ಸಿನಿಮಾವೊಂದರ ಶೀರ್ಷಿಕೆ ಎಂಬುದು ಪ್ರೇಕ್ಷಕರಿಗೆ ಸಿಗುವ ಮೊದಲ ಆಮಂತ್ರಣ. ಚಿತ್ರವೊಂದು ಸೆಟ್ಟೇರುವ ಸಂದರ್ಭದಿಂದಲೇ ಸಿನಿಪ್ರಿಯರನ್ನು ಆಕರ್ಷಿಸಲು ಟೈಟಲ್ ಭದ್ರ ಅಡಿಪಾಯ ಹಾಕುತ್ತದೆ. ಸ್ಯಾಂಡಲ್ವುಡ್ನಲ್ಲಿ ಸುಂದರ, ಕ್ಯಾಚೀ ಟೈಟಲ್ಗಳ ಸಿನಿಮಾಗಳೂ ಕೂಡ ಮೂಡಿ ಬರುತ್ತಿದ್ದು, ಹೆಚ್ಚಿನ ಸಂಖ್ಯೆಯ ಜನರು ಆಸಕ್ತಿ ವ್ಯಕ್ತಪಡಿಸುತ್ತಿದ್ದಾರೆ. ಈ ಸಾಲಿಗೀಗ 'ಪೌಡರ್' ಸಿನಿಮಾ ಕೂಡಾ ಸೇರಿದೆ.
ಮನರಂಜನೆಯ ರಸದೌತಣ!: ಸ್ಯಾಂಡಲ್ವುಡ್ನಲ್ಲಿ ಬಹುಸಮಯದಿಂದ ಗುರುತಿಸಿಕೊಂಡಿರುವ ದೂದ್ ಪೇಡಾ ಖ್ಯಾತಿಯ ದಿಗಂತ್ ಮಂಚಾಲೆ ಮತ್ತು ನಿನ್ನ ಸನಿಹಕೆ, ಹೈಡ್ ಆ್ಯಂಡ್ ಸೀಕ್ ಸಿನಿಮಾಗಳ ಮೂಲಕ ಜನಪ್ರಿಯರಾಗಿರುವ ಯುವನಟಿ ಧನ್ಯಾ ರಾಮ್ಕುಮಾರ್ ಸ್ಕ್ರೀನ್ ಶೇರ್ ಮಾಡಿರುವ ಬಹುನಿರೀಕ್ಷಿತ ಚಿತ್ರವೇ 'ಪೌಡರ್'. ಇದೊಂದು ಕಾಮಿಡಿ ಸಿನಿಮಾ. ಪ್ರೇಕ್ಷಕರಿಗೆ ಮನರಂಜನೆಯ ರಸದೌತಣ ಉಣಬಡಿಸು ನಿರೀಕ್ಷೆ ಮೂಡಿಸಿದೆ.
ವಿಭಿನ್ನ ಟೈಟಲ್ ಮೂಲಕ ಸಿನಿಪ್ರಿಯರಲ್ಲಿ ಕುತೂಹಲ ಹುಟ್ಟು ಹಾಕಿದ್ದ ಚಿತ್ರತಂಡ, ಶೀರ್ಷಿಕೆಗೆ ತಕ್ಕಂತೆ ವಿಭಿನ್ನ ಟೈಟಲ್ಗಳುಳ್ಳ ಹಾಡುಗಳನ್ನು ಅನಾವರಣಗೊಳಿಸುವ ಮೂಲಕ ಸಿನಿಪ್ರಿಯರ ಗಮನ ಸೆಳೆಯುತ್ತಿದೆ. ಅದರಂತೆ, ಇತ್ತೀಚೆಗಷ್ಟೇ ಅನಾವರಣಗೊಂಡಿರುವ ಪರಪಂಚ ಘಮ ಘಮ ಎಂಬ ಹಾಡು ಸದ್ಯ ಸಖತ್ ಟ್ರೆಂಡಿಂಗ್ನಲ್ಲಿದೆ.
ದಿಗಂತ್ ಮಂಚಾಲೆ ಸ್ಪೆಷಲ್ ಪೋಸ್ಟ್: ನಟ ದಿಗಂತ್ ಮಂಚಾಲೆ ತಮ್ಮ ಅಧಿಕೃತ ಸೋಷಿಯಲ್ ಮೀಡಿಯಾಗಳಲ್ಲಿ ಪೋಸ್ಟ್ಗಳನ್ನು ಶೇರ್ ಮಾಡುವ ಮುಖೇನ ಈ ವಿಚಾರ ಹಂಚಿಕೊಂಡಿದ್ದಾರೆ. ಜೊತೆಗೆ, ಬೆಂಬಲ ಸೂಚಿಸಿದವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಜೂನ್ ತಿಂಗಳಾರಂಭದಲ್ಲಿ 'ಮಿಷನ್ ಘಮ ಘಮ' ಎಂಬ ಹಾಡು ಬಿಡುಗಡೆ ಆಗಿತ್ತು. ಇದು ಚಿತ್ರದ ಚೊಚ್ಚಲ ಗೀತೆ. ಶೀರ್ಷಿಕೆಯಲ್ಲೇ ಸದ್ದು ಮಾಡಿದ್ದ ಸಿನಿಮಾ ಮತ್ತು ಹಾಡು ಹಾಗು ಬಳಿಕ ಬಂದ ಎರಡನೇ ಹಾಡು 'ಪರಪಂಚ ಘಮ ಘಮ' ಕೂಡ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಹೊಸ ಟ್ಯೂನ್ ಮೂಲಕ 'ಮಿಷನ್ ಘಮ ಘಮ' ಪ್ರೇಕ್ಷಕರ ಗಮನ ಸೆಳೆದಿತ್ತು. ಇದೀಗ 'ಪರಪಂಚ ಘಮ ಘಮ' ಹೆಚ್ಚಿನವರ ರೀಲ್ಸ್, ಸ್ಟೇಟಸ್, ಸ್ಟೋರಿ ಅಂತಾ ಟ್ರೆಂಡಿಂಗ್ನಲ್ಲಿದೆ.
ಇದನ್ನೂ ಓದಿ: 'ಪರಪಂಚ ಘಮ ಘಮ' ಅಂತಿದ್ದಾರೆ ದಿಗಂತ್ ಟೀಂ: 'ಪೌಡರ್' ಚಿತ್ರತಂಡಕ್ಕೆ ಗಾಯಕ ಆಂಟೋನಿ ದಾಸ್ ಸಾಥ್ - Parapancha Gama Gama Song
'ಪರಪಂಚ ಘಮ ಘಮ'ಗೆ ದನಿಯಾದ ಆ್ಯಂಟೋನಿ ದಾಸನ್: 'ಟಗರು ಬಂತು ಟಗರು' ಖ್ಯಾತಿಯ ಆ್ಯಂಟೋನಿ ದಾಸನ್ 'ಪರಪಂಚ ಘಮ ಘಮ' ಹಾಡಿಗೆ ದನಿಯಾಗಿದ್ದಾರೆ. ಖ್ಯಾತ ಜನಪದ ಗಾಯಕ, ಹೆಚ್ಚಾಗಿ ಮಾಸ್ ಗೀತೆಗಳಿಂದಲೇ ಜನಪ್ರಿಯರಾಗಿರುವ ಇವರು 'ಪೌಡರ್' ಸಿನಿಮಾದ ಈ ಲಯ ಪ್ರಧಾನ ಗೀತೆಗೆ ದನಿ ನೀಡಿದ್ದು, ಪ್ರೇಕ್ಷಕರ ಕುತೂಹಲ ಮೂಡಿಸಿದೆ.
ಆಗಸ್ಟ್ 15ರಂದು ತೆರೆಗೆ: ಯುವಕರು ಒಂದು ನಿಗೂಢ 'ಪೌಡರ್' ಪ್ರಭಾವದಿಂದ ಶ್ರೀಮಂತರಾಗಲು ಮಾಡುವ ಪ್ರಯತ್ನ, ಎದುರಾಗುವ ಸವಾಲುಗಳ ಕಥೆಯನ್ನು ಚಿತ್ರ ಒಳಗೊಂಡಿದೆ. ಸಿನಿಮಾ ಬಹಳ ಹಾಸ್ಯಮಯವಾಗಿ ಮೂಡಿಬಂದಿರುವಂತೆ ತೋರುತ್ತಿದೆ. ಜನಾರ್ದನ್ ಚಿಕ್ಕಣ್ಣ ಅವರ ನಿರ್ದೇಶನವಿರುವ ಈ ಸಿನಿಮಾ ಆಗಸ್ಟ್ 15ರಂದು ಬಿಡುಗಡೆ ಆಗಲಿದೆ.