ETV Bharat / entertainment

ರಕ್ಷಿತ್​​ ಶೆಟ್ಟಿ ನಿರ್ಮಾಣದ 'ಇಬ್ಬನಿ ತಬ್ಬಿದ ಇಳೆಯಲಿ' ಟ್ರೇಲರ್ ರಿಲೀಸ್​ - Ibbani Tabbida lleyali Trailer - IBBANI TABBIDA LLEYALI TRAILER

ಮುಂದಿನ ತಿಂಗಳ 5ರಂದು ಬಿಡುಗಡೆಯಾಗಲಿರುವ ಕನ್ನಡದ ಬಹುನಿರೀಕ್ಷಿತ 'ಇಬ್ಬನಿ ತಬ್ಬಿದ ಇಳೆಯಲಿ' ಚಿತ್ರದ ಟ್ರೇಲರ್​ ರಿಲೀಸ್ ಆಗಿದೆ.

Ibbani Tabbida lleyali Trailer release
ರಕ್ಷಿತ್​ ಶೆಟ್ಟಿ, ಇಬ್ಬನಿ ತಬ್ಬಿದ ಇಳೆಯಲಿ ಪೋಸ್ಟರ್ (ETV Bharat, Film poster)
author img

By ETV Bharat Entertainment Team

Published : Aug 22, 2024, 7:59 PM IST

ಸ್ಯಾಂಡಲ್​ವುಡ್​​ನ ಪ್ರಸಿದ್ಧ ಚಲನಚಿತ್ರ ನಿರ್ಮಾಣ ಸಂಸ್ಥೆ ಪರಂವಃ ಸ್ಟುಡಿಯೋಸ್​ ಮೂಲಕ ನಿರ್ಮಾಣವಾಗಿರುವ ಬಹುನಿರೀಕ್ಷಿತ ಚಿತ್ರ 'ಇಬ್ಬನಿ ತಬ್ಬಿದ ಇಳೆಯಲಿ'. ಸೆಪ್ಟೆಂಬರ್​​ 5ಕ್ಕೆ ಚಿತ್ರಮಂದಿರ ಪ್ರವೇಶಿಸಲಿರುವ ಚಿತ್ರದ ಟ್ರೇಲರ್​ ಇಂದು ಬಿಡುಗಡೆಯಾಗಿದೆ.

ಸಿಂಪಲ್​ ಸ್ಟಾರ್​ ಖ್ಯಾತಿಯ ರಕ್ಷಿತ್​​ ಶೆಟ್ಟಿ ಮಾಲೀಕತ್ವದ ಪರಂವಃ ಸ್ಟುಡಿಯೋಸ್​​​ ಕಂಟೆಂಟ್​ ಆಧರಿತ ಮತ್ತು ಹೊಸ ಪ್ರತಿಭಾನ್ವಿತರ ಸಿನಿಮಾಗಳನ್ನು ನಿರ್ಮಿಸುವ ಮೂಲಕ ಹೆಸರುವಾಸಿಯಾಗಿದೆ. ಈ ಸಂಸ್ಥೆಯಿಂದ ಬಂದ ಬಹುತೇಕ ಚಿತ್ರಗಳು ಜನಮನ ಸೆಳೆಯುವಲ್ಲಿ ಯಶಸ್ಸು ಕಂಡಿವೆ. ಅದರಂತೆ ಹೊಸದಾಗಿ ನಿರ್ಮಾಣಗೊಂಡಿರುವ ಚಿತ್ರ ಇಬ್ಬನಿ ತಬ್ಬಿದ ಇಳೆಯಲಿ. ಒಂದೊಳ್ಳೆ ಕಂಟೆಂಟ್​ನ ಟ್ರೇಲರ್​​​ ಇಂದು ಬಿಡುಗಡೆ ಆಗಿದ್ದು, ಸಿನಿಮಾ ನೋಡುವ ಕುತೂಹಲವನ್ನು ಪ್ರೇಕ್ಷಕರು ವ್ಯಕ್ತಪಡಿಸುತ್ತಿದ್ದಾರೆ.

ಚಂದ್ರಜಿತ್ ಬೆಳ್ಳಿಯಪ್ಪ ಆ್ಯಕ್ಷನ್​ ಕಟ್​ ಹೇಳಿರುವ ಈ ಸುಂದರ ಶೀರ್ಷಿಕೆಯ ಸಿನಿಮಾದಲ್ಲಿ ವಿಹಾನ್ ಹಾಗೂ ಅಂಕಿತಾ ಅಮರ್ ತೆರೆ ಹಂಚಿಕೊಂಡಿದ್ದಾರೆ. ನಟಿ ಮಯೂರಿ ನಟರಾಜ್ ಕೂಡಾ ಪ್ರಮುಖ ಪಾತ್ರವೊಂದನ್ನು ನಿರ್ವಹಿಸಿದ್ದಾರೆ. ಜಿ.ಎಸ್.ಗುಪ್ತ ಮತ್ತು ರಕ್ಷಿತ್ ಶೆಟ್ಟಿ ಚಿತ್ರ ನಿರ್ಮಾಣ ಮಾಡಿದ್ದಾರೆ.

ಇದನ್ನೂ ಓದಿ: ರಕ್ಷಿತ್ ಶೆಟ್ಟಿ ಮತ್ತು ನನ್ನ ಪತ್ನಿಯೊಂದಿಗೆ ನಟಿಸುವ ಆಸೆ​​: 'ಪೌಡರ್​' ನಟ ದಿಗಂತ್​​ ಸಂದರ್ಶನ - Diganth Manchale Interview

ತನ್ನ ಅಧಿಕೃತ 'ಎಕ್ಸ್'​ ಖಾತೆಯಲ್ಲಿ ಪೋಸ್ಟರ್ ಹಂಚಿಕೊಂಡ ಪರಂವಃ ಸ್ಟುಡಿಯೋಸ್, ಇಬ್ಬನಿ ತಬ್ಬಿದ ಇಳೆಯಲಿ ಚಿತ್ರದ ಟ್ರೇಲರ್ ಈಗ ನಿಮ್ಮ ಮುಂದೆ ಎಂದು ಬರೆದುಕೊಂಡಿದೆ. ಇನ್ನೂ ಸೆಪ್ಟೆಂಬರ್​​ 5ಕ್ಕೆ ಇಬ್ಬನಿ ತಬ್ಬಿದ ಇಳೆಯಲಿ ಚಿತ್ರಮಂದಿರ ಪ್ರವೇಶಿಸಲಿದೆ ಎಂದು ವರಮಹಾಲಕ್ಷ್ಮಿ ಹಬ್ಬದಂದು ಚಿತ್ರತಂಡ ಮಾಹಿತಿ ಹಂಚಿಕೊಂಡಿತ್ತು.

ಇದನ್ನೂ ಓದಿ: 'ನನ್ನ ಸಿನಿಮಾಗಳ ಕಥೆಯನ್ನು ಮೊದಲು ಅಮ್ಮ ಕೇಳ್ತಾರೆ': 'ಪೌಡರ್​​' ನಟಿ ಧನ್ಯಾ ರಾಮ್​​ಕುಮಾರ್ ಸಂದರ್ಶನ - Dhanya Ramkumar Interview

ETV Bharat Logo

Copyright © 2024 Ushodaya Enterprises Pvt. Ltd., All Rights Reserved.