ETV Bharat / entertainment

ಪ್ರೇಕ್ಷಕರನ್ನು ಭಯಪಡಿಸಲು ಸಜ್ಜಾಯ್ತು 'ಪ್ರೇತ': ಹರೀಶ್ ರಾಜ್ ಸಿನಿಮಾ ಬಿಡುಗಡೆಗೆ ದಿನ ನಿಗದಿ - ಕನ್ನಡ ಹಾರರ್ ಸಿನಿಮಾ

ಹರೀಶ್ ರಾಜ್ ಅವರ ಬಹುನಿರೀಕ್ಷಿತ ಹಾರರ್ ಚಿತ್ರ 'ಪ್ರೇತ' ಬಿಡುಗಡೆಗೆ ದಿನ ನಿಗದಿ ಆಗಿದೆ.

Pretha movie
ಪ್ರೇತ ಸಿನಿಮಾ
author img

By ETV Bharat Karnataka Team

Published : Feb 17, 2024, 2:18 PM IST

ಸಿನಿಮಾ ಎಂಬ ಬಣ್ಣದ ಲೋಕದಲ್ಲಿ ಬಹು ಸಮಯದಿಂದ ತಮ್ಮದೇ ಆದ ಐಡೆಂಟಿಟಿ ಸೃಷ್ಟಿಸಿಕೊಂಡಿರುವ ನಟ ಹರೀಶ್ ರಾಜ್. ಉತ್ತಮ ಅಭಿನಯದ ಮೂಲಕ ಪ್ರೇಕ್ಷಕರ ಗಮನ ಸೆಳೆದಿರುವ ಹರೀಶ್ ರಾಜ್ ಸಿನಿಮಾ ಜೊತೆ ಜೊತೆಗೆ ರಿಯಾಲಿಟಿ ಶೋಗಳಲ್ಲಿಯೂ ಮಿಂಚು ಹರಿಸಿದ್ದಾರೆ. ಇವರ ಸಿನಿ ಬದುಕಿಗೆ ಈಗಾಗಲೇ 25 ವರ್ಷ ತುಂಬಿದ್ದು, ಮುಂದಿನ ಚಿತ್ರಗಳೆಡೆಗೆ ಪ್ರೇಕ್ಷಕರು ಉತ್ಸಾಹ ತೋರಿದ್ದಾರೆ.

Pretha movie
ಪ್ರೇತ ಸಿನಿಮಾ

'ಕಲಾಕಾರ್‌' ಖ್ಯಾತಿಯ ನಟ ಕಂ ನಿರ್ದೇಶಕ ಹರೀಶ್‌ ರಾಜ್‌ ಸದ್ಯ 'ಪ್ರೇತ'ದ ಜೊತೆಗೆ ಪ್ರೇಕ್ಷಕರನ್ನು ಮುಖಾಮುಖಿಯಾಗಲು ರೆಡಿಯಾಗಿದ್ದಾರೆ. ಹರೀಶ್‌ ರಾಜ್‌ ಅವರೇ ಕಥೆ, ಚಿತ್ರಕಥೆ ಬರೆದು, ನಿರ್ದೇಶಿಸೋ ಜೊತೆಗೆ ನಾಯಕನಾಗಿ ನಟಿಸಿರುವ ಔಟ್‌ ಅಂಡ್​ ಔಟ್‌ ಹಾರರ್‌ - ಥ್ರಿಲ್ಲರ್‌ ಚಿತ್ರವಿದು. 'ಪ್ರೇತ' ಬಿಡುಗಡೆಗೆ ದಿನ ನಿಗದಿಯಾಗಿದೆ.

ಪ್ರೇತ ಸಿನಿಮಾದಲ್ಲಿ ಹರೀಶ್‌ ರಾಜ್‌ ಅವರೊಂದಿಗೆ ಅಮೂಲ್ಯ ಭಾರದ್ವಾಜ್‌, ಅಹಿರಾ ಶೆಟ್ಟಿ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಬಿ.ಎಂ ವೆಂಕಟೇಶ್‌, ಅಮಿತ್‌ ಮತ್ತಿತರರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಹರೀಶ್‌ ರಾಜ್‌ ಪ್ರೊಡಕ್ಷನ್‌ ಬ್ಯಾನರ್‌ನಲ್ಲಿ ಈ ಸಿನಿಮಾ ನಿರ್ಮಾಣ ಆಗಿದೆ. ಈವರೆಗೆ ಕಲಾಕಾರ್, ಗನ್, ಶ್ರೀ ಸತ್ಯನಾರಾಯಣ, ಕಿಲಾಡಿ ಪೊಲೀಸ್ ಸೇರಿದಂತೆ ಮೊದಲಾದ ಸಿನಿಮಾಗಳನ್ನು ನಿರ್ದೇಶಿಸಿರೋ ಹರೀಶ್ ರಾಜ್ ಅವರು 3 ವರ್ಷಗಳ ಗ್ಯಾಪ್ ಬಳಿಕ ಪ್ರೇತ ಚಿತ್ರದ ಮೂಲಕ ಮತ್ತೊಮ್ಮೆ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದಾರೆ.

  • " class="align-text-top noRightClick twitterSection" data="">

ಕಿರಣ್ ಆರ್ ಹೆಮ್ಮಿಗೆ ಸಂಭಾಷಣೆ, ಪ್ರವೀಣ್ ಶ್ರೀನಿವಾಸ್ ಮೂರ್ತಿ ಸಂಗೀತ, ಶಿವಶಂಕರ್ ಛಾಯಾಗ್ರಹಣ, ಜೀವನ್ ಪ್ರಕಾಶ್ ಸಂಕಲನ, ಮಂಜು ಅವರ ಕಲಾ ನಿರ್ದೇಶನ ಪ್ರೇತ ಸಿನಿಮಾಗಿದೆ. ಪ್ರಮೋದ್ ಮರವಂತೆ ಅವರು ಚಿತ್ರದ ಹಾಡುಗಳಿಗೆ ಸಾಹಿತ್ಯ ಒದಗಿಸಿದ್ದಾರೆ. ಈಗಾಗಲೇ ಟೀಸರ್ ಹಾಗೂ ಹಾಡುಗಳ ಮೂಲಕ ನಿರೀಕ್ಷೆ ಹೆಚ್ಚಿಸಿರುವ ಪ್ರೇತ ಸಿನಿಮಾವನ್ನು ಶಾಲಿನಿ ಆರ್ಟ್ಸ್ ಅಡಿ ಜಾಕ್ ಮಂಜು ಇದೇ ತಿಂಗಳ 23ಕ್ಕೆ ಥಿಯೇಟರ್‌ನಲ್ಲಿ ಬಿಡುಗಡೆಗೊಳಿಸಲು ಸಿದ್ಧತೆ ನಡೆಸಿದ್ದಾರೆ.

ಇದನ್ನೂ ಓದಿ: ಅಮಿತಾಭ್​​ ಬಚ್ಚನ್ ವೃತ್ತಿಜೀವನಕ್ಕೆ 55 ವರ್ಷಗಳ ಸಂಭ್ರಮ; ಪ್ರಯಾಣ ಪ್ರತಿನಿಧಿಸುವ 'ಎಐ' ಫೋಟೋ ಶೇರ್

ನಟನೆ ಜೊತೆಗೆ ನಿರ್ದೇಶಕನಾಗಿಯೂ ಹೆಸರು ಮಾಡಿರುವ ಹರೀಶ್ ರಾಜ್ ಕಳೆದ ವರ್ಷ ಪ್ರೇತ ಸಿನಿಮಾವನ್ನು ಘೋಷಿಸಿದ್ದರು. 2023ರ ಜುಲೈ ಕೊನೆಯಲ್ಲಿ ಫಸ್ಟ್ ಲುಕ್ ಅನಾವರಣಗೊಂಡು ಪ್ರೇಕ್ಷಕರ ಕುತೂಹಲ ಹೆಚ್ಚಿಸಿತ್ತು. ಇತ್ತೀಚೆಗೆ ಚಿತ್ರದ ಟ್ರೇಲರ್, ಟೀಸರ್, ಹಾಡುಗಳು ಬಿಡುಗಡೆ ಆಗಿವೆ. ಹಾರರ್ ಸಿನಿಪ್ರೇಮಿಗಳು ಈ ಸಿನಿಮಾ ವೀಕ್ಷಿಸುವ ಕಾತರದಲ್ಲಿದ್ದಾರೆ. ಬರುವ ಶುಕ್ರವಾರ ಚಿತ್ರಮಂದಿರಗಳಲ್ಲಿ ಕನ್ನಡ, ತೆಲುಗು, ಹಿಂದಿ, ತಮಿಳು, ಮಲೆಯಾಳಂ ಸೇರಿ ಪಂಚಭಾಷೆಗಳಲ್ಲಿ ಪ್ರೇತ ಬಿಡುಗಡೆ ಆಗಲಿದೆ.

ಇದನ್ನೂ ಓದಿ: ಮುಂದುವರಿದ 'ದೆಹಲಿ ಚಲೋ': ಪ್ರತಿಭಟನೆಯ ಚಿತ್ರಣ ಕಂಡಿದ್ದು ಹೀಗೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.