ETV Bharat / entertainment

100 ವರ್ಷದ ಮನೆಯಲ್ಲಿ 'ಫಾದರ್' ಚಿತ್ರೀಕರಣ: ತಂದೆ-ಮಗನ ಪಾತ್ರದಲ್ಲಿ ಪ್ರಕಾಶ್‍ ರಾಜ್​, ಡಾರ್ಲಿಂಗ್‍ ಕೃಷ್ಣ - Father Shooting

author img

By ETV Bharat Karnataka Team

Published : Jul 11, 2024, 10:31 AM IST

ಆರ್.ಚಂದ್ರು ಅವರ ಆರ್.ಸಿ.ಸ್ಟುಡಿಯೋಸ್ ಮೂಲಕ ನಿರ್ಮಾಣವಾಗುತ್ತಿರುವ 'ಫಾದರ್' ಚಿತ್ರದ ಕುರಿತು ತಂಡ ಕೆಲವು ಮಾಹಿತಿ ಹಂಚಿಕೊಂಡಿದೆ.

'Father' film team
'ಫಾದರ್' ಚಿತ್ರತಂಡ (ETV Bharat)

ಆರ್.ಚಂದ್ರು ಅವರ ಆರ್.ಸಿ.ಸ್ಟುಡಿಯೋಸ್ ಮೂಲಕ ನಿರ್ಮಾಣವಾಗುತ್ತಿರುವ 'ಫಾದರ್' ಚಿತ್ರದ ಚಿತ್ರೀಕರಣ ಬಿರುಸಿನಿಂದ ಸಾಗಿದೆ. ಬಹುಭಾಷಾ ನಟ ಪ್ರಕಾಶ್‍ ರೈ ಮತ್ತು ಸ್ಯಾಂಡಲ್​ವುಡ್​ನ ಡಾರ್ಲಿಂಗ್‍ ಕೃಷ್ಣ ತಂದೆ-ಮಗನಾಗಿ ಅಭಿನಯಿಸುತ್ತಿರುವ ಈ ಚಿತ್ರದ ಚಿತ್ರೀಕರಣ ಅರಮನೆ ನಗರಿ ಮೈಸೂರಿನಲ್ಲಿ ನಡೆಯುತ್ತಿದೆ. 100 ವರ್ಷಗಳ ಹಳೇ ಮನೆಯಲ್ಲಿ ಚಿತ್ರೀಕರಣ ಸಾಗುತ್ತಿದ್ದು, ಚಿತ್ರತಂಡದವರು ಈ ಕುರಿತು ಮಾಹಿತಿ ಹಂಚಿಕೊಂಡರು.

'Father' film team
ಡಾರ್ಲಿಂಗ್‍ ಕೃಷ್ಣ - ಅಮೃತ ಅಯ್ಯಂಗಾರ್ (ETV Bharat)

ನಾಯಕ ನಟ ಡಾರ್ಲಿಂಗ್ ಕೃಷ್ಣ ಮಾತನಾಡಿ, "ಈ ಕಥೆ ಕೇಳಿದಾಗ ನನಗಿಂತ ಮೊದಲು ನನ್ನ ಪತ್ನಿ ಮಿಲನಾ ಅವರಿಗೆ ಇಷ್ಟವಾಯಿತು. ನೀವು ಮಾಡಲೇಬೇಕೆಂದು ಅವರು ಹೇಳಿದರು. ಪ್ರಕಾಶ್ ರಾಜ್​​​ ಅವರ ಜೊತೆ ನಟಿಸಬೇಕೆಂಬ ಆಸೆಯಿತ್ತು. ಅವರ ಜೊತೆ ಅಭಿನಯಿಸುವಾಗ ಭಯ ಆಗುತ್ತಿತ್ತು. ಎಷ್ಟೋ ಬಾರಿ ಅವರ ನಟನೆ ನೋಡುತ್ತಾ ಪ್ರತಿಕ್ರಿಯೆ ಕೊಡುವುದನ್ನೇ ಮರೆತುಬಿಟ್ಟಿದ್ದೆ. 'ಫಾದರ್' ಜನರ ಮನಸ್ಸಿನಲ್ಲಿ ಉಳಿಯುವಂತಹ ಚಿತ್ರವಾಗುತ್ತದೆ" ಎಂದರು.

ಪ್ರಕಾಶ್ ರಾಜ್​​ ಮಾತನಾಡಿ, "ಚಂದ್ರು ಜೊತೆ ನಾನು ಮೊದಲು ಕಬ್ಜ ಚಿತ್ರ ಮಾಡಬೇಕಿತ್ತು. ಆದರೆ ಕಾರಣಾಂತರಗಳಿಂದ ಸಾಧ್ಯವಾಗಲಿಲ್ಲ. ಈಗ 'ಫಾದರ್' ಚಿತ್ರದಲ್ಲಿ ಅಭಿನಯಿಸುತ್ತಿದ್ದೇನೆ. ಇದೊಂದು ಮನಸ್ಸಿಗೆ ಹತ್ತಿರವಾಗುವ ಕಥೆ. ತಂದೆ-ಮಗನ ಪ್ರೀತಿಯ ಜೊತೆಗೆ, ಇಂದಿನ ತಂದೆ ಮಕ್ಕಳ ಸಂಬಂಧದ ಬಗ್ಗೆ ಹೇಳಲಾಗಿದೆ. ಕಥೆ ಕೇಳಿದಾಗ ನನಗೆ ಇದು ಇಂದಿನ ಕಾಲಕ್ಕೆ ಮುಖ್ಯವಾಗಿ ಬೇಕಾಗಿರುವ ಸಿನಿಮಾ ಎಂದೆನಿಸಿತು. ಇದೊಂದು ಕಾಡುವ ಚಿತ್ರ. ಆರ್.ಚಂದ್ರು ಅವರು ಆರ್.ಸಿ ಸ್ಟುಡಿಯೋಸ್ ಮೂಲಕ 5 ಚಿತ್ರಗಳನ್ನು ನಿರ್ಮಿಸುತ್ತಿರುವುದು ಖುಷಿಯ ವಿಚಾರ. ನಾನು ಕೂಡ ನಿರ್ಮಾಪಕನಾಗಿ ಹಲವು ಚಿತ್ರಗಳನ್ನು ನಿರ್ಮಿಸಿದ್ದೇನೆ. ಈ ಚಿತ್ರದಲ್ಲಿ ಅಭಿನಯಿಸುತ್ತಿರುವುದು ಹಾಗೂ ನಾನು ಬಹಳ ಇಷ್ಟಪಡುವ ಮೈಸೂರಿನಲ್ಲಿ ಚಿತ್ರೀಕರಣವಾಗುತ್ತಿರುವುದು ಬಹಳ ಖುಷಿ ಕೊಟ್ಟಿದೆ" ಎಂದು ತಿಳಿಸಿದರು.

'Father' film team
'ಫಾದರ್' ಚಿತ್ರತಂಡ (ETV Bharat)

ಕೇವಲ 100 ರೂಪಾಯಿ ತೆಗೆದುಕೊಂಡು ಗಾಂಧಿನಗರಕ್ಕೆ ಬಂದ ನಾನು, ಇಂದು 5 ಸಿನಿಮಾ ನಿರ್ಮಾಣ ಮಾಡುತ್ತಿದ್ದೇನೆ ಎಂದು ಮಾತು ಆರಂಭಿಸಿದ ನಿರ್ಮಾಪಕ ಆರ್.ಚಂದ್ರು, "ಫಾದರ್ ಆರ್.ಸಿ.ಸ್ಟುಡಿಯೋಸ್ ಬ್ಯಾನರ್ ನಿರ್ಮಾಣದ ಚೊಚ್ಚಲ ಚಿತ್ರ. ಚಿತ್ರಕ್ಕೆ ಗ್ರ್ಯಾಂಡ್ ಫಾದರ್ ಪ್ರಕಾಶ್ ರಾಜ್ ಎನ್ನಬಹುದು. ಕೃಷ್ಣ ಅವರ ಜೊತೆಗೆ ಈ ಮೊದಲೇ ಸಿನಿಮಾ ಮಾಡಬೇಕಿತ್ತು. ಆದರೆ, ಅದೀಗ ಸಾಧ್ಯವಾಗುತ್ತಿದೆ. ಇದು 'ತಾಜಮಹಲ್' ತರಹ ಎಮೋಷನ್ ಇರುವಂತಹ ಚಿತ್ರ. ಇದರಲ್ಲಿ ತಂದೆ-ಮಗನ ಬಾಂಧವ್ಯ ತೋರಿಸಲಾಗುತ್ತಿದ್ದು, ಚಿತ್ರ ಎಲ್ಲರಿಗೂ ಇಷ್ಟವಾಗಲಿದೆ ಎಂಬ ನಂಬಿಕೆ ಇದೆ. ತಂದೆಯ ಪಾತ್ರದ ಬಗ್ಗೆ ಕೇಳುತ್ತಿದ್ದಂತೆಯೇ, ಈ ಪಾತ್ರವನ್ನು ಪ್ರಕಾಶ್‍ ರೈ ಮಾಡಿದರೆ ಚೆನ್ನಾಗಿರುತ್ತದೆ ಎಂದೆನಿಸಿತು. ಅವರು ಈ ಚಿತ್ರದಲ್ಲಿ ಅಭಿನಯಿಸಲು ಪ್ರೀತಿಯಿಂದ ಒಪ್ಪಿಕೊಂಡಿದ್ದಾರೆ‌. ಚಿತ್ರವನ್ನು ಒಂದೇ ಹಂತದಲ್ಲಿ ಮೈಸೂರು, ವಾರಣಾಸಿ, ಮಂಗಳೂರಿನಲ್ಲಿ ಚಿತ್ರೀಕರಿಸಲು ಯೋಜನೆ ಹಾಕಿಕೊಳ್ಳಲಾಗಿದೆ" ಎಂದು ಹೇಳಿದರು.

'Father' film team
'ಫಾದರ್' ಚಿತ್ರತಂಡ (ETV Bharat)

ಇದನ್ನೂ ಓದಿ: ನಾಳೆ ಶಿವ ರಾಜ್​ಕುಮಾರ್​​ ಬರ್ತ್​ಡೇ: ಅಭಿಮಾನಿಗಳಿಗೆ '45' ಪ್ರೇಮದ ಕಾಣಿಕೆ - 45 Cinema First Look

"ನಮ್ಮೂರಲ್ಲಿ ಚಿತ್ರೀಕರಣ ನಡೆಯುತ್ತಿರುವುದು ಬಹಳ ಖುಷಿಯಾಗಿದೆ. ಪ್ರಕಾಶ್ ರಾಜ್​​ ಅವರ ಜೊತೆಗೆ ನಟಿಸುವ ಆಸೆ ಈಡೇರಿದೆ" ಎಂದು ನಟಿ ಅಮೃತ ಅಯ್ಯಂಗಾರ್ ತಿಳಿಸಿದರು.

"ಚಂದ್ರು ನನ್ನ 'ಸಖ ಸಖಿ' ಚಿತ್ರಕ್ಕೆ ಸಹಾಯಕ ನಿರ್ದೇಶಕರಾಗಿದ್ದರು. ಇದೀಗ ಅವರ ಜೊತೆ ಕೆಲಸ ಮಾಡುತ್ತಿರುವುದು ಸಂತಸದ ವಿಚಾರ. ನಾನು ಕಾರ್ಯಕಾರಿ ನಿರ್ಮಾಪಕ ಎನ್ನುವುದಕ್ಕಿಂತ ಅವರ ಜೊತೆಗಿದ್ದೇನೆ" ಎಂದರು ದಯಾಳ್ ಪದ್ಮನಾಭನ್.

'Father' film team
'ಫಾದರ್' ಚಿತ್ರತಂಡ (ETV Bharat)

ಇದನ್ನೂ ಓದಿ: ಹಾರರ್ ಅವತಾರದಲ್ಲಿ ಅನು ಪ್ರಭಾಕರ್! 'ಹಗ್ಗ' ಚಿತ್ರದ ಮೋಷನ್​ ಪೋಸ್ಟರ್ ರಿಲೀಸ್ - Anu Prabhakar

ರಾಜ್‍ ಮೋಹನ್‍ ಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಸುಜ್ಞಾನ್ ಛಾಯಾಗ್ರಹಣ ನಿರ್ವಹಿಸುತ್ತಿದ್ದಾರೆ. 'ಹನುಮಾನ್' ಖ್ಯಾತಿಯ ಗೌರಾ ಹರಿ ಸಂಗೀತ ನಿರ್ದೇಶನವಿರಲಿದೆ. ರಘುನಾಥ್ ಸಂಕಲನದ ಜವಾಬ್ದಾರಿ ಹೊತ್ತಿದ್ದರೆ, ವಿನೋದ್ ಸಾಹಸ ನಿರ್ದೇಶನ ಹಾಗೂ ಮದನ್ ಹರಿಣಿ, ಸಂತೋಷ್ ಅವರ ನೃತ್ಯ ನಿರ್ದೇಶನವಿದ್ದು, ಮಂಜು ಮಾಂಡವ್ಯ ಸಂಭಾಷಣೆ ಬರೆದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.