ಚಿತ್ರ ವಿಚಿತ್ರ ಬಟ್ಟೆಗಳನ್ನು ಧರಿಸುತ್ತಾ ಇಂಟರ್‌ನೆಟ್ ಸೆನ್ಸೇಷನ್ ಆಗಿರುವ ಹಿಂದಿ ಬಿಗ್ ಬಾಸ್ ಒಟಿಟಿ ತಾರೆ ಉರ್ಫಿ ಜಾವೇದ್ ಸೋಷಿಯಲ್ ಮೀಡಿಯಾದಲ್ಲಿ ಹೊಸ ಮ್ಯಾಜಿಕ್ ಮಾಡಿದ್ದಾರೆ. ಹೆಚ್ಚಾಗಿ ಬೋಲ್ಡ್ ಅವತಾರದಲ್ಲೇ ಕಾಣಿಸಿಕೊಳ್ಳುವ ಉರ್ಫಿ ಈ ಬಾರಿ ಚೆಂದದ ಗೌನ್ ಧರಿಸಿ ದೇಹಸಿರಿ ಪ್ರದರ್ಶಿಸಿದ್ದಾರೆ. ಇದು ಸಾಮಾನ್ಯ ಗೌನ್ ಅಲ್ಲ. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ವಿಡಿಯೋ ನೋಡಿದವರ ಪೈಕಿ ಹೆಚ್ಚಿನವರು ಹುಬ್ಬೇರಿಸಿದ್ದಾರೆ.
ಹೌದು, ಉರ್ಫಿ ಈ ಸಲ 3D ಫ್ಲವರ್ ಗೌನ್ ಧರಿಸಿದ್ದಾರೆ. ಇದರಲ್ಲಿರುವ ಮ್ಯಾಜಿಕಲ್ ಬಟರ್‌ಫ್ಲೈ, ಪ್ಲವರ್ ಥೀಮ್ ಗೌನ್ ಸಾಮಾಜಿಕ ಜಾಲತಾಣದಲ್ಲಿ ವಿಶೇಷವಾಗಿ ಗಮನ ಸೆಳೆಯುತ್ತಿದ್ದು, ಸಾಕಷ್ಟು ಮಂದಿ ಲೈಕ್ ಬಟನ್ ಒತ್ತಿದ್ದಾರೆ.
ಉರ್ಫಿ ಧರಿಸಿರುವ ಬ್ಲ್ಯಾಕ್ ಗೌನ್ ಮೇಲಿರುವ ಎಲೆ, ಹೂಗಳು ತನ್ನಷ್ಟಕ್ಕೆ ಅರಳಿಕೊಳ್ಳುತ್ತವೆ. ಒಂದಿಷ್ಟು ಡಿಸೈನ್ಸ್ ನಟಿಯ ಸುತ್ತ ಬೀಳುತ್ತವೆ. ಅವು ಹೂ ಮತ್ತು ಚಿಟ್ಟೆಯಾಕಾರದಲ್ಲಿ ಕಂಡುಬಂದಿದ್ದು ಅದ್ಭುತ ಗಾರ್ಡನ್ ಥೀಮ್ ಡ್ರೆಸ್ನಂತೆ ಭಾಸವಾಗುತ್ತದೆ.
ಮುಂಬೈನ ಪಾಪರಾಜಿಗಳು ಮಾತ್ರವಲ್ಲದೇ ಸ್ವತಃ ನಟಿ ಕೂಡ ತಮ್ಮ ಅಧಿಕೃತ ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ಗಳಲ್ಲಿ ತಮ್ಮ ಈ ವಿಡಿಯೋವನ್ನು ಶೇರ್ ಮಾಡಿದ್ದಾರೆ. ವಿಡಿಯೋಗಳು ಶರವೇಗದಲ್ಲಿ ವೈರಲ್ ಆಗಿವೆ. ಅಭಿಮಾನಿಗಳು ಪ್ರೀತಿ ವ್ಯಕ್ತಪಡಿಸುತ್ತಿದ್ದಾರೆ. ಕಾಮೆಂಟ್ ಸೆಕ್ಷನ್ನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ. ನಟಿಯ ಹೆಸರು ಫ್ಯಾಷನ್ ಶೋ ಮೆಟ್ ಗಾಲಾದೊಂದಿಗೂ ಸೇರಿಕೊಂಡಿದೆ.
ಅಭಿಮಾನಿಯೊಬ್ಬರು ಪ್ರತಿಕ್ರಿಯಿಸಿ, 'ಉರ್ಫಿ ತಮ್ಮ ಮೆಟ್ ಗಾಲಾ 2024ರ ಕ್ಷಣದಲ್ಲಿ ಜೀವಿಸುತ್ತಿದ್ದಾರೆ, ಉರ್ಫಿ ನೀವೂ ಹೋಗಿ, ನೀವು ನಿಜವಾಗಿಯೂ ಉತ್ತಮವಾಗಿ ಕಾಣುತ್ತಿದ್ದೀರಿ' ಎಂದು ತಿಳಿಸಿದ್ದಾರೆ.
ಮತ್ತೋರ್ವ ಅಭಿಮಾನಿ, ಉರ್ಫಿ ಸುಂದರವಾಗಿ ಕಾಣುತ್ತಿದ್ದಾರೆ ಎಂಬರ್ಥದಲ್ಲಿ ಬರೆದಿದ್ದಾರೆ. ಅಭಿಮಾನಿಗಳು ನಟಿಯನ್ನು ಮೆಟ್ ಗಾಲಾ 2024ರಲ್ಲಿ ನೋಡಲು ಬಯಸಿದ್ದಾರೆ. ಈ ಶೋ ಮೇ 6, 2024ರಿಂದ ಪ್ರಾರಂಭವಾಗುತ್ತದೆ. ಈ ಫ್ಯಾಶನ್ ಶೋನಲ್ಲಿ ವಿಭಿನ್ನ ಥೀಮ್ನ ಡ್ರೆಸ್ ತೊಟ್ಟು ಹೆಸರಾಂತ ಸೆಲೆಬ್ರಿಟಿಗಳು ಕಾಣಿಸಿಕೊಳ್ಳುತ್ತಾರೆ
ಇದನ್ನೂ ಓದಿ: ಬೆಂಗಳೂರಿನಲ್ಲಿ ಅನುಷ್ಕಾ ಶರ್ಮಾ ಬರ್ತ್ಡೇ: ಫೋಟೋ ಹಂಚಿಕೊಂಡ ಕೊಹ್ಲಿ - Anushka Birthday Celebration
ಉರ್ಫಿ ವೃತ್ತಿಜೀವನ ಗಮನಿಸುವುದಾದರೆ, ಜನಪ್ರಿಯ ಟಿವಿ ಶೋಗಳಾದ ಯೇ ರಿಶ್ತಾ ಕ್ಯಾ ಕೆಹ್ಲಾತಾ ಹೈ ಮತ್ತು ಕಸೌತಿ ಝಿಂದಗಿ ಕಿ ಸೇರಿದಂತೆ ಅನೇಕ ಧಾರಾವಾಹಿಗಳಲ್ಲಿ ಕೆಲಸ ಮಾಡಿದ್ದಾರೆ. ಅವುಗಳ ನಂತರ, ಹಿಂದಿ ಬಿಗ್ ಬಾಸ್ ಒಟಿಟಿಯಲ್ಲಿ ಭಾಗವಹಿಸಿದ್ದರು. ಟಿವಿ ರಿಯಾಲಿಟಿ ಶೋ ಸ್ಪ್ಲಿಟ್ಸ್ವಿಲ್ಲಾದಲ್ಲೂ ನಟಿ ಕಾಣಿಸಿಕೊಂಡಿದ್ದರು. ಇನ್ನೂ, ಏಕ್ತಾ ಕಪೂರ್ ಅವರ ಲವ್ ಸೆಕ್ಸ್ ಔರ್ ಧೋಖಾ 2 ಮೂಲಕ ಬಾಲಿವುಡ್ ಪ್ರವೇಶಿಸಲು ಸಜ್ಜಾಗಿದ್ದಾರೆ.
ಇದನ್ನೂ ಓದಿ: ಅಂಬಾರಿ ಹೊತ್ತ ಅರ್ಜುನನ ಸಮಾಧಿಗೆ ದನಿ ಎತ್ತಿದ ಚಾಲೆಂಜಿಂಗ್ ಸ್ಟಾರ್ ದರ್ಶನ್ - Darshan