ETV Bharat / entertainment

ಏರ್​ಪೋರ್ಟ್​​​ನಲ್ಲಿ ಕಾಣಿಸಿಕೊಂಡ ಶಾರುಖ್​ ಫ್ಯಾಮಿಲಿ: ಶೀಘ್ರದಲ್ಲೇ ಸೆಟ್ಟೇರಲಿದೆ ತಂದೆ - ಮಗಳ ಚಿತ್ರ - ಶಾರುಖ್​ ಖಾನ್​

ಇಂದು ಮುಂಜಾನೆ ಮುಂಬೈ ಏರ್​ಪೋರ್ಟ್​​ನಲ್ಲಿ ಕಿಂಗ್​ ಖಾನ್​​ ಫ್ಯಾಮಿಲಿ ಕಾಣಿಸಿಕೊಂಡಿದೆ. ಸೋಷಿಯಲ್​ ಮೀಡಿಯಾದಲ್ಲಿ ವಿಡಿಯೋ ವೈರಲ್​ ಆಗಿದೆ.

shah rukh khan
ಶಾರುಖ್​ ಫ್ಯಾಮಿಲಿ
author img

By ETV Bharat Karnataka Team

Published : Jan 20, 2024, 5:27 PM IST

ಏರ್​ಪೋರ್ಟ್​​​ನಲ್ಲಿ ಕಾಣಿಸಿಕೊಂಡ ಶಾರುಖ್​ ಫ್ಯಾಮಿಲಿ

ಸೂಪರ್‌ ಸ್ಟಾರ್ ಶಾರುಖ್ ಖಾನ್ ಇಂದು ಮುಂಜಾನೆ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು. ಪಾಪರಾಜಿಗಳು ಬಹುಬೇಡಿಕೆ ನಟನ ವಿಡಿಯೋ ಹಂಚಿಕೊಂಡಿದ್ದು, ಸೋಷಿಯಲ್​ ಮೀಡಿಯಾದಲ್ಲಿ ಎಸ್​​ಆರ್​ಕೆಯ ಏರ್​ಪೋರ್ಟ್ ವಿಡಿಯೋ ವೈರಲ್​​ ಆಗುತ್ತಿದೆ. ನಟ ಹೊರಟ ಕೆಲ ಹೊತ್ತಿಗೂ ಮುನ್ನ ಪತ್ನಿ, ಪುತ್ರಿ ಕೂಡ ಏರ್​ಪೋರ್ಟ್​​​ನಲ್ಲಿ ಕಾಣಿಸಿಕೊಂಡಿದ್ದು, ಎಲ್ಲಿಗೆ ಪ್ರವಾಸ ಬೆಳೆಸಿರಬಹುದೆಂದು ಪ್ರೇಕ್ಷಕರು ಕುತೂಹಲ ವ್ಯಕ್ತಪಡಿಸುತ್ತಿದ್ದಾರೆ.

ಅಭಿಮಾನಿಗಳು ಕಿಂಗ್ ಖಾನ್ ವಿಡಿಯೋಗೆ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಭಾರಿ ಭದ್ರತೆಯೊಂದಿಗೆ ಬಂದ ಲೆಜೆಂಡರಿ ಆ್ಯಕ್ಟರ್​​ ಕಡು ನೀಲಿ ಬಣ್ಣದ ಟಿ-ಶರ್ಟ್‌, ಡೆನಿಮ್, ಟ್ರೆಂಡಿ ಶೂಸ್ ಧರಿಸಿ ಯುವಕನಂತೆ ಸ್ಟೈಲಿಶ್​ ನೋಟ ಬೀರಿದರು. 58ರ ಹರೆಯದ ನಟ ಡಾರ್ಕ್ ಸನ್‌ಗ್ಲಾಸ್​ನಲ್ಲಿ ತಮ್ಮ ಸ್ಟೈಲಿಶ್​​ ಲುಕ್​ ಅನ್ನು ಪೂರ್ಣಗೊಳಿಸಿಕೊಂಡರು. ಶಾರುಖ್ ಖಾನ್ ಅವರು ವಿಮಾನ ನಿಲ್ದಾಣದೊಳಗೆ ಪ್ರವೇಶಿಸುತ್ತಿರುವ ವಿಡಿಯೋವನ್ನು ಪಾಪರಾಜಿಗಳು ಸೆರೆಹಿಡಿದು ಆನ್​ಲೈನ್​ನಲ್ಲಿ ಹರಿಬಿಟ್ಟಿದ್ದಾರೆ.

ಕಾಕತಾಳೀಯ ಎನ್ನುವಂತೆ ಕಿಂಗ್​ ಖಾನ್​ ಶಾರುಖ್ ನಿರ್ಗಮಿಸುವ ಕೆಲ ಹೊತ್ತಿಗೂ ಮೊದಲು, ಪಾಪರಾಜಿಗಳು ನಟನ ಪತ್ನಿ ಗೌರಿ ಖಾನ್ ಮತ್ತು ಪುತ್ರಿ ಸುಹಾನಾ ಖಾನ್ ಅವರನ್ನೂ ಇದೇ ವಿಮಾನ ನಿಲ್ದಾಣದಲ್ಲಿ ಗುರುತಿಸಿದ್ದಾರೆ. ಸುಹಾನಾ ಎಂದಿನಂತೆ ಏರ್​ಪೋರ್ಟ್ ಲುಕ್​ನಲ್ಲಿ ಕಾಣಿಸಿಕೊಂಡರು. ಬ್ಲ್ಯಾಕ್​ ಟಾಪ್, ವೈಟ್​​ ಫುಲ್​ ಸ್ಲೀವ್ಸ್ ಝಿಪ್ಪರ್, ಬೂದು ಬಣ್ಣದ ಟ್ರ್ಯಾಕ್ ಪ್ಯಾಂಟ್, ವೈಟ್​ ಶೂಟ್​ ಧರಿಸಿದ್ದರು. ಗೌರಿ ಖಾನ್ ಅವರು ಪ್ರಿಂಟೆಡ್ ಡ್ರೆಸ್‌ನಲ್ಲಿ ಕಾಣಿಸಿಕೊಂಡರು. ಯುವ ನಟಿ ಸುಹಾನಾ ಖಾನ್​ ತಾಯಿಯೊಂದಿಗೆ ವಿಮಾನ ನಿಲ್ದಾಣದೊಳಗೆ ಹೋಗುವ ಮೊದಲು ಪಾಪರಾಜಿಗಳ ಕ್ಯಾಮರಾಗಳಿಗೆ ಪೋಸ್ ನೀಡಿದರು.

ಇದನ್ನೂ ಓದಿ: ರಶ್ಮಿಕಾ ಮಂದಣ್ಣ ಡೀಪ್‌ಫೇಕ್ ವಿಡಿಯೋ ಸೃಷ್ಟಿಕರ್ತ ಅರೆಸ್ಟ್: ದೆಹಲಿ ಪೊಲೀಸರು

ಶಾರುಖ್ ಖಾನ್ ಸಿನಿಮಾ ವಿಚಾರ ಗಮನಿಸೋದಾದ್ರೆ, ಕೊನೆಯದಾಗಿ ರಾಜ್‌ಕುಮಾರ್ ಹಿರಾನಿಯವರ ಡಂಕಿ ಚಿತ್ರದಲ್ಲಿ ಕಾಣಿಸಿಕೊಂಡರು. ನಾಲ್ಕು ವರ್ಷಗಳ ಬ್ರೇಕ್​ ಬಳಿಕ ಬಂದ 2023ರಲ್ಲಿ, ಒಂದೇ ವರ್ಷದಲ್ಲಿ ಮೂರು ಸೂಪರ್ ಹಿಟ್​ ಸಿನಿಮಾಗಳನ್ನು ನೀಡಿದ್ದಾರೆ. ಮುಂಬರುವ ಪ್ರಾಜೆಕ್ಟ್​ಗಳನ್ನು ಶೀಘ್ರದಲ್ಲೇ ಘೋಷಿಸಲಿದ್ದಾರೆ ಎಂದು ವರದಿಯಾಗಿದೆ. ಕಿಂಗ್ ಖಾನ್ ಅವರ ಮುಂದಿನ ಸಿನಿಮಾ ಮಗಳು ಸುಹಾನಾ ಜೊತೆ ಎಂದು ಕೂಡ ಹೇಳಲಾಗಿದೆ. 'ಕಿಂಗ್' ಶೀರ್ಷಿಕೆಯ ಆ್ಯಕ್ಷನ್-ಪ್ಯಾಕ್ಡ್ ಥ್ರಿಲ್ಲರ್‌ ಸಿನಿಮಾದಲ್ಲಿ ತಂದೆ-ಮಗಳು ಮೊದಲ ಬಾರಿ ತೆರೆ ಹಂಚಿಕೊಳ್ಳಲಿದ್ದಾರೆ. ಸುಜೋಯ್ ಘೋಷ್ ನಿರ್ದೇಶನದ ಈ ಚಿತ್ರ ಶೀಘ್ರದಲ್ಲೇ ಸೆಟ್ಟೇರಲಿದೆ. ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್ ಮತ್ತು ಸಿದ್ಧಾರ್ಥ್ ಆನಂದ್ ಅವರ ಮಾರ್ಫ್ಲಿಕ್ಸ್ ಎಂಟರ್‌ಟೈನ್‌ಮೆಂಟ್ ಈ ಚಿತ್ರವನ್ನು ನಿರ್ಮಾಣ ಮಾಡಲಿದೆ ಎಂದು ಹೇಳಲಾಗಿದೆ. ಅಲ್ಲದೇ ಬಹುನಿರೀಕ್ಷಿತ 'ಟೈಗರ್​ ವರ್ಸಸ್ ಪಠಾಣ್​' ಪ್ರಾಜೆಕ್ಟ್​ ಕೂಡ ಕಿಂಗ್​ ಖಾನ್​ ಬಳಿ ಇದೆ.

ಇದನ್ನೂ ಓದಿ: 'ಫೈಟರ್​​' ಸಿಕ್ಸ್​​ಪ್ಯಾಕ್​​ಗಾಗಿ ಪರಿಶ್ರಮ: 14 ತಿಂಗಳ ಬಳಿಕ ಸಿಹಿ ಸೇವಿಸಿದ ಹೃತಿಕ್​ ರೋಷನ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.