ETV Bharat / entertainment

ಆಸ್ಕರ್ ಸದಸ್ಯರಾಗಲು ರಾಜಮೌಳಿ ದಂಪತಿ ಸೇರಿ ಭಾರತದ ಹಲವರಿಗೆ ಆಹ್ವಾನ - SS Rajamouli got invitation

author img

By ETV Bharat Karnataka Team

Published : Jun 26, 2024, 1:56 PM IST

ಆಸ್ಕರ್ ಸದಸ್ಯರಾಗಲು ಅಕಾಡೆಮಿಯು ನಿರ್ದೇಶಕ ಎಸ್​ಎಸ್​ ರಾಜಮೌಳಿ ಮತ್ತು ಅವರ ಪತ್ನಿ ರಮಾ ಸೇರಿದಂತೆ ಭಾರತೀಯ ಪ್ರತಿಭಾವಂತರಿಗೆ ಆಹ್ವಾನ ನೀಡಿದೆ.

SS Rajamouli And Wife Rama
ರಾಜಮೌಳಿ ದಂಪತಿ (ANI Photo)

ಎಸ್​.ಎಸ್​​ ರಾಜಮೌಳಿ ಭಾರತೀಯ ಚಿತ್ರರಂಗವನ್ನು ವಿಶೇಷವಾಗಿ ಟಾಲಿವುಡ್​ ಅನ್ನು ವಿಶ್ವಮಟ್ಟಕ್ಕೆ ಪರಿಚಯಿಸಿದವರು. ಬಾಹುಬಲಿ ಮೂಲಕ ಖ್ಯಾತಿ ಹೆಚ್ಚಿಸಿಕೊಂಡಿದ್ದ ಜಕ್ಕಣ್ಣ, ಆರ್​ಆರ್​ಆರ್​ ಮೂಲಕ ಆಸ್ಕರ್​ ವೇದಿಕೆಯಲ್ಲಿ ಮಿಂಚು ಹರಿಸಿದ್ದರು. ಇದೀಗ ವಿಶ್ವಮಟ್ಟದ ವೇದಿಕೆಯಿಂದಲೇ ಜನಪ್ರಿಯ ನಿರ್ದೇಶಕನಿಗೆ ಆಹ್ವಾನ ಬಂದಿದೆ.

ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ ಅಂಡ್ ಸೈನ್ಸಸ್ 2024ರ ಸದಸ್ಯರಾಗಲು ರಾಜಮೌಳಿ ಮತ್ತು ಅವರ ಪತ್ನಿ ರಮಾ ಸೇರಿದಂತೆ ಪ್ರತಿಭಾವಂತರಿಗೆ ಆಹ್ವಾನ ಕಳುಹಿಸಿದೆ. ಈ ಆಹ್ವಾನ 57 ದೇಶಗಳಿಂದ 487 ಸದಸ್ಯರನ್ನು ಒಳಗೊಂಡಿದೆ. ಅಕಾಡೆಮಿಯ ಅಧಿಕೃತ ಇನ್​ಸ್ಟಾಗ್ರಾಮ್​​ ಹೊಸ ಆಹ್ವಾನಿತ ಸದಸ್ಯರನ್ನು ಘೋಷಿಸಿದೆ. ಜೊತೆಗೆ "ಅಕಾಡೆಮಿಗೆ ಹೊಸದಾಗಿ ಆಹ್ವಾನಿಸಲ್ಪಟ್ಟ ಸದಸ್ಯರನ್ನು ಘೋಷಿಸಲು ನಾವು ಹೆಮ್ಮೆಪಡುತ್ತೇವೆ'' ಎಂದು ಬರೆದುಕೊಂಡಿದೆ.

ಈ ಗಣ್ಯರ ಗುಂಪಿನಲ್ಲಿ ಎಸ್‌ಎಸ್ ರಾಜಮೌಳಿ ಅವರ ಹೆಸರಿರುವುದು ಅಭಿಮಾನಿ ಬಳಗದಲ್ಲಿ ಸಂತಸದ ಅಲೆಯೆಬ್ಬಿಸಿದೆ. ಜೊತೆಗೆ ಚಿತ್ರರಂಗದಲ್ಲಿ ಅವರ ಸಾಧನೆ, ಯಶಸ್ಸಿಗಿದು ಹಿಡಿದ ಕೈಗನ್ನಡಿಯಂತಿದೆ. 2022ರ ಬ್ಲಾಕ್‌ಬಸ್ಟರ್ ಆರ್​ಆರ್​ಆರ್​ ಸಿನಿಮಾವು ಜನಪ್ರಿಯ ನಿರ್ದೇಶಕರ ಜನಪ್ರಿಯತೆಯನ್ನು ದ್ವಿಗುಣಗೊಳಿಸಿದೆ. ಹಿಂದಿನ ಬಾಹುಬಲಿ ಸರಣಿ ಮತ್ತು ಈಗಾದ ಯಶಸ್ಸಿನಲ್ಲಿದ್ದ ಜಕ್ಕಣ್ಣನ ಸಾಧನೆ ಗಡಿ ಮೀರಿದ್ದು, ಆರ್​ಆರ್​ಆರ್​ ಸಿನಿಮಾ ಮೂಲಕ. ಈ ಸಿನಿಮಾ ಸಾಧನೆಗಳು ಅವರನ್ನು ಭಾರತದ ಅತ್ಯಂತ ಗೌರವಾನ್ವಿತ, ಯಶಸ್ವಿ, ಬಹುಬೇಡಿಕೆ ನಿರ್ದೇಶಕರನ್ನಾಗಿಸಿತು. ಇದೇ ಆರ್​ಆರ್​ಆರ್​ ಸಿನಿಮಾದ ನಾಟು ನಾಟು ಹಾಡು ಕಳೆದ ವರ್ಷ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಮುಡಿಗೇರಿಸಿಕೊಂಡಿತ್ತು. ಸದ್ಯ ಆಸ್ಕರ್ ಸದಸ್ಯರಾಗಲು ರಾಜಮೌಳಿ ದಂಪತಿ ಆಹ್ವಾನ ಸ್ವೀಕರಿಸಿರೋದು ಗೌರವಾನ್ವಿತ ವಿಚಾರ.

ಇದನ್ನೂ ಓದಿ: 2005ರಲ್ಲಿ ನಡೆದ ಪ್ರೇಮಕಥೆ: ಯುವ ಪ್ರತಿಭೆಗಳ 'ಕಾಗದ' ಚಿತ್ರದ ಟ್ರೇಲರ್​ ರಿಲೀಸ್ - Kaagada Trailer

ಭಾರತೀಯ ಆಹ್ವಾನಿತರ ಪಟ್ಟಿಯಲ್ಲಿ ಶಬಾನಾ ಅಜ್ಮಿ, ರಿತೇಶ್ ಸಿಧ್ವಾನಿ, ಶೀತಲ್ ಶರ್ಮಾ, ಆನಂದ್ ಕುಮಾರ್ ಟಕ್ಕರ್, ನಿಶಾ ಪಹುಜಾ, ಹೇಮಲ್ ತ್ರಿವೇದಿ, ಗಿತೇಶ್ ಪಾಂಡ್ಯ, ಛಾಯಾಗ್ರಾಹಕ ರವಿವರ್ಮಾ, ನಿರ್ದೇಶಕಿ ರಿಮಾ ದಾಸ್ ಮತ್ತು ಪ್ರೇಮ್ ರಕ್ಷಿತ್ ಕೂಡಾ ಇದ್ದಾರೆ. ಆಹ್ವಾನವನ್ನು ಸ್ವೀಕರಿಸಿದ ನಂತರ, ಇವರು ಅಕಾಡೆಮಿಯ ಶ್ರೇಣಿಗೆ ಸೇರುತ್ತಾರೆ. ಈ ಮೂಲಕ ಸದಸ್ಯತ್ವದ ಸಂಖ್ಯೆಯನ್ನು 10,910ಕ್ಕೆ ಹೆಚ್ಚಿಸುತ್ತಾರೆ. ಸದಸ್ಯರು 2025ರಲ್ಲಿ ಮುಂಬರುವ 97ನೇ ಆಸ್ಕರ್‌ಗೆ ಮತ ಚಲಾಯಿಸಲು ಅರ್ಹರಾಗುತ್ತಾರೆ.

ಇದನ್ನೂ ಓದಿ: ರೊಮ್ಯಾಂಟಿಕ್ ಆಲ್ಬಂ ಸಾಂಗ್​ನಲ್ಲಿ ಸಂಜನಾ ದಾಸ್, ಗಾಯಕ ಸಂಜಿತ್ ಹೆಗ್ಡೆ ಮಿಂಚು - Nange Allava song

ಕೊನೆಯದಾಗಿ ಆರ್​ಆರ್​ಆರ್​ ನಿರ್ದೇಶಿಸಿದ್ದ ರಾಜಮೌಳಿ ಸದ್ಯ ತಮ್ಮ ಮುಂದಿನ ಪ್ರಾಜೆಕ್ಟ್ ಕಡೆ ಗಮನ ಹರಿಸಿದ್ದಾರೆ. ಮಹೇಶ್ ಬಾಬು ಅಭಿನಯದ ಆಫ್ರಿಕನ್ ಸಾಹಸ ಸಿನಿಮಾದ ತಯಾರಿಯಲ್ಲಿ ಬ್ಯುಸಿಯಾಗಿದ್ದಾರೆ. ಪ್ರೀ-ಪ್ರೊಡಕ್ಷನ್ ಹಂತ ಭರದಿಂದ ಸಾಗಿದೆ. ನಾಯಕ ನಟ ತಮ್ಮ ಪಾತ್ರಕ್ಕಾಗಿ ಈಗಾಗಲೇ ಹಲವು ಲುಕ್ ಟೆಸ್ಟ್​​ಗಳನ್ನು ಪೂರ್ಣಗೊಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.