ETV Bharat / entertainment

'ನಮ್‌‌ ಮನ್ಸು, ಒಳ್ಳೆದ್ ಮಾಡಿದ್ರೆ ದೇವ್ರು, ಏನಂತೀರಾ?': ನಾಳೆ ಸಿದ್ಲಿಂಗು ಸೀಕ್ವೆಲ್‌ ಮುಹೂರ್ತ - Sidlingu Sequel

ಸಿದ್ಲಿಂಗು ಸೀಕ್ವೆಲ್​ನ ಮುಹೂರ್ತ ಸಮಾರಂಭ ನಾಳೆ ಬೆಳಗ್ಗೆ 9 ಗಂಟೆಗೆ ನೆರವೇರಲಿದೆ.

Sidlingu Sequel Muhurta
ನಾಳೆ ಸಿದ್ಲಿಂಗು ಸೀಕ್ವೆಲ್‌ ಮುಹೂರ್ತ
author img

By ETV Bharat Karnataka Team

Published : Mar 21, 2024, 8:34 AM IST

ನಾಳೆ ಸಿದ್ಲಿಂಗು ಸೀಕ್ವೆಲ್‌ ಮುಹೂರ್ತ

2012ರಲ್ಲಿ ತೆರೆ ಕಂಡ ಸ್ಯಾಂಡಲ್​​​ವುಡ್​ನ ಮೋಹಕತಾರೆ ರಮ್ಯಾ ಹಾಗೂ ಯೋಗೇಶ್‌ ಕಾಂಬಿನೇಶನ್‌ನ 'ಸಿದ್ಲಿಂಗು' ಸಿನಿಮಾವನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದರು. ಚಿತ್ರದ ಹಾಡುಗಳು ಹಿಟ್‌ ಆಗಿದ್ದವು. ಡೈಲಾಗ್ಸ್ ವಿಶೇಷವಾಗಿ ಗಮನ ಸೆಳೆದಿತ್ತು. ಇದೀಗ ನಿರ್ದೇಶಕ ವಿಜಯ್‌ ಪ್ರಸಾದ್‌ 'ಸಿದ್ಲಿಂಗು ಸೀಕ್ವೆಲ್‌' ಮಾಡಹೊರಟಿರುವುದು ನಿಮಗೆ ತಿಳಿದ ವಿಚಾರವೇ.

ಕೆಲವು ತಿಂಗಳ ಹಿಂದೆ ನಿರ್ದೇಶಕ ವಿಜಯ್ ಪ್ರಸಾದ್, ''ಸಿದ್ಲಿಂಗು ಭಾಗ 2 ಬರಲಿದೆ. ಸ್ಕ್ರಿಪ್ಟ್‌ ಕೆಲಸಗಳು ಕೂಡಾ ಅಂತಿಮ ಹಂತದಲ್ಲಿದ್ದು, ಶೀಘ್ರದಲ್ಲೇ ಶುರುವಾಗಲಿದೆ'' ಎಂದು ತಿಳಿಸಿದ್ದರು.

ಚಿತ್ರಕ್ಕಾಗಿ ನಟ ಲೂಸ್ ಮಾದ ಯೋಗಿ ಈಗಾಗಲೇ ಸಾಕಷ್ಟು ಸಿದ್ಧತೆ ಮಾಡಿಕೊಂಡಿದ್ದಾರೆ. ಮೊದಲ ಭಾಗಕ್ಕಿಂತ ಬಹಳ ವಿಭಿನ್ನವಾಗಿ ಕಾಣಿಸಿಕೊಳ್ಳಲಿದ್ದಾರೆ. ಸೀಕ್ವೆಲ್‌ಗಾಗಿ 10 ಕೆ.ಜಿ ತೂಕ ಹೆಚ್ಚಿಸಿಕೊಳ್ಳಬೇಕು. ತಲೆ ಕೂದಲು, ಗಡ್ಡ ಬೆಳೆಸುವಂತೆ ವಿಜಯ್‌ ಪ್ರಸಾದ್‌ ಸೂಚಿಸಿದ್ದರು. ನಿರ್ದೇಶಕರ ಮಾತಿನಂತೆ ಯೋಗಿ ಅಗತ್ಯ ತಯಾರಿ ಮಾಡಿಕೊಂಡಿದ್ದಾರೆ. ಆದರೆ ತಿಂಗಳು ಕಳೆದರೂ 'ಸಿದ್ಲಿಂಗು 2' ಸಿನಿಮಾ ಬಗ್ಗೆ ಯಾವುದೇ ಅಪ್ಡೇಟ್ ಇರಲಿಲ್ಲ. ಇದೀಗ ‌ವಿಜಯ್ ಪ್ರಸಾದ್, ಬಹಳ ವಿಭಿನ್ನವಾಗಿ ಚಿತ್ರದ ಮುಹೂರ್ತ ಸಮಾರಂಭದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಹೌದು, ನಿರ್ದೇಶಕ ವಿಜಯ್ ಪ್ರಸಾದ್ ಡಬಲ್ ರೋಲ್​ನಲ್ಲಿ ಕಾಣಿಸಿಕೊಂಡು ಪಂಚಿಂಗ್ ಡೈಲಾಗ್ ಹೇಳುವ ಮೂಲಕ ಗಮನ ಸೆಳೆದಿದ್ದಾರೆ. "ನಮ್‌‌ ಮನ್ಸು, ಒಳ್ಳೆದ್ ಮಾಡಿದ್ರೆ ದೇವ್ರು, ಏನಂತೀರಾ?" ಅಂತಾ ಹೇಳುವ ಮೂಲಕ ಸಿದ್ಲಿಂಗು 2 ಚಿತ್ರದ ಮುಹೂರ್ತಕ್ಕೆ ಆಹ್ವಾನ ಕೊಟ್ಟಿದ್ದಾರೆ.

ಇದನ್ನೂ ಓದಿ: ಎದ್ದೇಳದ 'ರಂಗನಾಯಕ': ಪ್ರೇಕ್ಷಕರಲ್ಲಿ ಕ್ಷಮೆ ಯಾಚಿಸಿದ ನಟ ಜಗ್ಗೇಶ್

2012ರ ಜನವರಿ 13ರಂದು ಮೂಡಿಬಂದ ಮೂಲ ಚಿತ್ರದ ಸಿದ್ಲಿಂಗು ಪಾತ್ರದಲ್ಲಿ ಯೋಗೇಶ್‌ ನಟಿಸಿದ್ದರೆ, ಅವರಿಗೆ ಜೋಡಿಯಾಗಿ ನಾಯಕಿ ರಮ್ಯಾ ಅವರು ಮಂಗಳಾ ಪಾತ್ರ ಮಾಡಿದ್ದರು. ಕ್ಲೈಮಾಕ್ಸ್‌ನಲ್ಲಿ ಅಪ್ಪಾಜಿ ಗೌಡ, ವಿಲನ್‌ ಮೇಲೆ ಹಾರಿಸಿದ ಗುಂಡು ಆಕಸ್ಮಿಕವಾಗಿ ಮಂಗಳಾಗೆ ತಗುಲಿ ಆಕೆ ಸಾವನ್ನಪ್ಪುತ್ತಾಳೆ. ಹೀಗೆ ಸಿದ್ಲಿಂಗು ಚಿತ್ರದಲ್ಲಿ ರಮ್ಯಾ ಪಾತ್ರ ಕೊನೆಯಾಗುತ್ತದೆ. ಹಾಗಾದರೆ ಸೀಕ್ವೆಲ್‌ನಲ್ಲಿ ಯಾರು ನಟಿಸುತ್ತಾರೆ?, ಯೋಗಿಗೆ ನಾಯಕಿ ಯಾರು? ಎಂಬುದರ ಬಗ್ಗೆ ಕುತೂಹಲವಿದೆ. ಇನ್ನೂ ಮೊದಲ ಚಿತ್ರದಲ್ಲಿದ್ದ ಸುಮನ್‌ ರಂಗನಾಥ್‌ ಸೀಕ್ವೆಲ್‌ನಲ್ಲೂ ಇರಲಿದ್ದಾರೆ. ಸಿದ್ಲಿಂಗು ಸೀಕ್ವೆಲ್‌ಗೆ ಅನೂಪ್‌ ಸೀಳಿನ್‌ ಸಂಗೀತವಿರಲಿದೆ. ಉಳಿದಂತೆ ಕಲಾವಿದರು ಹಾಗೂ ತಂತ್ರಜ್ಞರ ಬಗ್ಗೆ ಮುಹೂರ್ತ ದಿನದಂದು ಗೊತ್ತಾಗಲಿದೆ. ಸಮಾರಂಭ ನಾಳೆ ಬೆಳಗ್ಗೆ 9ಕ್ಕೆ ನೆರವೇರಲಿದೆ.

ಇದನ್ನೂ ಓದಿ: ಮಾ.26ಕ್ಕೆ 'ಮಗಧೀರ' ಮರು ಬಿಡುಗಡೆ: ರಾಮ್​ ಚರಣ್​​ ಫ್ಯಾನ್ಸ್​​​ಗೆ ಸ್ಪೆಷಲ್​ ಗಿಫ್ಟ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.