ETV Bharat / entertainment

ಡಾರ್ಲಿಂಗ್ ಪ್ರಭಾಸ್ ಹೊಸ ಸಿನಿಮಾಗೆ ಸ್ಟಾರ್ ಡೈರೆಕ್ಟರ್​​ ಪ್ರಶಾಂತ್​​ ನೀಲ್​ ಸಾಥ್ - Prabhas New Movie - PRABHAS NEW MOVIE

ಸಲಾರ್​ ಮತ್ತು ಕಲ್ಕಿ ಸಿನಿಮಾಗಳು ಬ್ಲಾಕ್​​ಬಸ್ಟರ್ ಹಿಟ್​​​ ಆಗಿದ್ದು, ಪ್ಯಾನ್​ ಇಂಡಿಯಾ ಸ್ಟಾರ್ ಪ್ರಭಾಸ್​ ಮುಖ್ಯಭೂಮಿಕೆಯ ಮುಂದಿನ ಚಿತ್ರ ತನ್ನ ಮುಹೂರ್ತ ನೆರವೇರಿಸಿಕೊಂಡಿದೆ. ಹೈದರಾಬಾದ್‌ನಲ್ಲಿ ಮುಹೂರ್ತ ನೆರವೇರಿದ್ದು, 'ಸಲಾರ್' ನಿರ್ದೇಶಿಸಿದ್ದ ಕನ್ನಡದ ಖ್ಯಾತ ನಿರ್ದೇಶಕ ಪ್ರಶಾಂತ್ ನೀಲ್ ಸಮಾರಂಭದಲ್ಲಿ ಭಾಗಿಯಾಗೋ ಮೂಲಕ ಪ್ರಭಾಸ್​ಗೆ ಸಾಥ್ ನೀಡಿದ್ದಾರೆ.

Prabhas new movie Pooja ceremony
ಪ್ರಭಾಸ್ ಹೊಸ ಸಿನಿಮಾದ ಮುಹೂರ್ತ ಸಮಾರಂಭ (ETV Bharat)
author img

By ETV Bharat Karnataka Team

Published : Aug 19, 2024, 12:40 PM IST

ಪ್ಯಾನ್​ ಇಂಡಿಯಾ ಸ್ಟಾರ್ ಪ್ರಭಾಸ್​ ಸದ್ಯ ಯಶಸ್ಸಿನಲೆಯಲ್ಲಿ ತೇಲುತ್ತಿದ್ದಾರೆ. ಅಭಿಮಾನಿಗಳ ಡಾರ್ಲಿಂಗ್ ಪ್ರಭಾಸ್ ಅವರ ಕಳೆದ ಸಲಾರ್​ ಮತ್ತು ಕಲ್ಕಿ ಸಿನಿಮಾಗಳು ಬ್ಲಾಕ್​​ಬಸ್ಟರ್​​ ಆಗುವ ಮೂಲಕ ನಟನ ಸ್ಟಾರ್​ಡಮ್​​​ ಹೆಚ್ಚಿದೆ. ಇದರ ಬೆನ್ನಲ್ಲೇ ಬಹುಬೇಡಿಕೆ ನಟನ ಹೊಸ ಸಿನಿಮಾ ಸೆಟ್ಟೇರಿದೆ. ಇತ್ತೀಚೆಗೆ ಹೈದರಾಬಾದ್‌ನಲ್ಲಿ ಹೊಸ ಚಿತ್ರದ ಮುಹೂರ್ತ ನೆರವೇರಿದ್ದು, 'ಸಲಾರ್' ನಿರ್ದೇಶಕ ಪ್ರಶಾಂತ್ ನೀಲ್ ಸಮಾರಂಭದಲ್ಲಿ ಭಾಗಿಯಾಗುವ ಮೂಲಕ ಪ್ರಭಾಸ್​ಗೆ ಸಾಥ್ ನೀಡಿದ್ದಾರೆ.

ಪ್ರಭಾಸ್ ಹನು - ತಾತ್ಕಾಲಿಕ ಶೀರ್ಷಿಕೆ: 'ಸೀತಾರಾಮಂ' ಸಿನಿಮಾ ನಿರ್ದೇಶಿಸಿ ಯಶಸ್ಸು ಕಂಡಿರುವ ಹನು ರಾಘವಪುಡಿ ಅವರು ಪ್ರಭಾಸ್ ಮುಂದಿನ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಪ್ರೊಜೆಕ್ಟ್​ಗೆ ಪ್ರಭಾಸ್ ಹನು ಎಂಬ ತಾತ್ಕಾಲಿಕ ಶೀರ್ಷಿಕೆ ಇಡಲಾಗಿದೆ. ದಕ್ಷಿಣ ಚಿತ್ರರಂಗದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಮೈತ್ರಿ ಮೂವಿ ಮೇಕರ್ಸ್ ಬ್ಯಾನರ್ ಅಡಿ ನವೀನ್ ಯೆರ್ನೇನಿ ಮತ್ತು ವೈ ರವಿಶಂಕರ್ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ.

Prabhas new movie Pooja ceremony
ಹೊಸ ಸಿನಿಮಾದ ಮುಹೂರ್ತ ಸಮಾರಂಭದಲ್ಲಿ ಪ್ರಭಾಸ್ (ETV Bharat)

ನಟಿ ಯಾರು? ಪ್ರಭಾಸ್​ಗೆ ಜೋಡಿಯಾಗಿ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಕಂ ಡ್ಯಾನ್ಸರ್ ಇಮಾನ್ವಿ ನಟಿಸಲಿದ್ದಾರೆ. 1940ರ ದಶಕದ ಕಥೆಯನ್ನು ಹನು ರಾಘವಪುಡಿ ಪ್ರೇಕ್ಷಕರ ಎದುರು ಪ್ರಸ್ತುತಪಡಿಸಲಿದ್ದಾರೆ. ಬಾಲಿವುಡ್ ದಿಗ್ಗಜ ಮಿಥುನ್ ಚಕ್ರವರ್ತಿ ಮತ್ತು ಜಯಪ್ರದಾ ಪ್ರಮುಖ ಪಾತ್ರಗಳಲ್ಲಿ ನಟಿಸಲಿದ್ದಾರೆ.

ಬಹುಭಾಷೆಗಳಲ್ಲಿ ಸಿನಿಮಾ ಬಿಡುಗಡೆ: ಸುದೀಪ್ ಚಟರ್ಜಿ ಐಎಸ್‌ಸಿ ಛಾಯಾಗ್ರಹಣ ನಿರ್ವಹಿಸಲಿದ್ದಾರೆ. ವಿಶಾಲ್ ಚಂದ್ರಶೇಖರ್ ಅವರ ಸಂಗೀತ ಈ ಚಿತ್ರಕ್ಕಿರಲಿದೆ. ಕೋಟಗಿರಿ ವೆಂಕಟೇಶ್ವರ ರಾವ್ ಸಂಕಲನ ನಿಭಾಯಿಸಲಿದ್ದಾರೆ. ಶೀಘ್ರದಲ್ಲೇ ಪ್ರಭಾಸ್ ಹಾಗೂ ಹನು ರಾಘವಪುಡಿ ಚಿತ್ರದ ಚಿತ್ರೀಕರಣ ಶುರುವಾಗಲಿದ್ದು, ತೆಲುಗು, ತಮಿಳು, ಹಿಂದಿ ಹಾಗೂ ಕನ್ನಡದಲ್ಲಿ ಈ ಸಿನಿಮಾ ಬಿಡುಗಡೆ ಆಗಲಿದೆ.

Prabhas new movie Pooja ceremony
ಪ್ರಭಾಸ್ ಹೊಸ ಸಿನಿಮಾದ ಮುಹೂರ್ತ ಸಮಾರಂಭ (ETV Bharat)

ಇದನ್ನೂ ಓದಿ: ಬಾಡಿಗೆ ಮನೆ ಮಾಲೀಕನ ವಿರುದ್ಧ ₹ 5 ಕೋಟಿ ಮಾನನಷ್ಟ ಮೊಕದ್ದೆಮ ಹಾಕಿದ ಸಂಗೀತ ಸಂಯೋಜಕ! - GOAT Music composer Yuvan

ಶೀಘ್ರದಲ್ಲೇ ಶೂಟಿಂಗ್​ ಶುರು: ಜೂನ್ 27ರಂದು ಬಿಡುಗಡೆಯಾದ ಕಲ್ಕಿ 2898 ಎಡಿ ಸಿನಿಮಾ ಅಭೂತಪೂರ್ವ ಯಶಸ್ಸು ಕಂಡಿದೆ. ನಾಗ್​ ಅಶ್ವಿನ್​​​ ಆ್ಯಕ್ಷನ್​ ಕಟ್​ ಹೇಳಿದ್ದ ಈ ಚಿತ್ರದಲ್ಲಿ ಸೂಪರ್​ ಸ್ಟಾರ್​ ಪ್ರಭಾಸ್​​​ ಜೊತೆ ಭಾರತೀಯ ಚಿತ್ರರಂಗ ಬಹುಬೇಡಿಕೆ ತಾರೆಯರಾದ ಅಮಿತಾಭ್ ಬಚ್ಚನ್, ಕಮಲ್ ಹಾಸನ್ ಹಾಗೂ ದೀಪಿಕಾ ಪಡುಕೋಣೆ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಸಿನಿಮಾಗೆ ಭರ್ಜರಿ ರೆಸ್ಪಾನ್ಸ್​​​ ಸಿಕ್ಕಿ, ಬಾಕ್ಸ್​​​ ಆಫೀಸ್​ನಲ್ಲೂ ಸಾವಿರ ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್​​ ಮಾಡಿದೆ. ಕಳೆದ ಕೆಲ ವರ್ಷಗಳಲ್ಲಿ ಸಿನಿಮಾ ಯಶಸ್ಸಿನ ವಿಚಾರದಲ್ಲಿ ಕೊಂಚ ಹಿನ್ನಡೆ ಕಂಡಿದ್ದ ಪ್ರಭಾಸ್​​​​​​ ಅವರಿಗೆ ಸಲಾರ್​ ಮತ್ತು ಕಲ್ಕಿ ದೊಡ್ಡ ಮಟ್ಟಿನ ಯಶಸ್ಸು ತಂದುಕೊಟ್ಟಿದ್ದು, ಮುಂದಿನ ಚಿತ್ರಗಳ ಮೇಲೆ ಅಪಾರ ಸಂಖ್ಯೆಯ ಅಭಿಮಾನಿಗಳು, ಸಿನಿಪ್ರಿಯರು ಸಾಕಷ್ಟು ನಿರೀಕ್ಷೆಗಳನ್ನಿಟ್ಟುಕೊಂಡಿದ್ದಾರೆ. ಅದರಂತೆ ಹೊಸ ಚಿತ್ರದ ಮಹೂರ್ತ ಕಾರ್ಯಕ್ರಮ ನೆರವೇರಿದ್ದು, ಶೀಘ್ರದಲ್ಲೇ ಶೂಟಿಂಗ್​ ಶುರುವಾಗಲಿದೆ.

ಇದನ್ನೂ ಓದಿ: ಅದ್ಧೂರಿಯಾಗಿ ಸೆಟ್ಟೇರಿದ ಶಿವಣ್ಣನ 131ನೇ ಸಿನಿಮಾ: ಡೈರೆಕ್ಟರ್​ ಯಾರು ಗೊತ್ತಾ? - Shiva Rajkumar 131th movie

ETV Bharat Logo

Copyright © 2024 Ushodaya Enterprises Pvt. Ltd., All Rights Reserved.