ETV Bharat / entertainment

ಅನಂತ್-ರಾಧಿಕಾ ವೈಭವೋಪೇತ ಕ್ರೂಸ್‌ ಪ್ರೀ ವೆಡ್ಡಿಂಗ್‌ ಪಾರ್ಟಿಗೆ ತೆರಳಿದ ಶಾರುಖ್ ಖಾನ್​ ಕುಟುಂಬ - Anant Radhika Cruise Party

author img

By ETV Bharat Karnataka Team

Published : May 30, 2024, 2:22 PM IST

ಮುಂಬೈನ ಕಲೀನಾ ಏರ್​ಪೋರ್ಟ್​​ನಲ್ಲಿ ಶಾರುಖ್ ಖಾನ್​ ಕುಟುಂಬ ಕಾಣಿಸಿಕೊಂಡಿದ್ದು, ವಿಡಿಯೋಗಳು ವೈರಲ್​ ಆಗಿವೆ.

SRK Family
ಶಾರುಖ್​ ಫ್ಯಾಮಿಲಿ (IANS)

ದೇಶದ ಶ್ರೀಮಂತ ಉದ್ಯಮಿ, ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಅವರ ಕಿರಿಮಗ ಅನಂತ್ ಅಂಬಾನಿ ಅವರ ವಿವಾಹಪೂರ್ವ ಸಮಾರಂಭದಲ್ಲಿ ಪಾಲ್ಗೊಳ್ಳಲು ಬಾಲಿವುಡ್​ ನಟ ಶಾರುಖ್ ಖಾನ್ ತಮ್ಮ ಕುಟುಂಬದೊಂದಿಗೆ ಇಟಲಿಗೆ ತೆರಳಿದ್ದಾರೆ. ಈ ಕುರಿತ ಫೋಟೋ, ವಿಡಿಯೋಗಳು ಆನ್‌ಲೈನ್​ನಲ್ಲಿ ಹರಿದಾಡುತ್ತಿವೆ.

ಮುಂಬೈನ ಖಾಸಗಿ ವಿಮಾನ ನಿಲ್ದಾಣ ಕಲೀನಾದಲ್ಲಿ ಶಾರುಖ್ ಖಾನ್​, ಪತ್ನಿ ಗೌರಿ ಖಾನ್, ಮಕ್ಕಳಾದ ಆರ್ಯನ್, ಸುಹಾನಾ ಮತ್ತು ಅಬ್ರಾಮ್ ಕಾಣಿಸಿಕೊಂಡರು.

ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಜೋಡಿಯ ಐಷಾರಾಮಿ ಕ್ರೂಸ್ ಪಾರ್ಟಿಯಲ್ಲಿ ಹಲವು ಬಾಲಿವುಡ್ ತಾರೆಯರು ಸೇರಿ ಸಂಭ್ರಮಿಸಲಿದ್ದಾರೆ. ಸಲ್ಮಾನ್ ಖಾನ್, ರಣ್​​​ಬೀರ್ ಕಪೂರ್, ಆಲಿಯಾ ಭಟ್ ಸೇರಿದಂತೆ ಅನೇಕ ತಾರೆಯರು ಈಗಾಗಲೇ ಈ ಪಾರ್ಟಿಯಲ್ಲಿ ಭಾಗವಹಿಸಿದ್ದಾರೆ. ಜೂನ್ 1ರವರೆಗೆ ಈ ಸಂಭ್ರಮ ನಡೆಯುತ್ತದೆ. ವೈಭವೋಪೇತ ಕಾರ್ಯಕ್ರಮದ ವಿಡಿಯೋಗಳಿಗಾಗಿ ನೆಟ್ಟಿಗರು ಕಾತರರಾಗಿದ್ದಾರೆ.

ಶಾರುಖ್ ಖಾನ್ ಕುಟುಂಬ ಎರಡು ದಿನಗಳ ಕಾಲ ಪಾರ್ಟಿಯನ್ನು ಆನಂದಿಸಲಿದ್ದಾರೆ. ವಿಮಾನ ನಿಲ್ದಾಣದಲ್ಲಿ ಶಾರುಖ್ ಪಾಪರಾಜಿಗಳ ಕ್ಯಾಮರಾಗಳಿಗೆ ಪೋಸ್ ಕೊಡದೇ ಮುನ್ನಡೆದರು. ಮ್ಯಾನೇಜರ್ ಪೂಜಾ ದದ್ಲಾನಿ ಕೂಡ ಜೊತೆಗಿದ್ದರು. ಕಾರಿನಲ್ಲಿ ಆಗಮಿಸುತ್ತಿರುವ ಹಾಗು ವಿಮಾನ ನಿಲ್ದಾಣದೊಳಗೆ ಹೋಗಿರುವ ದೃಶ್ಯಗಳು ಸೋಷಿಯಲ್​ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

ಮೇ 29ರಂದು, ನಿನ್ನೆ ಅನಂತ್-ರಾಧಿಕಾ ಕ್ರೂಸ್ ಪಾರ್ಟಿ ವೆಲ್ಕಮ್ ಲಂಚ್​ನೊಂದಿಗೆ ಪ್ರಾರಂಭವಾಗಿದೆ. ಇದರ ಭಾಗವಾಗಿ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಇಂದು 'Toga' ಪಾರ್ಟಿ ನಡೆಯಲಿದ್ದು, ಮುಖೇಶ್ ಅಂಬಾನಿ ತಮ್ಮ ಮೊಮ್ಮಗಳು ವೇದಾ ಹುಟ್ಟುಹಬ್ಬವೂ ನಡೆಯಲಿದೆ. ಈ ಪಾರ್ಟಿಯ ಡ್ರೆಸ್ ಕೋಡ್ 'ಪ್ಲೇಫುಲ್​' ಆಗಿರುತ್ತದೆ.

ಇದನ್ನೂ ಓದಿ: ಇಟಲಿಯಿಂದ ಫ್ರಾನ್ಸ್​ವರೆಗೆ ಹಡಗಿನಲ್ಲಿ ಅನಂತ್​ ಅಂಬಾನಿ - ರಾಧಿಕಾ ಪ್ರಿ-ವೆಡ್ಡಿಂಗ್​ 2.0: 800 ವಿವಿಐಪಿ ಅತಿಥಿಗಳು! - Anant Ambani Pre Wedding Party

ಜುಲೈ 12ರಂದು ಮುಂಬೈನಲ್ಲಿ ಮದುವೆ: ಅನಂತ್ ಅಂಬಾನಿ-ರಾಧಿಕಾ ಮರ್ಚೆಂಟ್​​ ಕಳೆದ ವರ್ಷ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಮಾರ್ಚ್ ಆರಂಭದಲ್ಲಿ ಅದ್ಧೂರಿಯಾಗಿ ನಡೆದ ಮೊದಲ ಪ್ರೀ ವೆಡ್ಡಿಂಗ್​ ಸಮಾರಂಭ ವಿಶ್ವದ ಗಮನ ಸೆಳೆದಿತ್ತು. ಭಾರತ ಮಾತ್ರವಲ್ಲದೇ ವಿಶ್ವ ಮಟ್ಟದ ಗಣ್ಯಾತಿಗಣ್ಯರು ಸಾಕ್ಷಿಯಾಗಿದ್ದರು. ಅಂದಾಜು 1,000 ಕೋಟಿ ರೂ. ಖರ್ಚಾಗಿದೆ ಎಂದು ಹೇಳಲಾಗಿದೆ. ಜುಲೈ 12ರಂದು ಮುಂಬೈನಲ್ಲಿ ಈ ಜೋಡಿಯ ಮದುವೆ ನಡೆಯಲಿದೆ. ಈ ಮದುವೆಯಲ್ಲಿ ಅತಿಥಿಗಳು ನೋ ಫೋನ್ ರೂಲ್ಸ್​​ ಅನುಸರಿಸಬೇಕಿದೆ. ಇದೀಗ ಹಡಗಿನಲ್ಲಿ ನಡೆಯುತ್ತಿರುವ ವಿಶೇಷ ಕಾರ್ಯಕ್ರಮ ಮೇ 29ರಂದು ಇಟಲಿಯಲ್ಲಿ ಆರಂಭವಾಗಿದ್ದು, ಜೂನ್ 1ರಂದು ಫ್ರಾನ್ಸ್‌ನಲ್ಲಿ ಕೊನೆಗೊಳ್ಳುತ್ತದೆ.

ಇದನ್ನೂ ಓದಿ: ಐಷಾರಾಮಿ ಕ್ರೂಸ್​ನಲ್ಲಿ ಅನಂತ್ ಅಂಬಾನಿ ಅದ್ಧೂರಿ ಪ್ರೀ ವೆಡ್ಡಿಂಗ್​​: ಸಂಭ್ರಮಕ್ಕೆ ಬಾಲಿವುಡ್​ ತಾರೆಗಳ ಮೆರುಗು - Anant Radhika Pre Wedding

ನಿನ್ನೆ ಮುಂಬೈ ಏರ್​ಪೋರ್ಟ್​​ನಲ್ಲಿ ಸಾರಾ ಅಲಿ ಖಾನ್, ಜಾಹ್ನವಿ ಕಪೂರ್, ಅನನ್ಯಾ ಪಾಂಡೆ, ಕರೀನಾ ಕಪೂರ್ ಖಾನ್​, ರಶ್ಮಿಕಾ ಮಂದಣ್ಣ, ಕರೀಷ್ಮಾ ಕಪೂರ್, ರಿತೇಶ್​ ಜೆನಿಲಿಯಾ ಕುಟುಂಬ, ಸಚಿನ್​​ ತೆಂಡೂಲ್ಕರ್ ಸೇರಿದಂತೆ ಹಲವು ಗಣ್ಯರು ಕಂಡುಬಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.