ETV Bharat / entertainment

ಅವತಾರ ಪುರುಷ 2 ಟ್ರೇಲರ್: ಶರಣ್ ಚಿತ್ರಕ್ಕೆ ಪ್ರೇಮ್, ರಿಷಿ, ವಿಕ್ಕಿ ವರುಣ್ ಸಾಥ್ - Avatara Purusha 2 - AVATARA PURUSHA 2

'ಅವತಾರ ಪುರುಷ 2' ಚಿತ್ರದ ಟ್ರೇಲರ್ ಅನಾವರಣಗೊಂಡಿದೆ.

Avatar Purusha 2
ಅವತಾರ ಪುರುಷ 2 ತಂಡ
author img

By ETV Bharat Karnataka Team

Published : Apr 2, 2024, 8:06 PM IST

'ಅವತಾರ ಪುರುಷ 2' ಶರಣ್ ಅಭಿನಯ ಹಾಗೂ ಸಿಂಪಲ್ ಸುನಿ ನಿರ್ದೇಶನದ ಬಹುನಿರೀಕ್ಷಿತ ಚಿತ್ರ. ಟೀಸರ್ ಹಾಗೂ ಹಾಡುಗಳಿಂದಲೇ ಸಿನಿಪ್ರೇಮಿಗಳಲ್ಲಿ ಕುತೂಹಲ ಹುಟ್ಟಿಸಿರೋ ಈ ಚಿತ್ರದ ಟ್ರೇಲರ್ ಇತ್ತೀಚೆಗೆ ಆನಂದ್ ಆಡಿಯೋ ಮೂಲಕ ಅನಾವರಣಗೊಂಡಿದೆ. ಗೆಳೆಯರಾದ ನೆನಪಿರಲಿ ಪ್ರೇಮ್, ರಿಷಿ, ವಿಕ್ಕಿ ವರುಣ್, ಪ್ರವೀಣ್ ತೇಜ್ ಹಾಗೂ ನಿರ್ದೇಶಕ ಸಂತು ಚಿತ್ರದ ಟ್ರೇಲರ್ ಬಿಡುಗಡೆ ಮಾಡುವ ಮೂಲಕ ಶರಣ್ ಚಿತ್ರಕ್ಕೆ ಸಾಥ್ ನೀಡಿದರು.

  • " class="align-text-top noRightClick twitterSection" data="">

ನಿರ್ದೇಶಕ ಸಿಂಪಲ್ ಸುನಿ ಮಾತನಾಡಿ, ಅವತಾರ ಪುರುಷ ಮೊದಲ ಭಾಗವನ್ನು ಚಿತ್ರಮಂದಿರ, ಒಟಿಟಿ ಹಾಗೂ ಖಾಸಗಿ ವಾಹಿನಿಯಲ್ಲಿ ಸಾಕಷ್ಟು ಜನರು ವೀಕ್ಷಿಸಿದ್ದಾರೆ. ಅದೇ ರೀತಿ ಈ ಚಿತ್ರದ ಎರಡನೇ ಭಾಗವನ್ನು ನೋಡಿ ಯಶಸ್ವಿಗೊಳಿಸಿ. ಮೊದಲ ಭಾಗವನ್ನು ನೋಡಿದವರಿಗೆ ಹಾಗೂ ನೋಡದವರಿಬ್ಬರಿಗೂ ಭಾಗ 2 ಅರ್ಥವಾಗುತ್ತದೆ. ಚಿತ್ರ ಕೂಡ ಚೆನ್ನಾಗಿ ಮೂಡಿ ಬಂದಿದೆ ಎಂದು ತಿಳಿಸಿದರು.

ಬಳಿಕ ನಟ ಶರಣ್ ಮಾತನಾಡಿ, ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ಹಿಟ್ ಚಿತ್ರಗಳನ್ನು ನೀಡಿರುವ ನಿರ್ಮಾಪಕ ಪಷ್ಕರ್ ಹಾಗೂ ನಿರ್ದೇಶಕ ಸುನಿ ಅವರ ಜೊತೆ ಕೆಲಸ ಮಾಡಿದ್ದು ಬಹಳ ಖುಷಿಯಾಗಿದೆ. ಸುನಿ ಅವರು ಚಿತ್ರದ ಕಥೆ ಹೇಳುತ್ತೇನೆ ಎಂದಾಗ ಕಾಮಿಡಿ ಜಾನರ್​ನ ಕಥೆ ಅಂದುಕೊಂಡಿದ್ದೆ. ಆದರೆ ಅವರು ಇದೊಂದು ವಿಭಿನ್ನ ಕಥೆ. ಈ ಕಥೆಯಲ್ಲಿ ಕಾಮಿಡಿ ಕೂಡ ಇರುತ್ತದೆ ಎಂದರು. ನನಗೂ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಆಸೆ. ಹಾಗಾಗಿ ಈ ಚಿತ್ರದ ಪಾತ್ರ ಇಷ್ಟವಾಯಿತು. ಚಿತ್ರ ತಾಂತ್ರಿಕವಾಗಿ ಶ್ರೀಮಂತಿಕೆಯಿಂದ ಮೂಡಿಬಂದಿದೆ ಎಂದು ತಿಳಿಸಿದರು.

Avatar Purusha 2
ಅವತಾರ ಪುರುಷ 2 ತಂಡ

ಚಿತ್ರದ ನಾಯಕಿ ಆಶಿಕಾ ರಂಗನಾಥ್ ಮಾತನಾಡಿ, ನಾನು ಬೇರೆ ಭಾಷೆಗಳ ಚಿತ್ರಗಳಲ್ಲಿ ನಟಿಸುತ್ತಿದ್ದಾಗ ಅವತಾರ ಪುರುಷ 2 ಚಿತ್ರ ಯಾವಾಗ ಬಿಡುಗಡೆ ಎಂದು ಕೇಳುತ್ತಿದ್ದರು. ಜನರಿಗೆ ಈ ಚಿತ್ರದ ಬಗ್ಗೆ ಅಷ್ಟು ಕುತೂಹಲವಿದೆ. ಈ ಚಿತ್ರ ಭರ್ಜರಿ ಯಶಸ್ಸು ಕಾಣಲಿದೆ ಎಂದರು.

ಇದನ್ನೂ ಓದಿ: ಯಶ್ 'ಟಾಕ್ಸಿಕ್​' ಚಿತ್ರದಲ್ಲಿ ಕರೀನಾ ನಾಯಕಿಯಲ್ಲ; ವಿಶೇಷ ಪಾತ್ರ? ಬೆಂಗಳೂರಿನಲ್ಲೇ ಶೂಟಿಂಗ್​ - Kareena In Toxic

ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಮಾತನಾಡಿ, ಕನ್ನಡ ಚಿತ್ರಗಳಲ್ಲಿ ಗುಣಮಟ್ಟ ಕಡಿಮೆ ಎಂದು ಕೆಲವರು ಹೇಳುತ್ತಾರೆ. ಆದರೆ ನಮ್ಮ ಚಿತ್ರದ ಟ್ರೇಲರ್ ನೋಡಿದರೆ, ಚಿತ್ರ ಹೇಗೆ ಬಂದಿರಬಹುದು ಎಂದು ಎಲ್ಲರಿಗೂ ತಿಳಿಯುತ್ತದೆ. ಯಾವುದೇ ಕೊರತೆಯಿಲ್ಲದೇ ಅದ್ಧೂರಿಯಾಗಿ ಸಿನಿಮಾ ನಿರ್ಮಾಣ ಮಾಡಿದ್ದೇವೆ‌ಂದು ತಿಳಿಸಿದರು.

ಇದನ್ನೂ ಓದಿ: 'ಅರ್ಜುನ್​ ಕಪೂರ್​ ಮನಸ್ಸನ್ನು ಸಲ್ಮಾನ್​​ ಅರ್ಥಮಾಡಿಕೊಂಡಿದ್ದರು': ವಿವಾದದ ನಡುವೆ ಬೋನಿ ಕಪೂರ್ ಹೇಳಿಕೆ - Salman Arjun Rift

ಚಿತ್ರದಲ್ಲಿ ಶರಣ್, ಆಶಿಕಾ ರಂಗನಾಥ್ ಅಲ್ಲದೇ ಶ್ರೀನಗರ ಕಿಟ್ಟಿ, ಸಾಯಿಕುಮಾರ್, ಸಾಧುಕೋಕಿಲ, ಸುಧಾರಾಣಿ, ಭವ್ಯ ಸೇರಿದಂತೆ ಮೊದಲಾದವರು ತಾರಾಬಳಗದಲ್ಲಿದ್ದಾರೆ. ಚಿತ್ರವನ್ನ ವಿತರಕ ಮೋಹನ್ ಅವರು ರಾಜ್ಯಾದ್ಯಾಂತ ಬಿಡುಗಡೆ ಮಾಡುತ್ತಿದ್ದಾರೆ. ಏಪ್ರಿಲ್ 5ರಂದು ಅವತಾರ ಪುರುಷ 2 ತೆರೆಕಾಣಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.