ಫ್ರಾನ್ಸ್ನಲ್ಲಿ ಶನಿವಾರ 'ಪ್ಯಾರಿಸ್ ಒಲಿಂಪಿಕ್ 2024' ಶುರುವಾಗಿದೆ. ಭಾರತೀಯ ಕ್ರೀಡಾಪಟುಗಳನ್ನು ಬೆಂಬಲಿಸಲು ಟಾಲಿವುಡ್ನ ಮೆಗಾಸ್ಟಾರ್ ಚಿರಂಚೀವಿ ಕುಟುಂಬ ಸಾಗರೋತ್ತರ ಪ್ರದೇಶಕ್ಕೆ ತೆರಳಿದೆ. ಸೋಷಿಯಲ್ ಮೀಡಿಯಾ ಪ್ಲ್ಯಾಟ್ಫಾರ್ಮ್ಗಳಲ್ಲಿ ಫೋಟೋ ವಿಡಿಯೋಗಳನ್ನು ಶೇರ್ ಮಾಡೋ ಮೂಲಕ ನೆಟ್ಟಿಗರ ಗಮನ ಸೆಳೆದಿದ್ದಾರೆ.
ಟಾಲಿವುಡ್ ಸೂಪರ್ ಸ್ಟಾರ್ ರಾಮ್ ಚರಣ್ ಮತ್ತು ಅವರ ಪತ್ನಿ - ಉದ್ಯಮಿ ಉಪಾಸನಾ, ರಾಮ್ ಅವರ ತಂದೆ-ನಟ ಚಿರಂಜೀವಿ ಮತ್ತು ಅವರ ಪತ್ನಿ ಸುರೇಖಾ ಅವರು ಒಲಂಪಿಕ್ ಕ್ರೀಡೆಗಳನ್ನು ವೀಕ್ಷಿಸುವ ಸಲುವಾಗಿ ಪ್ಯಾರಿಸ್ನಲ್ಲಿದ್ದಾರೆ. ಇವರಲ್ಲದೇ, ರಾಮ್ ಅವರ ಮುದ್ದಿನ ಶ್ವಾನ ರೈಮ್ ಕೂಡ ಎಂದಿನಂತೆ ಅವರೊಂದಿಗೆ ಕಾಣಿಸಿಕೊಂಡಿದೆ.
ಉಪಾಸನಾ ಅವರು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಸಕ್ರಿಯರಾಗಿರುತ್ತಾರೆ. ತಮ್ಮ ಸ್ಟಾರ್ ಪತಿಗೆ ಸಂಬಂಧಿಸಿದಂತೆ ಅವರ ಅಪಾರ ಸಂಖ್ಯೆಯ ಅಭಿಮಾನಿಗಳಿಗೆ ಅಪ್ಡೇಟ್ಸ್ ಕೊಡುತ್ತಲೇ ಇರುತ್ತಾರೆ. ಲೇಟೆಸ್ಟ್ ಸೋಷಿಯಲ್ ಮೀಡಿಯಾ ಪೋಸ್ಟ್ನಲ್ಲಿ ಆರ್ಆರ್ಆರ್ ಸ್ಟಾರ್ ರಾಮ್ಚರನ್ ಭಾರತೀಯ ಬ್ಯಾಡ್ಮಿಂಟನ್ ತಾರೆ ಪಿ.ವಿ ಸಿಂಧು ಅವರೊಂದಿಗೆ ಕಾಣಿಸಿಕೊಂಡಿದ್ದಾರೆ. ಜೊತೆಗೆ, ಅವರ ಮುದ್ದಿನ ರೈಮ್ ಕೂಡ ಇದೆ. ಒಂದಿಷ್ಟು ಕಿರು ವಿಡಿಯೋಗಳನ್ನು ಹಂಚಿಕೊಂಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ವಿಡಿಯೋಗಳಲ್ಲಿ, ಸೌತ್ ಸಿನಿಮಾ ಇಂಡಸ್ಟ್ರಿಯ ಸೂಪರ್ ಸ್ಟಾರ್ ತನ್ನ ಮುದ್ದಿನ ರೈಮ್ ಅನ್ನು ಹಿಡಿದು ಪ್ಯಾರಿಸ್‌ನ ರಸ್ತೆಗಳಲ್ಲಿ ಪಿ.ವಿ ಸಿಂಧು ಅವರೊಂದಿಗೆ ಮಾತನಾಡುತ್ತಿರುವುದು ಕಂಡುಬಂದಿದೆ. ಸಿಂಧು ರೈಮ್ ಜೊತೆ ಆಟವಾಡುವುದನ್ನು ಕಾಣಬಹುದು. ತಮ್ಮದೇ ವಿಭಿನ್ನ ಕ್ಷೇತ್ರಗಳಲ್ಲಿ ಹೆಸರು ಸಂಪಾದಿಸಿರುವ ರಾಮ್ ಮತ್ತು ಸಿಂಧು ಒಂದೊಳ್ಳೆ ಕ್ಷಣ ಕಳೆದಿದ್ದು, ಉಪಾಸನಾ ಹೆಚ್ಚಿನ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ.
Absolutely thrilled to attend the inaugural of the #PARIS2024 #Olympics
— Chiranjeevi Konidela (@KChiruTweets) July 27, 2024
A delightful moment holding the Olympic Torch replica along with Surekha !
Wishing each and every player of our proud Indian Contingent, All the Very Best and the Best Medal Tally ever!
Go India!!🇮🇳 Jai… pic.twitter.com/fjFWvf9csO
ಈ ವಿಡಿಯೋವನ್ನು ಮುದ್ದಿನ ಶ್ವಾನ ರೈಮ್ ಹೆಸರಿನಲ್ಲಿರುವ ಇನ್ಸ್ಟಾಗ್ರಾಮ್ ಅಕೌಂಟ್ನಲ್ಲಿ ಶೇರ್ ಮಾಡಲಾಗಿದೆ. ಜೊತೆಗೆ ಪಿ.ವಿ ಸಿಂಧು ಅಕ್ಕಾ, ನೀವು ಇಂದಿನ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ್ದೀರಿ, ಆಲ್ ದಿ ಬೆಸ್ಟ್ ಎಂದು ಬರೆಯಲಾಗಿದೆ. ಮತ್ತೊಂದೆಡೆ ಉಪಾಸನಾ, ಪ್ಯಾರಿಸ್ ಒಲಿಂಪಿಕ್ನ ಹಲವು ಫೋಟೋ ವಿಡಿಯೋಗಳನ್ನು ತಮ್ಮ ಸೋಷಿಯಲ್ ಮೀಡಿಯಾ ಅಕೌಂಟ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ: ಕುತೂಹಲ ಹೆಚ್ಚಿಸಿದ ಪ್ರಭಾಸ್ ಪೋಸ್ಟರ್: ನಾಳೆ 'ದಿ ರಾಜಾ ಸಾಬ್' ಗ್ಲಿಂಪ್ಸ್ ರಿಲೀಸ್ - Prabhas Poster
ಇದಕ್ಕೂ ಮುನ್ನ, ಸೂಪರ್ ಸ್ಟಾರ್ ಚಿರಂಜೀವಿ ಅವರು ತಮ್ಮ ಅಧಿಕೃತ ಸೋಷಿಯಲ್ ಮೀಡಿಯಾದಲ್ಲಿ ಪತ್ನಿ ಸುರೇಖಾ ಜೊತೆ ಪ್ಯಾರಿಸ್‌ನಲ್ಲಿರುವ ಫೋಟೋ ಪೋಸ್ಟ್ ಮಾಡಿದ್ದರು. ಇದು ದಂಪತಿಯ ಸಂತಸದ ಕ್ಷಣವಾಗಿತ್ತು.
ಇದನ್ನೂ ಓದಿ: 'ಮೋದಿಜಿ ಮಹಾನ್ ವಾಗ್ಮಿ': ಪ್ರಧಾನಿ ವಾಕ್ಚಾತುರ್ಯ ಕೊಂಡಾಡಿದ ರಣ್ಬೀರ್ ಕಪೂರ್ - Ranbir Kapoor on PM Modi
ರಾಮ್ ಚರಣ್ ಸಿನಿಮಾ ವಿಚಾರ ಗಮನಿಸುವುದಾದರೆ, ಮುಂದಿನ ಬಹುನಿರೀಕ್ಷಿತ ಸಿನಿಮಾ 'ಗೇಮ್ ಚೇಂಜರ್'. ಶಂಕರ್ ಬರೆದು ಆ್ಯಕ್ಷನ್ ಕಟ್ ಹೇಳುತ್ತಿರುವ ಈ ಸಿನಿಮಾದಲ್ಲಿ ಬಾಲಿವುಡ್ ಬೆಡಗಿ ಕಿಯಾರಾ ಅಡ್ವಾಣಿ, ರಾಮ್ ಜೊತೆ ತೆರೆ ಹಂಚಿಕೊಂಡಿದ್ದಾರೆ. ಇದೇ ಸಾಲಿನಲ್ಲಿ ಸಿನಿಮಾ ಬಿಡುಗಡೆ ಆಗಲಿದ್ದು, ಪ್ರೇಕ್ಷಕರು ಸಾಕಷ್ಟು ಕುತೂಹಲ ವ್ಯಕ್ತಪಡಿಸಿದ್ದಾರೆ.