ETV Bharat / entertainment

ಪೃಥ್ವಿ ಅಂಬಾರ್ ಹೊಸ ಸಿನಿಮಾ ಲಾಂಚ್​ ಮಾಡಿದ ಶ್ರೀಮುರಳಿ: ಟೈಟಲ್​ ಏನು ಗೊತ್ತಾ? - Prithvi Ambar New Movie - PRITHVI AMBAR NEW MOVIE

'ದಿಯಾ' ಖ್ಯಾತಿಯ ಪೃಥ್ವಿ ಅಂಬಾರ್​ 'ಚೌಕಿದಾರ್‌' ಆಗಿ ತೆರೆ ಮೇಲೆ ಬರಲಿದ್ದು, ನಿರ್ದೇಶಕ ಚಂದ್ರಶೇಖರ್ ಬಂಡಿಯಪ್ಪ ಅವರಿಗೆ ರೋರಿಂಗ್ ಸ್ಟಾರ್ ಸಾಥ್ ಕೊಟ್ಟಿದ್ದಾರೆ.

Actor Prithvi Ambar new movie
ನಟ ಶ್ರೀಮುರಳಿ ಜೊತೆ ಪೃಥ್ವಿ ಅಂಬಾರ್ (Chowkidar Cinema)
author img

By ETV Bharat Karnataka Team

Published : Jun 17, 2024, 12:49 PM IST

ಹೊಸ ಸಿನಿಮಾ ಟೈಟಲ್ ಲಾಂಚ್​ ಮಾಡಿದ ಶ್ರೀಮುರಳಿ (Chowkidar Cinema)

'ದಿಯಾ' ಸಿನಿಮಾ ಖ್ಯಾತಿಯ ನಟ ಪೃಥ್ವಿ ಅಂಬಾರ್ ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಚಿತ್ರಗಳಲ್ಲಿ ಅಭಿನಯಿಸುತ್ತ ಸಿನಿ ಪ್ರೇಮಿಗಳನ್ನು ರಂಜಿಸುತ್ತಿದ್ದಾರೆ‌. 'ಶುಗರ್‌ಲೆಸ್' ಹಾಗೂ 'ಫಾರ್ ರಿಜಿಸ್ಟ್ರೇಷನ್' ಬಳಿಕ ಪೃಥ್ವಿ ಕಂಟೆಂಟ್ ಬಗ್ಗೆ ಹೆಚ್ಚು ಒತ್ತು ಕೊಡುತ್ತಿದ್ದಾರೆ‌.

ಇದೀಗ 'ರಥಾವರ' ಚಿತ್ರದ ಡೈರೆಕ್ಟರ್ ಚಂದ್ರಶೇಖರ್ ಬಂಡಿಯಪ್ಪ ಜೊತೆ ಪೃಥ್ವಿ ಹೊಸ ಚಿತ್ರ ಘೋಷಣೆ ಆಗಿದೆ. ಈ ಜೋಡಿಯ ಸಿನಿಮಾಗೆ ಮಾಸ್ ಟೈಟಲ್ ಫಿಕ್ಸ್ ಮಾಡಲಾಗಿದೆ. ಅದುವೇ 'ಚೌಕಿದಾರ್'. ಕೆಂಪು ಬಣ್ಣದ ಅಕ್ಷರದ ಮೂಲಕ ಚಿತ್ರತಂಡ 'ಚೌಕಿದಾರ್' ರಿವೀಲ್ ಮಾಡಿದೆ. ರೋರಿಂಗ್ ಸ್ಟಾರ್ ಶ್ರೀಮುರಳಿ ಅವರು ಚಂದ್ರಶೇಖರ್ ಬಂಡಿಯಪ್ಪ ಅವರ 6ನೇ ಪ್ರಯತ್ನಕ್ಕೆ ಸಾಥ್ ಕೊಟ್ಟಿದ್ದಾರೆ. ಚೌಕಿದಾರ್ ಟೈಟಲ್ ಬಿಡುಗಡೆ ಮಾಡಿ, ತಂಡಕ್ಕೆ ಶುಭ ಕೋರಿದ್ದಾರೆ.

ಚೌಕಿದಾರ್ ಟೈಟಲ್ ಕೇಳಿದ ತಕ್ಷಣ ಇದು ಮಾಸ್ ಸಿನಿಮಾ ಅಂತ ಅಂದುಕೊಳ್ಳಬೇಡಿ. ಇದು ಪಕ್ಕಾ ಫ್ಯಾಮಿಲಿ ಎಂಟರ್​​ಟೈನರ್. ಚಂದ್ರಶೇಖರ್ ಬಂಡಿಯಪ್ಪ ಪ್ರತಿ ಸಿನಿಮಾದಲ್ಲಿಯೂ ಹೊಸ ಕಥೆಯೊಂದಿಗೆ ಬರುತ್ತಾರೆ. 'ಆನೆ ಪಟಾಕಿ'ಯಲ್ಲಿ ಕಾಮಿಡಿ, 'ರಥಾವ'ರದಲ್ಲಿ ಕಲ್ಟ್, 'ತಾರಕಾಸುರ'ದಲ್ಲಿ ವಿಭಿನ್ನ ಬಗೆ, 'ರೆಡ್ ಕಾಲರ್'ನಲ್ಲಿ ಕ್ರೈಂ ಥ್ರಿಲ್ಲರ್, 'ಕರಾವಳಿ'ಯಲ್ಲಿ ಕರಾವಳಿಯ ಸೊಗಡನ್ನು ಕಟ್ಟಿಕೊಟ್ಟಿರುವ ಅವರ 'ಚೌಕಿದಾರ್' ಸಿನಿಮಾ ಹೇಗೆ ಮೂಡಿಬರಲಿದೆ ಎಂಬ ಕುತೂಹಲ ಪ್ರೇಕ್ಷಕರದ್ದಾಗಿದೆ.

Actor Prithvi Ambar new movie
ಚೌಕಿದಾರ್‌ ಚಿತ್ರದ ಪೋಸ್ಟರ್​ (Chowkidar Cinema)

ಪೃಥ್ವಿ ಹಾಗೂ ಚಂದ್ರಶೇಖರ್ ಬಂಡಿಯಪ್ಪ ಸಂಗಮದ ಹೊಸ ಸಿನಿಮಾವನ್ನು ವಿದ್ಯಾಶೇಖರ್ ಎಂಟರ್ಟೈನ್ಮೆಂಟ್ ಬ್ಯಾನರ್ ಅಡಿ ಕಲ್ಲಹಳ್ಳಿ ಚಂದ್ರಶೇಖರ್ ನಿರ್ಮಾಣ ಮಾಡುತ್ತಿದ್ದಾರೆ. ಸಚಿನ್ ಬಸ್ರೂರ್ ಈ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಹಾಡುಗಳಿಗೆ ವಿ.ನಾಗೇಂದ್ರ ಪ್ರಸಾದ್, ಪ್ರಮೋದ್ ಮರವಂತೆ ಸಾಹಿತ್ಯ ಬರೆಯುತ್ತಿದ್ದಾರೆ. ಚಿತ್ರದ ಉಳಿದ ತಾರಾಬಳಗ ಹಾಗೂ ತಾಂತ್ರಿಕ ಬಳಗದ ಬಗ್ಗೆ ಚಿತ್ರತಂಡ ಒಂದೊಂದಾಗಿ ಮಾಹಿತಿ ನೀಡಲಿದೆ.

'ಆನೆ ಪಟಾಕಿ' ಮೂಲಕ ಸ್ಯಾಂಡಲ್​​ವುಡ್​​ಗೆ ಹೆಜ್ಜೆ ಇಟ್ಟಿದ್ದ ಚಂದ್ರಶೇಖರ್ ಬಂಡಿಯಪ್ಪ, ಆ ಬಳಿಕ 'ರಥಾವರ' ಸಿನಿಮಾ ಮೂಲಕ ದೊಡ್ಡ ಹೆಸರು ಪಡೆದರು. ಆ ಬಳಿಕ 'ತಾರಕಾಸುರ' ಸಿನಿಮಾ ಮಾಡಿ ಗೆದ್ದರು. ಈ ಚಿತ್ರಗಳ ಸಕ್ಸಸ್ ಬಳಿಕ ಬಾಲಿವುಡ್​​ಗೆ ಹಾರಿರುವ ಚಂದ್ರಶೇಖರ್, 'ರೆಡ್ ಕಾಲರ್' ಎಂಬ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಈ ಸಿನಿಮಾದಲ್ಲಿ ಕನ್ನಡದ ಕಿಶೋರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರದ ಕೆಲಸ ಮುಗಿಸಿರುವ ಅವರು ಗುರುದತ್ ಗಾಣಿಗ ನಿರ್ದೇಶನದ 'ಕರಾವಳಿ' ಚಿತ್ರಕ್ಕೂ ಕಥೆ ಬರೆದಿದ್ದಾರೆ. 'ಚೌಕಿದಾರ್' ಚಿತ್ರವು ಕನ್ನಡದ ಜೊತೆಗೆ ಬಹುಭಾಷೆಗಳಲ್ಲಿ ಮೂಡಿ ಬರುತ್ತಿದೆ.

ಇದನ್ನೂ ಓದಿ: 'ವಿದ್ಯಾರ್ಥಿ ವಿದ್ಯಾರ್ಥಿನಿಯರೇ' ಚಿತ್ರದ ಸ್ಟೂಡೆಂಟ್ ಪಾರ್ಟಿ ಸಾಂಗ್ ಬಿಡುಗಡೆ - Students Party Song

ETV Bharat Logo

Copyright © 2024 Ushodaya Enterprises Pvt. Ltd., All Rights Reserved.