ಟಿ​ ಕುಟುಂಬ - Rishab Shetty With Jr NTR And Neel - RISHAB SHETTY WITH JR NTR AND NEEL

ಕಳೆದ ವಾರವಷ್ಟೇ ಜನಪ್ರಿಯ ನಟ ಜೂ.ಎನ್​ಟಿಆರ್​, ಹೆಸರಾಂತ ನಿರ್ದೇಶಕ ಪ್ರಶಾಂತ್​​ ನೀಲ್​​ ಫ್ಯಾಮಿಲಿ ಜೊತೆ ಕನ್ನಡದ ರಾಷ್ಟ್ರಪ್ರಶಸ್ತಿ ವಿಜೇತ ನಟ ರಿಷಬ್​ ಶೆಟ್ಟಿ​ ಅವರ ಕುಟುಂಬ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ಕೊಟ್ಟಿತ್ತು. ಇದೀಗ ಕಾಂತಾರ ತಾರೆಯ ಪತ್ನಿ ಪ್ರಗತಿ ಶೆಟ್ಟಿ ತಮ್ಮ ಸುತ್ತಾಟದ ಸುಂದರ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

Rishab Shetty with JR NTR Family
ಜೂ.ಎನ್​ಟಿಆರ್​ ಜೊತೆ ರಿಷಬ್​ ಶೆಟ್ಟಿ (ANI)
author img

By ETV Bharat Entertainment Team

Published : Sep 6, 2024, 2:25 PM IST

ಕಾಂತಾರ ಮತ್ತು ರಿಷಬ್​​ ಶೆಟ್ಟಿ ಬಗ್ಗೆ ವಿಶೇಷ ಪರಿಚಯ ಬೇಕಿಲ್ಲ. ಕನ್ನಡ ಚಿತ್ರರಂಗದಲ್ಲಿ ಡಿವೈನ್​ ಸ್ಟಾರ್ ಎಂದೇ ಖ್ಯಾತರಾದ ಇವರು ಆರ್​ಆರ್​ಆರ್​ ಸ್ಟಾರ್ ಜೂನಿಯರ್​​ ಎನ್​​ಟಿಆರ್​​​ ಜೊತೆ ಉತ್ತಮ ಸ್ನೇಹ ಸಂಬಂಧ ಹೊಂದಿದ್ದಾರೆ. ಅಗಾಗ್ಗೆ ತಮ್ಮ ಪ್ರೀತಿ, ವಿಶ್ವಾಸ ಮತ್ತು ಸ್ನೇಹವನ್ನು ಪರಸ್ಪರ ವ್ಯಕ್ತಪಡಿಸುತ್ತಲೇ ಇರುತ್ತಾರೆ. ಅದರಂತೆ ಇತ್ತೀಚೆಗೆ ಇವರ ಕುಟುಂಬದ ಫೋಟೋ, ವಿಡಿಯೋಗಳು ಸಖತ್​​ ಸದ್ದು ಮಾಡಿದ್ದವು. ಇದೀಗ ಹೊಸದಾಗಿ ಶೇರ್ ಆಗಿರುವ ಫೋಟೋಗಳೂ ಸಹ ಸಾಮಾಜಿಕ ಜಾಲತಾಣದಲ್ಲಿ ಜಾಗ ಗಿಟ್ಟಿಸಿಕೊಂಡಿವೆ.

ತೆಲುಗು ಚಿತ್ರರಂಗದ ಹೆಸರಾಂತ ಜೂನಿಯರ್ ಎನ್‌ಟಿಆರ್ ಅವರು ಇತ್ತೀಚೆಗಷ್ಟೇ ಕುಂದಾಪುರದಲ್ಲಿರುವ ತಮ್ಮ ತಾಯಿಯ ತವರು ಮನೆಗೆ ಭೇಟಿ ಕೊಟ್ಟಿದ್ದರು. ಆ ಒಂದೆಡರಡು ದಿನಗಳಲ್ಲಿ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ಕೊಟ್ಟಿದ್ದಾರೆ. ಆರ್​ಆರ್​ಆರ್​ ಸ್ಟಾರ್​ನ ಕುಟುಂಬಕ್ಕೆ ಡಿವೈನ್​ ಸ್ಟಾರ್​​ ರಿಷಬ್​ ಶೆಟ್ಟಿ, ಕೆಜಿಎಫ್​ ಸ್ಟಾರ್​ ಡೈರೆಕ್ಟರ್​ ಪ್ರಶಾಂತ್​ ನೀಲ್​​​ ಕುಟುಂಬ ಸಾಥ್​​ ನೀಡಿತ್ತು. ರಿಷಬ್​ ಬೆಸ್ಟ್ ಫ್ರೆಂಡ್​ ಪ್ರಮೋದ್​ ಶೆಟ್ಟಿ ಸಹ ಜೊತೆಗಿದ್ದರು. ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ಕೊಡುವ ಮೂಲಕ ಜನಪ್ರಿಯ ನಟ ಜೂ.ಎನ್​ಟಿಆರ್​ ಅವರು ತಮ್ಮ ತಾಯಿಯ ಬಹುಕಾಲದ ಕನಸನ್ನು ಈಡೇರಿಸಿದ್ದರು.

ಇದನ್ನೂ ಓದಿ: 'ಕೊಲೆ ಪ್ರಕರಣದಿಂದ ದರ್ಶನ್ ಬೇಗ ಹೊರಬರಲಿ, ಚಿತ್ರರಂಗಕ್ಕೆ ಅವರ ಕೊಡುಗೆ ಅಪಾರ': ನೆನಪಿರಲಿ ಪ್ರೇಮ್ - Nenapirali Prem

ಇದೀಗ ಕಾಂತಾರ ಸ್ಟಾರ್​​ ರಿಷಬ್​ ಶೆಟ್ಟಿ ಅವರ ಪತ್ನಿ ಪ್ರಗತಿ ಶೆಟ್ಟಿ ತಮ್ಮ ಅಧಿಕೃತ ಇನ್​​ಸ್ಟಾಗ್ರಾಮ್​ನಲ್ಲಿ ಸುತ್ತಾಟದ ಸುಂದರ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಪೋಸ್ಟ್​​ಗೆ, ''ಪ್ರೀತಿ ಮತ್ತು ನಗುವಿನಿಂದ ಸುತ್ತುವರೆದ ಸಮಯ. ಈ ಕ್ಷಣಗಳಿಗಾಗಿ ಯಾವಾಗಲೂ ಕೃತಜ್ಞಳಾಗಿರುತ್ತೇನೆ. ಹ್ಯಾಪಿಟೈಮ್ಸ್, ಫ್ರೆಂಡ್ಸ್ ಲೈಕ್ ಫ್ಯಾಮಿಲಿ'' ಎಂದು ಬರೆದುಕೊಂಡಿದ್ದಾರೆ. ಪ್ರಕೃತಿ ಮಡಿಲಲ್ಲಿ ಚಿತ್ರರಂಗದ ಪ್ರತಿಭೆಗಳು ಗುಣಮಟ್ಟದ ಸಮಯ ಕಳೆದಿರೋದನ್ನು ಈ ಫೋಟೋಗಳಲ್ಲಿ ಕಾಣಬಹುದು. ಈ ಫೋಟೋಗಳಿಗೆ ಅಭಿಮಾನಿಗಳು ಪ್ರೀತಿಯ ಧಾರೆಯೆರೆಯುತ್ತಿದ್ದಾರೆ.

ಇದನ್ನೂ ಓದಿ: 'ಎಮರ್ಜೆನ್ಸಿ' ಸಿನಿಮಾ ಮತ್ತೆ ಮುಂದೂಡಿಕೆ: ಕಂಗನಾ ರಣಾವತ್​​​ಗೆ ಸಂಕಷ್ಟ - Emergency Movie Delay

ಕಳೆದ ಶನಿವಾರದಂದು ರಿಷಬ್​​, ಜೂ.ಎನ್​ಟಿಆರ್, ಪ್ರಶಾಂತ್​ ನೀಲ್​​ ಕುಟುಂಬ​ ಉಡುಪಿಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಶ್ರೀಕೃಷ್ಣಮಠಕ್ಕೆ ಭೇಟಿ ಕೊಟ್ಟಿದ್ದರು. ''ನನ್ನನ್ನು ಕುಂದಾಪುರಕ್ಕೆ ಕರೆತಂದು, ಉಡುಪಿ ಶ್ರೀಕೃಷ್ಣಮಠದಲ್ಲಿ ದೇವರ ದರ್ಶನ ಮಾಡಿಸಬೇಕೆಂಬುದು ನನ್ನ ತಾಯಿಯ ಬಹುಕಾಲದ ಕನಸ್ಸಾಗಿತ್ತು. ಅದೀಗ ನನಸಾಗಿದೆ. ಅವರ ಹುಟ್ಟುಹಬ್ಬಕ್ಕೆ ನಾನು ಕೊಡಬಹುದಾದ ಉತ್ತಮ ಉಡುಗೊರೆಯಿದು. ನನಗೆ ಸಾಥ್ ನೀಡಿರುವ ರಿಷಬ್​ ಶೆಟ್ಟಿ ಮತ್ತು ಪ್ರಶಾಂತ್​​ ನೀಲ್​ ಅವರಿಗೆ ಕೃತಘ್ಞತೆ'' ಎಂದು ತಿಳಿಸಿದ್ದರು. ಭಾನುವಾರ ಕೊಲ್ಲೂರಿಗೆ ಭೇಟಿ ಕೊಟ್ಟಿದ್ದರು. ಆ ನಂತರ ಮೂಡುಗಲ್ಲು ಕೇಶವನಾಥೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿರುವ ವಿಶೇಷ ವಿಡಿಯೋ ಹಂಚಿಕೊಂಡು ಗಮನ ಸೆಳೆದಿದ್ದರು. ಇದೀಗ ಪ್ರಕೃತಿ ಮಡಿಲಲ್ಲಿರುವ ಫೋಟೋಗಳು ಸಖತ್​​ ಸದ್ದು ಮಾಡುತ್ತಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.