ETV Bharat / entertainment

ಪುಷ್ಪಾ 2: ದಿ ರೂಲ್​: ನೀರಿನಾಳದಲ್ಲಿ ಅಲ್ಲು ಅರ್ಜುನ್​ ಶೂಟಿಂಗ್​, ಸೆಟ್​ ಫೋಟೋ ವೈರಲ್​ - Pushpa 2 The Rule Update - PUSHPA 2 THE RULE UPDATE

ಮೈತ್ರಿ ಮೂವಿ ಮೇಕರ್​ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಬಿಗ್​ ಬಜೆಟ್​ ಸಿನಿಮಾ ಇದಾಗಿದೆ. ಈ ಚಿತ್ರ ಇದೇ ವರ್ಷ 2024ರ ಆಗಸ್ಟ್​ 15ರಂದು ತೆರೆಗೆ ಬರಲು ಸಿದ್ಧತೆ ನಡೆಸಿದೆ.

pushpa-2-the-rule-update-allu-arjun-gears-up-for-underwater-sequence-catch-a-glimpse-from-the-set

author img

By ETV Bharat Karnataka Team

Published : Apr 30, 2024, 11:38 AM IST

ಹೈದರಾಬಾದ್​: ನಟ ಅಲ್ಲು ಅರ್ಜುನ್​ ಅಭಿನಯದ 'ಪುಷ್ಪ: ದಿ ರೂಲ್'​ ಚಿತ್ರಕ್ಕೆ ಈಗಾಗಲೇ ಅಭಿಮಾನಿಗಳು ಕಾದು ಕುಳಿತಿದ್ದಾರೆ. 2021ರಲ್ಲಿ ಬಿಡುಗಡೆಯಾದ 'ಪುಷ್ಪ: ರೈಸ್'​​ ಗಿಂತ ಹೆಚ್ಚಿನ ಯಶಸ್ಸನ್ನು ಅದರ ಮುಂದಿನ ಸೀಕ್ವೆಲ್​​​ ಕಾಣಲಿದೆ ಎಂಬ ಲೆಕ್ಕಾಚಾರ ನಡೆಸಲಾಗಿದೆ. ಇನ್ನು ಈ ‘ಪುಷ್ಪ 2: ದಿ ರೂಲ್​‘ ಇದೆ ಆಗಸ್ಟ್​ನಲ್ಲಿ ಅಂತಿಮ ಹಂತದ ಶೂಟಿಂಗ್​ ಅನ್ನು ಮುಗಿಸಲಿದ್ದು, ನಂತರ ಪೊಸ್ಟ್​​ ಪ್ರೊಡಕ್ಷನ್​ ಕೆಲಸ ನಡೆಯಲಿದ್ದು, ಆಗಸ್ಟ್​ನಲ್ಲಿ ಚಿತ್ರ ತೆರೆ ಕಾಣಲಿದೆ. ಸುಮಕರ್​​ ನಿರ್ದೇಶನಲ್ಲಿ ಮೂಡಿ ಬರುತ್ತಿರುವ ಈ ಚಿತ್ರಕ್ಕೆ ಕುಬ ಬ್ರೋಜೆಕ್​ ಸಿನಿಮಾಟೋಗ್ರಫಿ ಇದೆ. ಮೊದಲ ಭಾಗದಲ್ಲಿರುವ ಪಾತ್ರ ವರ್ಗ ಎರಡನೇ ಭಾಗದಲ್ಲೂ ಮುಂದುವರೆಯಲಿದೆ.

'ಪುಷ್ಪ 2: ದಿ ರೂಲ್'​ ಚಿತ್ರದ ಕೆಲವು ದೃಶ್ಯವನ್ನು ಛಾಯಗ್ರಾಹಕರಾಗಿರುವ ಕುಬಾ ಬ್ರೋಜೆಕ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಚಿತ್ರ ಇದೀಗ ಪ್ರೇಕ್ಷಕರ ಕಾತರತೆಯನ್ನು ಮತ್ತಷ್ಟು ಹೆಚ್ಚುವಂತೆ ಮಾಡಿದೆ. ಅಭಿಮಾನಿಗಳು ಚಿತ್ರದ ಯಾವ ದೃಶ್ಯಗಳು ಇದೀಗ ಶೂಟ್​ ಆಗುತ್ತಿದೆ ಎಂಬ ಪ್ರಶ್ನೆಗೆ ಅವರು ಈ ವಿಡಿಯೋ ಮೂಲಕ ಉತ್ತರಿಸಿದ್ದಾರೆ. ಇದರಲ್ಲಿ ನೀರಿನಾಳದಲ್ಲಿನ ದೃಶ್ಯಗಳ ಶೂಟಿಂಗ್​ ನಡೆಯುತ್ತಿರುವುದನ್ನು ಕಾಣಬಹುದು. ಇದರ ಜೊತೆಗೆ ಪ್ರೇಕ್ಷಕರ ಕಾತರಕ್ಕೆ ಮತ್ತಷ್ಟು ಉತ್ಸಾಹ ಹೆಚ್ಚಿಸಲು ಅವರು ಪುಷ್ಪ 2 ಸೆಟ್​ ಫೋಟೋ ಹಂಚಿಕೊಂಡಿದ್ದಾರೆ.

  • " class="align-text-top noRightClick twitterSection" data="">

ಅಲ್ಲು ಅರ್ಜುನ್​ ಹುಟ್ಟು ಹಬ್ಬದ ಹಿನ್ನೆಲೆ ಏಪ್ರಿಲ್​ 8ರಂದು 'ಪುಷ್ಪ 2' ಚಿತ್ರ ತಂಡ ಟೀಸರ್​​ ಮೂಲಕ ತಮ್ಮ ಚಿತ್ರದ ನಟನಿಗೆ ವಿಶೇಷವಾಗಿ ಶುಭಾಶಯ ತಿಳಿಸಿದ್ದರು. ಈ ಪ್ರೊಮೋಷನ್​ ವಿಡಿಯೋದಲ್ಲಿ ಚಿತ್ರದಲ್ಲಿ ನಡೆಯುವ ಜಾತ್ರೆ ಸಮಾರಂಭದ ದೃಶ್ಯದ ಕುರಿತು ತಿಳಿಸಲಾಗಿತ್ತು. ಈ ದೃಶ್ಯವೂ ತೆಲಂಗಾಣದಲ್ಲಿ ಹಿಂದೂ ಬುಡಕಟ್ಟು ಜನರು ಆಚರಿಸುವ ಹಬ್ಬದ ಗೌರವದ ಆಚರಣೆಯಲ್ಲಿ ನಟ ಅಲ್ಲು ಅರ್ಜುನ್​ ದೇವತೆ ವೇಷ ತೊಟ್ಟಿರುವುದನ್ನು ಕಾಣಬಹುದಾಗಿದೆ. ದೇವತೆ ವೇಷದಲ್ಲೇ ಹೊಡೆದಾಡುವ ಈ ದೃಶ್ಯ ಅಭಿಮಾನಿಗಳಿಗೆ ಹಬ್ಬದೂಟ ನೀಡಿದ್ದು ಸುಳ್ಳಲ್ಲ.

ಈ ಟೀಸರ್​​ ಬೆನ್ನಲ್ಲೇ ಚಿತ್ರ ತಂಡ ಚಿತ್ರದ ಮೊದಲ ಸಾಂಗ್​ ಪ್ರೊಮೋ ಅನ್ನು ಬಿಡುಗಡೆ ಮಾಡುತ್ತಿದೆ. ಪುಷ್ಪಾ, ಪುಷ್ಪಾ ಎಂಬ ಹಾಡಿನ ಧ್ವನಿ ಇದರಲ್ಲಿ ಕೇಳಬಹುದಾಗಿದೆ. ದೇವಿ ಶ್ರೀ ಪ್ರಸಾದ್​​ ಅವರ ಸಂಗೀತ ಸಂಯೋಜನೆಯಲ್ಲಿ ಮೂಡಿ ಬಂದ ಹಾಡು ಇದಾಗಿತ್ತು.

ಅಲ್ಲು ಅರ್ಜುನ್​ ಹೊರತಾಗಿ ನಟಿ ರಶ್ಮಿಕಾ ಮಂದಣ್ಣ ಮತ್ತು ಫಹದ್​ ಫಾಸಿಲ್​ ಚಿತ್ರಕ್ಕೆ ಮತ್ತಷ್ಟು ಮೆರಗು ಮೂಡಿಸಿದ್ದಾರೆ. ಜೊತೆಗೆ ಅನುಸೂಯ, ಸುನೀಲ್​ ಮತ್ತು ಜಗದೀಶ್​ ಮುಂದಾದವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮೈತ್ರಿ ಮೂವಿ ಮೇಕರ್​ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಬಿಗ್​ ಬಜೆಟ್​ ಸಿನಿಮಾ ಇದಾಗಿದೆ. ಈ ಚಿತ್ರ ಇದೇ ವರ್ಷ 2024ರ ಆಗಸ್ಟ್​ 15ರಂದು ತೆರೆಗೆ ಬರಲು ಸಿದ್ಧತೆ ನಡೆಸಿದೆ.

ಇದನ್ನೂ ಓದಿ: ಪುಷ್ಪಾ 2: ಫಹಾದ್​ ಫಾಸಿಲ್​ ಪ್ರಮುಖ ಭಾಗಗಳ ಚಿತ್ರೀಕರಣ ಮುಕ್ತಾಯ.. ಬಿಟಿಎಸ್​ ಫೋಟೋ ಹಂಚಿಕೊಂಡ ಚಿತ್ರತಂಡ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.