ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಅವರ ಪ್ರತಿಭೆ, ಕಲೆ, ಶ್ರಮ, ಸಿನಿಮಾಗೆ ಅವರ ಅಭಿನಯದ ಸಮರ್ಪಣೆಯಂತಹ ಅಂಶ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಸಂಪಾದಿಸಲು ಸಹಾಯ ಮಾಡಿದೆ ಎಂಬುದರಲ್ಲಿ ಸಂದೇಹವಿಲ್ಲ. ಸೆಲೆಬ್ರಿಟಿಯಾಗಲಿ ಅಥವಾ ಅಭಿಮಾನಿಯಾಗಲಿ ಪ್ರತಿಯೊಬ್ಬರೊಂದಿಗೂ ನಡೆದುಕೊಳ್ಳುವ ರೀತಿ, ಪ್ರೀತಿ-ವಾತ್ಸಲ್ಯದ ಗುಣ ಹೆಚ್ಚಿನವರ ಮೆಚ್ಚುಗೆಗೆ ಪಾತ್ರವಾಗಿದೆ. ಎಸ್ಆರ್ಕೆ ದರ್ಶನ ಪಡೆದ ಅಭಿಮಾನಿಯೋರ್ವರು ಭಾವುಕರಾಗಿದ್ದು, ಅವರನ್ನು ಎಸ್ಆರ್ಕೆ ಸಮಾಧಾನಪಡಿಸಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಮೂಲಕ ಹೆಸರಾಂತ ನಟ, ಮತ್ತೊಮ್ಮೆ ತಮ್ಮ ಅಭಿಮಾನಿಗಳ ಮೇಲೆ ತಮಗಿರುವ ಅಗಾಧ ಪ್ರೀತಿಯನ್ನು ಸಾಬೀತುಪಡಿಸಿದ್ದಾರೆ.
ಕಿಂಗ್ ಆಫ್ ರೊಮ್ಯಾನ್ಸ್ ಖ್ಯಾತಿಯ ಶಾರುಖ್ ಖಾನ್ ಅವರು ತಮ್ಮ ಇತ್ತೀಚಿನ ಚಿತ್ರ 'ಡಂಕಿ'ಯ ಯಶಸ್ಸಿನ ಹಿನ್ನೆಲೆಯಲ್ಲಿ ಕಾರ್ಯಕ್ರಮವೊಂದನ್ನು ಏರ್ಪಡಿಸಿದ್ದರು. ಮುಂಬೈನಲ್ಲಿ ಸೋಮವಾರ ಸಂಜೆ ಫ್ಯಾನ್ಸ್ ಮೀಟ್ ಆ್ಯಂಡ್ ಗ್ರೀಟ್ ಈವೆಂಟ್ ನಡೆಯಿತು. ನಟನನ್ನು ಕಣ್ಣೆದುರು ಕಂಡ ಅಭಿಮಾನಿಯೋರ್ವರು ಭಾವುಕರಾದರು. ಭಾವುಕನಾದ ಅಭಿಮಾನಿಯನ್ನು ಶಾರುಖ್ ಸಮಾಧಾನಪಡಿಸಿದ್ದಾರೆ. ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ, ಈ ಭಾವನಾತ್ಮಕ ಕ್ಷಣಗಳನ್ನು ಕಾಣಬಹುದಾಗಿದೆ. ಅಚ್ಚುಮೆಚ್ಚಿನ ನಟನನ್ನು ಕಂಡು ಕಣ್ಣೀರಿಡುತ್ತಾ, ನಡುಗುತ್ತಿದ್ದ ಅಭಿಮಾನಿಯನ್ನು ಶಾರುಖ್ ಬಹಳ ಪ್ರೀತಿಪೂರ್ವಕವಾಗಿ ಸಂತೈಸಿದ್ದಾರೆ.
-
Emotions overflow as a devoted fan meets @iamsrk, a moment etched in the heart forever ❤️❤️#ShahRukhKhan #Dunkipic.twitter.com/b900xqHOuH
— Shah Rukh Khan Universe Fan Club (@SRKUniverse) January 29, 2024 " class="align-text-top noRightClick twitterSection" data="
">Emotions overflow as a devoted fan meets @iamsrk, a moment etched in the heart forever ❤️❤️#ShahRukhKhan #Dunkipic.twitter.com/b900xqHOuH
— Shah Rukh Khan Universe Fan Club (@SRKUniverse) January 29, 2024Emotions overflow as a devoted fan meets @iamsrk, a moment etched in the heart forever ❤️❤️#ShahRukhKhan #Dunkipic.twitter.com/b900xqHOuH
— Shah Rukh Khan Universe Fan Club (@SRKUniverse) January 29, 2024
ವೈರಲ್ ವಿಡಿಯೋಗಳಲ್ಲಿ 'ಡಂಕಿ' ಸ್ಟಾರ್ ಸಖತ್ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ. ಸಾದಾ ಬ್ಲ್ಯಾಕ್ ಟೀ ಶರ್ಟ್ ಮತ್ತು ಬ್ಲ್ಯಾಕ್ ಲೆದರ್ ಜಾಕೆಟ್, ಬ್ಲ್ಯಾಕ್ ಪ್ಯಾಂಟ್ ಧರಿಸಿದ್ದರು. ಬ್ಲ್ಯಾಕ್ ಗ್ಲಾಸ್ ನಟನನ್ನು ಆಕರ್ಷಕವಾಗಿ ಕಾಣುವಂತೆ ಮಾಡಿತ್ತು. ತಮ್ಮನ್ನು ಭೇಟಿಯಾಗಲು, ಫೋಟೋಗಳನ್ನು ಕ್ಲಿಕ್ಕಿಸಿಕೊಳ್ಳಲು ಹತ್ತಿರ ಬಂದ ಅಭಿಮಾನಿಯ ಕೈಹಿಡಿದರು. ಪರಸ್ಪರ ಸಂತಸದ ಕ್ಷಣಗಳನ್ನು ವಿನಿಮಯ ಮಾಡಿಕೊಳ್ಳುತ್ತಿದ್ದಂತೆ ಅಭಿಮಾನಿ ಭಾವುಕರಾದರು. ಈ ವೇಳೆ ಶಾರುಖ್ ಅಭಿಮಾನಿಯನ್ನು ಅಪ್ಪಿಕೊಂಡು ಸಮಾಧಾನ ಪಡಿಸಿದರು. ಶಾರುಖ್ ಸಹ ತಮ್ಮ ಅಭಿಮಾನಿಗಳ ಮೇಲಿರುವ ಪ್ರೀತಿಯನ್ನು ವ್ಯಕ್ತಪಡಿಸಿದರು. ಆ ವ್ಯಕ್ತಿ ಸಹಜ ಸ್ಥಿತಿಗೆ ಬರೋವರೆಗೂ ಅವರ ಭುಜವನ್ನು ಹಿಡಿದು ಸಮಾಧಾನಪಡಿಸಿದರು. ಬಳಿಕ ಕ್ಯಾಮರಾಗಳಿಗೆ ಒಟ್ಟಿಗೆ ಪೋಸ್ ನೀಡಿದನು.
ಇದನ್ನೂ ಓದಿ: 'ಭಾರತೀಯರು ನನ್ನನ್ನು ಅವರ ಹೃದಯದಲ್ಲಿಟ್ಟುಕೊಂಡಿದ್ದಾರೆ': ಶಾರುಖ್ ಖಾನ್ ಕೃತಜ್ಞತೆ
ಫ್ಯಾನ್ಸ್ ಕ್ಲಬ್‌ನಿಂದ ಅಪ್‌ಲೋಡ್ ಮಾಡಲಾದ ಮತ್ತೊಂದು ವಿಡಿಯೋದಲ್ಲಿ, ಶಾರುಖ್ ತಮ್ಮನ್ನು ಬೆಂಬಲಿಸಿದ ಸರ್ವರಿಗೂ ಧನ್ಯವಾದ ಅರ್ಪಿಸಿರೋದನ್ನು ಕಾಣಬಹುದು. ಸುದೀರ್ಘ ವಿರಾಮದ ನಂತರ ಬಿಗ್ ಸ್ಕ್ರೀನ್ಗೆ ಮರಳುವ ಸಂದರ್ಭ ಭಯವಾಗಿತ್ತೆಂಬುದನ್ನು ಒಪ್ಪಿಕೊಂಡರು. "ನಾನು 33 ವರ್ಷಗಳಿಂದ ಸಿನಿಮಾದಲ್ಲಿ ತೊಡಗಿಸಿಕೊಂಡಿದ್ದೇನೆ. ಇಷ್ಟು ದೊಡ್ಡ ವಿರಾಮ ತೆಗೆದುಕೊಂಡಿದ್ದೆ. ಬಳಿಕ ಸಿನಿಮಾವನ್ನು ನೀವು ಸ್ವಿಕರಿಸಿದ್ದೀರಿ'' ಎಂದು ತಿಳಿಸಿದರು.
-
SRK expresses gratitude to the audience for showering love upon him in 2023 ❤️#Dunki #Jawan #Pathaanpic.twitter.com/rxciNkVY6X
— Shah Rukh Khan Universe Fan Club (@SRKUniverse) January 29, 2024 " class="align-text-top noRightClick twitterSection" data="
">SRK expresses gratitude to the audience for showering love upon him in 2023 ❤️#Dunki #Jawan #Pathaanpic.twitter.com/rxciNkVY6X
— Shah Rukh Khan Universe Fan Club (@SRKUniverse) January 29, 2024SRK expresses gratitude to the audience for showering love upon him in 2023 ❤️#Dunki #Jawan #Pathaanpic.twitter.com/rxciNkVY6X
— Shah Rukh Khan Universe Fan Club (@SRKUniverse) January 29, 2024
ಇದನ್ನೂ ಓದಿ: ಶಾರುಖ್ ಖಾನ್ ಜೊತೆ ಯಶ್ ಸಿನಿಮಾ? ರಾಕಿಂಗ್ ಸ್ಟಾರ್ ಆಪ್ತರು ಹೀಗಂತಾರೆ
2023ರಲ್ಲಿ ಮೂರು ಸಿನಿಮಾಗಳು ತೆರೆಕಂಡು ಯಶಸ್ವಿಯಾಗಿವೆ. ಅದಕ್ಕೂ ಮೊದಲು 2018ರಲ್ಲಿ ಅನುಷ್ಕಾ ಶರ್ಮಾ, ಕತ್ರಿನಾ ಕೈಫ್, ಅಭಯ್ ಡಿಯೋಲ್, ಆರ್. ಮಾಧವನ್, ಮೊಹಮ್ಮದ್ ಜೀಶನ್ ಅಯೂಬ್ ಸೇರಿದಂತೆ ಹಲವರ ಕಾಮಿಡಿ ಸಿನಿಮಾ 'ಝೀರೋ'ದಲ್ಲಿ ಕಾಣಿಸಿಕೊಂಡರು. 2023ರಲ್ಲಿ ಪಠಾಣ್‌ನೊಂದಿಗೆ ದೊಡ್ಡ ಪರದೆಗೆ ಮರಳುವ ಮುನ್ನ ಲಾಲ್ ಸಿಂಗ್ ಚಡ್ಡಾ ಮತ್ತು ಬ್ರಹ್ಮಾಸ್ತ್ರದಂತಹ ಸಿನಿಮಾಗಳಲ್ಲಿ ಅತಿಥಿ ಪಾತ್ರಗಳನ್ನು ನಿರ್ವಹಿಸಿದ್ದರು. ಶಾರುಖ್ ಇನ್ನೂ ತಮ್ಮ ಮುಂದಿನ ಚಿತ್ರವನ್ನು ಬಹಿರಂಗಪಡಿಸಿಲ್ಲ. ಅದಾಗ್ಯೂ, ಮಗಳು ಸುಹಾನಾ ಖಾನ್ ಅವರೊಂದಿಗೆ ಆ್ಯಕ್ಷನ್ ಸಿನಿಮಾ 'ಕಿಂಗ್'ನಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ.