ETV Bharat / entertainment

ಹೊಸ ಮನೆ, ಮಗಳ ಆಟ, ಸಾಹಸ, ಗಂಡನ ಶೋ: ಹೀಗಿತ್ತು ಪ್ರಿಯಾಂಕಾ ವರ್ಷದ ಮೊದಲ ತಿಂಗಳು - ಪ್ರಿಯಾಂಕಾ ಹೊಸ ಮನೆ ಚಿತ್ರ

ನಟಿ ಪ್ರಿಯಾಂಕಾ ಚೋಪ್ರಾ ಕುಟುಂಬದ ಕುರಿತು ತಮ್ಮ ಚಟುವಟಿಕೆಗಳ ಕುರಿತು ಆಗ್ಗಿಂದಾಗೆ ಫೋಟೋಗಳ ಮೂಲಕ ಅಭಿಮಾನಿಗಳಿಗೆ ಅಪ್ಡೇಟ್​ ನೀಡುತ್ತಿರುತ್ತಾರೆ. ಇದೀಗ ಅಂತಹುದೇ ಅಪ್​​ಡೇಟ್​ವೊಂದನ್ನ ನೀಡಿದ್ದಾರೆ.

Priyanka Chopra share malti and her new home picture

author img

By ETV Bharat Karnataka Team

Published : Feb 2, 2024, 3:42 PM IST

ಹೈದರಾಬಾದ್​: ಗ್ಲೋಬಲ್​ ಐಕಾನ್​ ಪ್ರಿಯಾಂಕಾ ಚೋಪ್ರಾ ತಮ್ಮ ಜೀವನದ ಅತ್ಯುತ್ತಮ ಕ್ಷಣಗಳನ್ನು ಕಳೆಯುತ್ತಿದ್ದಾರೆ. ಕುಟುಂಬದೊಂದಿಗೆ ತಮ್ಮ ಅಮೂಲ್ಯ ಸಮಯವನ್ನು ಕಳೆಯುತ್ತಿರುವ ನಟಿ ಆಗ್ಗಿಂದಾಗೆ ಈ ಕುರಿತು ಇನ್​​​ಸ್ಟಾಗ್ರಾಂನಲ್ಲಿ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. ಅದರಲ್ಲೂ ಮುದ್ದು ಮಗಳ ಕುರಿತು ಆಗ್ಗಿಂದಾಗೆ ಅಪ್​ಡೇಟ್​ ಅನ್ನು ನೀಡುವ ಮೂಲಕ ಅಭಿಮಾನಿಗಳಿಗೆ ಸಂತಸ ಮೂಡಿಸುತ್ತಾರೆ. ಇದೀಗ ಮತ್ತೊಮ್ಮೆ ಕುಟುಂಬ, ಮಗಳು, ಗಂಡನ ಫೋಟೋವನ್ನು ಹಂಚಿಕೊಂಡು ಸುದ್ದಿಯಾಗಿದ್ದಾರೆ.

ಪ್ರಿಯಾಂಕಾ ಚೋಪ್ರಾ ಹಂಚಿಕೊಂಡ ಫೋಟೋ
ಪ್ರಿಯಾಂಕಾ ಚೋಪ್ರಾ ಹಂಚಿಕೊಂಡ ಫೋಟೋ

ಸದ್ಯ ತಮ್ಮ ಎಲ್​ಎ ನಿವಾಸದಿಂದ ಹೊರಬಿದ್ದಿರುವ ನಟಿ ಆ ವಿಚಾರವನ್ನು ಪಕ್ಕಕ್ಕೆ ತಳ್ಳಿ ಹೊಸ ಮನೆ ಸೇರಿದಂತೆ ಮತ್ತಷ್ಟು ಹೊಸ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಮಗಳು ಮಾಲ್ತಿ ಬಾಲ್​ ಪೂಲ್​​ ಮತ್ತು ಆಕ್ಟಿವಿಟಿ ಸೆಂಟ್ರಲ್​ನಲ್ಲಿನ ಆಟದ ಚಿತ್ರವನ್ನು ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಅಮೆರಿಕನ್​ ಸಿಂಗರ್​ ನಿಕ್​ ಜೋನಸ್​​ ಮ್ಯೂಸಿಕ್​ ಶೋ ಜೊತೆಗೆ ತಮ್ಮ ಸಾಹಸ ಪ್ರವಾಸದ ಚಿತ್ರವನ್ನು ಪೋಸ್ಟ್​​ ಮಾಡಿದ್ದಾರೆ.

ಮುಂಬೈನಲ್ಲಿ ಸಂಗೀತ ಕಾರ್ಯಕ್ರಮಕ್ಕೆ ಆಗಮಿಸಿದ್ದ ನಿಕ್​ ಫೋಟೋವನ್ನು ಹಂಚಿಕೊಂಡಿರುವ ನಟಿ, ಇದೇ ವೇಳೆ ತಾಯಿ ಮಗಳು ಹೇಗೆ ತಮ್ಮ ಸಮಯವನ್ನು ಕಳೆಯುತ್ತಿದ್ದೇವೆ ಎಂಬ ಚಿತ್ರವನ್ನೂ ಅಭಿಮಾನಿಗಳಿಗಾಗಿ ಪೋಸ್ಟ್​ ಮಾಡಿದ್ದಾರೆ.

ಇದೇ ವೇಳೆ, ಅವರು ತಾವು ಸದ್ಯ ವಾಸಿಸುತ್ತಿರುವ ಮನೆಯ ಝಲಕ್​ ಅನ್ನು ತೋರಿಸಲು ಮರೆತಿಲ್ಲ. ಮಳೆಗಾಲದ ಮಳೆಯನ್ನು ತಮ್ಮ ಕೋಣೆಯ ಕಿಟಕಿಯಿಂದಲೇ ಆಶ್ವಾದಿಸುತ್ತಿರುವ ಬಗ್ಗೆ ನಟಿ ಸ್ಟೋರಿಯಲ್ಲಿ ಫೋಟೋ ಹಂಚಿಕೊಂಡಿದ್ದಾರೆ. ತಮ್ಮ ಲಾಸ್​ ಏಂಜಲೀಸ್​​​​​​​ನ ​​ ಐಷಾರಾಮಿ ನಿವಾಸದಲ್ಲಿ ಅನೇಕ ಸಮಸ್ಯೆಗಳ ಕಾರಣದಿಂದ ಅದನ್ನು ತೊರೆದಿದ್ದಾರೆ. 2019ರಲ್ಲಿ 20 ಮಿಲಿಯನ್​ ಡಾಲರ್​ ತೆತ್ತು ಖರೀದಿಸಿದ ಈ ನಿವಾಸದಲ್ಲಿ ಏಳು ಬೆಡ್​ ರೂಂ, 9 ಬಾತ್​ರೂಂ ಮತ್ತು ಚೆಫ್​ ಕಿಚನ್​, ತಾಪಮಾನ ನಿಯಂತ್ರಣ ವೈನ್​ ರೂಂ, ಒಳಾಂಗಣ ಬ್ಯಾಸ್ಕೆಟ್​ ಬಾಲ್​ ಕೋರ್ಟ್​​​, ಒಳಗಾಂಣ ಬೌಲಿಂಗ್​​ ಕೊಠಡಿ, ಹೋಂ ಥಿಯೇಟರ್​​, ಎಂಟರ್​ಟೈನಮೆಂಟ್​ ಲೌಂಜ್​​ ಮತ್ತು ಬೆಚ್ಚಗಿನ ಶವರ್​ ಹೊಂದಿದ ಸ್ಪಾ ಸೇರಿದಂತೆ ಹಲವು ಸೌಕರ್ಯಗಳು ಈ ಮನೆಯಲ್ಲಿದ್ದವು.

ಇನ್ನು ಕೆಲಸದ ವಿಷಯಕ್ಕೆ ಬಂದರೆ ನಟಿ ಪ್ರಿಯಾಂಕ ಇತ್ತೀಚೆಗೆ 'ಲವ್​ ಎಗೈನ್'​ ಮತ್ತು ಆನ್​ಲೈನ್​ ಸಿರೀಸ್​​ 'ಸಿಟಾಡೆಲ್'​ನಲ್ಲಿ ಕಾಣಿಸಿಕೊಂಡಿದ್ದರು. ಫಾರ್ಹಾನ್​ ಖಾನ್​ ಅವರ 'ಜೀ ಲೇ ಜಾರಾ' ಚಿತ್ರದಲ್ಲಿ ಅವರು ನಟಿಸಲಿದ್ದಾರೆ. ಈ ಚಿತ್ರದಲ್ಲಿ ಆಲಿಯಾ ಭಟ್​ ಮತ್ತು ಕತ್ರಿನಾ ಕೈಫ್​ ಕೂಡ ಬಣ್ಣ ಹಚ್ಚಿದ್ದಾರೆ. ಈ ಚಿತ್ರದ ಶೆಡ್ಯೂಲ್​ ಸಮಸ್ಯೆಯಿಂದ ಚಿತ್ರ ಸೆಟ್ಟೇರುವುದು ತಡವಾಗಿದೆ ಎಂದು ಚಿತ್ರ ನಿರ್ದೇಶಕರು ಇತ್ತೀಚಿಗೆ ಸಂದರ್ಶನವೊಂದರಲ್ಲಿ ತಿಳಿಸಿದ್ದರು.

ಇದನ್ನೂ ಓದಿ: 'ಲೆಜೆಂಡ್ಸ್': '12th ಫೇಲ್' ಸಿನಿಮಾ ಬಗ್ಗೆ​ ಕರೀನಾ ಗುಣಗಾನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.