ETV Bharat / entertainment

₹8 ಕೋಟಿಯ ಗ್ರ್ಯಾಂಡ್ ಬೆಂಟ್ಲಿ ಕಾಂಟಿನೆಂಟಲ್ ಕಾರ್‌ ಖರೀದಿಸಿದ ರಣ್​ಬೀರ್​ ಕಪೂರ್; ಮುಂಬೈಗೆ ರೌಂಡ್ಸ್ - Ranbir Kapoor Luxury Car - RANBIR KAPOOR LUXURY CAR

ಬಾಲಿವುಡ್​ ನಟ ರಣ್​ಬೀರ್​ ಕಪೂರ್ ಮನೆಗೆ ಹೊಸ ಐಷಾರಾಮಿ ಕಾರು ಬಂದಿದೆ.

Ranbir Kapoor New Luxury Car
ರಣ್​ಬೀರ್​ ಕಪೂರ್ ಹೊಸ ಕಾರು
author img

By ETV Bharat Karnataka Team

Published : Apr 3, 2024, 8:31 PM IST

ಬಾಲಿವುಡ್ ಸೂಪರ್ ಸ್ಟಾರ್ ರಣ್​​ಬೀರ್ ಕಪೂರ್ ಪ್ರಸ್ತುತ ಯಶಸ್ವಿ ವೃತ್ತಿಜೀವನ ಮುನ್ನಡೆಸುತ್ತಿದ್ದಾರೆ. ವೈಯಕ್ತಿಕವಾಗಿ ಮತ್ತು ವೃತ್ತಿಪರವಾಗಿ ಉತ್ತಮ ದಿನಗಳನ್ನು ಕಳೆಯುತ್ತಿದ್ದಾರೆ. ಇತ್ತೀಚೆಗಷ್ಟೇ ಬಹುಕೋಟಿ ಮೌಲ್ಯದ ಐಷಾರಾಮಿ ಕಾರು ಖರೀದಿಸಿದ್ದು, ಇಂದು ಮುಂಬೈ ನಗರದ ಬೀದಿಗಳಲ್ಲಿ ಸಂಚರಿಸಿ ಅಚ್ಚರಿ ಮೂಡಿಸಿದರು.

ಇನ್​ಸ್ಟಾಗ್ರಾಮ್​ನಲ್ಲಿ ಪಾಪರಾಜಿಗಳ ಖಾತೆಯಿಂದ ಶೇರ್ ಆದ ವಿಡಿಯೋದಲ್ಲಿ, ಮುಂಬೈನಲ್ಲಿ ರಣ್‌​ಬೀರ್ ಕಪೂರ್ ತಮ್ಮ ಹೊಸ ಕಾರನ್ನು ಓಡಿಸುತ್ತಿರುವುದನ್ನು ಕಾಣಬಹುದು. ಕಾರು ತನ್ನ ಐಷಾರಾಮಿತನದಿಂದ ನೋಡುಗರ ಗಮನ ಸೆಳೆದಿದೆ. ಗ್ರ್ಯಾಂಡ್ ಬೆಂಟ್ಲಿ ಕಾಂಟಿನೆಂಟಲ್ ಕಾರನ್ನು ರಣ್‌ಬೀರ್ ಖರೀದಿಸಿದ್ದಾರೆ. ಇದು ಸದ್ಯ ಲಭ್ಯವಿರುವ ಅತ್ಯಂತ ದುಬಾರಿ ಬೆಂಟ್ಲಿ ಮಾಡೆಲ್ ಆಗಿದೆ. ಹೊಸ ಕಾರಿಗೆ ನಟ 8 ಕೋಟಿ ರೂ. ಕೊಟ್ಟಿದ್ದಾರೆ.

ಇದನ್ನೂ ಓದಿ: ಸೆಟ್ಟೇರಿತು 'ರಾಮಾಯಣ': ಯಶ್, ರಣ್​ಬೀರ್, ಸಾಯಿಪಲ್ಲವಿ ಸಿನಿಮಾ ಮೇಲೆ ಭಾರಿ ನಿರೀಕ್ಷೆ - Ramayana

ರಣ್​ಬೀರ್​ ಕಪೂರ್ ಕೊನೆಯದಾಗಿ ಅನಿಮಲ್​ ಸಿನಿಮಾದಲ್ಲಿ ಕಾಣಿಸಿಕೊಂಡರು. ಮಿಶ್ರ ಪ್ರತಿಕ್ರಿಯೆ ಸ್ವೀಕರಿಸಿದರೂ, ಪ್ರಪಂಚದಾದ್ಯಂತ 900 ಕೋಟಿ ರೂ. ಗಳಿಸುವಲ್ಲಿ ಸಿನಿಮಾ ಯಶಸ್ವಿಯಾಗಿದೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ಬಿಡುಗಡೆಯಾದ ಈ ಚಿತ್ರವು ಈಗಲೂ ಬಿಸಿ ಬಿಸಿ ಚರ್ಚೆಯ ವಿಷಯವಾಗಿ ಉಳಿದಿದೆ. ಜನಪ್ರಿಯ ಒಟಿಟಿ ಪ್ಲಾಟ್‌ಫಾರ್ಮ್ ನೆಟ್‌ಫ್ಲಿಕ್ಸ್‌ನಲ್ಲಿ ಹೆಚ್ಚು ಸ್ಟ್ರೀಮ್ ಆಗಿರುವ ಚಿತ್ರಗಳಲ್ಲಿ ಅನಿಮಲ್ ಒಂದು.

ಇದನ್ನೂ ಓದಿ: ರಶ್ಮಿಕಾ ಜನ್ಮದಿನದಂದು ವಿಜಯ್ ದೇವರಕೊಂಡ ಸಿನಿಮಾ, 'ದಿ ಗರ್ಲ್‌ಫ್ರೆಂಡ್' ಟೀಸರ್ ರಿಲೀಸ್ - Rashmika Mandanna

ETV Bharat Logo

Copyright © 2025 Ushodaya Enterprises Pvt. Ltd., All Rights Reserved.