ETV Bharat / entertainment

ಕಮಲ್ ಹಾಸನ್​ ನಟನೆಯ 'ಥಗ್​​ ಲೈಫ್​​'ನಿಂದ ಸಿಲಂಬರಸನ್ ಫಸ್ಟ್ ಲುಕ್ ಔಟ್​ - Silambarasan First Look - SILAMBARASAN FIRST LOOK

ಮಣಿರತ್ನಂ ನಿರ್ದೇಶನದ ಬಹುನಿರೀಕ್ಷಿತ ಚಿತ್ರ 'ಥಗ್​​ ಲೈಫ್​​'ನಿಂದ ನಟ ಸಿಲಂಬರಸನ್ ಟಿ.ಆರ್ ಅವರ ಫಸ್ಟ್ ಲುಕ್​ ಅನಾವರಣಗೊಂಡಿದೆ.

Silambarasan First Look
ಸಿಲಂಬರಸನ್ ಫಸ್ಟ್ ಲುಕ್ (Photo: X-Raaj Kamal Films International)
author img

By ETV Bharat Karnataka Team

Published : May 8, 2024, 12:54 PM IST

'ಥಗ್​​ ಲೈಫ್​​' ಈ ಸಾಲಿನ ಬಹುನಿರೀಕ್ಷಿತ ಚಿತ್ರಗಳಲ್ಲೊಂದು. ದಕ್ಷಿಣ ಚಿತ್ರರಂಗದ ಹೆಸರಾಂತ ನಟ ಕಮಲ್ ಹಾಸನ್ ಮುಖ್ಯಭೂಮಿಕೆಯಲ್ಲಿರುವ ಹಿನ್ನೆಲೆ ಸಿನಿಪ್ರಿಯರು ಸಾಕಷ್ಟು ನಿರೀಕ್ಷೆಗಳನ್ನಿಟ್ಟುಕೊಂಡಿದ್ದಾರೆ. ಚಿತ್ರತಂಡ ಸಹ ಪ್ರೇಕ್ಷಕರ ಕುತೂಹಲ ಹೆಚ್ಚಿಸುವ ಕೆಲಸವನ್ನು ಮುಂದುವರಿಸಿದ್ದಾರೆ. ಅದರಂತೆ ಇಂದು ಕೂಡ ವಿವಿಧ ಸೋಷಿಯಲ್​ ಮೀಡಿಯಾ ಪ್ಲಾಟ್​ಫಾರ್ಮ್​​ಗಳಲ್ಲಿ 'ಥಗ್​​ ಲೈಫ್​​' ಜಾಗ ಗಿಟ್ಟಿಸಿಕೊಂಡಿದೆ. ​​

ಜನಪ್ರಿಯ ನಟ ಕಮಲ್ ಹಾಸನ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ 'ಥಗ್ ಲೈಫ್' ಚಿತ್ರದ ಹಿಂದಿರುವ ನಿರ್ಮಾಪಕರು ಇಂದು (ಮೇ 8, ಬುಧವಾರ) ನಟ ಸಿಲಂಬರಸನ್ ಟಿ.ಆರ್ ಅವರ ಫಸ್ಟ್ ಲುಕ್ ಅನ್ನು ಅನಾವರಣಗೊಳಿಸಿದ್ದಾರೆ. ಚಿತ್ರದಲ್ಲಿ ಸಿಲಂಬರಸನ್ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ. ಈ ಹಿಂದೆ ಕಮಲ್ ಹಾಸನ್ ಜೊತೆ ದುಲ್ಕರ್ ಸಲ್ಮಾನ್​​​​ ಪ್ರಮುಖ ಪಾತ್ರ ವಹಿಸುತ್ತಾರೆ ಎಂದು ಹೇಳಲಾಗಿತ್ತು. ಆದಾಗ್ಯೂ ದುಲ್ಕರ್ ಟೈಟ್​ ಶೂಟಿಂಗ್​ ಶೆಡ್ಯೂಲ್​, ಡೇಟ್ಸ್ ಕೊರತೆ ಹಿನ್ನೆಲೆ ಈ ಚಿತ್ರದಿಂದ ಹೊರನಡೆಯಬೇಕಾಯಿತು. ದುಲ್ಕರ್ ನಂತರ ನಟ ಸಿಲಂಬರಸನ್ ಟಿ.ಆರ್ ಈ ಚಿತ್ರತಂಡದ ಭಾಗವಾದರು.

ಚಲನಚಿತ್ರ ನಿರ್ಮಾಣ ಸಂಸ್ಥೆ 'ರಾಜ್​ ಕಮಲ್​ ಫಿಲ್ಮ್ಸ್ಇಂಟರ್​ನ್ಯಾಶನಲ್​​​​' ಎಕ್ಸ್​ನಲ್ಲಿ ನಟ ಸಿಲಂಬರಸನ್ ಟಿ ಆರ್​​ ಅವರ ಮೊದಲ ನೋಟವನ್ನು ಹಂಚಿಕೊಂಡಿದೆ. ಜೊತೆಗೆ "In the Realms of Dust, a New Thug Arises'' ಎಂದು ಕ್ಯಾಪ್ಷನ್​ ಕೊಟ್ಟಿದೆ. ಈ ಪೋಸ್ಟರ್‌ನಲ್ಲಿ, ನಟ ತೀವ್ರ ನೋಟದಲ್ಲಿ ಕಾಣಿಸಿಕೊಂಡಿದ್ದು, ಕ್ಯಾಮರಾದತ್ತ ಗನ್ ತೋರಿಸುತ್ತಿರುವುದನ್ನು ಕಾಣಬಹುದು. ನಟನ ಖಡಕ್​ ಲುಕ್​​​ಗೆ ವಿವಿಧ ರೀತಿಯ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಜೊತೆಗೆ, ಸಿನಿಪ್ರಿಯರು ಸಿನಿಮಾ ವೀಕ್ಷಿಸುವ ಕುತೂಹಲ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ: ನೇಮದಲ್ಲಿ ಪಾಲ್ಗೊಂಡ ಕೆಜಿಎಫ್ ನಟಿ ಶ್ರೀನಿಧಿ ಶೆಟ್ಟಿ: ಮತ್ತಷ್ಟು ಎತ್ತರಕ್ಕೆ ಬೆಳೆಯುವ ಅಭಯ ನೀಡಿದ ದೈವ - Srinidhi Shetty

ಭಾರತೀಯ ಚಿತ್ರರಂಗದ ಹೆಸರಾಂತ ನಿರ್ದೇಶಕ ಮಣಿರತ್ನಂ ಈ ಚಿತ್ರಕ್ಕೆ ಆ್ಯಕ್ಷನ್​ ಕಟ್​ ಹೇಳುತ್ತಿದ್ದಾರೆ. 1987ರ ಕ್ರೈಮ್ ಆ್ಯಕ್ಷನ್ ಸಿನಿಮಾ 'ನಾಯಕನ್‌'ನಲ್ಲಿ ಈ ಇಬ್ಬರು ಲೆಜೆಂಡ್ಸ್ ಕೆಲಸ ಮಾಡಿದ್ದರು. ಅದಾದ ಬಳಿಕ 'ಥಗ್​​ ಲೈಫ್​​' ಈ ಇಬ್ಬರನ್ನು ಒಟ್ಟು ಸೇರಿಸಿದೆ. ಅಲ್ಲದೇ 2018ರ ಚೆಕ್ಕಾ ಚಿವಂತ ವಾನಂನಲ್ಲಿ ಮಣಿರತ್ನಂ ಮತ್ತು ಸಿಲಂಬರಸನ್ ಟಿಆರ್ ಕೆಲಸ ಮಾಡಿದ್ದು, 'ಥಗ್​​ ಲೈಫ್​​' ಅವರ ಎರಡನೇ ಚಿತ್ರ.

'ಥಗ್​​ ಲೈಫ್​​' ಎಂಬ ಈ ಆ್ಯಕ್ಷನ್ ಡ್ರಾಮಾದಲ್ಲಿ ತ್ರಿಶಾ ಕೃಷ್ಣನ್, ಅಭಿರಾಮಿ, ನಾಸರ್, ಗೌತಮ್ ಕಾರ್ತಿಕ್, ಜೋಜು ಜಾರ್ಜ್ ಮತ್ತು ಐಶ್ವರ್ಯಾ ಲಕ್ಷ್ಮಿ ಸೇರಿದಂತೆ ದೊಡ್ಡ ತಾರಾಗಣವನ್ನು ಕಾಣಬಹುದು. ಥಗ್ ಲೈಫ್‌ಗೆ ಸಂಗೀತವನ್ನು ಭಾರತದ ಹೆಸರಾಂತ ಸಂಯೋಜಕ ಎಆರ್ ರೆಹಮಾನ್ ಸಂಯೋಜಿಸುತ್ತಿದ್ದಾರೆ. ಈ ಹಿಂದೆ ಮಣಿರತ್ನಂ ಪ್ರೊಜೆಕ್ಟ್​ಗಳಲ್ಲಿ ಕೆಲಸ ಮಾಡಿದ್ದಾರೆ. ಇನ್ನು, ಕಮಲ್ ಹಾಸನ್ ಅವರೊಂದಿಗೆ ರೆಹಮಾನ್ ಅವರದ್ದು ಮೂರನೇ ಚಿತ್ರ. ಸಿನಿಮಾ ಬಿಡುಗಡೆ ದಿನಾಂಕ ಇನ್ನಷ್ಟೇ ಘೋಷಣೆಯಾಗಬೇಕಿದ್ದರೂ, ಚಿತ್ರದ ಸುತ್ತಲಿರುವ ಕುತೂಹಲ, ನಿರೀಕ್ಷೆ ದೊಡ್ಡ ಮಟ್ಟಿಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.