ಹೈದರಾಬಾದ್: ಪ್ಯಾನ್ ಇಂಡಿಯಾ ಸೂಪರ್ ಸ್ಟಾರ್ ಪ್ರಭಾಸ್ ಇಂದು ತಮ್ಮ 45ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಈ ಹಿನ್ನೆಲೆ ಪ್ರಭಾಸ್ ಅಭಿನಯದ ಮುಂಬರುವ ಚಿತ್ರ ದಿ ರಾಜಾಸಾಬ್ ಚಿತ್ರತಂಡ ಇಂದು ಮೋಸ್ಟರ್ ಪೋಸ್ಟರ್ ರಿಲೀಸ್ ಮಾಡುವ ಮೂಲಕ ಬರ್ತ್ಡೇ ಗಿಫ್ಟ್ ನೀಡಿದ್ದಾರೆ. ವಿಭಿನ್ನವಾಗಿರುವ ಪೋಸ್ಟರ್ನಲ್ಲಿ ನಟ ಪ್ರಭಾಸ್ ಅವರು ಹಿಂದೆಂದೂ ಕಾಣಿಸದ ಹೊಸ ಲುಕ್ನಲ್ಲಿ ಕಾಣಿಸಿಕೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಮೋಷನ್ ಪೋಸ್ಟರ್ ಧೂಳೆಬ್ಬಿಸಿದೆ. ಕೆಲವೇ ಗಂಟೆಗಳಲ್ಲಿ ಮಿಲಿಯನ್ಗಟ್ಟಲೇ ವೀಕ್ಷಣೆಯನ್ನು ಪಡೆದಿದ್ದು, ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.
45 ವರ್ಷದ ನಟ ರಾಜನಂತೆ ಸಿಂಹಾಸನದಲ್ಲಿ ಕುಳಿತು ಸಿಗಾರ್ ಸೇದುತ್ತಿರುವ ಹಾರರ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಹಾರರ್ ಬೇಸ್ಡ್ ಹಿನ್ನೆಲೆ ಸಂಗೀತ ಆಕರ್ಷಕವಾಗಿದ್ದು, ಈ ಮೂಲಕ ಚಿತ್ರದ ನಾಯಕನಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಹೇಳಲಾಗಿದೆ. ಬರ್ತ್ಡೇ ಹಿಂದಿನ ದಿನ ಬಿಡುಗಡೆಯಾದ ಪೋಸ್ಟರ್ನಲ್ಲಿ ಪ್ರಭಾಸ್ ಪ್ಲೈಡ್ ಶರ್ಟ್, ಕನ್ನಡಕ ಧರಿಸಿ, ಫ್ಲವರ್ ಬೊಕೆ ಹಿಡಿದು ಲವರ್ ಬಾಯ್ ಲುಕ್ನಲ್ಲಿ ಕಾಣಿಸಿದ್ದರು. ಆದರೆ ಇಂದು ರಿಲೀಸ್ ಆದ ಮೋಷನ್ ಪೋಸ್ಟರ್ನಲ್ಲಿ ಸಂಪೂರ್ಣ ವಿಭಿನ್ನ ಲುಕ್ನಲ್ಲಿದ್ದಾರೆ.
ನಿರ್ದೇಶಕ ಮಾರುತಿ ಅವರು ಆ್ಯಕ್ಷನ್ ಕಟ್ ಹೇಳುತ್ತಿರುವ ಹಾರರ್ ಕಾಮಿಡಿ ಸಿನಿಮಾ ದಿ ರಾಜಾಸಾಬ್. ಸದ್ದಿಲ್ಲದೆ ಶೂಟಿಂಗ್ ಆರಂಭಿಸಿದ್ದ ಚಿತ್ರತಂಡ, ಹಲವು ಶೆಡ್ಯೂಲ್ಗಳ ಬಳಿಕ ಅಧಿಕೃತವಾಗಿ ಸಿನಿಮಾ ಘೋಷಣೆ ಮಾಡಿತ್ತು. ಉಳಿದ ಭಾಗದ ಚಿತ್ರೀಕರಣವನ್ನು ಆದಷ್ಟು ಶೀಘ್ರದಲ್ಲಿ ಮುಗಿಸಲು ಚಿತ್ರತಂಡ ಪ್ಲಾನ್ ಮಾಡಿದೆ. ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟರ್ ಹಂಚಿಕೊಂಡಿರುವ ಚಿತ್ರತಂಡ "ರಾಯಲ್ ಬೈ ಬ್ಲಡ್.. ರೆಬಲ್ ಬೈ ಚಾಯ್ಸ್" ಎಂದು ಕ್ಯಾಪ್ಷನ್ ಕೊಟ್ಟಿದೆ. ಪೋಸ್ಟರ್ನಲ್ಲಿ ಕೊನೆಗೆ "ಹಾರರ್ ಈಸ್ ದ ನ್ಯೂ ಹ್ಯೂಮರ್" ಎಂದೂ ಹೇಳಲಾಗಿದೆ.
ಹಾರರ್ ಥ್ರಿಲ್ಲರ್ ಕಾನ್ಸೆಪ್ಟ್ನೊಂದಿಗೆ ಬರುತ್ತಿರುವ ದಿ ರಾಜಾಸಾಬ್ ಚಿತ್ರದಲ್ಲಿ ನಿಧ ಅಗರ್ವಾಲ್, ಮಾಳವಿಕಾ ಮೋಹನನ್, ಮತ್ತು ರಿದ್ಧಿ ಕುಮಾರ್ ನಾಯಕಿಯರಾಗಿ ನಟಿಸುತ್ತಿದ್ದಾರೆ. ಬಾಲಿವುಡ್ ಹಿರಿಯ ಸ್ಟಾರ್ ಹೀರೋ ಸಂಜಯ್ ದತ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಪೋಷಕ ಪಾತ್ರಗಳಲ್ಲಿ ವರಲಕ್ಷ್ಮಿ ಶರತ್‌ಕುಮಾರ್, ಜಿಶು ಸೇನ್‌ಗುಪ್ತಾ ಮತ್ತು ಸದಾ ಉಲ್ಲಾಸದ ಬ್ರಹ್ಮಾನಂದಂ ಸೇರಿಂದಥೆ ಮುಂತಾದ ನಟರು ಇದ್ದಾರೆ.
Royal by blood……
— The RajaSaab (@rajasaabmovie) October 23, 2024
Rebel by choice….
Claiming what was always his! 🔥🔥
Motion Poster out now.https://t.co/v1dhha0Wxa#HappyBirthdayPrabhas ❤️#Prabhas #TheRajaSaab pic.twitter.com/cZyLxeRNez
ನಿರ್ಮಾಪಕ ಟಿ.ಜಿ. ವಿಶ್ವಪ್ರಸಾದ್ ಪೀಪಲ್ ಮೀಡಿಯಾ ಫ್ಯಾಕ್ಟರಿ ಬ್ಯಾನರ್ ಅಡಿಯಲ್ಲಿ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಸುಮಾರು ರೂ. 400 ಕೋಟಿಯಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ ಎಂದು ಟಾಲಿವುಡ್ನಲ್ಲಿ ಸುದ್ದಿಯಾಗುತ್ತಿದೆ. ತಮನ್ ಸಂಗೀತ ಸಂಯೋಜನೆ ಚಿತ್ರಕ್ಕಿದೆ. ತೆಲುಗು ಸೇರಿದಂತೆ ಹಿಂದಿ, ತಮಿಳು, ಮಲಯಾಳಂ ಮತ್ತು ಕನ್ನಡ ಭಾಷೆಗಳಲ್ಲಿ ಚಿತ್ರವು ಪ್ಯಾನ್-ಇಂಡಿಯಾ ಮಟ್ಟದಲ್ಲಿ ತಯಾರಾಗುತ್ತಿದೆ. ಮುಂದಿನ ವರ್ಷ ಏಪ್ರಿಲ್ 10 ರಂದು ಬಿಡುಗಡೆಯಾಗಲಿದೆ.
ಪ್ರಭಾಸ್ ಮುಂಬರುವ ಚಲನಚಿತ್ರಗಳು: ಪ್ರಸ್ತುತ, ಪ್ರಭಾಸ್ ತೆಲುಗಿನಲ್ಲಿ ಬ್ಯುಸಿ ಹೀರೋ ಆಗಿದ್ದಾರೆ. ರಾಜಾಸಾಬ್ ಜೊತೆಗೆ ಹನು ರಾಘವಪುಡಿ ನಿರ್ದೇಶನದಲ್ಲಿ ಪೀರಿಯಡ್ ಲವ್ ಸ್ಟೋರಿ ಫೌಜಿ ಮತ್ತು ಸಂದೀಪ್ ವಂಗಾ ಅವರೊಂದಿಗೆ ಸ್ಪಿರಿಟ್ ಮಾಡುತ್ತಿದ್ದಾರೆ. ಇವುಗಳ ಜೊತೆಗೆ ಕಲ್ಕಿ ಮತ್ತು ಸಾಲಾರ್ ಸೀಕ್ವೆಲ್‌ಗಳಲ್ಲಿ ಪ್ರಭಾಸ್ ನಾಯಕನಾಗಿ ನಟಿಸುತ್ತಿದ್ದಾರೆ. ಈ ಸಿನಿಮಾಗಳ ಜತೆಗೆ ನಿರ್ದೇಶಕ ಪ್ರಶಾಂತ್ ವರ್ಮಾ ನಿರ್ದೇಶನದ ಸಿನಿಮಾವೊಂದಕ್ಕೂ ಗ್ರೀನ್ ಸಿಗ್ನಲ್ ನೀಡಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ಇದನ್ನೂ ಓದಿ: ಹುಟ್ಟುಹಬ್ಬದ ಸಂಭ್ರಮದಲ್ಲಿ ಡಾರ್ಲಿಂಗ್ ಪ್ರಭಾಸ್: ಬಾಕ್ಸ್ ಆಫೀಸ್ ಕಿಂಗ್ ಮುಂದಿವೆ 2100 ಕೋಟಿ ರೂ. ಬಜೆಟ್ ಸಿನಿಮಾಗಳು